Chirag Paswan ಕಾಂಗ್ರೆಸ್, ಆರ್​ಜೆಡಿ ಪಕ್ಷಗಳಿಗೆ ಸೇರಲು ಎಲ್​ಜೆಪಿಯ ಮುಖ್ಯಸ್ಥ ಚಿರಾಗ್ ಪಾಸ್ವಾನ್​ಗೆ ಆಹ್ವಾನ

Bihar Politics: ಬಿಹಾರದ ಪ್ರಸ್ತುತ ರಾಜಕೀಯ ಪರಿಸ್ಥಿತಿಯು ಚಿರಾಗ್ ಪಾಸ್ವಾನ್ ಮತ್ತು ತೇಜಸ್ವಿ ಯಾದವ್ ಜತೆಯಾಗಿ ಕೈಜೋಡಿಸಲು ತಕ್ಕ ಸಮಯವಾಗಿದೆ ಎಂದು ರಾಷ್ಟ್ರೀಯ ಜನತಾದಳದ ಶಾಸಕ ಭಾಯಿ ಬೀರೇಂದ್ರ ಹೇಳಿದ್ದಾರೆ.

Chirag Paswan ಕಾಂಗ್ರೆಸ್, ಆರ್​ಜೆಡಿ ಪಕ್ಷಗಳಿಗೆ ಸೇರಲು ಎಲ್​ಜೆಪಿಯ ಮುಖ್ಯಸ್ಥ ಚಿರಾಗ್ ಪಾಸ್ವಾನ್​ಗೆ ಆಹ್ವಾನ
ಚಿರಾಗ್ ಪಾಸ್ವಾನ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jun 15, 2021 | 4:09 PM

ಪಟ್ನಾ: ಚಿರಾಗ್ ಪಾಸ್ವಾನ್ ವಿರುದ್ಧ ಎಲ್‌ಜೆಪಿ ನಾಯಕತ್ವದ ಬಂಡಾಯದ ಮಧ್ಯೆ, ಕಾಂಗ್ರೆಸ್ ಮತ್ತು ಆರ್​ಜೆಡಿ ಬಿಹಾರದಲ್ಲಿ ವಿರೋಧ ಪಕ್ಷವನ್ನು ಬಲಪಡಿಸುವುದಕ್ಕಾಗಿ ತಮ್ಮ ಪಕ್ಷಗಳಿಗೆ ಸೇರಲು ಆಹ್ವಾನ ನೀಡಿದ್ದಾರೆ. ಎಲ್‌ಜೆಪಿಯ ಆರು ಸಂಸದರಲ್ಲಿ ಐವರು ಭಾನುವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ ಚಿರಾಗ್ ಅವರನ್ನು ತೆಗೆದುಹಾಕಿ ಪಕ್ಷದ ನಾಯಕರಾಗಿ ಪಶುಪತಿ ಪಾರಸ್ ಅವರನ್ನು ನೇಮಕ ಮಾಡುವ ಲಿಖಿತ ಮನವಿಯನ್ನು ಸಲ್ಲಿಸಿದರು.

ಬಿಜೆಪಿ ಮತ್ತು ಜೆಡಿಯು ಅವಮಾನವನ್ನು ಎದುರಿಸಿದ ನಂತರ, ಎಲ್‌ಜೆಪಿಯಲ್ಲಿನ ಬಿಕ್ಕಟ್ಟಿನ ಹಿಂದೆ ಯಾರು ಇದ್ದಾರೆ ಎಂಬುದು ಗೊತ್ತಿದೆ. ಚಿರಾಗ್ ಅವರು ಪಕ್ಷ ತೊರದು ವಿರೋಧ ಪಕ್ಷಕ್ಕೆ ಸೇರಲು ಇದು ಸರಿಯಾದ ಸಮಯ ಎಂದು ರಾಷ್ಟ್ರೀಯ ಜನತಾದಳ ಮತ್ತು ಕಾಂಗ್ರೆಸ್ ಪಕ್ಷ ಹೇಳಿದೆ.

