Nupur Sharma: ಪ್ರವಾದಿ ಮೊಹಮ್ಮದ್ ಕುರಿತ ವಿವಾದಾತ್ಮಕ ಹೇಳಿಕೆಯಿಂದ ಅಮಾನತುಗೊಂಡಿರುವ ನೂಪುರ್ ಶರ್ಮ ಯಾರು?

| Updated By: ಸುಷ್ಮಾ ಚಕ್ರೆ

Updated on: Jun 06, 2022 | 8:59 AM

Who is Nupur Sharma: ಬಿಜೆಪಿ ವಕ್ತಾರೆ ನೂಪುರ್ ಶರ್ಮ ಅವರನ್ನು ಅಮಾನತುಗೊಳಿಸಿರುವ ಬಿಜೆಪಿ ತಮ್ಮ ಪಕ್ಷದ ನಾಯಕರು, ಕಾರ್ಯಕರ್ತರಿಗೆ ಪ್ರಬಲ ಸಂದೇಶ ರವಾನಿಸಿದೆ. ಆದರೆ, ಬಿಜೆಪಿ ಈ ನಿರ್ಧಾರದಿಂದ ತಮ್ಮದೇ ಪಕ್ಷದ ಕಾರ್ಯಕರ್ತರ ಕೆಂಗಣ್ಣಿಗೂ ಗುರಿಯಾಗಿದೆ.

Nupur Sharma: ಪ್ರವಾದಿ ಮೊಹಮ್ಮದ್ ಕುರಿತ ವಿವಾದಾತ್ಮಕ ಹೇಳಿಕೆಯಿಂದ ಅಮಾನತುಗೊಂಡಿರುವ ನೂಪುರ್ ಶರ್ಮ ಯಾರು?
ನೂಪುರ್ ಶರ್ಮ
Image Credit source: Newsroom Post
Follow us on

ನವದೆಹಲಿ: ಪ್ರವಾದಿ ಮೊಹಮ್ಮದ್  (Prophet Muhammad) ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ವಕ್ತಾರೆ ನೂಪುರ್ ಶರ್ಮ (Nupur Sharma) ಅವರನ್ನು ಅಮಾನತುಗೊಳಿಸಿ, ದೆಹಲಿಯ ಮಾಧ್ಯಮ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್ (Naveen Kumar Jindal) ಅವರನ್ನು ಉಚ್ಛಾಟಿಸಿರುವ ಬಿಜೆಪಿ (BJP)  ತಮ್ಮದೇ ಪಕ್ಷದ ನಾಯಕರು, ಕಾರ್ಯಕರ್ತರಿಗೆ ಪ್ರಬಲ ಸಂದೇಶ ರವಾನಿಸಿದೆ. ಆದರೆ, ಬಿಜೆಪಿ ತನ್ನ ಈ ನಿರ್ಧಾರದಿಂದ ತಮ್ಮದೇ ಪಕ್ಷದ ಕಾರ್ಯಕರ್ತರ ಕೆಂಗಣ್ಣಿಗೂ ಗುರಿಯಾಗಿದೆ. ಹಿಂದೂ ಕಾರ್ಯಕರ್ತರ, ಬಿಜೆಪಿ ನಾಯಕರ ಬೆಂಬಲಕ್ಕೆ ನಿಲ್ಲದಿರುವ ಬಿಜೆಪಿಯ ವರ್ತನೆ ಭಾರೀ ಟೀಕೆಗೂ ಒಳಗಾಗಿದೆ. ಇನ್ನೊಂದೆಡೆ ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್ ಶರ್ಮ ತಾವು ಪ್ರವಾದಿ ಮೊಹಮ್ಮದ್ ಕುರಿತು ನೀಡಿದ್ದ ಹೇಳಿಕೆಯನ್ನು ಹಿಂಪಡೆದಿದ್ದಾರೆ. ಹಾಗಾದರೆ, ಈ ನೂಪುರ್ ಶರ್ಮ (Who is Nupur Sharma) ಯಾರು?

