ಭುವನೇಶ್ವರ: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ರನ್ನು ಕೊಲೆ ಮಾಡಲು ಸಂಚು ರೂಪಿಸಲಾಗಿದೆ ಎಂಬ ಅನಾಮಧೇಯ ಪತ್ರವೊಂದು ಬಂದ ಹಿನ್ನಲೆಯಲ್ಲಿ ಅವರ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.
ಇಂಗ್ಲಿಷ್ನಲ್ಲಿ ಬರೆದಿರುವ ಪತ್ರದಲ್ಲಿ, ಎಕೆ 47 ಮತ್ತು ಸೆಮಿ ಆಟೋಮೆಟಿಕ್ ಪಿಸ್ತೂಲ್ಗಳನ್ನು ಹೊಂದಿರುವ ದುಷ್ಕರ್ಮಿಗಳು ಮುಖ್ಯಮಂತ್ರಿ ನವೀನ್ ಪಟ್ನಾಯಕ್ರ ಹತ್ಯೆಗೆ ಗುತ್ತಿಗೆ ಪಡೆದಿದ್ದಾರೆ. ಯಾವುದೇ ಸಮಯದಲ್ಲಾದರೂ ಮುಖ್ಯಮಂತ್ರಿಗಳನ್ನು ಹತ್ಯೆಗೈಯಲು ಅವರು ಪ್ರಯತ್ನಿಸಬಹುದಾಗಿದ್ದು, ದಯವಿಟ್ಟು, ಜಾಗೃತೆಯಿಂದಿರುವಂತೆ ಹೇಳಲಾಗಿದೆ. ಅಲ್ಲದೇ ಹಂತಕರು ನಾಗ್ಪುರದಲ್ಲಿ ವಾಸಿಸುತ್ತಿದ್ದಾರೆ ಎಂದೂ ಉಲ್ಲೇಖಿಸಲಾಗಿದೆ.
ಈ ಪತ್ರದ ಬೆನ್ನಲ್ಲೇ ಒಡಿಶಾ ಪೊಲೀಸರು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಭೇಟಿ ನೀಡುವ ಸ್ಥಳ, ಸಿಎಂ ನಿವಾಸ ಮತ್ತು ಕಚೇರಿಗೆ ಭದ್ರತೆ ಹೆಚ್ಚಿಸಿಲಾಗಿದೆ.
ಒಡಿಶಾದಲ್ಲಿ ನಿರ್ಮಾಣವಾಗಲಿದೆ ದೇಶದ ಅತಿದೊಡ್ಡ ಹಾಕಿ ಕ್ರೀಡಾಂಗಣ, 2023ರ ಪುರುಷರ ವಿಶ್ವಕಪ್ ನಡೆಯುವುದು ಇಲ್ಲೇ..