ಮಾಡೋಕೆ ಕೆಲಸ ಇಲ್ಲ ಅವರಿಗೆ, ನಮ್ಮ ಹಳೇ ಚಡ್ಡಿಗಳನ್ನು ಕೊಡುತ್ತೇವೆ ಸುಟ್ಕುಂಡು ಇರಲಿ: ಸಿಟಿ ರವಿ

ಕೆಲಸ ಇಲ್ಲದೆ ಕುಳಿತುಕೊಂಡಿರುವ ಕಾಂಗ್ರೆಸ್​ನವರು ಚಡ್ಡಿ ಸುಟ್ಟುಕೊಂಡು ಇರಲಿ. ನಮ್ಮ ಹಳೇಯ ಚಡ್ಡಿಗಳನ್ನು ಕಳಿಸಿ ಕೊಡುತ್ತೇವೆ. ಬೇಕಾದರೆ ಸುಟ್ಟುಕೊಂಡು ಇರಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಮಾಡೋಕೆ ಕೆಲಸ ಇಲ್ಲ ಅವರಿಗೆ, ನಮ್ಮ ಹಳೇ ಚಡ್ಡಿಗಳನ್ನು ಕೊಡುತ್ತೇವೆ ಸುಟ್ಕುಂಡು ಇರಲಿ: ಸಿಟಿ ರವಿ
ಸಿ.ಟಿ.ರವಿ
Follow us
TV9 Web
| Updated By: Rakesh Nayak Manchi

Updated on:Jun 05, 2022 | 6:24 PM

ಚಿಕ್ಕಮಗಳೂರು: ಅಧಿಕಾರಿಗಳನ್ನು ಕಳೆದುಕೊಂಡು ಮಾಡಲು ಕೆಲಸ ಇಲ್ಲದೆ ಕುಳಿತುಕೊಂಡಿರುವ ಕಾಂಗ್ರೆಸ್​ನವರು ಚಡ್ಡಿ ಸುಟ್ಟುಕೊಂಡು ಇರಲಿ. ನಮ್ಮ ಹಳೇಯ ಚಡ್ಡಿಗಳನ್ನು ಕಳಿಸಿ ಕೊಡುತ್ತೇವೆ. ಬೇಕಾದರೆ ಸುಟ್ಟುಕೊಂಡು ಇರಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (C.T.Ravi) ವ್ಯಂಗ್ಯವಾಡಿದ್ದಾರೆ. ಚಡ್ಡಿ ಸುಡುತ್ತೇವೆಂದು ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರಕ್ಕೆ ತಿರುಗೇಟು ನೀಡಿದ ಅವರು, ಉತ್ತರ ಪ್ರದೇಶದ ಮಾದರಿಯಲ್ಲೇ ಕಾಂಗ್ರೆಸ್ ಕರ್ನಾಟಕದಲ್ಲೂ ನೆಲಕಚ್ಚಲಿದೆ. ದುರಹಂಕಾರ, ಓಲೈಕೆ ರಾಜಕಾರಣವನ್ನು ಜನರು ಒಪ್ಪಲ್ಲ, ಕ್ಷಮಿಸಲ್ಲ ಎಂದರು.

ಇದನ್ನೂ ಓದಿ: ಆರ್​ಎಸ್​ಎಸ್​ ತಂಟೆಗೆ ಬಂದರೆ ಹುಷಾರ್; ಸಿದ್ದರಾಮಯ್ಯಗೆ ಕಂದಾಯ ಸಚಿವ ಆರ್ ಅಶೋಕ್ ಎಚ್ಚರಿಕೆ

ಚಿಕ್ಕಮಗಳೂರಿನಲ್ಲಿ ಹೇಳಿಕೆ ನೀಡಿದ ಅವರು, ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಚ್ಚಿದಾಗ ಡಿ.ಕೆ.ಶಿವಕುಮಾರ್ (D.K.Shivakumar) ಮತ್ತು ಸಿದ್ದರಾಮಯ್ಯ (Siddaramaiah) ಅವರ ಬಾಯಿ ಬಂದ್​​​ ಆಗಿತ್ತು. ”ದೆ ಆರ್ ಆಲ್ ಸಿದ್ದು ಆಂಡ್ ಡಿಕೆಶಿ ಬ್ರದರ್ಸ್”​ (ಅವರೆಲ್ಲಾ ಸಿದ್ದು ಮತ್ತು ಡಿಕೆಶಿ ಅವರ ಸಹೋದರರು). ಹೀಗಾಗಿ ಅವರಿಬ್ಬರ ಬಾಯಿ ಬಂದ್ ಆಗಿತ್ತು. ಅಷ್ಟೇ ಅಲ್ಲ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಾಟೆಯನ್ನ ರಾಜ್ಯಕ್ಕೆ ಹಬ್ಬಿಸಲು ಯತ್ನ ಮಾಡಿದ್ದರು. ಮತಾಂಧತೆ ಬೆಳೆಸೋದೆ ಇವರ ಗುರಿ ಇದ್ದಂತೆ ಕಾಣುತ್ತದೆ. ಅಂದು ಮತಾಂಧತೆಯ ಪರಿಣಾಮ ದೇಶ ವಿಭಜನೆ ಆಯ್ತು. ಈಗ ಇವರು ಮತಾಂದತೆಗೆ ಮತ್ತೆ ಕುಮ್ಮಕ್ಕು ಕೊಡುತ್ತಿದ್ದಾರೆ. ಅವರ ಸರ್ವ ನಾಶವೂ ಆಗುತ್ತೆ ಎಂದು ಹೇಳಿದರು.

