Chirag Paswan ‘ನಾನು ಅನಾರೋಗ್ಯದಿಂದ ಬಳಲುತ್ತಿದ್ದಾಗ ನನ್ನ ಬೆನ್ನಿನ ಹಿಂದೆ ಪಿತೂರಿ ನಡೆಯಿತು’: ಚಿರಾಗ್ ಪಾಸ್ವಾನ್

LJP : ಪಕ್ಷದ ವಿಭಜನೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಚಿರಾಗ್  ಪಾಸ್ವಾನ್ ಅಪ್ಪ ಜೀವಂತವಾಗಿದ್ದಾಗಲೂ ಪಕ್ಷದಲ್ಲಿ ಒಡಕು ಮೂಡಿಸಲು ಜೆಡಿಯು ಕೆಲಸ ಮಾಡುತ್ತಿತ್ತು. ನಾನು ಅನಾರೋಗ್ಯದಿಂದ ಬಳಲುತ್ತಿದ್ದಾಗ ನನ್ನ ಬೆನ್ನಿನ ಹಿಂದೆ ಪಿತೂರಿ ನಡೆಸಲಾಯಿತು ಎಂದು ಅವರು ಆರೋಪಿಸಿದ್ದಾರೆ.

Chirag Paswan ‘ನಾನು ಅನಾರೋಗ್ಯದಿಂದ ಬಳಲುತ್ತಿದ್ದಾಗ ನನ್ನ ಬೆನ್ನಿನ ಹಿಂದೆ ಪಿತೂರಿ ನಡೆಯಿತು’: ಚಿರಾಗ್ ಪಾಸ್ವಾನ್
ಚಿರಾಗ್ ಪಾಸ್ವಾನ್
TV9kannada Web Team

| Edited By: Rashmi Kallakatta

Jun 16, 2021 | 6:34 PM

ಪಟ್ನಾ: ಲೋಕ ಜನಶಕ್ತಿ ಪಕ್ಷದ ಬಿಕ್ಕಟ್ಟು ತೆರೆದುಕೊಳ್ಳುತ್ತಲೇ ಚಿರಾಗ್ ಪಾಸ್ವಾನ್ ಅವರು ತಮ್ಮ ಪಕ್ಷದಲ್ಲಿ ಒಡಕು ಮೂಡಿಸಲು ಜನತಾದಳ (ಯುನೈಟೆಡ್) ಕಾರಣ ಎಂದು ದೂಷಿಸಿದ್ದಾರೆ. ಅದೇ ವೇಳೆ ಈ ಬೆಳವಣಿಗೆಯಲ್ಲಿ ಬಿಜೆಪಿಯ ಪಾತ್ರದ ಬಗ್ಗೆ ಪ್ರಶ್ನೆಗಳನ್ನು ಸ್ಪಷ್ಟಪಡಿಸಿದರು. ತಮ್ಮ ಚಿಕ್ಕಪ್ಪ ಪಶುಪತಿ ಕುಮಾರ್ ಪಾರಸ್ ನೇತೃತ್ವದ ಬಣ ತೆಗೆದುಕೊಂಡ ನಿರ್ಧಾರಗಳನ್ನು ಅವರು ತಿರಸ್ಕರಿಸಿದ್ದು ಪಕ್ಷದ ಸಂವಿಧಾನವು ಅವರಿಗೆ ಅಂತಹ ಯಾವುದೇ ಅಧಿಕಾರವನ್ನು ನೀಡುವುದಿಲ್ಲ ಎಂದು ಹೇಳಿದರು.

ಪಕ್ಷದ ವಿಭಜನೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಚಿರಾಗ್  ಪಾಸ್ವಾನ್ ಅಪ್ಪ ಜೀವಂತವಾಗಿದ್ದಾಗಲೂ ಪಕ್ಷದಲ್ಲಿ ಒಡಕು ಮೂಡಿಸಲು ಜೆಡಿಯು ಕೆಲಸ ಮಾಡುತ್ತಿತ್ತು. ನಾನು ಅನಾರೋಗ್ಯದಿಂದ ಬಳಲುತ್ತಿದ್ದಾಗ ನನ್ನ ಬೆನ್ನಿನ ಹಿಂದೆ ಪಿತೂರಿ ನಡೆಸಲಾಯಿತು ಎಂದು ಅವರು ಆರೋಪಿಸಿದ್ದಾರೆ.

