Chirag Paswan ಮುಂದಿನ ತಿಂಗಳು ಬಿಹಾರದಾದ್ಯಂತ ರೋಡ್ ಶೋ ನಡೆಸಲಿದ್ದಾರೆ ಚಿರಾಗ್ ಪಾಸ್ವಾನ್
Lok Janshakti Party: ನನ್ನ ತಂದೆಯ ಜನ್ಮದಿನಾಚರಣೆ ಜುಲೈ 5 ರಂದು ಬರುತ್ತದೆ. ನನ್ನ ತಂದೆ ಮತ್ತು ಚಿಕ್ಕಪ್ಪ ಇನ್ನು ನನ್ನೊಂದಿಗೆ ಇಲ್ಲ. ಆದ್ದರಿಂದ, ಜುಲೈ 5 ರಿಂದ ಹಾಜಿಪುರದಿಂದ ‘ಆಶೀರ್ವಾದ್ ಯಾತ್ರೆ’ ಆರಂಭಿಸಲು ನಾವು ನಿರ್ಧರಿಸಿದ್ದೇವೆ.
ಪಟ್ನಾ: ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ನಿಯಂತ್ರಣಕ್ಕಾಗಿ ನಡೆಯುತ್ತಿರುವ ಜಗಳದ ಮಧ್ಯೆ, ಮುಂದಿನ ತಿಂಗಳು ತನ್ನ ತಂದೆಯ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಬಿಹಾರದಾದ್ಯಂತ ರೋಡ್ ಶೋ ನಡೆಸುವುದಾಗಿ ಚಿರಾಗ್ ಪಾಸ್ವಾನ್ ಭಾನುವಾರ ಹೇಳಿದ್ದಾರೆ. “ನನ್ನ ತಂದೆಯ ಜನ್ಮದಿನಾಚರಣೆ ಜುಲೈ 5 ರಂದು ಬರುತ್ತದೆ. ನನ್ನ ತಂದೆ ಮತ್ತು ಚಿಕ್ಕಪ್ಪ ಇನ್ನು ನನ್ನೊಂದಿಗೆ ಇಲ್ಲ. ಆದ್ದರಿಂದ, ಜುಲೈ 5 ರಿಂದ ಹಾಜಿಪುರದಿಂದ ‘ಆಶೀರ್ವಾದ್ ಯಾತ್ರೆ’ ಆರಂಭಿಸಲು ನಾವು ನಿರ್ಧರಿಸಿದ್ದೇವೆ. ಯಾತ್ರೆ ಬಿಹಾರದ ಎಲ್ಲಾ ಜಿಲ್ಲೆಗಳ ಮೂಲಕ ಹಾದುಹೋಗಲಿದೆ. ನಮಗೆ ಜನರಿಂದ ಹೆಚ್ಚಿನ ಪ್ರೀತಿ ಮತ್ತು ಆಶೀರ್ವಾದಗಳು ಬೇಕಾಗುತ್ತವೆ ”ಎಂದು ಚಿರಾಗ್ ಹೇಳಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಹಿಂದಿನ ದಿನ ಚಿರಾಗ್ , ಪಾಸ್ವಾನ್ ರಾಷ್ಟ್ರೀಯ ಕಾರ್ಯನಿರ್ವಾಹಕ ಸಭೆಯಲ್ಲಿ ಪಾಲ್ಗೊಂಡರು. ಈ ಸಭೆಯಲ್ಲಿ ಇತರ ಸದಸ್ಯರು ಉಚ್ಛಾಟಿತ ಸದಸ್ಯರು ಎಲ್ ಜೆಪಿಯ ಚಿಹ್ನೆ ಮತ್ತು ಹೆಸರನ್ನು ಬಳಸುವುದನ್ನು ಖಂಡಿಸಿ ವಿರೋಧಿಸಿದರು ಎಂದು ಎಎನ್ಐ ವರದಿ ಮಾಡಿದೆ. “ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಅವರಿಗೆ ಭಾರತ ರತ್ನವನ್ನು ಪ್ರದಾನ ಮಾಡಲು ಮತ್ತು ಅವರ ದೊಡ್ಡ ಪ್ರತಿಮೆಯನ್ನು ಬಿಹಾರದಲ್ಲಿ ಸ್ಥಾಪಿಸಲು ಬೇಡಿಕೆ ಇಟ್ಟಿದ್ದೇವೆ ಎಂದು ಪಾಸ್ವಾನ್ ಹೇಳಿದರು.
ರೋಡ್ ಶೋ ನಡೆಸುವ ಚಿರಾಗ್ ಅವರ ನಿರ್ಧಾರವು ಎಲ್ಜಿಪಿ ಪಕ್ಷದ ಮೇಲೆ ತನ್ನ ಚಿಕ್ಕಪ್ಪ ಪಶುಪತಿ ಪಾರಸ್ ನಿಯಂತ್ರಣ ಹೊಂದಿದ ಹೊತ್ತಲ್ಲೇ ಬಂದಿದ್ದು ತಮ್ಮ ಬಲವನ್ನು ತೋರಿಸುತ್ತದೆ. ಪಶುಪತಿ ಪಾರಸ್ ನೇತೃತ್ವದ ಎಲ್ಜೆಪಿ ಬಣ ಗುರುವಾರ ಪಾಟ್ನಾದಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಸಿದೆ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದ ನಂತರ ಚಿರಾಗ್ ಭಾನುವಾರ ದೆಹಲಿಯಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಕರೆದಿದ್ದರು.