ನೂಪುರ್ ಶರ್ಮ ಪ್ರವಾದಿ ಮೊಹಮ್ಮದ್ ವಿರುದ್ಧ ನೀಡಿದ್ದ ಹೇಳಿಕೆಗೆ ಅರಬ್ ದೇಶಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು. ಈ ಹೇಳಿಕೆ ಕುರಿತು ಮುಸ್ಲಿಂ ಗುಂಪುಗಳು ಪ್ರತಿಭಟನೆ ನಡೆಸಿದ್ದವು. ಹೀಗಾಗಿ, ಅಲ್ಪಸಂಖ್ಯಾತರ ಕಳವಳವನ್ನು ನಿವಾರಿಸುವ ಉದ್ದೇಶದಿಂದ ಬಿಜೆಪಿ ತಾನು ಎಲ್ಲಾ ಧರ್ಮಗಳನ್ನು ಗೌರವಿಸುವುದಾಗಿಯೂ, ಯಾವುದೇ ಧರ್ಮಕ್ಕೆ ಆದ ಅವಮಾನವನ್ನು ಬಲವಾಗಿ ಖಂಡಿಸುವುದಾಗಿಯೂ ಹೇಳಿಕೆ ನೀಡಿತ್ತು.

ಸುಮಾರು 10 ದಿನಗಳ ಹಿಂದೆ ಟಿವಿ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರ ಹೇಳಿಕೆಗಳು ಮತ್ತು ನವೀನ್ ಜಿಂದಾಲ್ ಅವರ ಟ್ವೀಟ್‌ಗಳು ಕೆಲವು ದೇಶಗಳಲ್ಲಿ ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಕರೆ ನೀಡುವಂತೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ್ದ ನೂಪುರ್ ಶರ್ಮ, ನನ್ನ ಮಾತುಗಳಿಂದ ಯಾವುದಾದರೂ ಧರ್ಮದವರಿಗೆ ನೋವುಂಟಾಗಿದ್ದರೆ ನಾನು ಆ ಮಾತುಗಳನ್ನು ಹಿಂಪಡೆಯುತ್ತೇನೆ. ನಾನು ಹಲವು ಬಾರಿ ಟಿವಿ ಚರ್ಚೆಗಳಲ್ಲಿ ಭಾಗವಹಿಸಿದ್ದೇನೆ. ಆದರೆ, ಪ್ರತಿದಿನ ಅಯೋಧ್ಯೆ, ಶಿವನಿಗೆ ಅವಮಾನ ಮಾಡಲಾಗುತ್ತಿತ್ತು. ನನಗೆ ಶಿವನೂ ನನ್ನ ಮನೆಯವನೇ. ನನ್ನ ಶಿವನಿಗೆ ಆದ ಅವಮಾನವನ್ನು ಸಹಿಸಲಾರದೆ ಕೆಲವು ಹೇಳಿಕೆಗಳನ್ನು ನೀಡಿದ್ದೇನೆ ಎಂದು ಅವರು ಹೇಳಿದ್ದರು.

ಇದನ್ನೂ ಓದಿ
ಪ್ರವಾದಿ ಮೊಹಮ್ಮದ್​ರ ಅವಹೇಳನ: ಇಸ್ಲಾಮಿಕ್ ದೇಶಗಳಿಂದ ಆಕ್ಷೇಪ, ಭಾರತದ ಉತ್ಪನ್ನ ಬಹಿಷ್ಕಾರಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಕರೆ
Nupur Sharma ಬಿಜೆಪಿಯಿಂದ ಅಮಾನತು ಆದ ನಂತರ ಪ್ರವಾದಿ ಬಗ್ಗೆ ನೀಡಿರುವ ಹೇಳಿಕೆ ವಾಪಸ್ ಪಡೆದ ನೂಪುರ್ ಶರ್ಮಾ
ಪ್ರವಾದಿ ಬಗ್ಗೆ ಅವಹೇಳನಕಾರಿ ಹೇಳಿಕೆಗೆ ವ್ಯಾಪಕ ಆಕ್ರೋಶ: ಬಿಜೆಪಿಯಿಂದ ನೂಪುರ್ ಶರ್ಮಾ ಅಮಾನತು , ನವೀನ್ ಜಿಂದಾಲ್ ಉಚ್ಚಾಟನೆ
Kanpur Violence: ಕಾನ್ಪುರದಲ್ಲಿ ಕೋಮು ಸಂಘರ್ಷ; ಮೂವರಿಗೆ ಗಾಯ, 18 ಜನರ ಬಂಧನ

ಇದನ್ನೂ ಓದಿ: Nupur Sharma: ಬಿಜೆಪಿ ನಾಯಕಿ ನೂಪುರ್ ಶರ್ಮಾ ತಲೆ ಕತ್ತರಿಸಿದವರಿಗೆ 50 ಲಕ್ಷ ಬಹುಮಾನ ಘೋಷಿಸಿದ ಪಾಕಿಸ್ತಾನಿಗಳು