ತನ್ನನ್ನು “ಶೇರ್ ಕಾ ಬೀಟಾ” (ಸಿಂಹದ ಮಗ) ಎಂದು ಬಣ್ಣಿಸುವ ಮೂಲಕ ಹೋರಾಟದ ಹಾದಿಯನ್ನು ವಿವರಿಸಿದ ಚಿರಾಗ್, ತನ್ನ ತಂದೆ ರಾಮ್ ವಿಲಾಸ್ ಪಾಸ್ವಾನ್ ಸ್ಥಾಪಿಸಿದ ಪಕ್ಷದ ಕಾರಣಕ್ಕಾಗಿ ಹೋರಾಡುತ್ತೇನೆ ಎಂದು ಪ್ರತಿಪಾದಿಸಿದರು. ಎಲ್‌ಜೆಪಿಯ ಮಾಲೀಕತ್ವವನ್ನು ಪಡೆಯಲು ಇದು ದೀರ್ಘ ಯುದ್ಧವಾಗಲಿದೆ ಎಂದು ಅವರು ಹೇಳಿದರು.

ಮಂಗಳವಾರ, ಪಶುಪತಿ  ಪಾರಸ ನೇತೃತ್ವದ ಐವರು ಸಂಸದರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರನ್ನು ಹುದ್ದೆಯಿಂದ ತೆಗೆದುಹಾಕಿದ್ದಾರೆ ಎಂದು ಹೇಳಿದ್ದಾರೆ. ಆದಾಗ್ಯೂ, ಎಲ್ ಜೆಪಿ ರಾಷ್ಟ್ರೀಯ ಕಾರ್ಯನಿರ್ವಾಹಕ ಸಭೆ ನಡೆಸಿ ಐದು ಬಂಡಾಯ ಸಂಸದರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತೆಗೆದುಹಾಕಿರುವುದಾಗಿ ಪಾಸ್ವಾನ್ ಹೇಳಿದ್ದಾರೆ.

ಪಕ್ಷದ ಐವರು ಸಂಸದರು ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಅವರ ಪುತ್ರ ಚಿರಾಗ್ ವಿರುದ್ಧ ದಂಗೆ ಎದ್ದ ಒಂದು ದಿನದ ನಂತರ ಈ ರಾಜಕೀಯ ಬೆಳವಣಿಗೆ ಸಂಭವಿಸಿದೆ.  ಪಶುಪತಿ ಕುಮಾರ್ ಪಾರಸ್ (ಹಾಜಿಪುರ), ಚೌಧರಿ ಮೆಹಬೂಬ್ ಅಲಿ ಖೈಸರ್ (ಖಾಗರಿಯಾ), ಚಂದನ್ ಕುಮಾರ್ (ನವಾಡಾ), ವೀಣಾ ದೇವಿ (ವೈಶಾಲಿ) ಮತ್ತು ರಾಜಕುಮಾರ ರಾಜ್ (ಸಮಸ್ತಿಪುರ) ಈ ಐವರು ಸಂಸದರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಭಾನುವಾರ ಸಂಜೆ ಭೇಟಿ ಮಾಡಿದ್ದರು. ಸೋಮವಾರ ಮತ್ತೆ ಭೇಟಿ ಮಾಡಿದ  ಅವರು ಪಾರಸ್  ಅವರನ್ನು ಎಲ್​ಜೆಪಿ  ಸಂಸದೀಯ ಪಕ್ಷದ ನಾಯಕರಾಗಿ ಮತ್ತು ಕೈಸರ್ ಅವರನ್ನು ಉಪ ನಾಯಕರಾಗಿ ಆಯ್ಕೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಸೋಮವಾರ ತಡರಾತ್ರಿ ಲೋಕಸಭಾ ಸಚಿವಾಲಯವು ಪಾರಸ್ ಅವರನ್ನು ಲೋಕಸಭೆಯಲ್ಲಿ ಎಲ್​​ಜೆಪಿ ನಾಯಕ ಎಂದು ದೃಢೀಕರಿಸುವ ಸುತ್ತೋಲೆ ಹೊರಡಿಸಿತು.

