AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Corona Vaccine: 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ; ಶೇಕಡಾ 100ರಷ್ಟು ಲಸಿಕೆ ನೀಡಿಕೆ ಸಾಧಿಸಿದ ಮೊದಲ ಗ್ರಾಮವಿದು!

ಗ್ರಾಮದಲ್ಲಿ ಒಟ್ಟು 536 ಜನರಿದ್ದಾರೆ. ಅವರಲ್ಲಿ 356 ಮಂದಿ 18 ವರ್ಷ ಮೇಲ್ಪಟ್ಟವರಾಗಿದ್ದಾರೆ. ಅವರೆಲ್ಲರಿಗೂ ಕನಿಷ್ಠ ಒಂದು ಡೋಸ್ ಲಸಿಕೆ ನೀಡಿಕೆ ಆಗಿದೆ ಎಂದು ಹೇಳಿದ್ದಾರೆ.

Corona Vaccine: 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ; ಶೇಕಡಾ 100ರಷ್ಟು ಲಸಿಕೆ ನೀಡಿಕೆ ಸಾಧಿಸಿದ ಮೊದಲ ಗ್ರಾಮವಿದು!
ಪ್ರಾತಿನಿಧಿಕ ಚಿತ್ರ
TV9 Web
| Updated By: ganapathi bhat|

Updated on:Jun 15, 2021 | 5:12 PM

Share

ಮೊಹಾಲಿ: ಕೊರೊನಾ ಎರಡನೇ ಅಲೆಯಲ್ಲಿ ಉಂಟಾದ ಕಷ್ಟ ನಷ್ಟಗಳನ್ನು ಗಮನಿಸಿದ ಬಳಿಕ ಭಾರತದಲ್ಲಿ ಲಸಿಕೆ ಅಗತ್ಯತೆಯ ಅರಿವು ಜನರಲ್ಲಿ ಹೆಚ್ಚಾಗಿದೆ. ಬಹುತೇಕರು ಲಸಿಕೆ ಪಡೆಯಲು ಕಾಯುತ್ತಿದ್ದಾರೆ. ಇತ್ತ ಸರ್ಕಾರಗಳೂ ಲಸಿಕೆ ಅಭಿಯಾನಕ್ಕೆ ವೇಗ ನೀಡಲು ಪ್ರಯತ್ನಿಸುತ್ತಿವೆ. ಈ ಮಧ್ಯೆ, ಪಂಜಾಬ್​ನ ಮೊಹಾಲಿಯ ಭಜೌಲಿ ಎಂಬ ಗ್ರಾಮದಲ್ಲಿ 18 ವರ್ಷ ಮೇಲ್ಪಟ್ಟವರಿಗೂ ಶೇಕಡಾ 100ರಷ್ಟು ಲಸಿಕೆ ನೀಡಲಾಗಿದೆ. ಈ ಮೂಲಕ, 18+ ಜನರಿಗೆ ಲಸಿಕೆ ಸಂಪೂರ್ಣ ಲಸಿಕೆ ನೀಡಿಕೆ ಸಾಧಿಸಿದ ಮೊದಲ ಜಿಲ್ಲೆ ಇದಾಗಿದೆ.

ಜಿಲ್ಲೆಯ ಎಲ್ಲಾ ಗ್ರಾಮ, ಹಳ್ಳಿಗಳು ಕೂಡ ಲಸಿಕೆ ನೀಡಿಕೆ ಅಭಿಯಾನವನ್ನು ಯಶಸ್ವಿಯಾಗಿ ನಿಭಾಯಿಸುತ್ತಿವೆ. ಅದರಲ್ಲಿ, ತರೌಲಿ, ರಸೂಲ್​ಪುರ್, ಬರ್ಸಲ್​ಪುರ್, ಮಡನೇರಿ ಮತ್ತು ಬಹದೂರ್​ಗಡ್ ಎಂಬ ಗ್ರಾಮಗಳಲ್ಲಿ 45 ವರ್ಷ ವಯಸ್ಸು ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗಿದೆ. 45+ ವಯಸ್ಕರಲ್ಲಿ ಶೇಕಡಾ 100ರಷ್ಟು ಲಸಿಕೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ಹಂಚಿಕೊಂಡಿದ್ದಾರೆ.

ಈಗ ಭಜೌಲಿ ಎಂಬ ಗ್ರಾಮದಲ್ಲಿ 18 ವರ್ಷ ಮೇಲ್ಪಟ್ಟವರಿಗೂ ಶೆಕಡಾ 100ರಷ್ಟು ಲಸಿಕೆ ನೀಡಿಕೆಯಾಗಿದೆ. ಗ್ರಾಮದಲ್ಲಿ ಒಟ್ಟು 536 ಜನರಿದ್ದಾರೆ. ಅವರಲ್ಲಿ 356 ಮಂದಿ 18 ವರ್ಷ ಮೇಲ್ಪಟ್ಟವರಾಗಿದ್ದಾರೆ. ಅವರೆಲ್ಲರಿಗೂ ಕನಿಷ್ಠ ಒಂದು ಡೋಸ್ ಲಸಿಕೆ ನೀಡಿಕೆ ಆಗಿದೆ ಎಂದು ಹೇಳಿದ್ದಾರೆ.

