AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಪಕ್ಕದ ಮನೆಯವರ ಮೇಲಿನ ದ್ವೇಷಕ್ಕೆ ಬಾಲಕನನ್ನ ಅಪಹರಿಸಿ ಹತ್ಯೆ, ಕೊಲೆ ಸತ್ಯ ಬಿಚ್ಚಿಟ್ಟ ಆರೋಪಿ ಪುತ್ರಿ

ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಎಂಟು ವರ್ಷದ ಬಾಲಕನನ್ನು ನೆರೆಹೊರೆಯ ವ್ಯಕ್ತಿ ಅಪಹರಿಸಿ ಕೊಲೆ ಮಾಡಿದ್ದಾನೆ. ಕುಟುಂಬಗಳ ನಡುವಿನ ದ್ವೇಷಕ್ಕೆ ಬಾಲಕ ಕೊಲೆಯಾಗಿದ್ದಾನೆ. ಆರೋಪಿಯ ಪುತ್ರಿಯೇ ಕೊಲೆ ಸತ್ಯ ಬಾಯ್ಬಿಟ್ಟಿದ್ದಾಳೆ. ಸದ್ಯ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು: ಪಕ್ಕದ ಮನೆಯವರ ಮೇಲಿನ ದ್ವೇಷಕ್ಕೆ ಬಾಲಕನನ್ನ ಅಪಹರಿಸಿ ಹತ್ಯೆ, ಕೊಲೆ ಸತ್ಯ ಬಿಚ್ಚಿಟ್ಟ ಆರೋಪಿ ಪುತ್ರಿ
ಆರೋಪಿ ಮತ್ತೂರು, ಮೃತ ಬಾಲಕ ರಮಾನಂದ
ರಾಚಪ್ಪಾಜಿ ನಾಯ್ಕ್
| Edited By: |

Updated on: May 08, 2025 | 12:34 PM

Share

ಬೆಂಗಳೂರು, ಮೇ 08: ಪಕ್ಕದ ಮನೆಯವರ ಮೇಲಿನ ದ್ವೇಷಕ್ಕೆ ಎಂಟು ವರ್ಷದ ಬಾಲಕನನ್ನು (boy) ಅಪಹರಿಸಿ ಕೊಲೆ (kill) ಮಾಡಿರುವಂತಹ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಾಲಕ ರಮಾನಂದ (8) ಕೊಲೆಯಾದ ಬಾಲಕ. ಪಕ್ಕದ ಮನೆಯ ನಿವಾಸಿ ಮತ್ತೂರು ಎಂಬಾತನಿಂದ ಕೃತ್ಯವೆಸಲಾಗಿದೆ. ಬಾಲಕ ರಮಾನಂದ ಕುಟುಂಬ ಮತ್ತು ಮತ್ತೂರು ಕುಟುಂಬ ನಡುವೆ ಗಲಾಟೆ ನಡೆದಿದೆ. ಈ ಹಿನ್ನೆಲೆ ಬಾಲಕನನ್ನು ಅಪಹರಿಸಿ ಕೊಲೆ ಮಾಡಲಾಗಿದೆ. ಆರೋಪಿ ಮತ್ತೂರು ಮೃತದೇಹವನ್ನು ಚೀಲದಲ್ಲಿ ಕಟ್ಟಿ ಬಿಸಾಡಿದ್ದು, ನಿನ್ನೆ ರಾಯಸಂದ್ರ ಕೆರೆ ಬಳಿ ಮೃತದೇಹ ಪತ್ತೆಯಾಗಿದೆ. ಸದ್ಯ ಆರೋಪಿ ಮತ್ತೂರು ನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆ ಸತ್ಯ ಬಿಚ್ಚಿಟ್ಟ ಆರೋಪಿ ಪುತ್ರಿ

