ಲೆಫ್ಟಿನಂಟ್ ಕರ್ನಲ್ ಸೋಫಿಯಾ ಖುರೇಷಿ ಮಾವನ ಮನೆಗೆ ಕಿಡಿಗೇಡಿಗಳ ದಾಳಿ ವದಂತಿ ಹಿನ್ನೆಲೆ ಪೊಲೀಸ್ ಭದ್ರತೆ
ಕೊಣ್ಣೂರಲ್ಲಿ ಹಬ್ಬಿರುವ ವದಂತಿ ನಿಜವೇ ಆಗಿದ್ದಲ್ಲಿ ಇದು ದುರಂತವಲ್ಲದೆ ಮತ್ತೇನೂ ಅಲ್ಲ. ಪಾಕಿಸ್ತಾನದ ಮೇಲೆ ದಾಳಿಯ ಸಂದರ್ಭದಲ್ಲಿ ಭಾರತೀಯ ಸೇನೆಯ ಮುಖವಾಗಿದ್ದ ಸೋಫಿಯಾ ಅವರ ಮಾವನ ಮನೆಯ ಮೇಲೆ ದಾಳಿ ನಡೆಸುವ ಹುನ್ನಾರವೇ? ಸೋಫಿಯಾರ ಅವರ ಪತಿ ಸಹ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮನೆ ಮೇಲೆ ದಾಳಿ ನಡೆಸುವ ಮನಸ್ಥಿತಿಯನ್ನು ಕನ್ನಡಿಗರಂತೂ ಕ್ಷಮಿಸಲಾರರು.
ಬೆಳಗಾವಿ, ಮೇ 14: ಮೊನ್ನೆಯಷ್ಟೇ ನಾವು ಪಾಕಿಸ್ತಾನ ಮೇಲೆ ಆಕ್ರಮಣ ನಡೆಸಿ ಅದನ್ನು ಬಗ್ಗುಬಡಿದ ಭಾರತೀಯ ಸೇನೆಯ ದಿನದ ಚಟುವಟಿಕೆಗಳನ್ನು ಮತ್ತು ಸೇನೆಯ ಯಶಸನ್ನು ಮಾಧ್ಯಮಗಳಿಗೆ ವಿವರಿಸುತ್ತಿದ್ದ ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಷಿಯವರ ಗೋಕಾಕ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿರುವ ಮಾವನ ಮನೆಯನ್ನು ತೋರಿಸಿದ್ದೆವು ಮತ್ತು ನಮ್ಮ ವರದಿಗಾರ ಮನೆಯ ಸದಸ್ಯರೊಂದಿಗೆ ಮಾತಾಡಿದ್ದರು. ಈ ಮನೆಯ ಮೇಲೆ ಕೆಲ ಕಿಡಿಗೇಡಿಗಳು ದಾಳಿ ನಡೆಸುವ ವದಂತಿ ಹಬ್ಬಿರುವ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗಿದೆ.
ಇದನ್ನೂ ಓದಿ: ಬೆಳಗಾವಿ: ಕರ್ನಲ್ ಸೋಫಿಯಾ ಖುರೇಷಿ ಪತಿ ಮನೆ ಮೇಲೆ RSS ದಾಳಿ ಎಂದು ಸುಳ್ಳು ಸುದ್ದಿ ಹರಿಬಿಟ್ಟ ಕಿಡಿಗೇಡಿ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