ನೂಪುರ್ ಶರ್ಮಾ ಯಾರು?:
– ಇದೀಗ ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಂಡಿರುವ ನೂಪುರ್ ಶರ್ಮ ಅವರು ಬಿಜೆಪಿಯ ರಾಷ್ಟ್ರೀಯ ವಕ್ತಾರರಾಗಿದ್ದರು. ನೂಪುರ್ ಶರ್ಮಾ ಅವರನ್ನು 2015ರಲ್ಲಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿ ಪಕ್ಷದಿಂದ ಕಣಕ್ಕಿಳಿಸಲಾಗಿತ್ತು.

– ನೂಪುರ್ ಶರ್ಮಾ ಅವರು ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಓದಿದಾಗಿನಿಂದ ವಿದ್ಯಾರ್ಥಿ ರಾಜಕೀಯದಲ್ಲಿ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದರು. ನೂಪುರ್ ಶರ್ಮಾ ನಂತರ ಅಧ್ಯಯನಕ್ಕಾಗಿ ವಿದೇಶಕ್ಕೆ ಹೋದರು ಮತ್ತು ಅವರು ಟೆಕ್ ಫಾರ್ ಇಂಡಿಯಾದ ಯುವ ರಾಯಭಾರಿಯಾಗಿದ್ದರು.

– ಭಾರತಕ್ಕೆ ಮರಳಿದ ನಂತರ ನೂಪುರ್ ಶರ್ಮಾ ಭಾರತೀಯ ಜನತಾ ಯುವ ಮೋರ್ಚಾದಲ್ಲಿ ಕೆಲಸ ಮಾಡಿದರು.

– ನೂಪುರ್ ಶರ್ಮಾ ಅವರು ಬಿಜೆಪಿಯ ವಿದ್ಯಾರ್ಥಿ ಘಟಕವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ಎಬಿವಿಪಿ) ಸದಸ್ಯರಾಗಿದ್ದರು.

– 2008ರಲ್ಲಿ ನೂಪುರ್ ಶರ್ಮಾ ಅವರು ಎಬಿವಿಪಿಯಿಂದ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರ ಚುನಾವಣೆಯಲ್ಲಿ ಗೆದ್ದರು.

– ನೂಪುರ್ ಶರ್ಮಾ ಅವರು ಭಾರತೀಯ ಜನತಾ ಪಕ್ಷದ (ಬಿಜೆಪಿ) ಯುವ ಘಟಕದಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿಯೂ ಕೆಲಸ ಮಾಡಿದ್ದರು.

ಇದನ್ನೂ ಓದಿ: Nupur Sharma ಬಿಜೆಪಿಯಿಂದ ಅಮಾನತು ಆದ ನಂತರ ಪ್ರವಾದಿ ಬಗ್ಗೆ ನೀಡಿರುವ ಹೇಳಿಕೆ ವಾಪಸ್ ಪಡೆದ ನೂಪುರ್ ಶರ್ಮಾ

ವಿವಾದಾತ್ಮಕ ಹೇಳಿಕೆಯ ಕಾರಣದಿಂದ ಬಿಜೆಪಿ ಪಕ್ಷದಿಂದ ಅಮಾನತುಗೊಂಡ ನಂತರ, ನೂಪುರ್ ಶರ್ಮಾ ಅವರು ಟ್ವಿಟರ್‌ನಲ್ಲಿ ಕ್ಷಮೆಯಾಚಿಸಿದ್ದಾರೆ. ಬೇಷರತ್ತಾಗಿ ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ನೂಪುರ್ ಶರ್ಮಾ ವಿರುದ್ಧ ಹಲವಾರು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಜೂನ್ 3ರಂದು ಟಿವಿ ಚರ್ಚೆಯ ಸಂದರ್ಭದಲ್ಲಿ ಪ್ರವಾದಿ ಮುಹಮ್ಮದ್ ವಿರುದ್ಧದ ನೂಪುರ್ ಶರ್ಮ ಅವರ ಹೇಳಿಕೆಯ ನಂತರ ಕಾನ್ಪುರದಲ್ಲಿ ಹಿಂಸಾತ್ಮಕ ಘರ್ಷಣೆ ಭುಗಿಲೆದ್ದಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 8:53 am, Mon, 6 June 22