ಮಗನಿಂದಲೇ ಹತ್ಯೆಯಾದ ಉದ್ಯಮಿ: ಅಪ್ಪನನ್ನೇ ಕೊಲೆ ಮಾಡುವಷ್ಟು ಪುತ್ರ ಕಟುಕನಾಗಿದ್ಯಾಕೆ?
ಆತ ಐಸ್ ಕ್ರೀಂ ಫ್ಯಾಕ್ಟರಿಯ ಮಾಲೀಕ. ತಾನಾಯ್ತು ತನ್ನ ಉದ್ಯಮವಾಯ್ತು ಎಂದು ಬದುಕು ಸಾಗಿಸುತಿದ್ದ. ಆದ್ರೆ, ಅದೊಂದು ದಿನ ಇದ್ದಕಿದ್ದಂತೆ ಸಾವನಪ್ಪಿದ್ದ. ಮೊದಲಿಗೆ ಅಸಹಜ ಸಾವು ಎಂದು ಯುಡಿಆರ್ ದಾಖಲಾಗಿತ್ತು. ಆದ್ರೆ, ಕುಟುಂಬಸ್ಥರ ಅನುಮಾನ ಹಿನ್ಬಲೆ ಪೊಲೀಸರ ತನಿಖೆಯಲ್ಲಿ ರೋಚಕ ಸಂಗತಿಯೊಂದು ಬಯಲಾಗಿದ್ದು, ತನ್ನ ಪುತ್ರನಿಂದಲೇ ಆತ ಕೊಲೆಯಾಗಿರುವುದು ಗೊತ್ತಾಗಿದ್ದು, ಸಿಸಿಟಿವಿಯಿಂದ ಉದ್ಯಮಿ ಕೊಲೆಯ ಅಸಲಿ ಕಹಾನಿ ಬೆಳಕಿಗೆ ಬಂದಿದೆ,

ತುಮಕೂರು, (ಮೇ 14): ಐಸ್ ಕ್ರೀಂ ಫ್ಯಾಕ್ಟರಿಯ ಮಾಲೀಕ(ice cream factory businessman) ನಾಗೇಶ್ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸ್ವಂತ ಮಗನೇ ತನ್ನ ತಂದೆ ನಾಗೇಶ್ನನ್ನು ಕೊಂದು ಬಳಿಕ ಇನ್ನಿಲ್ಲದ ಕಟ್ಟಿ ಕಥೆ ಕಟ್ಟಿರುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ನಾಗೇಶ್ ಮೂಲತಃ ತಿಮ್ಮಸಂದ್ರದ ಈತ ಹಲವು ವರ್ಷಗಳಿಂದ ಕುಣಿಗಲ್ ನ (kunigal) ಶಿವಾಜಿಟೆಂಟ್ ರಸ್ತೆಯಲ್ಲಿ ವಾಸವಿದ್ದ. ಇದೇ ರಸ್ತೆಯಲ್ಲಿ ತನ್ನದೇ ಐಸ್ ಕ್ರೀಂ ಫ್ಯಾಕ್ಟರಿ ತೆರೆದಿದ್ದ. ಆತ ತಾನಾಯ್ತು ತನ್ನ ವ್ಯವಹಾರವಾಯ್ತು ಎಂದು ಜೀವನ ಸಾಗಿಸುತಿದ್ದ. ಆದ್ರೆ, ಮೇ 10ರಂದು ಏಕಾಏಕಿ ಸಾವನ್ನಪ್ಪಿದ್ದ. ಕರೆಂಟ್ ಶಾಕ್ ನಿಂದ ಮೃತಪಟ್ಟಿದ್ದಾನೆ ಎನ್ನಲಾಗಿತ್ತು. ಆದ್ರೆ, ಫ್ಯಾಕ್ಟರಿಯ ಸಿಸಿಟಿವಿ ಪರಿಶೀಲಿಸಿದಾಗ ಉದ್ಯಮಿ ಕೊಲೆಯ ಅಸಲಿ ಕಹಾನಿ ಬಯಲಾಗಿದ್ದು, ಡಿಗ್ರಿ ಓದುತಿದ್ದ ಮಗ ಸೂರ್ಯ ತನ್ನ ಸ್ನೇಹಿತ ಜತೆ ಸೇರಿಕೊಂಡು ಹೆತ್ತ ಅಪ್ಪನನ್ನೇ ಕೊಂದಿರುವುದು ದೃಢಪಟ್ಟಿದೆ.
