AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನ ಭಾರತದ ರಫೇಲ್​ ಹೊಡೆದು ಹಾಕಿದ ಸುದ್ದಿಯ ಹಿಂದಿನ ಸತ್ಯಾಸತ್ಯತೆ ಬಯಲು..!

ಆಪರೇಷನ್ ಸಿಂಧೂರ್ ವೇಳೆ ಭಾರತದ ಯುದ್ಧವಿಮಾನ ರಫೇಲ್ ಹೊಡೆದುರುಳಿಸಲಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದ್ರೆ, ಇದರ ಹಿಂದಿನ ಸತ್ಯಾಸತ್ಯತೆ ಏನು ಎನ್ನುವುದನ್ನು ಕೂಲಂಕಷವಾಗಿ ಪರಿಶೀಲನೆ ಮಾಡಿದಾಗ ಪಾಕಿಸ್ತಾನ ಹಾಗೂ ಭಾರತದ ವಿರೋಧಿ ದೇಶಗಳ ಬೂಟಾಟಿಕೆ ಬಟಾಬಯಲಾಗಿದೆ. ಇನ್ನು ಭಾರತದ ರಫೇಲ್​ ಫೈಟರ್​ ಜೆಟ್​ ಹೊಡೆದು ಹಾಕಿದ ಸುದ್ದಿಯ ಹಿಂದಿನ ನಿಜವಾದ ಕತೆ ಇಲ್ಲಿದೆ.

ಪಾಕಿಸ್ತಾನ ಭಾರತದ ರಫೇಲ್​ ಹೊಡೆದು ಹಾಕಿದ ಸುದ್ದಿಯ ಹಿಂದಿನ ಸತ್ಯಾಸತ್ಯತೆ ಬಯಲು..!
Rafale
ರಮೇಶ್ ಬಿ. ಜವಳಗೇರಾ
|

Updated on:May 14, 2025 | 4:01 PM

Share

ನವದೆಹಲಿ, (ಮೇ 14): ಪಾಕಿಸ್ತಾನಿ ಮೂಲದ ಪತ್ರಕರ್ತರೇ ಹೆಚ್ಚಿರುವ ಅಂತಾರಾಷ್ಟ್ರೀಯ ನ್ಯೂಸ್ ಚಾನಲ್ ಮತ್ತು ಪತ್ರಿಕೆಗಳ ಮೂಲಕ ಭಾರತದ ಬಗ್ಗೆ ಪಾಕ್​​​ ಹಸಿ ಹಸಿ ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಅದರಲ್ಲೂ ಮುಖ್ಯವಾಗಿ ಭಾರತದ ರಫೇಲ್​ (rafale jet) ಯುದ್ಧ ವಿಮಾನವನ್ನು ಪಾಕಿಸ್ತಾನ ಹೊಡೆದುರುಳಿಸಿದೆ ಎನ್ನುವ ಸುದ್ದಿ ಹಬ್ಬಿಸಲಾಗಿದೆ. ಪಾಕ್ ಸೇನೆ ಭಾರತದ ರಫೇಲ್​ ಹೊಡೆದುರುಳಿಸಿದೆ ಎಂದು ಸಾಯೀದ್ ಶಾ ಎನ್ನುವರ ಹೆಸರಿನಲ್ಲಿ ಲೇಖನ ಪ್ರಕಟವಾಗಿದೆ. ಆದ್ರೆ, ಈ ಲೇಖನ ಬರೆದ ಸಾಯೀದ್ ಶಾ ಯಾರು ಎನ್ನುವುದು ನೋಡಿದಾಗ ಆತನ ಹೆಸರಿನಲ್ಲಿ ಇಲ್ಲಿವರೆಗೆ ಕೇವಲ ಮೂರೇ ಮೂರು ಲೇಖನಗಳು ಪ್ರಕಟವಾಗಿವೆ. ಅದೂ ಭಾರತದ ವಿರುದ್ಧವಾಗಿರುವ ಲೇಖನಗಳು. ಹೀಗಾಗಿ ವಿಶ್ವಮಟ್ಟದ ಮಾಧ್ಯಮ ರಾಯಿಟರ್ಸ್​​​ ಮೂಲಕ ಭಾರತದ ರಫೇಲ್ ಫೈಟರ್​ ಜೆಟ್​​ ಉಡೀಸ್​​ ಮಾಡಲಾಗಿದೆ ಎನ್ನುವ ಸುಳ್ಳು ಸುದ್ದಿ ಬಿತ್ತರಿಸಿರುವುದು ಬೆಳಕಿಗೆ ಬಂದಿದೆ.