ತನಿಖೆಗೆ ಇಳಿದ ಪೊಲೀಸರು ಕೊಲೆ ರಹಸ್ಯ ಬಯಲು ಮಾಡಿದ್ದಾರೆ. ಆರೋಪಿ ಪುತ್ರಿಯೇ ಕೊಲೆ ಸತ್ಯ ಬಾಯ್ಬಿಟ್ಟಿದ್ದಾಳೆ. ಯಾರಿಗಾದರೂ ಹೇಳಿದರೆ ನಿನ್ನನ್ನು ಹೀಗೆ ಮಾಡುವುದಾಗಿ ತಂದೆ ಹೆದರಿಸಿರುವುದಾಗಿ ಹೇಳಿದ್ದಾಳೆ. ಬಾಲಕಿ ಮಾಹಿತಿ ಮೇರೆಗೆ ಕರೆತಂದು ವಿಚಾರಣೆ ಮಾಡಿದಾಗ ಆರೋಪಿ ಮತ್ತೂರು ಸತ್ಯ ಒಪ್ಪಿಕೊಂಡಿದ್ದಾರೆ.

ಕೊಲೆ ಮಾಡಿ ಮೃತದೇಹ ಬ್ಯಾಗ್​ನಲ್ಲಿ ಸಾಗಾಟ

ಮೃತ ಬಾಲಕನ ಮನೆ ಮತ್ತು ಆರೋಪಿಯ ಮನೆ ಎದುರುಬದುರಾಗಿದೆ. ಎರಡು ಕುಟುಂಬಗಳ ಮಧ್ಯೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಮತ್ತೂರು ಪುತ್ರಿ ರಮಾನಂದ  ಜೊತೆಗೆ ಆಟವಾಡುತ್ತಿದ್ದಳು. ಆತನೊಂದಿಗೆ ಆಟ ಆಡದಂತೆ ಆರೋಪಿ ಹೇಳುತ್ತಿದ್ದ. ಮೇ 6 ರಂದು ಮದ್ಯಪಾನ ಮಾಡಿ ಬಂದ ಮತ್ತೂರು ರಮಾನಂದ ಮೇಲೆ ಹಲ್ಲೆ ಮಾಡಿದ್ದ. ಈ ವೇಳೆ ಬಾಲಕನ ತಾಯಿ ಮನೆಗೆಲಸಕ್ಕೆ ಹೋಗಿದ್ದಳು. ಸಂಜೆ 7 ಗಂಟೆ ಬಳಿಕ ಮಗು ಕಾಣಿಸದಿದ್ದಾಗ ಎಲ್ಲಾ ಕಡೆ ಹುಡುಕಿದ್ದಾರೆ. ಎಲ್ಲೂ ಪತ್ತೆಯಾಗಿಲ್ಲ. ಇತ್ತ ಮತ್ತೂರು ಕೂಡ ಮನೆ ಲಾಕ್ ಮಾಡಲಾಗಿದ್ದು, 12 ಗಂಟೆ ರಾತ್ರಿಗೆ ಮತ್ತೆ ಮನೆಗೆ ಬಂದು ಬ್ಯಾಗ್ ಎತ್ತುಕೊಂಡು ತನ್ನ ಸಂಬಂಧಿ ಮನೆಗೆ ಹೋಗಿದ್ದ.

ಇದನ್ನೂ ಓದಿ
Image
ಕೊಡಗು: ಕಾಫಿ ತೋಟದಲ್ಲಿ ಗುಂಡಿಕ್ಕಿ ವ್ಯಕ್ತಿಯ ಕೊಲೆ
Image
ಶಿವಮೊಗ್ಗ: ಕ್ರಿಕೆಟ್​ ಆಡುವಾಗ ಸ್ನೇಹಿತರ ನಡುವೆ ಜಗಳ, ಓರ್ವನ ಕೊಲೆ
Image
ಮಗಳ ಸಾವಿಗೆ ಪ್ರತೀಕಾರ: ಪುತ್ರಿಯನ್ನ ಕೊಂದಿದ್ದ ಆರೋಪಿ ತಂದೆಯನ್ನೇ ಕೊಂದ!
Image
ಮಂಗಳೂರು, ಮೈಸೂರು ಬಳಿಕ ದಾವಣಗೆರೆಯಲ್ಲೊಬ್ಬ ಕುಖ್ಯಾತ ರೌಡಿಶೀಟರನ ಕೊಲೆ

