ಸಾಂಕ್ರಾಮಿಕದಿಂದಾಗಿ ಎಲ್ಲಡೆ ಲಾಕ್ಡೌನ್ ಜಾರಿಗೊಳಿಸಲಾಯಿತು. ಈ ಸಮಯದಲ್ಲಿ ಮನೆಯಲ್ಲಿಯೇ ಇದ್ದ ಜನರು ಪ್ರತಿಭೆಗಳ ಕಡೆಗೆ ಹೆಚ್ಚು ಗಮನವಹಿಸಿದ್ದಾರೆ. ಸಂಗೀತ, ನೃತ್ಯ, ಅಭಿನಯದ ಜತೆಗೆ ಚಿತ್ರಕಲೆ, ಕರಕುಶಲ ವಸ್ತುಗಳನ್ನು ತಯಾಸುವುದರಲ್ಲಿ ಹೆಚ್ಚು ಆಸಕ್ತಿ ತೋರಿದರು. ಅನೇಕರು ಸಾಮಾಜಿಕ ಜಾಲತಾಣದ ಮೂಲಕ ಮೆಚ್ಚುಗೆಯನ್ನೂ ಪಡೆದುಕೊಂಡರು. ಅಂತಹುದೇ ಒಂದು ಕಲೆ ಇದೀಗ ಪ್ರಸಿದ್ಧತೆ ಪಡೆದಿದೆ.
ಒಡಿಶಾ ಮೂಲದ ಬಿಸ್ವಜಿತ್ ನಾಯಕ್ ಅವರು ಭಗವಾನ್ ಜಗನ್ನಾಥರ ವಿಗ್ರಹವನ್ನು 1,475 ಐಸ್ಕ್ರೀಮ್ ಕಡ್ಡಿಗಳನ್ನು ಬಳಸಿ ತಯಾರಿಸಿದ್ದಾರೆ. 30 ಇಂಚು ಎತ್ತರ ಮತ್ತು 26 ಇಂಚು ಅಗಲವಿರುವ ವಿಗ್ರಹವನ್ನು ತಯಾರಿಸಲು ನಾಯಕ್ ಅವರು 15 ದಿನಗಳ ಸಮಯವನ್ನು ತೆಗೆದುಕೊಂಡರು. ಎಎನ್ಐ ಸುದ್ದಿ ಮಾಧ್ಯಮದೊಡನೆ ಮಾತನಾಡಿದ ನಾಯಕ್, ಸ್ನಾನ ಪೂರ್ಣಿಮೆಯ ದಿನಂದು ಈ ವಿಗ್ರಹವನ್ನು ಭಕ್ತರಿಗೆ ಅರ್ಪಿಸಲು ಬಯಸುತ್ತೇನೆ ಎಂದು ಹೇಳಿದ್ದರು.
ಜೂನ್ 23 ರಂದು ಸ್ನಾನ ಪೂರ್ಣಿಮೆಗೂ ಮುಂಚಿತವಾಗಿ ಒಡಿಶಾದ ಪುರಿಯ ಜಗನ್ನಾಥ ದೇವಾಲವನ್ನು ಬೆಳಗಿಸಲಾಯಿತು. ಸಾಂಕ್ರಾಮಿಕ ಕಾರಣದಿಂದಾಗಿ ಮುಚ್ಚಲ್ಪಟ್ಟಿದ ದೇವಾಲಯ ಇಂದಿನಿಂದ ಮತ್ತೆ ತೆರೆಯಲಿದೆ.
Odisha | Puri’s Biswajit Nayak has made miniature statue of ‘Gajanana Besha of Lord Jagannath’, using 1475 ice cream sticks. “It took me 15 days to make this 30-inches tall & 26-inches wide statue. On the occasion of Devasnana Purnima, I dedicate this to devotees,” he said(23.06) pic.twitter.com/FZMstp7EF5
— ANI (@ANI) June 24, 2021