ಬಾಲಸೋರ್ ರೈಲು ಅಪಘಾತ ಪ್ರಕರಣ: 3 ರೈಲ್ವೆ ಅಧಿಕಾರಿಗಳನ್ನು ಬಂಧಿಸಿದ ಸಿಬಿಐ

ಬಂಧಿತ ರೈಲ್ವೆ ನೌಕರರನ್ನು ಅರುಣ್ ಕುಮಾರ್ ಮಹಂತ (ಹಿರಿಯ ಸೆಕ್ಷನ್ ಇಂಜಿನಿಯರ್), ಮೊಹಮ್ಮದ್ ಅಮೀರ್ ಖಾನ್ (ಸೆಕ್ಷನ್ ಇಂಜಿನಿಯರ್) ಮತ್ತು ಪಪ್ಪು ಕುಮಾರ್ (ತಂತ್ರಜ್ಞ) ಎಂದು ಗುರುತಿಸಲಾಗಿದೆ.

ಬಾಲಸೋರ್ ರೈಲು ಅಪಘಾತ ಪ್ರಕರಣ: 3 ರೈಲ್ವೆ ಅಧಿಕಾರಿಗಳನ್ನು ಬಂಧಿಸಿದ ಸಿಬಿಐ
ಬಾಲಸೋರ್ ರೈಲು ಅಪಘಾತ
ರಶ್ಮಿ ಕಲ್ಲಕಟ್ಟ

Updated on: Jul 07, 2023 | 8:33 PM

ದೆಹಲಿ: ಜೂನ್ 2 ರಂದು ಒಡಿಶಾದ (Odisha) ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ರೈಲು ಅಪಘಾತ ಪ್ರಕರಣಕ್ಕೆ (Balasore train crash) ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (CBI) ಶುಕ್ರವಾರ ಮೂವರು ರೈಲ್ವೆ ಅಧಿಕಾರಿಗಳನ್ನು ಬಂಧಿಸಿದೆ. ಈ ರೈಲ್ವೆ ಅಧಿಕಾರಿಗಳ ಕೃತ್ಯಗಳು ರೈಲು ಅಪಘಾತಕ್ಕೆ ಕಾರಣವಾಯಿತು ಎಂಬ ಆರೋಪದಲ್ಲಿ ಇವರನ್ನು ಬಂಧಿಸಲಾಗಿದ ಎಂದು ಈ ಬಗ್ಗೆ ತಿಳಿದಿರುವವರು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಬಂಧಿತ ರೈಲ್ವೆ ನೌಕರರನ್ನು ಅರುಣ್ ಕುಮಾರ್ ಮಹಂತ (ಹಿರಿಯ ಸೆಕ್ಷನ್ ಇಂಜಿನಿಯರ್), ಮೊಹಮ್ಮದ್ ಅಮೀರ್ ಖಾನ್ (ಸೆಕ್ಷನ್ ಇಂಜಿನಿಯರ್) ಮತ್ತು ಪಪ್ಪು ಕುಮಾರ್ (ತಂತ್ರಜ್ಞ) ಎಂದು ಗುರುತಿಸಲಾಗಿದೆ. ಇವರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 304 ಮತ್ತು 201 (ಸಾಕ್ಷ್ಯ ನಾಶ) ಅಡಿಯಲ್ಲಿ ಆರೋಪ ಹೊರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಂದು ತಿಂಗಳ ಅವಧಿಯ ತನಿಖೆಯ ನಂತರ ಸಿಬಿಐ ಎರಡು ಕಠಿಣ ಸೆಕ್ಷನ್‌ಗಳನ್ನು ಸೇರಿಸಿದೆ. ಒಡಿಶಾ ಪೊಲೀಸರು ಮೊದಲು ದಾಖಲಿಸಿದ ಪ್ರಕರಣದ ಆಧಾರದ ಮೇಲೆ ಕಳೆದ ತಿಂಗಳು ದಾಖಲಿಸಿದ ಪ್ರಥಮ ಮಾಹಿತಿ ವರದಿಯಲ್ಲಿ (ಎಫ್‌ಐಆರ್) ಅನ್ವಯಿಸಲಾಗಿಲ್ಲ.

ಇದನ್ನೂ ಓದಿ: ಮೋದಿ ಉಪನಾಮ ಪ್ರಕರಣದಲ್ಲಿ ಸಾವರ್ಕರ್ ವಿಷಯ ಪ್ರಸ್ತಾಪಿಸಿದ ಗುಜರಾತ್ ಹೈಕೋರ್ಟ್; ಕಾಂಗ್ರೆಸ್ ಕಿಡಿ

ಮೂವರು ಆರೋಪಿಗಳು ನಿರ್ವಹಿಸಿದ ನಿಖರವಾದ ಪಾತ್ರವನ್ನು ಸಂಸ್ಥೆ ವಿವರಿಸಿಲ್ಲ ಆದರೆ ಹಿರಿಯ ಅಧಿಕಾರಿಯೊಬ್ಬರು “ಘಟನೆಗೆ ಕಾರಣವಾದ ಅವರ ಕ್ರಮಕ್ಕಾಗಿ” ಮೂವರನ್ನು ಬಂಧಿಸಲಾಯಿತು ಎಂದಿದ್ದಾರೆ. ಒಡಿಶಾದಲ್ಲಿ ಸಂಭವಿಸಿದ ಅಪಘಾತದಲ್ಲಿ  ಕನಿಷ್ಠ 293 ಜನರು ಸಾವಿಗೀಡಾಗಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us