ಇದನ್ನೂ ಓದಿ: RSS ಮುಖ್ಯಸ್ಥ ಮೋಹನ್​ ಭಾಗವತ್​ಗೆ ‘ಸಾಮ್ರಾಟ್​ ಪೃಥ್ವಿರಾಜ್​’ ಚಿತ್ರ ತೋರಿಸಲಿರುವ ಅಕ್ಷಯ್​ ಕುಮಾರ್​

ಸಿದ್ದು, ಡಿಕೆಶಿ ಆರ್​ಎಸ್​ಎಸ್ ಚಡ್ಡಿ ಹಾಕಿಕೊಳ್ಳಲಿ

ದಾವಣಗೆರೆ: ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಆರ್‌ಎಸ್‌ಎಸ್‌ ಚಡ್ಡಿ ಹಾಕಿಕೊಳ್ಳಲಿ. ಆಗ ಆರ್‌ಎಸ್‌ಎಸ್‌ ಸಂಸ್ಕೃತಿ ಏನೆಂಬುದು ಗೊತ್ತಾಗುತ್ತದೆ ಎಂದು ಹೊನ್ನಾಳಿಯಲ್ಲಿ ಶಾಸಕ ರೇಣುಕಾಚಾರ್ಯ ಹೇಳಿದರು. ರಾಜ್ಯ ಕಾಂಗ್ರೆಸ್ ನಾಯಕರ ಚಡ್ಡಿ ಸುಡುವ ಅಭಿಯಾನಕ್ಕೆ ತಿರುಗೇಟು ನೀಡಿದ ಅವರು, ಆರ್​ಎಸ್​ಎಸ್​ ಚಡ್ಡಿಯನ್ನು ಸುಟ್ಟರೆ ಸಿದ್ದರಾಮಯ್ಯರವರೇ ಭಸ್ಮ ಆಗುತ್ತಾರೆ. ಭಸ್ಮಾಸುರನಂತೆ ಕಾಂಗ್ರೆಸ್, ಸಿದ್ದರಾಮಯ್ಯ ಭಸ್ಮ ಆಗುತ್ತಾರೆ ಎಂದರು.

ಕಾಂಗ್ರೆಸ್ ನವರಿಗೆ ಬಹಿರಂಗವಾಗಿ ಸವಾಲ್ ಹಾಕುತ್ತೇನೆ. ಈ ಚಡ್ಡಿ ದೇಶವನ್ನು ಕಾಯುತ್ತಿದೆ, ತಮ್ಮನ್ನು ತಾವು ಆರ್ ಎಸ್‌ಎಸ್ ನವರು ಅರ್ಪಿಸಿಕೊಂಡಿದ್ದಾರೆ. ಪ್ರಕೃತಿ ವಿಕೋಪ ಸೇರಿದಂತೆ ಬೇರೆ ಬೇರೆ ಸಂದರ್ಭದಲ್ಲಿ ಜನರನ್ನು ರಕ್ಷಣೆ ಮಾಡಿದ್ದಾರೆ. ಸಿದ್ದರಾಮಯ್ಯ , ಡಿಕೆಶಿ ನೀವು ಆರ್​​ಎಸ್​ಎಸ್ ಕಚೇರಿಗೆ ಬನ್ನಿ. ಆರ್​ಎಸ್​ಎಸ್ ಚಡ್ಡಿ ಹಾಕಿಕೊಳ್ಳಿ ಆಗ ಸಂಘದ ಸಂಸ್ಕ್ರತಿ ಗೊತ್ತಾಗುತ್ತದೆ ಎಂದು ಸವಾಲ್ ಹಾಕಿದರು.

Also Read: ನನಗೊಬ್ಬನಿಗೆ ಅಲ್ಲ ಬಹಳ ಜನರಿಗೆ ಸಿದ್ದರಾಮಯ್ಯ ಬಗ್ಗೆ ಅನುಭವ ಆಗಿದೆ; ಆ ವ್ಯಕ್ತಿಯಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಲಿದೆ -ಹೆಚ್ಡಿ ಕುಮಾರಸ್ವಾಮಿ

ದೇಶದಲ್ಲಿ ಕಾಂಗ್ರೆಸ್ ಪಕ್ಷದ ಅಡ್ರೆಸ್ ಇಲ್ಲ, ರಾಜ್ಯದಲ್ಲೂ ಅಡ್ರೆಸ್ ಇಲ್ಲದಿದ್ದರೂ ದೇಶಾಭಿಮಾನದ ಬಗ್ಗೆ ಆರ್‌ಎಸ್‌ಎಸ್‌ ಹೇಳಿಕೊಡಲು ಬರುತ್ತದೆ. ಕಾಂಗ್ರೆಸ್‌ ಭಯೋತ್ಪಾದನೆ ಬಗ್ಗೆ ಹೇಳಿಕೊಡುತ್ತದೆ. ಭಯೋತ್ಪಾದಕರನ್ನು ಕಾಂಗ್ರೆಸ್‌ನವರು ಆರಾಧಿಸುತ್ತಾರೆ ಎಂದು ಟೀಕಿಸಿದರು. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯಿಸಿ, ಸಚಿವ ಸಂಪುಟದ ಬಗ್ಗೆ ನನಗೆ ಗೊತ್ತಿಲ್ಲ ನಾನು ಕೇವಲ ಕ್ಷೇತ್ರದ ಅಭಿವೃದ್ಧಿಗೆ ಒತ್ತು ಕೊಡುತ್ತೇನೆ ಎಂದರು.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:24 pm, Sun, 5 June 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