AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Electronic Interlocking: ರೈಲುದುರಂತಕ್ಕೆ ಕಾರಣವಾದ ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ಎಂದರೇನು? ಇದು ಹೇಗೆ ಕೆಲಸ ಮಾಡುತ್ತದೆ?

Know What Is Electronic Interlocking: ಒಂದು ರೈಲು ಹೊರಡುವ ಮುನ್ನ ಅದರ ಮಾರ್ಗದುದ್ದಕ್ಕೂ ಎಲ್ಲವೂ ಸುರಕ್ಷಿತವಾಗಿದೆಯಾ ಎಂಬುದು ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್​ನಿಂದ ಖಚಿತವಾಗುವವರೆಗೂ ಸಿಗ್ನಲ್ ನೀಡಲಾಗುವುದಿಲ್ಲ. ಇದು ಮಾರ್ಗದ ಪ್ರತಿ ಹಂತದಲ್ಲೂ ನಡೆಯುತ್ತದೆ.

Electronic Interlocking: ರೈಲುದುರಂತಕ್ಕೆ ಕಾರಣವಾದ ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ಎಂದರೇನು? ಇದು ಹೇಗೆ ಕೆಲಸ ಮಾಡುತ್ತದೆ?
ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 04, 2023 | 4:57 PM

ನವದೆಹಲಿ: ಒಡಿಶಾದ ಬಾಲಾಸೋರ್​ನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಭೀಕರ ಸರಣಿ ರೈಲು ಅಪಘಾತ ಘಟನೆಗೆ (Odisha Train Accident) ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ (Electronic Interlocking) ಪ್ರಕ್ರಿಯೆಯಲ್ಲಾದ ಲೋಪವೇ ಕಾರಣ ಎಂದು ಸ್ವತಃ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೇ ಹೇಳಿದ್ದಾರೆ. ಕೋರಮಂಡಲ್ ಎಕ್ಸ್​ಪ್ರೆಸ್, ಬೆಂಗಳೂರು ಹೌರಾ ಸೂಪರ್​ಫಾಸ್ಟ್ ಎಕ್ಸ್​ಪ್ರೆಸ್ ಮತ್ತು ಗೂಡ್ಸ್ ರೈಲುಗಳ ಮಧ್ಯೆ ಕೇವಲ ಒಂದು ನಿಮಿಷ ಅಂತರದಲ್ಲಿ ಡಿಕ್ಕಿಯಾಗಿದೆ. ಕೋರಮಂಡಲ್ ಎಕ್ಸ್​ಪ್ರೆಸ್ 128 ಕಿಮೀ ವೇಗದಲ್ಲಿತ್ತು. ಹೌರಾ ಎಕ್ಸ್​ಪ್ರೆಸ್ 126 ಕಿಮೀ ವೇಗದಲ್ಲಿತ್ತು. ಸಿಗ್ನಲ್ ಸಮಸ್ಯೆಯಿಂದ ಒಂದು ನಿಮಿಷ ಅಂತರದಲ್ಲಿ ತ್ರಿವಳಿ ರೈಲು ದುರಂತವಾಗಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಹಾಗಂತ ಸುದ್ದಿಗೋಷ್ಠಿಯೊಂದರಲ್ಲಿ ರೈಲ್ವೆ ಬೋರ್ಡ್ ಸದಸ್ಯೆ ಜಯಾ ವರ್ಮಾ ಹೇಳಿಕೆ ನೀಡಿದ್ದಾರೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಹೇಳಿದ ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ಇದೇ ಸಿಗ್ನಲ್ ವ್ಯವಸ್ಥೆಗೆ ಸಂಬಂಧಿಸಿದ್ದೇ ಆಗಿದೆ. ಸಿಗ್ನಲ್​ಗಳು ಮತ್ತು ಟ್ರ್ಯಾಕ್​ಗಳನ್ನು ನಿಯಂತ್ರಿಸುವ ಮೂಲಕ ರೈಲುಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಸುರಕ್ಷತಾ ವ್ಯವಸ್ಥೆಯೇ ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್. ಈ ಇಂಟರ್ಲಾಕಿಂಗ್ ಪ್ರಕ್ರಿಯೆ ವೇಳೆ ಆದ ಒಂದು ಬದಲಾವಣೆಯಿಂದ ದರುಂತ ಸಂಭವಿಸಿದೆ ಎಂದು ಹೇಳಿರುವ ರೈಲ್ವೆ ಸಚಿವರು, ಯಾಕೆ ತಪ್ಪಾಗಿದೆ, ಯಾರಿಂದ ತಪ್ಪಾಗಿದೆ ಎಂಬುದು ಗೊತ್ತಾಗಿದೆ ಎಂದಿದ್ದಾರೆ.

