ಪ್ರವಾದಿ ಬಗ್ಗೆ ಅವಹೇಳನಕಾರಿ ಹೇಳಿಕೆಗೆ ವ್ಯಾಪಕ ಆಕ್ರೋಶ: ಬಿಜೆಪಿಯಿಂದ ನೂಪುರ್ ಶರ್ಮಾ ಅಮಾನತು , ನವೀನ್ ಜಿಂದಾಲ್ ಉಚ್ಚಾಟನೆ
Nupur Sharma ಜ್ಞಾನವಾಪಿ ವಿಷಯದ ಕುರಿತು ಸುದ್ದಿವಾಹಿನಿಯ ಚರ್ಚೆಯಲ್ಲಿ ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಶೇಖ್ ದೂರಿದ್ದರು. ಇದಲ್ಲದೆ, ಜಿಂದಾಲ್ ದೇಶದ ಹಿತಾಸಕ್ತಿ ವಿರುದ್ಧ ಟ್ವೀಟ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ
ದೆಹಲಿ: ಪ್ರವಾದಿ ಮೊಹಮ್ಮದ್ (Prophet Muhammad) ಮತ್ತು ಅವರ ಪತ್ನಿಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ವ್ಯಾಪಕ ಆಕ್ರೋಶಕ್ಕೆ ಕಾರಣರಾಗಿದ್ದ ಬಿಜೆಪಿ ವಕ್ತಾರರಾದ ನೂಪುರ್ ಶರ್ಮಾ (Nupur Sharma) ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು, ನವೀನ್ ಜಿಂದಾಲ್ (Naveen Kumar Jindal) ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಮುಂಬೈ ಪೊಲೀಸರು ರಾಝಾ ಅಕಾಡೆಮಿಯ ಮುಂಬೈ ವಿಭಾಗದ ಜಂಟಿ ಕಾರ್ಯದರ್ಶಿ ಇರ್ಫಾನ್ ಶೇಖ್ ಅವರ ದೂರಿನ ಆಧಾರದ ಮೇಲೆ ಶರ್ಮಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಜ್ಞಾನವಾಪಿ ವಿಷಯದ ಕುರಿತು ಸುದ್ದಿವಾಹಿನಿಯ ಚರ್ಚೆಯಲ್ಲಿ ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಶೇಖ್ ದೂರಿದ್ದರು. ಇದಲ್ಲದೆ, ಜಿಂದಾಲ್ ದೇಶದ ಹಿತಾಸಕ್ತಿ ವಿರುದ್ಧ ಟ್ವೀಟ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.ಶರ್ಮಾ ಮತ್ತು ಜಿಂದಾಲ್ ಹೇಳಿಕೆಗಳ ನಂತರ ಗಲ್ಫ್ ರಾಷ್ಟ್ರಗಳ ಹಲವಾರು ಟ್ವಿಟರ್ ಬಳಕೆದಾರರು ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಬಹಿಷ್ಕರಿಸಲು ಕರೆ ನೀಡಿದ್ದರು. ಕೆಲವು ಟ್ವಿಟರ್ ಬಳಕೆದಾರರು, “ಇಂತಹ ನಾಯಕರನ್ನು ತಕ್ಷಣವೇ ಜೈಲಿಗೆ ಕಳುಹಿಸಬೇಕು, ಇಲ್ಲದಿದ್ದರೆ ನಾವು ಅವರನ್ನು ಬಂಧಿಸಲು ಬೀದಿಗಿಳಿಯುತ್ತೇವೆ” ಎಂದು ಬರೆದಿದ್ದಾರೆ.
Citing her views as “contrary to the Party’s position on various matters,” BJP suspends Nupur Sharma from the party with immediate effect pic.twitter.com/txQ9CpvqH4
ಇದನ್ನೂ ಓದಿ— ANI (@ANI) June 5, 2022
ಪಕ್ಷದ ಸಂವಿಧಾನವನ್ನು ಉಲ್ಲಂಘಿಸುವ ವಿವಿಧ ವಿಷಯಗಳ ಬಗ್ಗೆ ಪಕ್ಷಕ್ಕೆ ವಿರುದ್ಧವಾದ ಅಭಿಪ್ರಾಯಗಳನ್ನು ನೀವು ವ್ಯಕ್ತ ಪಡಿಸಿದ್ದೀರಿ ಎಂದು ಬಿಜೆಪಿ ತನ್ನ ಅಮಾನತು ಪತ್ರದಲ್ಲಿ ಶರ್ಮಾಗೆ ತಿಳಿಸಿದೆ.
I am surprised at those who are surprised by this. Fighting radicalisation needs much more than electoral politics pic.twitter.com/nsPpABDqUO
— Swati Goel Sharma (@swati_gs) June 5, 2022
ವಕ್ತಾರರ ವಿರುದ್ಧ ಭಾರತದಲ್ಲಿ ದಾಖಲಾಗಿರುವ ದೂರುಗಳ ಹೊರತಾಗಿ, ಕುವೈತ್, ಕತಾರ್ ಮತ್ತು ಸೌದಿ ಅರೇಬಿಯಾದಂತಹ ಹಲವಾರು ಅರಬ್ ರಾಷ್ಟ್ರಗಳಲ್ಲಿ ಇತ್ತೀಚಿನ ದಿನಗಳಲ್ಲಿ ಆಕ್ರೋಶ ಹೆಚ್ಚಿದೆ. ಈ ದೇಶಗಳುಭಾರತದೊಂದಿಗೆ ಅತ್ಯಂತ ನಿಕಟ ಸಂಬಂಧವನ್ನು ಹೊಂದಿದ್ದು ಲಕ್ಷಾಂತರ ಜನರಿಗೆ ನೆಲೆಯಾಗಿದೆ. ಇದಕ್ಕಿಂತ ಮುಂಚೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ನೀಡಿರುವ ಹೇಳಿಕೆಯಲ್ಲಿ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ವಿರುದ್ಧ ಅಥವಾ ಆಕ್ಷೇಪಿಸಲಾದ ಕಾಮೆಂಟ್‌ಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಆದಾಗ್ಯೂ, ಬಿಜೆಪಿ ಯಾವುದೇ ಧರ್ಮದ ಅವಮಾನವನ್ನು ಕ್ಷಮಿಸುವುದಿಲ್ಲ ಮತ್ತು ಎಲ್ಲಾ ನಂಬಿಕೆಗಳನ್ನು ಗೌರವಿಸುತ್ತದೆ ಎಂದು ಈ ಹೇಳಿಕೆಯಲ್ಲಿ ಒತ್ತಿಹೇಳಿದೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 5:11 pm, Sun, 5 June 22