ಮೇ 9, 2025 ರಂದು, ರಾಯಿಟರ್ಸ್ “ಪಾಕಿಸ್ತಾನದ ಚೀನಾ ನಿರ್ಮಿತ ಜೆಟ್ ಮೂಲಕ ಎರಡು ಭಾರತೀಯ ರಫೇಲ್​​ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳುತ್ತಾರೆ” ಎಂಬ ಶೀರ್ಷಿಕೆಯ ಲೇಖನವನ್ನು ಪ್ರಕಟಿಸಿತು. ಪಾಕಿಸ್ತಾನದ ಸೇನೆಯು ಚೀನಾ ನಿರ್ಮಿತ ಜೆಟ್‌ಗಳನ್ನು ಬಳಸಿಕೊಂಡು ಎರಡು ಭಾರತೀಯ ರಫೇಲ್ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ ಎಂದು ವರದಿಯಲ್ಲಿ ಬರೆಯಲಾಗಿದೆ. ಆದ್ರೆ, ಲೇಖನದಲ್ಲಿ ಯಾವುದೇ ಪುರಾವೆಗಳು ಇಲ್ಲ. ಹಾಗೇ ಲೇಖನದಲ್ಲಿ ಅಸ್ಪಷ್ಟವಾಗಿ ವಿವರಿಸಲಾಗಿದೆ.

ಇದನ್ನೂ ಓದಿ
Image
ಆಪರೇಷನ್ ಸಿಂಧೂರ್: ಭಾರತಕ್ಕೆ ನಿರ್ಣಾಯಕ ಗೆಲುವು ಸಿಕ್ಕಿದೆ: ರಕ್ಷಣಾ ತಜ್ಞ
Image
2019ರಲ್ಲಿ ಅದೇ ಹಾಡು...2025ರಲ್ಲೂ ಅದೇ ರಾಗ:.ಟ್ರಂಪ್​ನ ಬಿಲ್ಡಪ್​​ ಅನಾವರಣ
Image
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
Image
ಟ್ರಂಪ್ ಸುಳ್ಳು: ಭಾರತದೊಂದಿಗೆ ಅಮೆರಿಕ ಯಾವ ಟ್ರೇಡ್ ಮಾತುಕತೆಯೂ ಮಾಡಿಲ್ಲವಾ?

ಇದನ್ನೂ ಓದಿ: ಇದು ಟಾಪ್ ಸೀಕ್ರೆಟ್… ಆಪರೇಷನ್ ಸಿಂದೂರದಿಂದ ಹಲವರ ಬಣ್ಣ ಬಯಲು; ಅಮೆರಿಕ ನಡುಗಲು ನಿಜ ಕಾರಣ ಏನು ಗೊತ್ತಾ?

ರಾಯಿಟರ್ಸ್​ನ ಲೇಖನದಲ್ಲಿ “ಇಬ್ಬರು ಯುಎಸ್ ಅಧಿಕಾರಿಗಳನ್ನು” ಉಲ್ಲೇಖಿಸಿದೆ. ಅವರು ಯಾರು? ಏನು ಎನ್ನುವುದನ್ನು ದೃಢಪಡಿಸಿಲ್ಲ. ಬದಲಿಗೆ ಸಾಮಾಜಿಕ ಮಾಧ್ಯಮಗಳ ಪೋಸ್ಟ್‌ಗಳು ಆ ಲೇಖನದಲ್ಲಿ ಹೈಲೈಟ್ ಮಾಡಲಾಗಿದೆ. ಇನ್ನು ಈ ಲೇಖನ ಬರೆದ ಸಾಯೀದ್ ಶಾ ಯಾರು ಎನ್ನುವುದನ್ನು ನೋಡಿದಾಗ ಈತನ ಹೆಸರಿನಲ್ಲಿ ಕೇವಲ 3 ಲೇಖನಗಳು ಪ್ರಕಟವಾಗಿವೆ. ಅವು ಎಲ್ಲವೂ ಪಾಕಿಸ್ತಾನದ ಪರವಾಗಿವೆ. ಈ ಎಲ್ಲಾವನ್ನು ಪರಿಶೀಲನೆ ಮಾಡಿದಾಗ ಕಂತೆ ಕಂತೆ ಸುಳ್ಳು ಬಯಲಾಗಿದೆ.