ಬಿಹಾರದ ಪ್ರಸ್ತುತ ರಾಜಕೀಯ ಪರಿಸ್ಥಿತಿಯು ಚಿರಾಗ್ ಪಾಸ್ವಾನ್ ಮತ್ತು ತೇಜಸ್ವಿ ಯಾದವ್ ಜತೆಯಾಗಿ ಕೈಜೋಡಿಸಲು ತಕ್ಕ ಸಮಯವಾಗಿದೆ ಎಂದು ರಾಷ್ಟ್ರೀಯ ಜನತಾದಳದ ಶಾಸಕ ಭಾಯಿ ಬೀರೇಂದ್ರ ಹೇಳಿದ್ದಾರೆ. ಹಾಲಿ ಎಲ್ ಜೆಪಿ ಅಧ್ಯಕ್ಷರು ತೇಜಸ್ವಿಗೆ ಬಿಹಾರ ಮುಖ್ಯಮಂತ್ರಿಯಾಗಲು ಸಹಾಯ ಮಾಡಬೇಕು ಮತ್ತು ಅವರು ಆರ್​ಜೆಡಿಯ ರಾಷ್ಟ್ರೀಯ ಕರ್ತವ್ಯವನ್ನು ನೋಡಿಕೊಳ್ಳಬೇಕು ಎಂದು ಬೀರೇಂದ್ರ ಹೇಳಿದರು.

“ಲೋಕ ಜನಶಕ್ತಿ ಪಕ್ಷದಲ್ಲಿ ಏನಾಯಿತು ಎಂಬುದರ ನಂತರ ಯುವ ನಾಯಕರಾದ ಚಿರಾಗ್ ಮತ್ತು ತೇಜಸ್ವಿ ಇಬ್ಬರೂ ಒಗ್ಗೂಡಿ ಭವಿಷ್ಯದ ರಾಜಕೀಯ ಮಾಡಬೇಕು ಎಂಬುದು ಸಾಮಾನ್ಯ ಜನರ ಬೇಡಿಕೆಯಿದೆ. ಚಿರಾಗ್ ಪಾಸ್ವಾನ್ ಈಗ ತೇಜಸ್ವಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಸಹಾಯ ಮಾಡಬೇಕು, ಅವರು ರಾಷ್ಟ್ರೀಯ ರಾಜಕಾರಣವನ್ನು ವಹಿಸಿಕೊಳ್ಳಬೇಕು ಅಂತಾರೆ ಬೀರೇಂದ್ರ.

ಮತ್ತೊಂದೆಡೆ, ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಎಂಎಲ್ ಸಿ ಪ್ರೇಮ್ ಚಂದ್ರ ಮಿಶ್ರಾ ಅವರು ಚಿರಾಗ್ ಪಾಸ್ವಾನ್ ಅವರಿಗೆ ಕಾಂಗ್ರೆಸ್ ಸೇರಲು ಮುಕ್ತ ಪ್ರಸ್ತಾಪವನ್ನು ಮಾಡಿದ್ದಾರೆ.

“ಚಿರಾಗ್ ಪಾಸ್ವಾನ್ ಕಾಂಗ್ರೆಸ್ ಮತ್ತು ಮಹಾ ಮೈತ್ರಿಕೂಟಕ್ಕೆ ಸೇರ್ಪಡೆಗೊಂಡು ಬಿಜೆಪಿ ಮತ್ತು ಜನತಾದಳ ಯುನೈಟೆಡ್ ತಂಡಕ್ಕೆ ಎದಿರೇಟು ನೀಡಲು ಇದುಸೂಕ್ತ ಸಮಯ. ಚಿರಾಗ್ ಪಾಸ್ವಾನ್ ಕಾಂಗ್ರೆಸ್ ಸೇರುವುದು ಪಕ್ಷವನ್ನು ಬಲಪಡಿಸುತ್ತದೆ ”ಎಂದು ಕಾಂಗ್ರೆಸ್ ನಾಯಕ ಪ್ರೇಮ್ ಚಂದ್ರ ಮಿಶ್ರಾ ಹೇಳಿದ್ದಾರೆ.