ಇದನ್ನೂ ಓದಿ: ಮಂಗಳೂರು, ಮೈಸೂರು ಬಳಿಕ ದಾವಣಗೆರೆಯಲ್ಲೊಬ್ಬ ಕುಖ್ಯಾತ ರೌಡಿಶೀಟರನ ಕೊಲೆ: ಆರೋಪಿಗಳಿಗೆ ಬಲೆ ಬೀಸಿದ ಪೊಲೀಸ್​

ಇದನ್ನ ಸ್ಥಳೀಯರು ಗಮನಿಸಿದ್ದರು. ಇದರಿಂದ ಅನುಮಾನಗೊಂಡು ಪರಪ್ಪನ ಅಗ್ರಹಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತನಿಖೆಗೆ ಇಳಿದ ಪೊಲೀಸರು ಕೊಲೆ ರಹಸ್ಯ ಬಯಲು ಮಾಡಿದ್ದಾರೆ. ಮತ್ತೂರು ಬಾಲಕನನ್ನು ಕೊಲೆ ಮಾಡಿ ಮೃತದೇಹವನ್ನು ಬ್ಯಾಗ್​ನಲ್ಲಿ ತೆಗೆದುಕೊಂಡು ಹೋಗಿ ರಾಯಸಂದ್ರ ಕೆರೆ ಬಳಿ  ಎಸೆದಿದ್ದ.

ಸ್ಥಳೀಯರು ಹೇಳಿದ್ದಿಷ್ಟು 

ಸ್ಥಳೀಯ ಮಹಿಳೆ ಹೇಮಾ ಎಂಬುವವರು ಪ್ರತಿಕ್ರಿಯಿಸಿದ್ದು, ಮನೆ ಬಳಿ ಆಟ ಆಡಿಕೊಂಡು ಇರುವಾಗ ಗಲಾಟೆ ಆಗಿದೆ. ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ. ಬಳಿಕ ರಾಯಸಂದ್ರ ಕೆರೆಗೆ ತೆಗೆದುಕೊಂಡು ಹೋಗಿ ಹಾಕಿದ್ದಾನೆ ಎಂದಿದ್ದಾರೆ.

ಮನೆ ಮಾಲೀಕ ಸಂಪತ್ ಹೇಳಿದ್ದಿಷ್ಟು

ಮನೆ ಮಾಲೀಕ ಸಂಪತ್ ಹೇಳಿಕೆ ನೀಡಿದ್ದು, ಈ‌ ಹಿಂದೆ ಮನೆ ಖಾಲಿ ಮಾಡಲು ಹೇಳಿದ್ದೆ. ಎರಡು ತಿಂಗಳಿಂದ ಬಾಡಿಗೆನು ಕೊಟ್ಟಿಲ್ಲ. ಮಗು ವಿಚಾರವಾಗಿ ಏನಾಯ್ತು ಅನ್ನೋದು ಗೊತ್ತಿಲ್ಲ. ಬ್ಯಾಗ್ ಎತ್ತಿಕೊಂಡು ಹೋಗೋದನ್ನ ಇಲ್ಲಿರುವವರು ನೋಡಿದ್ದಾರೆ. ಮಕ್ಕಳು ಒಟ್ಟಿಗೆ ಆಟವಾಡುತ್ತಿದ್ದರು. ತನ್ನ ಮಕ್ಕಳನ್ನು ಆ ಹುಡುಗನ ಜೊತೆ ಸೇರದಂತೆ ಗಲಾಟೆ ಆಗಿದೆ ಎಂದು ಹೇಳಿದ್ದಾರೆ.

