ಅಲ್ಲಿ ಹೆಣಗಳ ರಾಶಿ, ಎಲ್ಲಾ ಪೋಷಕರು, ಸಂಬಂಧಿಕರು ಮೂಗು ಮುಚ್ಚಿಕೊಂಡು ತಮ್ಮವರ ಹುಡುಕಾಟದಲ್ಲಿ ತೊಡಗಿದ್ದರು. ಆಗಲೇ ಅಪಘಾತ ಸಂಭವಿಸಿ ಹಲವು ಗಂಟೆಗಳು ಕಳೆದೇ ಬಿಟ್ಟಿತ್ತು. ತಮ್ಮವರು ಬದುಕಿರುವುದು ಹಾಗಿರಲಿ ಗುರುತು ಸಿಕ್ಕಿದರೆ ಸಾಕಪ್ಪಾ ಎನ್ನುವಂತಿದ್ದವು ಸಂಬಂಧಿಕರ ಕಣ್ಣುಗಳು. ಒಂದೆಡೆ ತಮ್ಮವರ ಹುಡುಕಾಡಿ ಹುಡುಕಾಡಿ ಕಣ್ಣೀರು ಬತ್ತಿ ಹೋಗಿವೆ, ಕಣ್ಣುಗಳು ಮಂಜಾಗುತ್ತಿವೆ, ಇನ್ನೊಂದೆಡೆ ಶವಗಳಿಂದ ಬರುತ್ತಿದ್ದ ದುರ್ನಾತ, ಎಲ್ಲವನ್ನೂ ಸಹಿಸಿಕೊಂಡು ಜನರು ತಮ್ಮವರ ಹುಡುಕಾಟದಲ್ಲಿ ತೊಡಗಿದ್ದರು.
ಹಾಗೆಯೇ ತಂದೆಯೊಬ್ಬರು ತನ್ನ ಮಗ ಸತ್ತಿದ್ದಾನೆ ಎಂದು ನಂಬಲು ಸಾಧ್ಯವೇ ಇಲ್ಲ ಎಂದು ಹೇಳುತ್ತಿದ್ದರು, ಆದರೆ ಅಲ್ಲಿದ್ದವರು ಆತ ದುಃಖದಲ್ಲಿ ಹಾಗೆ ಹೇಳುತ್ತಿರಬಹುದು ಎಂದುಕೊಂಡಿದ್ದಾರೆ. ಆದರೆ ಅವರ ನಂಬಿಕೆ ನಿಜವಾಯಿತು ಆ ಶವಗಳ ಮಧ್ಯೆ ಮಗನನ್ನು ಜೀವಂತವಾಗಿ ಹೊರತೆಗೆದಿದ್ದಾರೆ.
ಬಾಲಾಸೋರ್ನ ಶಾಲೆಯೊಂದನ್ನು ತಾತ್ಕಾಲಿಕ ಶವಾಗಾರವನ್ನಾಗಿ ಮಾಡಲಾಗಿದೆ. ಬಿಸ್ವಜಿತ್ ಮಲಿಕ್ ಅವರ ತಂದೆ ತಕ್ಷಣವೇ ಆಂಬ್ಯುಲೆನ್ಸ್‌ನಲ್ಲಿ 230 ಕಿಮೀ ದೂರದಲ್ಲಿರುವ ಮಗನನ್ನು ಹುಡುಕಲು ಬಂದಿದ್ದರು. ಅವರು ತಮ್ಮ ಮಗನನ್ನು ಶವಾಗಾರದಿಂದ ಹೊರತೆಗೆದು ಆಸ್ಪತ್ರೆಗೆ ಸೇರಿಸಿದರು.
ಮತ್ತಷ್ಟು ಓದಿ:Odisha Train Accident: ಎಲ್ಲಿದ್ದೀಯೋ ಕಂದ, ಕಣ್ಣಂಚಲ್ಲಿ ನೀರು, ಶವಗಳ ರಾಶಿಯ ನಡುವೆ ಮುಸುಕು ತೆಗೆದು ಮಗನಿಗಾಗಿ ತಂದೆಯ ಹುಡುಕಾಟ
ಎಸ್ ಎಸ್ ಕೆಎಂ ಆಸ್ಪತ್ರೆಯ ಟ್ರಾಮಾ ಕೇರ್ ಯೂನಿಟ್ ನಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಬಿಸ್ವಜಿತ್ ಸೋಮವಾರ ಮತ್ತೊಂದು ಸುತ್ತಿನ ಶಸ್ತ್ರಚಿಕಿತ್ಸೆಗೆ ಒಳಗಾಗುವ ನಿರೀಕ್ಷೆಯಿದೆ. ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ, ಆದರೆ ಅವರ ಸ್ಥಿತಿ ಸ್ಥಿರವಾಗಿದೆ. ಹೌರಾದಲ್ಲಿ ಹೆಲ್ಲರಾಮ್ ಅಂಗಡಿ ನಡೆಸುತ್ತಿದ್ದಾರೆ. ಆತ ತನ್ನ ಮಗ ಬಿಸ್ವಜಿತ್ ನನ್ನು ಶಾಲಿಮಾರ್ ಸ್ಟೇಷನ್ ನಲ್ಲಿ ಡ್ರಾಪ್ ಮಾಡಿದ್ದರು.
ಅಪಘಾತದ ನಂತರ ಬಿಸ್ವಜೀತ್ ಜೊತೆ ಮಾತನಾಡಿದ್ದರು ನೋವಿನಿಂದ ನರಳುತ್ತಿದ್ದರು ಎಂದು ಹೇಳಲಾಗಿದೆ, ಮಗನನ್ನು ಹುಡುಕಲು ತಕ್ಷಣವೇ ಅವರು ಊರಿನಿಂದ ಹೊರಟಿದ್ದರು. ಮಾಧ್ಯಮ ವರದಿಗಳ ಪ್ರಕಾರ ಬಿಸ್ವಜಿತ್ ಕೋಲ್ಕತ್ತಾ ತಲುಪುವವರೆಗೂ ಪ್ರಜ್ಞೆ ಬಂದಿರಲಿಲ್ಲ. ಬೆಳಗ್ಗೆ 8:30ರ ಸುಮಾರಿಗೆ ಅವರನ್ನು ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ಬಿಸ್ವಜೀತ್ ಅವರ ಪಾದದ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಒಡಿಶಾದಲ್ಲಿ ತ್ರಿವಳಿ ರೈಲು ಅಪಘಾತ ಸಂಭವಿಸಿದೆ, ಅದರಲ್ಲಿ ಇಲ್ಲಿಯವರೆಗೆ 257 ಮಂದಿ ಮೃತಪಟ್ಟಿದ್ದೂ ಸಾವಿರಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ ಎನ್ನುವ ಮಾಹಿತಿ ಇದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:47 am, Tue, 6 June 23