ಏತನ್ಮಧ್ಯೆ, ಸಂಸತ್ತಿನ ಕೆಳಮನೆಯಲ್ಲಿದ್ದ ಆರು ಸಂಸದರಲ್ಲಿ ಐವರು ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ವಿರುದ್ಧ ಬಂಡಾಯ ಎದ್ದ ನಂತರ ಎಲ್‌ಜೆಪಿ ಭಾರಿ ಹಿನ್ನಡೆ ಅನುಭವಿಸಿದೆ.

ಈ ಬಂಡಾಯಕ್ಕೆ ಚಿರಾಗ್ ಅವರ ಚಿಕ್ಕಪ್ಪ ಪಶುಪತಿ ಪಾರಸ್, ಹಾಜಿಪುರ ಸಂಸದ ಮತ್ತು ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಅವರ ಕಿರಿಯ ಸಹೋದರ ನೇತೃತ್ವ ವಹಿಸಿದ್ದರು. ನಾಲ್ಕು ಎಲ್ ಜೆಪಿ ಸಂಸದರು – ಚಂದನ್ ಸಿಂಗ್, ವೀಣಾ ದೇವಿ, ಮೆಹಬೂಬ್ ಅಲಿ ಕೈಸರ್ ಮತ್ತು ಪ್ರಿನ್ಸ್ ರಾಜ್ ಪಾರಸ್ ಅವರನ್ನು ಪಕ್ಷದ ಸಂಸದೀಯ ಮಂಡಳಿಯ ನಾಯಕರಾಗಿ ಬೆಂಬಲಿಸಿದ್ದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಚಿರಾಗ್ ಅವರನ್ನು ಮೂಲೆಗುಂಪು ಮಾಡಿದರು.

ಆಗ ಪಾರಸ್ ಅವರು ಲೋಕಸಭೆಯಲ್ಲಿ ಎಲ್‌ಜೆಪಿ ಸಂಸದೀಯ ನಾಯಕರಾಗಿ ಸರ್ವಾನುಮತದಿಂದ ಆಯ್ಕೆಯಾದರು. ಲೋಕಸಭಾ ಸ್ಪೀಕರ್ ಸೋಮವಾರ ಇದನ್ನು ಅಂಗೀಕರಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಪಾರಸ್ “ನಮ್ಮ ಪಕ್ಷದಲ್ಲಿ ಆರು ಸಂಸದರು ಇದ್ದಾರೆ. ನಮ್ಮ ಪಕ್ಷವನ್ನು ಉಳಿಸಬೇಕೆಂಬುದು ಐದು ಸಂಸದರ ಬಯಕೆಯಾಗಿತ್ತು. ಹಾಗಾಗಿ, ನಾನು ಪಕ್ಷವನ್ನು ವಿಭಜಿಸಿಲ್ಲ, ಅದನ್ನು ಉಳಿಸಿದ್ದೇನೆ. ಚಿರಾಗ್ ಪಾಸ್ವಾನ್ ನನ್ನ ಅಣ್ಣನ ಮಗ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ. ಅವನ ಬಗ್ಗೆ ನನಗೆ ಯಾವುದೇ ಆಕ್ಷೇಪಗಳಿಲ್ಲ ಎಂದಿದ್ದರು.

“ನಾನು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)ಜತೆಗೆ ಇದ್ದೇನೆ. ನಿತೀಶ್ ಕುಮಾರ್ ಉತ್ತಮ ನಾಯಕ ಮತ್ತು ವಿಕಾಸ್ ಪುರುಷ (ಅಭಿವೃದ್ಧಿಯ ವ್ಯಕ್ತಿ) ಎಂದು ಪಾರಸ್ ಹೇಳಿದ್ದಾರೆ.

ಇದನ್ನೂ ಓದಿ:  Chirag Paswan ಚಿರಾಗ್ ಪಾಸ್ವಾನ್ ವಿರುದ್ಧ ಬಂಡೆದ್ದ ಎಲ್​ಜೆಪಿ ಸಂಸದರು; ಬಂಡಾಯದ ತಂಡಕ್ಕೆ ಪಶುಪತಿ ಪಾರಸ್ ನೇತೃತ್ವ

Published On - 3:55 pm, Tue, 15 June 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್