ಚಿಕ್ಕಪ್ಪ ಪಶುಪತಿ ಪಾರಸ್ ಅವರನ್ನು ಉಚ್ಛಾಟಿಸಿದ ನಂತರ ಪ್ರತಿಕ್ರಿಯಿಸಿದ ಪಾಸ್ವಾನ್, ತಮ್ಮ  ಸಂಘಟನೆಯನ್ನು ತಾಯಿಗೆ ಹೋಲಿಸಿ ಅವರನ್ನು “ದ್ರೋಹ” ಮಾಡಬಾರದು ಎಂದಿದ್ದಾರೆ. ತಮ್ಮ ತಂದೆ ರಾಮ್ ವಿಲಾಸ್ ಪಾಸ್ವಾನ್ ಮತ್ತು ಅವರ ಕುಟುಂಬವು ಸ್ಥಾಪಿಸಿದ ಪಕ್ಷವನ್ನು ಒಟ್ಟಿಗೆ ಇಟ್ಟುಕೊಳ್ಳಲು ಪ್ರಯತ್ನಿಸಿದ್ದೇನೆ ಆದರೆ ವಿಫಲವಾಗಿದೆ ಎಂದು ಅವರು ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಜನರು ಸರ್ವೋಚ್ಚರು, ಪಕ್ಷದಲ್ಲಿ ನಂಬಿಕೆ ಇಟ್ಟುಕೊಂಡವರಿಗೆ ಪಾಸ್ವಾನ್ ಧನ್ಯವಾದ ಅರ್ಪಿಸಿದರು.

ಪಾಸ್ವಾನ್ ಅವರು ಮಾರ್ಚ್ ತಿಂಗಳಲ್ಲಿ ತಮ್ಮ ತಂದೆಯ ಕಿರಿಯ ಸಹೋದರ ಪಾರಸ್ ಗೆ ಬರೆದ ಪತ್ರವೊಂದನ್ನು ಹಂಚಿಕೊಂಡರು. ಅದರಲ್ಲಿ ಅವರು ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಹಲವಾರು ವಿಷಯಗಳ ಬಗ್ಗೆ ಚಿಕ್ಕಪ್ಪನ ಅಸಮಾಧಾನವನ್ನು ಎತ್ತಿ ತೋರಿಸಿದ್ದರು.

ಕಳೆದ ವರ್ಷ ಅಕ್ಟೋಬರ್-ನವೆಂಬರ್​ನಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆಯ ಕೆಲವು ತಿಂಗಳ ನಂತರ, ಚಿರಾಗ್ ಪಾಸ್ವಾನ್ ಜೆಡಿಯು ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಲ್ಲಿ  ಕೋಪಗೊಂಡು ಎನ್‌ಡಿಎಯಿಂದ ಹೊರನಡೆದರು. ಅವರು ಬಿಜೆಪಿಯೊಂದಿಗೆ ಕೆಲಸ ಮಾಡಲು ಬಯಸಿದ್ದರು. ಆದಾಗ್ಯೂ, ಎಲ್ ಜೆಪಿ ಚುನಾವಣೆಯಲ್ಲಿ ಕಳಪೆ ಸಾಧನೆ ತೋರಿತು. ಪಕ್ಷದ ಏಕೈಕ ಶಾಸಕ ಅಂತಿಮವಾಗಿ ಜೆಡಿಯುಗೆ ಪಕ್ಷಾಂತರವಾಗಿದ್ದರು.

ಇದನ್ನೂ ಓದಿChirag Paswan ಕಾಂಗ್ರೆಸ್, ಆರ್​ಜೆಡಿ ಪಕ್ಷಗಳಿಗೆ ಸೇರಲು ಎಲ್​ಜೆಪಿಯ ಮುಖ್ಯಸ್ಥ ಚಿರಾಗ್ ಪಾಸ್ವಾನ್​ಗೆ ಆಹ್ವಾನ

ಇದನ್ನೂ ಓದಿ: Explainer: ರಾಮ್ ವಿಲಾಸ್ ಪಾಸ್ವಾನ್ ಸ್ಥಾಪಿಸಿದ ಎಲ್​ಜೆಪಿ ಪಕ್ಷ ಮಗ ಚಿರಾಗ್ ಪಾಸ್ವಾನ್ ಕೈಯಿಂದ ಜಾರಿದ್ದು ಹೇಗೆ?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada