Sign In

By signing in or creating an account, you agree with Associated Broadcasting Company's Terms & Conditions and Privacy Policy.

Restoration: ರೈಲುದುರಂತ ಸ್ಥಳದಲ್ಲಿ ತ್ವರಿತವಾಗಿ ನಡೆಯುತ್ತಿರುವ ದುರಸ್ತಿ; ರಾತ್ರಿ 8ರಷ್ಟರಲ್ಲಿ 2 ರೈಲ್ವೆ ಲೈನ್ ಸಿದ್ಧಗೊಳ್ಳುವ ಸಾಧ್ಯತೆ

Video of Railway Line Restoration At Bahanga: ಬಹಂಗಾ ರೈಲು ನಿಲ್ದಾಣದ ಬಳಿ ಎಲ್ಲಾ ಟ್ರ್ಯಾಕ್​ಗಳನ್ನು ಬಹಳ ಶೀಘ್ರದಲ್ಲಿ ಓಡಾಟಕ್ಕೆ ಅನುವು ಮಾಡಿಕೊಡುವತ್ತ ಪ್ರಯತ್ನಿಸಲಾಗುತ್ತಿದೆ. ಭಾನುವಾರ ರಾತ್ರಿ 8ರ ಹೊತ್ತಿಗೆ ಕನಿಷ್ಠ ಎರಡು ರೈಲ್ವೆ ಲೈನ್​ಗಳಾದರೂ ಬಳಕೆಗೆ ಸಿಗಲಿದೆ ಎಂದು ರೈಲ್ವೆ ಬೋರ್ಡ್ ಹೇಳಿದೆ.

Restoration: ರೈಲುದುರಂತ ಸ್ಥಳದಲ್ಲಿ ತ್ವರಿತವಾಗಿ ನಡೆಯುತ್ತಿರುವ ದುರಸ್ತಿ; ರಾತ್ರಿ 8ರಷ್ಟರಲ್ಲಿ 2 ರೈಲ್ವೆ ಲೈನ್ ಸಿದ್ಧಗೊಳ್ಳುವ ಸಾಧ್ಯತೆ
ದುರಸ್ತಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 04, 2023 | 7:42 PM

ನವದೆಹಲಿ: ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಭೀಕರ ಸರಣಿ ರೈಲು ಅಪಘಾತದಲ್ಲಿ (Odisha Train Accident) ಸುಮಾರು 300 ಮಂದಿ ಸಾವನ್ನಪ್ಪಿದ್ದಾರೆ. ಬಹನಾಗ ಬಜಾರ್ ಬಳಿಯ ಘಟನಾ ಸ್ಥಳದಲ್ಲಿ ಬೋಗಿಗಳನ್ನು ಬಹುತೇಕ ತೆರವುಗೊಳಿಸಲಾಗಿದ್ದು, ಹಳಿಗಳನ್ನು ಪರಿಶೀಲಿಸಿ ಸರಿಪಡಿಸಲಾಗುತ್ತಿದೆ. ಬುಲ್​ಡೋಜರ್, ಕ್ರೇನ್​ಗಳನ್ನು ಆಪರೇಟ್ ಮಾಡುವ ಜನರ ತಂಡದೊಂದಿಗೆ ಸೇರಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಬೋಗಿಗಳು, ಇತರ ಅವಶೇಷಗಳನ್ನು ತೆರವುಗೊಳಿಸಲಾಗಿದೆ. ಇಲ್ಲಿಯ ಪ್ರಧಾನ ಟ್ರಂಕ್ ಲೈನ್ ಅನ್ನು ರೆಸ್ಟೋರ್ ಮಾಡಲಾಗಿರುವುದು ವರದಿಯಾಗಿದೆ. ಬಹಂಗ ಬಜಾರ್​ನಲ್ಲಿ ಹಾಳಾದ ಹಳಿಗಳನ್ನು ದುರಸ್ತಿ ಮಾಡಲಾಗುತ್ತಿದೆ. ಮೇಲೆ ಹಾದು ಹೋಗುವ ಎಲೆಕ್ಟ್ರಿಕ್ ಕೇಬಲ್​ಗಳನ್ನೂ ಮರುಸ್ಥಾಪಿಸಲಾಗುತ್ತಿದೆ.

