AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆರಳುಗಳ ನಡುವೆ ಪೆನ್​ ಒತ್ತಿ, ಬಾಯೊಳಗೆ ಮೆಣಸಿನಕಾಯಿ ತುರುಕಿ ದಿವ್ಯಾಂಗ ವಿದ್ಯಾರ್ಥಿಗೆ ಶಿಕ್ಷಕನ ಚಿತ್ರಹಿಂಸೆ

ದಿವ್ಯಾಂಗ ವಿದ್ಯಾರ್ಥಿಗೆ ಶಿಕ್ಷಕರೊಬ್ಬರು ನಾನಾ ರೀತಿಯಲ್ಲಿ ಚಿತ್ರಹಿಂಸೆ ನೀಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ನೋಯ್ಡಾದಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಶುಭಂ ಸಕ್ಸೇನಾನನ್ನು ಬಂಧಿಸಲಾಗಿದೆ. ಸೆಕ್ಟರ್ -49 ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಅನುಜ್ ಕುಮಾರ್ ಸೈನಿ ಇದನ್ನು ದೃಢಪಡಿಸಿದ್ದಾರೆ.

ಬೆರಳುಗಳ ನಡುವೆ ಪೆನ್​ ಒತ್ತಿ, ಬಾಯೊಳಗೆ ಮೆಣಸಿನಕಾಯಿ ತುರುಕಿ ದಿವ್ಯಾಂಗ ವಿದ್ಯಾರ್ಥಿಗೆ ಶಿಕ್ಷಕನ ಚಿತ್ರಹಿಂಸೆ
ಸಾಂದರ್ಭಿಕ ಚಿತ್ರ
ನಯನಾ ರಾಜೀವ್
|

Updated on:May 14, 2025 | 3:17 PM

Share

ಉತ್ತರ ಪ್ರದೇಶ, ಮೇ 14: ದಿವ್ಯಾಂಗ ವಿದ್ಯಾರ್ಥಿ(Student)ಗೆ ಶಿಕ್ಷಕನೊಬ್ಬ ನಾನಾ ರೀತಿಯಲ್ಲಿ ಚಿತ್ರಹಿಂಸೆ ನೀಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ನೋಯ್ಡಾದಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಶುಭಂ ಸಕ್ಸೇನಾನನ್ನು ಬಂಧಿಸಲಾಗಿದೆ. ಸೆಕ್ಟರ್ -49 ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಅನುಜ್ ಕುಮಾರ್ ಸೈನಿ ಇದನ್ನು ದೃಢಪಡಿಸಿದ್ದಾರೆ.

ಎಸ್​ಎಚ್​ಒ ಹೇಳಿದ್ದೇನು? ನಿವಾಸಿಯೊಬ್ಬರು ತಮ್ಮ ಮಗನಿಗೆ ಮಾತು ಬರುತ್ತಿರಲಿಲ್ಲ ಶಾಲೆ, ಕಾಲೇಜುಗಳಿಗೆ ಕಳುಹಿಸಿ ಶಿಕ್ಷಣಕೊಡಿಸಲು ಸಾಧ್ಯವಿಲ್ಲವೆಂದು ಮನೆಯಲ್ಲಿಯೇ ಶಿಕ್ಷಕರೊಬ್ಬರನ್ನು ನೇಮಿಸಲಾಗಿತ್ತು. ಶಹಜಹಾನ್‌ಪುರದ ನಿವಾಸಿ ಶುಭಂ ಸಕ್ಸೇನಾ ಅವರನ್ನು ಅವರ ಮನೆಯಲ್ಲಿ ಶಿಕ್ಷಕರಾಗಿ ಇರಿಸಲಾಗಿತ್ತು. ಕಳೆದ ಎರಡು ವರ್ಷಗಳಿಂದ, ಶುಭಂ ಶಿಕ್ಷಣವನ್ನು ನೀಡುತ್ತಿದ್ದರು. ಏಪ್ರಿಲ್ 24 ರಂದು, ಶುಭಂ ತನ್ನ ಮಗನಿಗೆ ಹೇಗೆ ಪಾಠ ಮಾಡುತ್ತಿದ್ದಾನೆಂದು ನೋಡಲು ಕೋಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಶುಭಂ ತನ್ನ ಮಗನನ್ನು ಹೊಡೆಯುತ್ತಿರುವುದನ್ನು ನೋಡಿ ಬೆರಗಾಗಿದ್ದಾರೆ.