ಈಗ ಈ ಗ್ರಾಮ ಪಂಚಾಯತ್ ಪಂಜಾಬ್ ಸರ್ಕಾರದ 10 ಲಕ್ಷ ರೂಪಾಯಿಗಳ ವಿಶೇಷ ಅಭಿವೃದ್ಧಿ ನಿಧಿ ಪಡೆಯಲು ಅರ್ಹವಾಗಿದೆ. ಶೇಕಡಾ 100ರಷ್ಟು ಲಸಿಕೆ ನೀಡಿಕೆ ಆಗಿರುವ ಗ್ರಾಮಕ್ಕೆ ಈ ಕೊಡುಗೆ ನೀಡುವುದಾಗಿ ಮುಖ್ಯಮಂತ್ರಿ ಮೊದಲು ಘೋಷಿಸಿದ್ದರು ಎಂದು ತಿಳಿದುಬಂದಿದೆ.

ಭಾರತಕ್ಕೆ ಮತ್ತೊಂದು ಲಸಿಕೆ?! ಕೊರೊನಾ ವಿರುದ್ಧ ಹೋರಾಟಕ್ಕೆ ಭಾರತದ ಬತ್ತಳಿಕೆ ಸೇರಲು ಇನ್ನೊಂದು ಲಸಿಕೆ ಸಜ್ಜಾಗಿದೆ. ಅದು ಅಮೆರಿಕ ಮೂಲದ ನೊವಾವ್ಯಾಕ್ಸ್​ ಎಂಬ ಲಸಿಕೆ. ಯುಎಸ್​​ನ ಜೈವಿಕ ತಂತ್ರಜ್ಞಾನ ಕಂಪನಿಯಾದ ನೋವಾವಾಕ್ಸ್ ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು, ಇದು ಕೊರೊನಾ ಸೋಂಕಿನ ವಿರುದ್ಧ ಶೇ.90.4ರಷ್ಟು ಪರಿಣಾಮಕಾರಿ ಎಂಬುದು ಅಧ್ಯಯನದಲ್ಲಿ ಸಾಬೀತಾಗಿದೆ. ನೊವಾವ್ಯಾಕ್ಸ್​​ನ್ನು ಭಾರತದಲ್ಲಿ ಉತ್ಪಾದನೆ ಮಾಡಲು ಸೀರಮ್​ ಇನ್​ಸ್ಟಿಟ್ಯೂಟ್​​ನೊಂದಿಗೆ ಯುಎಸ್​ ಕಂಪನಿ ಒಪ್ಪಂದ ಮಾಡಿಕೊಂಡಿದ್ದು, ಇಲ್ಲಿ ಕೊವಾವ್ಯಾಕ್ಸ್ ಎಂಬ ಹೆಸರಿನಲ್ಲಿ ಉತ್ಪಾದನೆ, ಬಳಕೆಯಾಗಲಿದೆ.

20 ಕೋಟಿ ಡೋಸ್​ಗಳಷ್ಟು ನೊವಾವ್ಯಾಕ್ಸ್​ (ಕೊವಾವಾಕ್ಸ್​) ಲಸಿಕೆ ಆಗಸ್ಟ್​-ಡಿಸೆಂಬರ್​ ಹೊತ್ತಿಗೆ ಭಾರತದಲ್ಲಿ ಲಭ್ಯವಾಗಲಿದೆ ಎಂದು ಭಾರತ ಸರ್ಕಾರ ನಿರೀಕ್ಷೆ ಮಾಡುತ್ತಿದೆ. ಹಾಗಂತ ಈ ಲಸಿಕೆಯನ್ನು ಭಾರತದಲ್ಲಿ ತುರ್ತು ಬಳಕೆ ಮಾಡಲು ಅನುಮತಿ ಸಿಕ್ಕಿಲ್ಲ. ಯುಎಸ್​​ ಆಹಾರ ಮತ್ತು ಔಷಧ ಆಡಳಿತ ಅನುಮೋದನೆ ನೀಡಿದ ಬಳಿಕವಷ್ಟೇ ಭಾರತದಲ್ಲೂ ಬಳಕೆಗೆ ಅನುಮತಿ ದೊರೆಯಲಿದೆ.

ಇದನ್ನೂ ಓದಿ: ಕೊವಿಡ್​ 19 ಲಸಿಕೆಯಿಂದ ಭಾರತದಲ್ಲಿ ಮೃತಪಟ್ಟವರು ಎಷ್ಟು ಮಂದಿ?..ಕೊನೆಗೂ ಸಂಖ್ಯೆ ದೃಢಪಡಿಸಿದ ಎಇಎಫ್​ಐ ಸಮಿತಿ

ಭಾರತದಲ್ಲೇ ಉತ್ಪಾದನೆಯಾಗಲಿದೆ ನೊವಾವ್ಯಾಕ್ಸ್ ಲಸಿಕೆ; ಡಿಸೆಂಬರ್​ ಹೊತ್ತಿಗೆ 20 ಕೋಟಿ ಡೋಸ್​​​ ಲಭ್ಯವಾಗುವ ನಿರೀಕ್ಷೆ

Published On - 4:30 pm, Tue, 15 June 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