ಇನ್ನು ಇದೇ ವಿಚಾರವಾಗಿ ಪಾಕಿಸ್ತಾನದ ರಕ್ಷಣಾ ಸಚಿವರು ಸಹ ಮಾಧ್ಯಮಮದ ಸಂದರ್ಶನವೊಂದರಲ್ಲಿ, ಈ ಬಗ್ಗೆ ಮಾತನಾಡಿ “ಸಾಕ್ಷ್ಯಗಳು ಸಾಮಾಜಿಕ ಜಾಲತಾಣಗಳಲ್ಲಿವೆ ಎಂದು ಹೇಳಿದ್ದರು. ಈ ಹೇಳಿಕೆಯು ರಾಯಿಟರ್ಸ್​​ನಲ್ಲಿನ ಲೇಖನದ ಸತ್ಯಾಸತ್ಯತೆಯ ಬಗ್ಗೆ ಸಂದೇಹವನ್ನು ಮತ್ತಷ್ಟು ಹೆಚ್ಚಿಸಿತ್ತು.

ಸ್ಪಷ್ಟನೆ ಕೊಟ್ಟಿರುವ ಏರ್ ಮಾರ್ಷಲ್

ಆಪರೇಷನ್ ಸಿಂಧೂರ್ ವೇಳೆ ಭಾರತೀಯ ವಾಯುಪಡೆಯ ರಫೇಲ್ ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದೇವೆ ಎಂಬ ಪಾಕಿಸ್ತಾನ ಸೇನೆಯ ಹೇಳಿಕೆಯನ್ನು ಭಾರತೀಯ ವಾಯುಪಡೆ ತಳ್ಳಿಹಾಕಿದೆ. ಈ ಬಗ್ಗೆ ಮಾತನಾಡಿದ ಏರ್ ಮಾರ್ಷಲ್ ಎ.ಕೆ. ಭಾರ್ತಿ, ಪಾಕಿಸ್ತಾನದ ಹೇಳಿಕೆ ಸಂಪೂರ್ಣವಾಗಿ ಆಧಾರರಹಿತ. ಯುದ್ದದ ಸಂದರ್ಭದಲ್ಲಿ ಕೆಲವು ನಷ್ಟವಾಗೋದು ಸಾಮಾನ್ಯ, ಆದರೆ ನಮ್ಮ ಎಲ್ಲಾ ರಫೇಲ್ ಜೆಟ್‌ಗಳು ಸುರಕ್ಷಿತವಾಗಿವೆ. ನಾವು ನಿಗದಿತ ಗುರಿಗಳನ್ನು ಸಾಧಿಸಿದ್ದೇವೆ ಮತ್ತು ನಮ್ಮ ಎಲ್ಲಾ ಪೈಲಟ್‌ಗಳು ಸುರಕ್ಷಿತವಾಗಿ ಮನೆಗೆ ಮರಳಿದ್ದಾರೆ ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ ಭಾರತದ ರಫೇಲ್ ಯುದ್ಧ ವಿಮಾನವನ್ನು ಪಾಕಿಸ್ತಾನ ಹೊಡೆದುರುಳಿಸಿದೆ ಎನ್ನುವ ಸುದ್ದಿಯ ಸುಳ್ಳಿನ ಕಂತೆ ಬಯಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:55 pm, Wed, 14 May 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