ಶಿಕ್ಷಕ ಶುಭಂ ವಿದ್ಯಾರ್ಥಿಯ ಬೆರಳುಗಳ ಮಧ್ಯೆ ಪೆನ್ ಇಟ್ಟು ಒತ್ತುತ್ತಿದ್ದ, ಬಾಯಿ ತೆರೆಯುವಂತೆ ಒತ್ತಾಯಿಸಿ ಹೊಡೆಯುತ್ತಿದ್ದ, ಮೆಣಸಿನಕಾಯಿ ತಿನ್ನಿಸುತ್ತಿದ್ದ. ಅವನು ಬಲವಂತವಾಗಿ ವಿದ್ಯಾರ್ಥಿಯ ಬಾಯಿಗೆ ಮೆಣಸಿನಕಾಯಿಗಳನ್ನು ತುಂಬುತ್ತಿದ್ದನು. ಅವನು ಅವನಿಗೆ ಕೆಲವು ಔಷಧಿಗಳನ್ನು ಸಹ ನೀಡುತ್ತಿದ್ದ ಎನ್ನುವುದು ತಿಳಿದುಬಂದಿದೆ.

ಮತ್ತಷ್ಟು ಓದಿ: ಮದುವೆಯ ಮೆರವಣಿಗೆಯಲ್ಲಿ ಪ್ರಾಣಿ ಹಿಂಸೆ, ಕುದುರೆಗೆ ಬಲವಂತವಾಗಿ ಸಿಗರೇಟ್ ಸೇದಿಸಿದ ಯುವಕರು

ಸಂತ್ರಸ್ತ ವಿದ್ಯಾರ್ಥಿಯ ತಂದೆ ಸೋಮವಾರ ಪೊಲೀಸರಿಗೆ ಮನವಿ ಮಾಡಿದರು – ಸರ್, ಕಳೆದ ಎರಡು ವರ್ಷಗಳಿಂದ ಅವನು ನನ್ನ ಮಗನಿಗೆ ಹೀಗೆ ಮಾಡುತ್ತಿದ್ದಾನೆ ಎಂದು ನನಗೆ ಅನುಮಾನವಿದೆ. ದಯವಿಟ್ಟು ಅವನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾರೆ.

ಮಾರ್ಚ್ 8 ರಂದು ಕೂಡ ಇದೇ ರೀತಿಯ ಘಟನೆ  ನಡೆದಿತ್ತು ನೋಯ್ಡಾದಲ್ಲಿದಿವ್ಯಾಂಗ ವ್ಯಕ್ತಿಯ ಮೇಲೆ ಹಲ್ಲೆ ನಡೆದ ಎರಡನೇ ಘಟನೆ ಇದಾಗಿದೆ. ಮಾರ್ಚ್ 29 ರಂದು, 10 ವರ್ಷದ ವಿದ್ಯಾರ್ಥಿಯ ಮೇಲೆ ಹಲ್ಲೆ ಮತ್ತು ಗಾಯಗೊಳಿಸಿದ ಆರೋಪದ ಮೇಲೆ ಪೊಲೀಸರು ಖಾಸಗಿ ವಿಶೇಷ ಮಕ್ಕಳ ಶಾಲೆಯ ಪ್ರಾಂಶುಪಾಲರು ಮತ್ತು ಶಿಕ್ಷಕ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಅನಧಿಕೃತ ಶಾಲೆ ಎಂದು ಕಂಡುಬಂದ ನಂತರ ಶಾಲೆಯನ್ನು ಸೀಲ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರೊಂದಿಗೆ ಆರೋಪಿಗಳ ವಿರುದ್ಧ ಕ್ರಮವನ್ನೂ ಕೈಗೊಳ್ಳಲಾಯಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:16 pm, Wed, 14 May 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