AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವನಹಳ್ಳಿ: ತಂದೆಯ ಸಿಂಗಲ್ ಬ್ಯಾರಲ್ ಗನ್​​ನಿಂದ ಫೈರಿಂಗ್ ಮಾಡಿಕೊಂಡು ಮಗ ಆತ್ಮಹತ್ಯೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಗ್ರಾಮದಲ್ಲಿ ಫೈರಿಂಗ್ ಮಾಡಿಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಮತ್ತೊಂದು ಪ್ರಕರಣದಲ್ಲಿ ಟೆಂಪೋ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ಇಬ್ಬರು ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಚಿಕ್ಕಹುಲ್ಲೂರು ಗ್ರಾಮದ ಬಳಿ ನಡೆದಿದೆ.

ದೇವನಹಳ್ಳಿ: ತಂದೆಯ ಸಿಂಗಲ್ ಬ್ಯಾರಲ್ ಗನ್​​ನಿಂದ ಫೈರಿಂಗ್ ಮಾಡಿಕೊಂಡು ಮಗ ಆತ್ಮಹತ್ಯೆ
ಆತ್ಮಹತ್ಯೆ ಮಾಡಿಕೊಂಡ ಬೈಯೇಶ್
ನವೀನ್ ಕುಮಾರ್ ಟಿ
| Updated By: ಗಂಗಾಧರ​ ಬ. ಸಾಬೋಜಿ|

Updated on:May 12, 2025 | 3:09 PM

Share

ದೇವನಹಳ್ಳಿ, ಮೇ 12: ತಂದೆಯ ಸಿಂಗಲ್ ಬ್ಯಾರಲ್​ ಗನ್​ನಿಂದ ಫೈರಿಂಗ್ (shooting)​ ಮಾಡಿಕೊಂಡು ಮಗ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ (Devanahalli) ತಾಲೂಕಿನ ಗ್ರಾಮದಲ್ಲಿ ನಡೆದಿದೆ. ಇಂದು ಮುಂಜಾನೆ ಫಾರ್ಮ್​ಹೌಸ್​ನಲ್ಲಿ ಬೈಯೇಶ್(28) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೈಯೇಶ್ ಇತ್ತೀಚೆಗಷ್ಟೆ ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿ ಬಂದಿದ್ದ. ಸದ್ಯ ಸ್ಥಳಕ್ಕೆ ತಿರುಮಲಶೆಟ್ಟಿಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ನಿನ್ನೆ ಮನೆಯ ಕುಟುಂಬಸ್ಥರು ಎಲ್ಲಾ ತಿರುಪತಿಗೆ ಹೋಗಿದ್ದಾರೆ. ಬೈಯೇಶ್​​ ಮನೆಯಲ್ಲಿ ಒಬ್ಬಂಟಿಯಾಗಿದ್ದರು. ಏಕಾಏಕಿ ಫೈರಿಂಗ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಮುಂಜಾನೆ ಕುಟುಂಬಸ್ಥರು ವಾಪಸ್ ಬಂದು ನೋಡಿದಾಗ ಆತ್ಮಹತ್ಯೆ ಬೆಳಕಿಗೆ ಬಂದಿದೆ.

ಟೆಂಪೋ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ಇಬ್ಬರು ಸ್ಥಳದಲ್ಲೇ ದುರ್ಮರಣ

ಟೆಂಪೋ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ಇಬ್ಬರು ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಚಿಕ್ಕಹುಲ್ಲೂರು ಗ್ರಾಮದ ಬಳಿ ನಡೆದಿದೆ. ಮತ್ತೊಬ್ಬನಿಗೆ ಗಂಭೀರ ಗಾಯವಾಗಿದ್ದು, ಹೊಸಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಸಕೋಟೆ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಆಕಸ್ಮಿಕವಾಗಿ ಫೈರಿಂಗ್: ಯುವಕನ‌ ತೊಡೆ ಸೀಳಿದ ಗುಂಡು

ಆಕಸ್ಮಿಕವಾಗಿ ಫೈರಿಂಗ್​ ಹಿನ್ನಲೆ ಗುಂಡು ಯುವಕನ‌ ತೊಡೆ ಸೀಳಿರುವಂತಹ ಘಟನೆ ರಾಯಚೂರು ನಗರದ ಹೆಚ್‌ಆರ್‌ಬಿ ಬಡವಾಣೆಯಲ್ಲಿ ನಡೆದಿದೆ. ಮೊಹಮ್ಮದ್ ಸೊಹೈಲ್(16) ಗಾಯಗೊಂಡಿರುವ ವಿದ್ಯಾರ್ಥಿ. ಪಿಸ್ತೂಲ್ ಹೊಂದಿದ್ದ ಜಿಯಾ ಸೌದಾಗರ ವಿರುದ್ಧ ಸದರಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಚಿತ್ರದುರ್ಗ: ಕಾರು-ಲಾರಿ ಮುಖಾಮುಖಿ ಡಿಕ್ಕಿ, ಇಬ್ಬರು ಪುರುಷರು, ಓರ್ವ ಮಹಿಳೆ ಸಾವು

ನಗರದ ಜಾಕೀರ್ ಹುಸೇನ್ ಸರ್ಕಲ್‌‌ನಲ್ಲಿ ಮೊಹಮ್ಮದ್​ ಸೊಹೈಲ್​​​ ತಿಂಡಿ ಮಾಡುತ್ತಿದ್ದ. ಈ ವೇಳೆ ಸ್ನೇಹಿತ ಜಿಯಾ ಸೌದಾಗರ್ ಭೇಟಿ ಆಗಿದ್ದಾನೆ. ಆಗ ಜಿಯಾ ಸೌದಾಗರ್ ಜೊತೆ ಆತನ ಮನೆಗೆ ಹೋಗಿದ್ದಾನೆ. ಮನೆಯಲ್ಲಿ ಪಿಸ್ತೂಲ್ ತೆಗೆದುಕೊಂಡ ಸೌದಾಗರ್, ಅದಕ್ಕೆ 4 ಬುಲೆಟ್ ಲೋಡ್ ಮಾಡಿದ್ದಾನ. ನಂತರ ಪಿಸ್ತೂಲ್ ಬೆಡ್ ಮೇಲೆ ಇಟ್ಟಾಗ ಏಕಾಏಕಿ ಮಿಸ್ ಫೈರ್ ಆಗಿದ್ದು, ಸೊಹೈಲ್​ನ ಬಲ ತೊಡೆ ಸೀಳಿ, ಎಡ ತೊಡೆಗೆ ತಗುಲಿದೆ.  ಸದ್ಯ ಗಾಯಾಳುವನ್ನು ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:59 pm, Mon, 12 May 25