ಒಡಿಶಾ ರೈತ ತಯಾರಿಸಿದ ವಿಶೇಷ ವಾಹನ; ಪೆಟ್ರೋಲ್​-ಡೀಸೆಲ್​ ಬೇಡ್ವೇ ಬೇಡ, ಒಮ್ಮೆ ಬ್ಯಾಟರಿ ಚಾರ್ಜ್ ಮಾಡಿದರೆ 300 ಕಿಮೀ ದೂರ ಓಡಿಸಬಹುದು !

|

Updated on: Mar 14, 2021 | 7:25 PM

ವಾಹನ ತಯಾರಿಕೆಯಲ್ಲಿ ನನಗೆ ಇಬ್ಬರು ಸಹಾಯ ಮಾಡಿದ್ದಾರೆ. ಮೋಟಾರ್ ವೈಂಡಿಂಗ್​, ಎಲೆಕ್ಟ್ರಿಕಲ್​ ಸಾಮಗ್ರಿಗಳ ಅಳವಡಿಕೆ ಸೇರಿ ಎಲ್ಲ ಕೆಲಸವನ್ನೂ ನಾವು ಮನೆಯಲ್ಲೇ ಮಾಡಿದ್ದೇವೆ. ವಿದ್ಯುತ್​ ಉಪಕರಣಗಳ ಬಗ್ಗೆ ನನ್ನ ಸ್ನೇಹಿತರೊಬ್ಬರು ಸಲಹೆಗಳನ್ನು ನೀಡಿದ್ದಾರೆ ಎಂದು ಎಎನ್​ಐಗೆ ಸುಶೀಲ್​ ತಿಳಿಸಿದ್ದಾರೆ.

ಒಡಿಶಾ ರೈತ ತಯಾರಿಸಿದ ವಿಶೇಷ ವಾಹನ; ಪೆಟ್ರೋಲ್​-ಡೀಸೆಲ್​ ಬೇಡ್ವೇ ಬೇಡ, ಒಮ್ಮೆ ಬ್ಯಾಟರಿ ಚಾರ್ಜ್ ಮಾಡಿದರೆ 300 ಕಿಮೀ ದೂರ ಓಡಿಸಬಹುದು !
ಸುಶೀಲ್​ ಅಗರ್​ವಾಲ್ ಮತ್ತು ಅವರು ತಯಾರಿಸಿದ ವಾಹನ
Follow us on

ಭುವನೇಶ್ವರ್: ಯಾರಲ್ಲಿ ಏನು ಪ್ರತಿಭೆ-ಶಕ್ತಿ ಇರುತ್ತದೆ ಎಂಬುದನ್ನು ಸುಲಭಕ್ಕೆ ಅಳೆಯಲು ಸಾಧ್ಯವೇ ಇಲ್ಲ..ಇಲ್ಲಿ ನೋಡಿ, ಸಾಮಾನ್ಯ ರೈತನೊಬ್ಬ ಸೌರಶಕ್ತಿ ಚಾಲಿತ ಬ್ಯಾಟರಿಯನ್ನು ಹಾಕಿ ಓಡಿಸಬಹುದಾದ ನಾಲ್ಕು ಚಕ್ರಗಳ ವಾಹನವೊಂದನ್ನು ತಯಾರಿಸಿ ಅಚ್ಚರಿಗೆ ಕಾರಣವಾಗಿದ್ದಾರೆ. ಇಂಟರ್​ನೆಟ್​ನಲ್ಲಂತೂ ಹೀರೋ ಆಗಿಬಿಟ್ಟಿದ್ದಾರೆ. ಇವರ ಹೆಸರು ಸುಶೀಲ್ ಅಗರ್​ವಾಲ್​. ಓಡಿಶಾದ ಮಯೂರ್​ಭಂಜ್​ನ ಉಪವಿಭಾಗವಾದ ಕಾರಂಜಿಯಾದ ನಿವಾಸಿ. ಇದೀಗ ವಿಭಿನ್ನವಾದ ವಾಹನವೊಂದನ್ನು ಸಿದ್ಧಪಡಿಸಿದ್ದಾರೆ. ಈ ವಾಹನದ ವಿಶೇಷತೆಯೆಂದರೆ ಇದು 850 ವ್ಯಾಟರ್​ ಮೋಟಾರ್​, 100 Ah/54 ವೋಲ್ಟ್ಸ್​​ನ ಬ್ಯಾಟರಿಯಿಂದ ಚಲಿಸುತ್ತದೆ. ನೀವು ಒಮ್ಮೆ ಪೂರ್ತಿ ಚಾರ್ಜ್​ ಮಾಡಿಬಿಟ್ಟರೆ ಬರೋಬ್ಬರಿ 300 ಕಿಮೀ ದೂರ ಓಡಿಸಬಹುದು.