ಬಹಂಗಾ ರೈಲು ನಿಲ್ದಾಣದ ಬಳಿ ಎಲ್ಲಾ ಟ್ರ್ಯಾಕ್​ಗಳನ್ನು ಬಹಳ ಶೀಘ್ರದಲ್ಲಿ ಓಡಾಟಕ್ಕೆ ಅನುವು ಮಾಡಿಕೊಡುವತ್ತ ಪ್ರಯತ್ನಿಸಲಾಗುತ್ತಿದೆ. ಭಾನುವಾರ ರಾತ್ರಿ 8ರ ಹೊತ್ತಿಗೆ ಕನಿಷ್ಠ ಎರಡು ರೈಲ್ವೆ ಲೈನ್​ಗಳಾದರೂ ಬಳಕೆಗೆ ಸಿಗಲಿದೆ ಎಂದು ರೈಲ್ವೆ ಬೋರ್ಡ್ ಹೇಳಿದೆ. ಟ್ರ್ಯಾಕ್​ಗಳಲ್ಲಿ ರೈಲು ಓಡಾಟದ ಪ್ರಯೋಗ ಮಾಡಲಾಗಿರುವ ವಿಡಿಯೋವೊಂದನ್ನು ಎಎನ್​​ಐ ಸುದ್ದಿ ಸಂಸ್ಥೆ ಹಂಚಿಕೊಂಡಿದೆ.

ಈ ಮಾರ್ಗ ಬಹಳ ಮುಖ್ಯವಾಗಿದ್ದು, ದಕ್ಷಿಣ ಭಾರತ ಮತ್ತು ಈಶಾನ್ಯಕ್ಕೆ ಇದು ಸಂಪರ್ಕ ಕಲ್ಪಿಸುತ್ತದೆ. ಆದಷ್ಟೂ ಬೇಗ ಈ ಮಾರ್ಗದ ಪುನಶ್ಚೇತನ ಆಗುವುದು ಮುಖ್ಯ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಈ ಕುರಿತು ಮಾತನಾಡಿ, ಜೂನ್ 6, ಮಂಗಳವಾರದೊಳಗೆ ಈ ಮಾರ್ಗವನ್ನು ಸಂಪೂರ್ಣವಾಗಿ ಬಳಕೆಗೆ ಸಿದ್ಧಪಡಿಸಲಾಗುವುದು ಎಂದಿದ್ದಾರೆ. ಎರಡು ಲೈನ್​ಗಳನ್ನಾದರೂ ನಾವು ಆದಷ್ಟೂ ಬೇಗ ಸರಿಪಡಿಸುತ್ತೇವೆ ಎಂದು ರೈಲ್ವೆ ಅಧಿಕಾರಿಯೊಬ್ಬರೂ ಪುನರುಚ್ಚರಿಸಿದ್ದಾರೆ.

ಇದನ್ನೂ ಓದಿElectronic Interlocking: ರೈಲುದುರಂತಕ್ಕೆ ಕಾರಣವಾದ ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ಎಂದರೇನು? ಇದು ಹೇಗೆ ಕೆಲಸ ಮಾಡುತ್ತದೆ?

