Odisha Train Accident: ಎಲ್ಲಿದ್ದೀಯೋ ಕಂದ, ಕಣ್ಣಂಚಲ್ಲಿ ನೀರು, ಶವಗಳ ರಾಶಿಯ ನಡುವೆ ಮುಸುಕು ತೆಗೆದು ಮಗನಿಗಾಗಿ ತಂದೆಯ ಹುಡುಕಾಟ

ಕಣ್ಣಂಚಲ್ಲಿ ನೀರಿನ ಹನಿಗಳು, ಕಣ್ಣುಗಳು ಮಂಜಾಗುತ್ತಿದೆ ಮಗನನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ, ಸಂಕಟ, ಅಳು ಎಲ್ಲವೂ ಒಟ್ಟೊಟ್ಟಿಗೆ ಬರುತ್ತಿದೆ, ಮಗನನ್ನು ಕಳೆದುಕೊಂಡ ತಂದೆಯ ಪಾಡು ಹೇಳತೀರದು.

Odisha Train Accident: ಎಲ್ಲಿದ್ದೀಯೋ ಕಂದ, ಕಣ್ಣಂಚಲ್ಲಿ ನೀರು, ಶವಗಳ ರಾಶಿಯ ನಡುವೆ ಮುಸುಕು ತೆಗೆದು ಮಗನಿಗಾಗಿ ತಂದೆಯ ಹುಡುಕಾಟ
ಒಡಿಶಾ ರೈಲು ದುರಂತ
Follow us
ನಯನಾ ರಾಜೀವ್
|

Updated on: Jun 04, 2023 | 8:18 AM

ಕಣ್ಣಂಚಲ್ಲಿ ನೀರಿನ ಹನಿಗಳು, ಕಣ್ಣುಗಳು ಮಂಜಾಗುತ್ತಿದೆ ಮಗನನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ, ಸಂಕಟ, ಅಳು ಎಲ್ಲವೂ ಒಟ್ಟೊಟ್ಟಿಗೆ ಬರುತ್ತಿದೆ, ಮಗನನ್ನು ಕಳೆದುಕೊಂಡ ತಂದೆಯ ಪಾಡು ಹೇಳತೀರದು. ಒಡಿಶಾ ರೈಲು ದುರಂತದಲ್ಲಿ ಮಗನನ್ನು ಕಳೆದುಕೊಂಡ ತಂದೆಯು ಮಗನಿಗಾಗಿ ಶವಾಗಾರದಲ್ಲಿ ಹುಡುಕಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ನಾವು ಚಿಕ್ಕವರಿದ್ದಾಗ ಚಿಕ್ಕ ವಸ್ತುಗಳನ್ನು ಮನೆಯಲ್ಲಿ ಕಳೆದುಕೊಂಡಾಗ ಇಡೀ ಮನೆಯನ್ನೇ ಹುಡುಕುವಂತೆ, ಯಾವುದೋ ಶುಭ ಸಮಾರಂಭಗಳಿಗೆ ಹೊರಟು ನಿಂತಾಗ ಬೀರುವಿನಿಂದ ಬಟ್ಟೆಯನ್ನು ಕಿತ್ತು ಕೆಳಗೆ ಹಾಕುವಂತೆ ಈ ತಂದೆಯೊಬ್ಬರು ಶವದ ರಾಶಿಯಲ್ಲಿ ತನ್ನ ಮಗನಿದ್ದಾನೆಯೇ ಎಂದು ಹುಡುಕಾಡುತ್ತಿದ್ದಾರೆ.

ಒಡಿಶಾದಲ್ಲಿ ರೈಲು ಅಪಘಾತದಿಂದ ಪ್ರಾಣ ಕಳೆದುಕೊಂಡ ತನ್ನ ಮಗನ ಮೃತದೇಹವನ್ನು ಮುಚ್ಚಿದ ಮುಸುಕು ತೆಗೆದು ತೆಗೆದು ಹುಡುಕಿತ್ತಿದ್ದಾರೆ. ಈ ರೀತಿ ಸಾವು ಘನಗೋರವಾಗಿ, ಹೃದಯವಿದ್ರಾವಕವಾಗಿ ಅಂತ್ಯ ಆಗಬಾರದು ಎಂದೆಲ್ಲಾ ನಾವು ಹೇಳಿ ಬಿಡಬಹುದು. ಆದರೆ ಯಾರ ಬದುಕಿನ ಅಂತ್ಯ ಹೇಗೆ ಹೇಗೆ ಇರುತ್ತದೊ ಯಾರಿಗೂ ಗೊತ್ತಿಲ್ಲ.