ದುರಂತ ಘಟನೆಯಲ್ಲಿ ಸಾವಿಗೀಡಾದವರ ಕುಟುಂಬಗಳಿಗೆ ಪರಿಹಾರ ಹಾಗೂ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸುವುದು ಹಾಗೂ ಹಾಳಾದ ರೈಲ್ವೆ ಟ್ರ್ಯಾಕ್ ಅನ್ನು ದುರಸ್ತಿಗೊಳಿಸಿ ಮತ್ತೆ ಆ ಮಾರ್ಗಗಳಲ್ಲಿ ರೈಲು ಸಂಚಾರಕ್ಕೆ ಅನುವು ಮಾಡಿಕೊಡುವುದು ಈಗ ಇಲಾಖೆ ಮುಂದಿರುವ ಆದ್ಯ ಕರ್ತವ್ಯವಾಗಿದೆ.

ಇದನ್ನೂ ಓದಿOdisha Train Tragedy: ರೈಲು ದುರಂತಕ್ಕೆ ಎಂತಹ ಸ್ಪಂದನೆ! ನೋಡನೋಡುತ್ತಿದ್ದಂತೆಯೇ ರಕ್ಷಣಾ ಕಾರ್ಯಾಚರಣೆ ನಡೆದ ಪರಿ, ಈ ಹಿಂದೆ ಊಹಿಸಲೂ ಆಗದಷ್ಟು ಅಚ್ಚರಿ

ಏನಿದು ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್?

ಒಂದೇ ರೈಲು ಹಳಿಯಲ್ಲಿ ವಿವಿಧ ಕಾಲ ಅಂತರದಲ್ಲಿ ಒಂದಕ್ಕಿಂತ ಹೆಚ್ಚು ರೈಲುಗಳು ಸಂಚರಿಸುತ್ತವೆ. ಮಾರ್ಗಮಧ್ಯೆ ಹಳಿ ಬದಲಾವಣೆ ಮೂಲಕ ಮಾರ್ಗಬದಲಾವಣೆ ಇತ್ಯಾದಿ ನಡೆಯುತ್ತವೆ. ಭಾರತೀಯ ರೈಲ್ವೆಯು ವಿಶ್ವದ ಅತಿದೊಡ್ಡ ರೈಲು ಜಾಲಗಳಲ್ಲಿ ಒಂದಾಗಿದ್ದು, ದಿನವೂ ಸಾವಿರಾರು ಟ್ರೈನುಗಳು ಸಂಚರಿಸುತ್ತವೆ. ದಿನನಿತ್ಯ 2 ಕೋಟಿಗೂ ಹೆಚ್ಚು ಜನರನ್ನು ಹಾಗೂ 200ಎಂಟಿಗೂ ಹೆಚ್ಚು ಸರಕುಗಳನ್ನು ಭಾರತೀಯ ರೈಲ್ವೆ ಸಾಗಿಸುತ್ತದೆ. ಹೀಗಾಗಿ, ರೈಲುಗಳು ಘರ್ಷಣೆ ಆಗದಂತೆ ಸುಗಮವಾಗಿ ಸಂಚರಿಸಲು ಟ್ರ್ಯಾಕ್ ಮತ್ತು ಸಿಗ್ನಲ್​ಗಳ ನಿಯಂತ್ರಣ ಬಹಳ ಮುಖ್ಯ. ಈ ಕಾರ್ಯವನ್ನು ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ಸಮರ್ಪಕವಾಗಿ ಮಾಡುತ್ತದೆ. ಒಂದು ರೈಲು ಸರಿಯಾದ ಮಾರ್ಗದಲ್ಲಿ ಸಂಚರಿಸಿ ಸುರಕ್ಷಿತವಾಗಿ ಗಮ್ಯಸ್ಥಾನ ತಲುಪುವಂತೆ ದಾರಿ ತೋರಿಸುತ್ತದೆ ಇದು.

ಈ ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ವ್ಯವಸ್ಥೆಯು ಎಲೆಕ್ಟ್ರಾನಿಕ್ ಕಂಟ್ರೋಲ್ ಸಿಸ್ಟಂಗಳು ಮತ್ತು ಕಂಪ್ಯೂಟರುಗಳ ಸಹಾಯದಿಂದ ರೈಲುಗಳ ಚಲನೆಯ ಮೇಲೆ ನಿಗಾ ಇಡುತ್ತದೆ. ಹಿಂದೆಯೂ ಇಂಟರ್ಲಾಕಿಂಗ್ ಸಿಸ್ಟಂ ಇತ್ತಾದರೂ ಅದು ರಾಡ್ ಮತ್ತು ಲಿವರ್​ಗಳನ್ನು ಕೈಯಿಂದ ತಿರುಗಿಸಿ ಸಿಗ್ನಲ್​ಗಳನ್ನು ಕಂಟ್ರೋಲ್ ಮಾಡಬೇಕಿತ್ತು. ಆದರೆ, ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ಸಿಸ್ಟಂ ಬಹಳ ಕ್ಷಿಪ್ರವಾಗಿ ಮತ್ತು ಹೆಚ್ಚು ನಿಖರವಾಗಿ ಈ ಕೆಲಸ ಮಾಡುತ್ತದೆ.