ಪಾಟ್ನಾ ಸಭೆಯಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿಯ ಅಗತ್ಯ ಕೋರಂ ಇಲ್ಲದಿರುವುದರಿಂದ ತಾನು ಇನ್ನೂ ಪಕ್ಷದ ಅಧ್ಯಕ್ಷನಾಗಿದ್ದೇನೆ ಎಂದು ಚಿರಾಗ್ ಅವರ ಚಿಕ್ಕಪ್ಪ ನೇತೃತ್ವದ ಭಿನ್ನಮತೀಯರಿಗೆ ಪ್ರತಿಕ್ರಿಯಿಸಿದ್ದಾರೆ.
Most of the members were present at national executive meeting. The members condemned & opposed the use of party’s symbol & name by expelled members. It has also been demanded to confer Bharat Ratna upon Ram Vilas Paswan & install a big statue of him in Bihar: Chirag Paswan, LJP pic.twitter.com/trjTuQceWS
— ANI (@ANI) June 20, 2021
ಕಳೆದ ಸೋಮವಾರ ಪಾರಸ್ ಎಲ್ಜೆಪಿಯ ಉಳಿದ ಐದು ಸಂಸದರಲ್ಲಿ ನಾಲ್ವರ ಬೆಂಬಲವನ್ನು ಹೇಳಿಕೊಂಡಿದ್ದರು ಮತ್ತು ಚಿರಾಗ್ ಅವರನ್ನು ಸಂಸದೀಯ ಪಕ್ಷದ ನಾಯಕ ಸ್ಥಾನದಿಂದ ತೆಗೆದುಹಾಕಿದರು. ಮಂಗಳವಾರ ಪಾರಸ್ ಬಣವು ಚಿರಾಗ್ ಅವರನ್ನು ಎಲ್ಜೆಪಿ ಮುಖ್ಯಸ್ಥರನ್ನಾಗಿ ತೆಗೆದುಹಾಕಿದೆ ಎಂದು ಹೇಳಿದೆ. ಇದರ ಬೆನ್ನಲ್ಲೇ ಚಿರಾಗ್ ಎಲ್ ಜೆಪಿ ರಾಷ್ಟ್ರೀಯ ಕಾರ್ಯನಿರ್ವಾಹಕ ಸಭೆ ನಡೆಸಿ, ಐದು ‘ಬಂಡಾಯ’ ಸಂಸದರನ್ನು ಪಕ್ಷದಿಂದ ಉಚ್ಛಾಟಿಸುವುದಾಗಿ ಘೋಷಿಸಿದರು. ನಿರ್ಣಯವನ್ನು ಚುನಾವಣಾ ಆಯೋಗ ಮತ್ತು ಲೋಕಸಭಾ ಸ್ಪೀಕರ್‌ಗೆ ಕಳುಹಿಸಲಾಗಿದೆ ಎಂದು ಎಲ್‌ಜೆಪಿ ಮುಖಂಡರು ತಿಳಿಸಿದ್ದಾರೆ.
ಚಿರಾಗ್ ಅವರು ಮಾರ್ಚ್ 31 ರಂದು ಪಾರಸ್ಗೆ ಬರೆದ ಪತ್ರವೊಂದನ್ನು ಬಹಿರಂಗಪಡಿಸಿದರು. ಇದು ಅಕ್ಟೋಬರ್ 2020 ರಲ್ಲಿ ಎಲ್ಜೆಪಿ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಾನ್ ಅವರ ಮರಣದ ನಂತರ ಚಿರಾಗ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ ಎಂದು ಸೂಚಿಸುತ್ತದೆ.
ಜನತಾ ದಳ (ಯುನೈಟೆಡ್) ತಮ್ಮ ಪಕ್ಷದಲ್ಲಿನ ವಿಭಜನೆಗೆ ಕಾರಣ ಎಂದು ಚಿರಾಗ್ ದೂಷಿಸಿದ್ದಾರೆ. ಆದರೆ ಅಭಿವೃದ್ಧಿಯಲ್ಲಿ ಬಿಜೆಪಿಯ ಪಾತ್ರದ ಬಗ್ಗೆ ಪ್ರಶ್ನೆಗಳನ್ನು ಸ್ಪಷ್ಟಪಡಿಸಿದ್ದಾರೆ. ಪಕ್ಷದ ಮುಖ್ಯಸ್ಥ ಪಾರಸ್ ತೆಗೆದುಕೊಂಡ ನಿರ್ಧಾರಗಳನ್ನು ಅವರು ತಿರಸ್ಕರಿಸಿದ್ದಾರೆ, ಪಕ್ಷದ ಸಂವಿಧಾನವು ಅವರಿಗೆ ಅಂತಹ ಯಾವುದೇ ಅಧಿಕಾರವನ್ನು ನೀಡುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: Chirag Paswan ‘ನಾನು ಅನಾರೋಗ್ಯದಿಂದ ಬಳಲುತ್ತಿದ್ದಾಗ ನನ್ನ ಬೆನ್ನಿನ ಹಿಂದೆ ಪಿತೂರಿ ನಡೆಯಿತು’: ಚಿರಾಗ್ ಪಾಸ್ವಾನ್
Published On - 5:45 pm, Sun, 20 June 21