ಮನೆಯಲ್ಲೇ ಇದೆ ವರ್ಕ್​ಶಾಪ್​
ಸುಶೀಲ್​ ಅಗರ್​ವಾಲ್​ ಈ ವಾಹನ ತಯಾರಿಸಲು ಶುರುಮಾಡಿದ್ದು ಲಾಕ್​ಡೌನ್​ ಸಮಯದಲ್ಲಿ. ಇದಕ್ಕಾಗಿ ಮನೆಯಲ್ಲೇ ಒಂದು ಕೋಣೆಯನ್ನು ಮೀಸಲಿಟ್ಟಿದ್ದರು. ಅಲ್ಲಿಯೇ ವಿಭಿನ್ನ ವಾಹನ ರೆಡಿ ಆಗಿದೆ. ವಾಹನಕ್ಕೆ ಅಳವಡಿಸಲಾದ ಬ್ಯಾಟರಿಗಳು ಚಾರ್ಜ್​ ಆಗಲು ಸುಮಾರು ಎಂಟರಿಂದ ಎಂಟೂವರೆ ತಾಸು ಬೇಕು. ನಿಧಾನಕ್ಕೆ ಚಾರ್ಜ್​ ಆದರೂ 10ವರ್ಷಗಳ ಕಾಲ ಬಾಳಿಕೆಗೆ ಬರುತ್ತವೆ. ಹಾಗೆ ಒಮ್ಮೆ ಪೂರ್ತಿಯಾಗಿ ಚಾರ್ಜ್ ಮಾಡಿಕೊಂಡರೆ 300 ಕಿಮೀ ದೂರವನ್ನು ನಿರಾತಂಕವಾಗಿ ಕ್ರಮಿಸಬಹುದು ಎನ್ನುತ್ತಾರೆ ಸುಶೀಲ್​​ ಅಗರ್​ವಾಲ್​.

ವಾಹನ ತಯಾರಿಕೆಯಲ್ಲಿ ನನಗೆ ಇಬ್ಬರು ಸಹಾಯ ಮಾಡಿದ್ದಾರೆ. ಮೋಟಾರ್ ವೈಂಡಿಂಗ್​, ಎಲೆಕ್ಟ್ರಿಕಲ್​ ಸಾಮಗ್ರಿಗಳ ಅಳವಡಿಕೆ ಸೇರಿ ಎಲ್ಲ ಕೆಲಸವನ್ನೂ ನಾವು ಮನೆಯಲ್ಲೇ ಮಾಡಿದ್ದೇವೆ. ವಿದ್ಯುತ್​ ಉಪಕರಣಗಳ ಬಗ್ಗೆ ನನ್ನ ಸ್ನೇಹಿತರೊಬ್ಬರು ಸಲಹೆಗಳನ್ನು ನೀಡಿದ್ದಾರೆ ಎಂದು ಎಎನ್​ಐಗೆ ಸುಶೀಲ್​ ತಿಳಿಸಿದ್ದಾರೆ. ಲಾಕ್​ಡೌನ್​ ಶುರುವಾದಾಗ ಕೆಲಸ ಶುರು ಮಾಡಿದ್ದೆವು. ಅದು ಪೂರ್ಣಗೊಳ್ಳಲು ಮೂರು ತಿಂಗಳು ಬೇಕಾಯಿತು. ಒಂದು ನಾಲ್ಕು ಚಕ್ರದ ವಾಹನ ತಯಾರಿಸಬೇಕು ಎಂದು ಯೋಚನೆ ಬಂದಾಗ ಕಾರ್ಯರೂಪಕ್ಕೆ ಇಳಿದೆ. ಲಾಕ್​ಡೌನ್​ ಮುಗಿಯುತ್ತಿದ್ದಂತೆ ಇಂಧನ ಬೆಲೆ ಏರಿಕೆಯಾಗುತ್ತದೆ ಎಂಬುದು ನನಗೆ ಪಕ್ಕಾ ಗೊತ್ತಿತ್ತು. ಹಾಗಾಗಿ ಎಷ್ಟಾಗತ್ತೋ ಅಷ್ಟು ಬೇಗ, ಪೆಟ್ರೋಲ್​, ಡೀಸೆಲ್​ ಅಗತ್ಯವಿಲ್ಲದ ಒಂದು ಸ್ವಂತ ಕಾರನ್ನು ಹೊಂದಲು ಬಯಸಿದ್ದೆ. ಅದರ ಪರಿಣಾಮವಾಗಿ ಹೀಗೊಂದು ಸೌರಶಕ್ತಿ ಚಾಲಿತ ಬ್ಯಾಟರಿಯಿಂದ ಓಡುವ ವಾಹನ ಸಿದ್ಧಪಡಿಸಿದೆ ಎಂದೂ ಹೇಳಿದ್ದಾರೆ. ಹಾಗೇ, ಇದಕ್ಕಾಗಿ ಕೆಲವು ಪುಸ್ತಕ, ಯೂಟ್ಯೂಬ್ ವಿಡಿಯೋಗಳನ್ನೂ ನೋಡಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

ಇನ್ನು ಒಡಿಶಾದ ಈ ರೈತನ ಬಗ್ಗೆ ನೆಟ್ಟಿಗರು ಸಂತೋಷ ವ್ಯಕ್ತಪಡಿಸಿದ್ದಾರೆ. ಇಂಥ ವಾಹನಗಳು ಪರಿಸರ ಸ್ನೇಹಿಯಾಗಿರುತ್ತವೆ. ಸರ್ಕಾರಗಳು ಗಮನಕೊಡಬೇಕು ಎಂದೂ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಒಂದು ಬಿಟ್​ ಕಾಯಿನ್​ ಬೆಲೆ ಬರೋಬ್ಬರಿ 43 ಲಕ್ಷ ರೂಪಾಯಿ!

ಜೊಮ್ಯಾಟೊ ಫುಡ್​ ಡೆಲಿವರಿ ಬಾಯ್ ಕಾಮರಾಜು​ ಪರ ನಿಂತ ಬಾಲಿವುಡ್​ನ ಖ್ಯಾತ​ ನಟಿ; ಆರೋಪ ಮಾಡಿದ ಮಹಿಳೆ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ

Published On - 7:22 pm, Sun, 14 March 21