ಇದನ್ನೂ ಓದಿRailway Achievements: ಒಂದು ರೈಲುದುರಂತಕ್ಕೆ 9 ವರ್ಷದ ಸಾಧನೆ ನೀರಲ್ಲಿ ಹೋಮ ಮಾಡಿದಂತೆಯಾ? 2014ರ ಬಳಿಕ ರೈಲ್ವೆ ಇಲಾಖೆಯಲ್ಲಾದ ಬದಲಾವಣೆಗಳೇನು? ತಪ್ಪದೇ ನೋಡಿ

ಒಂದು ರೈಲು ಹೊರಡುವ ಮುನ್ನ ಅದರ ಮಾರ್ಗದುದ್ದಕ್ಕೂ ಎಲ್ಲವೂ ಸುರಕ್ಷಿತವಾಗಿದೆಯಾ ಎಂಬುದು ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್​ನಿಂದ ಖಚಿತವಾಗುವವರೆಗೂ ಸಿಗ್ನಲ್ ನೀಡಲಾಗುವುದಿಲ್ಲ. ಒಂದು ಟ್ರ್ಯಾಕ್​ನಲ್ಲಿ ಟ್ರೈನುಗಳು ಇವೆಯಾ, ಇದ್ದರೆ ಯಾವ ಸ್ಥಳದಲ್ಲಿವೆ ಇತ್ಯಾದಿಯನ್ನು ಗುರುತಿಸಲು ಸೆನ್ಸಾರ್ ಮತ್ತು ಫೀಡ್​ಬ್ಯಾಕ್ ಸಾಧನಗಳನ್ನು ಬಳಸುತ್ತದೆ. ಟ್ರೈನ್ ಡಿಟೆಕ್ಷನ್ ಸಿಸ್ಟಂ, ಸಿಗ್ನಲ್, ಪಾಯಿಂಟ್, ಟ್ರ್ಯಾಕ್ ಸರ್ಕ್ಯೂಟ್ ಇತ್ಯಾದಿ ಇತರ ಸಿಸ್ಟಂಗಳ ಸಹಯೋಗವನ್ನು ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ಸಿಸ್ಟಂ ಬಳಸುತ್ತದೆ. ಇದು ಪ್ರತೀ ಹಂತದಲ್ಲೂ ಆಗುತ್ತದೆ. ಇದರಿಂದಾಗಿ ರೈಲುಗಳು ಅಪಘಾತಗೊಳ್ಳುವ ಮತ್ತು ಮುಖಾಮುಖಿಯಾಗುವ ಸಾಧ್ಯತೆ ಬಹಳ ಕಡಿಮೆ ಅಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್
ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್
ಮೈಸೂರು ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಸಂಸದ ಯದುವೀರ್ ಮಹತ್ವದ ಮಾಹಿತಿ
ಮೈಸೂರು ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಸಂಸದ ಯದುವೀರ್ ಮಹತ್ವದ ಮಾಹಿತಿ
ಮಳೆಗಾಲವನ್ನು ನೆನಪಿಸಿಕೊಳ್ಳಲೂ ಸಾಯಿ ಲೇಔಟ್ ಜನ ತಯಾರಿಲ್ಲ!
ಮಳೆಗಾಲವನ್ನು ನೆನಪಿಸಿಕೊಳ್ಳಲೂ ಸಾಯಿ ಲೇಔಟ್ ಜನ ತಯಾರಿಲ್ಲ!
ಸೋಫಿಯಾ ಮಾವನ ಮನೆ ಮೇಲೆ ದಾಳಿ ನಡೆಸುವ ಮನಸ್ಥಿತಿ ಕನ್ನಡಿಗರು ಕ್ಷಮಿಸಲಾರರು
ಸೋಫಿಯಾ ಮಾವನ ಮನೆ ಮೇಲೆ ದಾಳಿ ನಡೆಸುವ ಮನಸ್ಥಿತಿ ಕನ್ನಡಿಗರು ಕ್ಷಮಿಸಲಾರರು
ನೆಚ್ಚಿನ ನಾಯಕಿಯ ಯಶಸ್ಸಿಗೆ ಹರಕೆ ತೀರಿಸಿದ ಡ್ರೋನ್ ಪ್ರತಾಪ್
ನೆಚ್ಚಿನ ನಾಯಕಿಯ ಯಶಸ್ಸಿಗೆ ಹರಕೆ ತೀರಿಸಿದ ಡ್ರೋನ್ ಪ್ರತಾಪ್