ಸ್ನೇಹಿತನೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ
ನಾಗೇಶ್ ಹಲವು ವರ್ಷದ ಹಿಂದೆ ಮದುವೆಯೊಂದನ್ನಾಗಿ ಬಳಿಕ ಹೆಂಡತಿ ಬಿಟ್ಟಿದ್ದ. ಅದಾದ ಬಳಿಕ ಮತ್ತೊಂದು ಮದುವೆಯಾದ ನಾಗೇಶ್, ತನ್ನ ಊರು ಬಿಟ್ಟು ಕುಣಿಗಲ್ ಗೆ ಬಂದು ಸೆಟಲ್ ಆಗಿದ್ದ. ಈತನಿಗೆ ಎರಡು ಮಕ್ಕಳು. ಎರಡನೇ ಪತ್ನಿ ಹಾಗೂ ತಮ್ಮ ಮಕ್ಕಳಾದ ಡಿಗ್ರಿ ಓದುತಿದ್ದ ಮಗ ಸೂರ್ಯ ಹಾಗೂ ಶಾಲೆಗೆ ಹೊಗುತಿದ್ದ ಮಗಳ ಜೊತೆ ವಾಸವಿದ್ದ. ಆದ್ರೆ, ಮಗ ಸೂರ್ಯನಿಗೆ ಅಪ್ಪನ ಕಂಡರೇ ಅದೇನೋ ಕೋಪ ಇತ್ತೋ ಏನೋ. ತನ್ನ ಗೆಳೆಯರ ಜೊತೆ ಸೇರಿ ಮೇ 10ರಂದು ತಾರೀಖು ತನ್ನ ಗೆಳೆಯನ ಜೊತೆ ಫ್ಯಾಕ್ಟರಿಗೆ ಬಂದಿದ್ದ ಸೂರ್ಯ ತಂದೆ ಜೊತೆ ಜಗಳ ಮಾಡಿದ್ದ. ಹಲ್ಲೆ ಮಾಡಿ ನಂತರ ಬಟ್ಟೆಯಿಂದ ಕುತ್ತಿಗೆ ಇಚುಕಿ ಕೊಲೆ ಮಾಡಿದ್ದ.
ಇದನ್ನೂ ಓದಿ: 9ನೇ ತರಗತಿಯ ಸ್ನೇಹಿತನನ್ನೇ ಇರಿದು ಕೊಂದ 6ನೇ ಕ್ಲಾಸ್ ಬಾಲಕ: ಹುಬ್ಬಳ್ಳಿ ಪೊಲೀಸರೇ ಶಾಕ್..!
ವಿದ್ಯುತ್ ಶಾಕ್ ಎಂದು ಕಥೆ ಕಟ್ಟಿದ್ದ ಪುತ್ರ
ಕೊಲೆ ವಿಚಾರ ಯಾರಿಗೂ ಗೊತ್ತಾಗಬಾರದೆಂದು ಸಾವನ್ನಪ್ಪಿದ್ದ ನಾಗೇಶ್ ಕೈಗೆ ಕರೆಂಟ್ ಶಾಕ್ ಕೊಟ್ಟು, ವಿದ್ಯುತ್ ಶಾಕ್ನಿಂದಲೇ ಮೃತಪಟ್ಟಿರೋ ರೀತಿ ಬಿಂಬಿಸಿದ್ದ. ಆದ್ರೆ, ಫ್ಯಾಕ್ಟರಿಯೊಳಗಿದ್ದ ಸಿಸಿಟಿವಿಯಲ್ಲಿ ಈ ಎಲ್ಲಾ ದೃಶ್ಯಗಳ ಸೆರೆಯಾಗಿದ್ದು, ಇದೀಗ ಮಗ ಸೂರ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಸೂರ್ಯ ಈ ಹಿಂದೆಯೇ ತಂದೆಯ ಕೊಲೆಗೆ ಸ್ಕೆಚ್ ಹಾಕಿದ್ದ. ಕೊಲೆ ಯತ್ನ ಮಾಡಿದ್ದ. ಆದ್ರೆ ನಾಗೇಶ್ ಆ ಸಂದರ್ಭದಲ್ಲಿ ಜಸ್ಟ್ ಮಿಸ್ ಆಗಿದ್ದ ಎನ್ನುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕುಣಿಗಲ್ ಪೊಲೀಸರು, ಸದ್ಯ ಎಂಟು ಮಂದಿ ಆರೋಪಗಳನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ನಾಗೇಶ್ ತನ್ನ ಮಗಳಿಗೆ ಲೈಂಗಿಕ ಕಿರುಕುಳ ಕೊಟ್ಟ ಅದೇ ಕಾರಣಕ್ಕೆ ಕೊಲೆ ಮಾಡಿದ್ದಾಗಿ ಆರೋಪಿಗಳು ಹೇಳಿದ್ದಾರೆ ಎಂದು ತಿಳಿದುಬಂದಿದೆ. ಆದ್ರೆ, ಕೊಲೆಗೆ ಆಸ್ತಿ ವಿಚಾರ ಸೇರಿದಂತೆ ನಾಲ್ಕು ಆಯಾಮದ ಶಂಕೆ ವ್ಯಕ್ತವಾಗಿದ್ದು, ನಿಜಕ್ಕೂ ಕೊಲೆಗೆ ಕಾರಣ ಏನು ಎನ್ನುವುದು ಇನ್ನಷ್ಟು ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:03 pm, Wed, 14 May 25







