ಮಾಂತ್ರಿಕ ಕನಸಿನಲ್ಲಿ ಬಂದು ಅತ್ಯಾಚಾರ ಮಾಡುತ್ತಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ ಮಹಿಳೆ

ಮಗನು ಅನಾರೋಗ್ಯದಿಂದ ಚೇತರಿಸಿಕೊಳ್ಳಲು ಮಂತ್ರವನ್ನು ಪಠಿಸುವಂತೆ ಹೇಳಿದ್ದರು. ಆ ಮಂತ್ರವನ್ನು ಪಠಿಸುವಾಗಿನ ಕೆಲವು ಪ್ರಕ್ರಿಯೆಗಳ ಕುರಿತಾಗಿಯೂ ಹೇಳಿಕೊಟ್ಟಿದ್ದರು.

ಮಾಂತ್ರಿಕ ಕನಸಿನಲ್ಲಿ ಬಂದು ಅತ್ಯಾಚಾರ ಮಾಡುತ್ತಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ ಮಹಿಳೆ
ಸಾಂದರ್ಭಿಕ ಚಿತ್ರ
Edited By:

Updated on: Jun 25, 2021 | 9:54 AM

ಪಟ್ನಾ: ಅವರಂಗಾಬಾದ​ನಲ್ಲಿ ಒಂದು ವಿಚಿತ್ರ ಪ್ರಕರಣವೊಂದು ದಾಖಲಾಗಿದೆ. ನನ್ನ ಕನಸಿನಲ್ಲಿ ಯಾಂತ್ರಿಕ ಬಂದು ಪದೇ ಪದೇ ಅತ್ಯಾಚಾರ ಮಾಡುತ್ತಿದ್ದಾರೆ ಎಂದು ಮಹಿಳೆಯೋರ್ವಳು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ. ಕಳೆದ ಜನವರಿ ತಿಂಗಳಿನಲ್ಲಿ ನನ್ನ ಮಗನ ಅನಾರೋಗ್ಯದ ನಿಮಿತ್ತ ಪ್ರಶಾಂತ್​ ಚತುರ್ವೇದಿ ಅವರ ಬಳಿ ಹೋಗಿದ್ದೆ ಎಂದು ಘಟನೆಯನ್ನು ವಿವರಿಸುವಾಗ ಹೇಳಿದ್ದಾರೆ.

ಮಗನು ಅನಾರೋಗ್ಯದಿಂದ ಚೇತರಿಸಿಕೊಳ್ಳಲು ಮಂತ್ರವನ್ನು ಪಠಿಸುವಂತೆ ಹೇಳಿದ್ದರು. ಆ ಮಂತ್ರವನ್ನು ಪಠಿಸುವಾಗಿನ ಕೆಲವು ಪ್ರಕ್ರಿಯೆಗಳ ಕುರಿತಾಗಿಯೂ ಹೇಳಿಕೊಟ್ಟಿದ್ದರು. ಅವರನ್ನು ಭೇಟಿ ಮಾಡಿದ 15 ದಿನಗಳ ನಂತರ ನನ್ನ ಮಗ ತೀರಿಹೋದನು ಎಂದು ಮಹಿಳೆ ಪೊಲೀಸರ ಬಳಿ ವಿವರಿಸಿದ್ದಾರೆ.

ತನ್ನ ಮಗನ ಸಾವಿನ ಕುರಿತಾಗಿ ಕೇಳಲು ನಾನು ಪುನಃ ಪ್ರಶಾಂತ್​ ಚತುರ್ವೇದಿ ಅವರ ಬಳಿ ಹೋಗಿದ್ದೆ. ಆಗ ಚತುರ್ವೇದಿ ಅವರು ನನ್ನ ಮೇಲೆ ಅತ್ಯಾಚಾರ ಮಾಡಲು ಮುಂದಾಗಿದ್ದಾರೆ ಆ ಸಂದರ್ಭದಲ್ಲಿ ನನ್ನ ಮಗ ಬಂದು ನನ್ನನ್ನು ಕಾಪಾಡಿದ್ದಾನೆ ಎಂದು ಪೊಲೀಸರ ಬಳಿ ಹೇಳಿದ್ದಾರೆ. ಈ ಕುರಿತಂತೆ ಎಸ್​ಎಚ್​ಒ ಅಂಜನಿ ಕುಮಾರ್​ ತಿಳಿಸಿದ್ದಾರೆ.

ಆ ಸಮಯದಲ್ಲಿ ಮಹಿಳೆ ಪೊಲೀಸರಿಗೆ ದೂರು ನೀಡಿರಲಿಲ್ಲ. ಅಂದಿನಿಂದ ಚತುರ್ವೇದಿ ಕನಸಿನಲ್ಲಿ ಬರುತ್ತಿದ್ದಾರೆ ಮತ್ತು ಪದೇ ಪದೇ ನನ್ನ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಚತುರ್ವೇದಿ ಅವರ ವಿರುದ್ಧ ಲಿಖಿತ ದೂರು ಸ್ವೀಕರಿಸಿದ್ದರಿಂದ ಅವರನ್ನು ನಾವು ವಿಚಾರಿಸಿದ್ದೇವೆ. ದೂರು ಕೊಟ್ಟವರು ಯಾರು ಎಂಬುದನ್ನು ತಿಳಿದುಕೊಳ್ಳಲು ಚತುರ್ವೇದಿ ಅವರು ನಿರಾಕರಿಸಿದರು. ನಾನು ಅವರನ್ನು ಎಂದೂ ಭೇಟಿ ಮಾಡಿಲ್ಲ ಎಂದು ಅವರು ಹೇಳಿಕೆ ನೀಡಿದ್ದಾರೆ. ಚತುರ್ವೇದಿ ವಿರುದ್ಧ ನಮಗೆ ಯಾವುದೇ ಪುರಾವೆಗಳಿಲ್ಲದ ಕಾರಣ ಅವರನ್ನು ನಾವು ಬಿಡುಗಡೆ ಮಾಡಿದ್ದೇವೆ ಎಂದು ಎಸ್​ಎಚ್​ಒ ಅಂಜನಿ ಕುಮಾರ್​ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:

Chirag Paswan ಮುಂದಿನ ತಿಂಗಳು ಬಿಹಾರದಾದ್ಯಂತ ರೋಡ್ ಶೋ ನಡೆಸಲಿದ್ದಾರೆ ಚಿರಾಗ್ ಪಾಸ್ವಾನ್

Published On - 9:51 am, Fri, 25 June 21