ಜೂನ್ 4ರಂದು ಸಂಭವಿಸಿದ ದುರ್ಘಟನೆಯಲ್ಲಿ ಮೂರು ರೈಲುಗಳು ಅಪಘಾತಗೊಂಡಿದ್ದವು. ಒಡಿಶಾದ ಬಾಲಾಸೋರ್ ಜಿಲ್ಲೆಯ ಬಹನಾಗ ರೈಲು ನಿಲ್ದಾಣದ ಸಮೀಪ ಟ್ರ್ಯಾಕ್ ಬದಲಿಸಿದ ಕೋರಮಂಡಲ್ ಎಕ್ಸ್​ಪ್ರೆಸ್, ನಿಂತಿದ್ದ ಗೂಡ್ಸ್ ಗಾಡಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ 12 ಬೋಗಿಗಳು ಪಕ್ಕದ ಟ್ರ್ಯಾಕ್​ಗೆ ಉರುಳಿವೆ. ಅತ್ತ ಯಶವಂತಪುರದಿಂದ ಹೌರಾಗೆ ಹೋಗುತ್ತಿದ್ದ ಸೂಪರ್​ಫಾಸ್ಟ್ ಎಕ್ಸ್​ಪ್ರೆಸ್ ರೈಲು ಈ ಬೋಗಿಗಳಿಗೆ ಅಪ್ಪಳಿಸಿದೆ. ಅದರ 9 ಕೋಚ್​ಗಳು ಹಳಿ ತಪ್ಪಿವೆ. ಒಟ್ಟು 21 ಬೋಗಿಗಳು ಹಾನಿಯಾಗಿದ್ದು, 290ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಗಾಯಾಳುಗಳ ಸಂಖ್ಯೆ 1,000 ದಾಟಿದೆ. ಹಲವರು ಗಂಭೀರವಾಗಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಇದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ
ಬೆಂಗಳೂರಿನಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಓಡಿಸಿದ ಪುಟ್ಟ ಬಾಲಕ!
ಬೆಂಗಳೂರಿನಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಓಡಿಸಿದ ಪುಟ್ಟ ಬಾಲಕ!
ಕೊಲೆಯಾದ ನಿವೃತ್ತ ಐಪಿಎಸ್​​ ಓಂಪ್ರಕಾಶ್​ ಫಾರ್ಮ್ ಹೌಸ್ ಹೇಗಿದೆ ನೋಡಿ...!
ಕೊಲೆಯಾದ ನಿವೃತ್ತ ಐಪಿಎಸ್​​ ಓಂಪ್ರಕಾಶ್​ ಫಾರ್ಮ್ ಹೌಸ್ ಹೇಗಿದೆ ನೋಡಿ...!
ಯುಎಸ್ ಉಪಾಧ್ಯಕ್ಷ ಜೆಡಿ. ವ್ಯಾನ್ಸ್ ಕುಟುಂಬಕ್ಕೆ ಶಾಸ್ತ್ರೀಯ ನೃತ್ಯದ ಸ್ವಾಗತ
ಯುಎಸ್ ಉಪಾಧ್ಯಕ್ಷ ಜೆಡಿ. ವ್ಯಾನ್ಸ್ ಕುಟುಂಬಕ್ಕೆ ಶಾಸ್ತ್ರೀಯ ನೃತ್ಯದ ಸ್ವಾಗತ
VIDEO: ಮೊದಲು ಕಿತ್ತಾಟ... ಆಮೇಲೆ ಸ್ನೇಹಹಸ್ತ: ಇದು ವಿರಾಟ್ ಕೊಹ್ಲಿ
VIDEO: ಮೊದಲು ಕಿತ್ತಾಟ... ಆಮೇಲೆ ಸ್ನೇಹಹಸ್ತ: ಇದು ವಿರಾಟ್ ಕೊಹ್ಲಿ
ಹುಲಿಯನ್ನೇ ಅಟ್ಟಾಡಿಸಿದ ಒಂಟಿ ಸಲಗ: ಅಪರೂಪದ ವಿಡಿಯೋ ವೈರಲ್​
ಹುಲಿಯನ್ನೇ ಅಟ್ಟಾಡಿಸಿದ ಒಂಟಿ ಸಲಗ: ಅಪರೂಪದ ವಿಡಿಯೋ ವೈರಲ್​
VIDEO: ಅಣ್ಣನ ಬ್ಯಾಟಿಂಗ್ ಎಂಟ್ರಿಗೆ ಬಿಕ್ಕಳಿಸಿ ಅತ್ತ ತಮ್ಮ
VIDEO: ಅಣ್ಣನ ಬ್ಯಾಟಿಂಗ್ ಎಂಟ್ರಿಗೆ ಬಿಕ್ಕಳಿಸಿ ಅತ್ತ ತಮ್ಮ
‘ನಾನು ಶಿವನ ಭಕ್ತ, ಅದಕ್ಕಾಗಿ ಇಲ್ಲಿಗೆ ಬಂದೆ’; ಮಹಾಕಾಳೇಶ್ವರ ದೇವಾಲಯ ಭೇಟಿ
‘ನಾನು ಶಿವನ ಭಕ್ತ, ಅದಕ್ಕಾಗಿ ಇಲ್ಲಿಗೆ ಬಂದೆ’; ಮಹಾಕಾಳೇಶ್ವರ ದೇವಾಲಯ ಭೇಟಿ