ಘಟನೆ ಏನು? ಶುಕ್ರವಾರ ಸಂಜೆ ಸರಿಸುಮಾರು 7 ಗಂಟೆಗೆ ನಡೆದ ವಿನಾಶಕಾರಿ ಘಟನೆಯಲ್ಲಿ, 12841 ಶಾಲಿಮಾರ್-ಕೋರೊಮಂಡಲ್ ಎಕ್ಸ್‌ಪ್ರೆಸ್ ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗ ಬಜಾರ್ ನಿಲ್ದಾಣದಲ್ಲಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಘರ್ಷಣೆಯು ಸುಮಾರು 300 ಜೀವಗಳು ಬಲಿಯಾಗಿವೆ, ಸುಮಾರು 900 ಜನರು ಗಾಯಗೊಂಡಿದ್ದಾರೆ.

ಮತ್ತಷ್ಟು ಓದಿ: Odisha train accident: ಒಡಿಶಾ ರೈಲು ದುರಂತಕ್ಕೆ ನಿರ್ಲಕ್ಷ್ಯ ಕಾರಣವೇ ಆಥವಾ ತಾಂತ್ರಿಕ ದೋಷವೇ?

ಬಹನಾಗಾ ಬಜಾರ್‌ ನಿಲ್ದಾಣದ ಸಮೀಪ ರಾತ್ರಿ 7.20ರ ಸುಮಾರಿಗೆ ಈ ಭೀಕರ ಅವಘಡ ಸಂಭವಿಸಿದೆ. ಒಡಿಶಾದ ಈ ಮಹಾ ರೈಲು ದುರಂತಕ್ಕೆ ರೈಲು ಹಳಿಗಳಲ್ಲಿನ ದೋಷವೇ ಕಾರಣವಿರಬಹುದು ಎಂದು ಪ್ರಾಥಮಿಕವಾಗಿ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಹಳಿಗಳು ದೋಷಯುಕ್ತವಾಗಿದ್ದವೆಂದು ಶಂಕಿಸಲಾಗಿದೆ.

ಆದರೆ, ತನಿಖೆಯ ನಂತರ ದುರಂತಕ್ಕೆ ನಿಖರ ಕಾರಣವೇನೆಂದು ತಿಳಿಯಲಿದೆ. ಒಡಿಶಾದ ಬಾಲಸೋರ್‌ ನಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ಮೂರು ರೈಲುಗಳ ಅಪಘಾತದಲ್ಲಿ ಸುಮಾರು 260ಕ್ಕೂ ಅಧಿಕ ಮಂದಿ ಕೊನೆಯುಸಿರೆಳೆದಿದ್ದು, ಸಾವಿರ ಪ್ರಯಾಣಿಕರು ಗಾಯಗೊಂಡಿದ್ದಾರೆ. ಆದರೆ ಏಕಾಏಕಿ ಮೂರು ರೈಲು ಡಿಕ್ಕಿ ಹೇಗಾಯಿತು ಎಂಬುದು ಇದೀಗ ಚರ್ಚೆಯ ವಿಷಯವಾಗಿದೆ.

ಆರಂಭದಲ್ಲಿ ಕೋರಮಂಡಲ್‌ ಶಾಲಿಮಾರ್‌ ಎಕ್ಸ್‌ ಪ್ರೆಸ್‌ ರೈಲು ಒಡಿಶಾದ ಬಾಲಸೋರ್‌ ನಲ್ಲಿ ಹಳಿ ತಪ್ಪಿದ್ದ ಪರಿಣಾಮ ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದಿತ್ತು. ಈ ವೇಳೆಯಲ್ಲೇ ಯಶವಂತಪುರ್-ಹೌರಾ ಸೂಪರ್‌ ಫಾಸ್ಟ್‌ ರೈಲು ಹಳಿತಪ್ಪಿದ್ದ ಬೋಗಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಕೆಲವೇ ನಿಮಿಷಗಳಲ್ಲಿ ನಿದ್ದೆಯಲ್ಲಿದ್ದ ಪ್ರಯಾಣಿಕರು ಕೊನೆಯುಸಿರೆಳೆದಿದ್ದರು.

ಒಡಿಶಾ ರೈಲು ದುರಂತಕ್ಕೆ ಪ್ರಮುಖ ವಾಗಿ ಎರಡು ಕಾರಣಗಳಿವೆ. ಮೊದಲ ಮಾನವ ದೋಷ ಮತ್ತು ಎರಡನೇ ತಾಂತ್ರಿಕ ದೋಷ. ಈ ಅಪಘಾತದ ಹಿಂದೆ ತಾಂತ್ರಿಕ ದೋಷವೇ ಕಾರಣ ಎಂದು ಹೇಳಲಾಗಿದೆ. ಸಿಗ್ನಲ್ ದೋಷದಿಂದ ಒಂದೇ ಹಳಿಯಲ್ಲಿ ಎರಡು ರೈಲುಗಳು ಬಂದು ಡಿಕ್ಕಿ ಹೊಡೆದಿವೆ ಎಂದು ವರದಿಯಾಗುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