ತನ್ನ ಮಕ್ಕಳಿಗೆ ಬಾಲಕ ಹೊಡೆಯುತ್ತಾನೆ ಅಂತಾ ಕೊಲೆ 

ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಪ್ರತಿಕ್ರಿಯಿಸಿದ್ದು, ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ಮೇ 6ರಂದು ಮಗುವಿನ ಮಿಸ್ಸಿಂಗ್ ಕಂಪ್ಲೆಂಟ್ ದಾಖಲಾಗಿರುತ್ತೆ. ತನಿಖೆ ಮಾಡಿದಾಗ ಪಕ್ಕದ ಮನೆಯವನ ಜೊತೆ ಹೋಗಿರೋದು ಗೊತ್ತಾಗುತ್ತೆ. ಆರೋಪಿಯನ್ನ ವಿಚಾರಣೆ ನಡೆಸಿದಾಗ ಕೃತ್ಯ ಬಯಲಾಗಿದೆ. ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಿಹಾರ ಮೂಲದ ಆರೋಪಿಯನ್ನ ಬಂಧಿಸಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಮಗಳ ಸಾವಿಗೆ ಪ್ರತೀಕಾರ: ತನ್ನ ಪುತ್ರಿಯನ್ನ ಕೊಂದಿದ್ದ ಆರೋಪಿ ತಂದೆಯನ್ನೇ ಹತ್ಯೆಗೈದ

ಬಿಹಾರ ಮೂಲದ ಎರಡು ಕುಟುಂಬ ವಾಸವಾಗಿದ್ದವು. ಎರಡೂ ಕುಟುಂಬದ ಮಕ್ಕಳು ಜಗಳ ಆಡುವ ವಿಚಾರಕ್ಕೆ ಕೊಲೆ ಮಾಡಿರುವುದಾಗಿ ಹೇಳಿದ್ದಾನೆ. ಆರೋಪಿಗೆ ಹೆಣ್ಣು ಮಕ್ಕಳಿದ್ದಾರೆ. ತನ್ನ ಮಕ್ಕಳಿಗೆ ಬಾಲಕ ಹೊಡೆಯುತ್ತಾನೆ ಅಂತಾ ಕೊಲೆ ಮಾಡಿದ್ದಾನೆ. ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ರಾಚಪ್ಪಾಜಿ ನಾಯ್ಕ್
ರಾಚಪ್ಪಾಜಿ ನಾಯ್ಕ್

ರಾಚಪ್ಪಾಜಿ ನಾಯ್ಕ್ ಆದ ನಾನು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೊಲ್ಲರದಿಂಬ ಗ್ರಾಮದವನು ಕಳೆದ 2 ವರ್ಷ 11 ತಿಂಗಳಿನಿಂದ ಟಿವಿ9 ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದು.ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ್ದೇನೆ.ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದೇನೆ.

Read More
ಶಂಕರ್ ನಾಗ್ ಮಗಳು ಚಿತ್ರರಂಗಕ್ಕೇಕೆ ಬಂದಿಲ್ಲ? ಉತ್ತರಿಸಿದ ಅನಂತ್ ನಾಗ್
ಶಂಕರ್ ನಾಗ್ ಮಗಳು ಚಿತ್ರರಂಗಕ್ಕೇಕೆ ಬಂದಿಲ್ಲ? ಉತ್ತರಿಸಿದ ಅನಂತ್ ನಾಗ್
ಡಿಜೆ ಸೌಂಡ್‌ಗೆ ಕುಣಿದು ಕುಪ್ಪಳಿಸಿದ ರೇಣುಕಾಚಾರ್ಯ
ಡಿಜೆ ಸೌಂಡ್‌ಗೆ ಕುಣಿದು ಕುಪ್ಪಳಿಸಿದ ರೇಣುಕಾಚಾರ್ಯ
ಪೈಪ್‌ಲೈನ್ ಒಡೆದು ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ಪೈಪ್‌ಲೈನ್ ಒಡೆದು ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ಇಂದು ಈ ರಾಶಿಯವರು ಬೇಜವಾಬ್ದಾರಿತನದಿಂದ ದೂರವಿರಿ
ಇಂದು ಈ ರಾಶಿಯವರು ಬೇಜವಾಬ್ದಾರಿತನದಿಂದ ದೂರವಿರಿ
ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ
ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು