ಅಂದು ಬಾಕ್ಸಿಂಗ್ ಚಾಂಪಿಯನ್, ಇಂದು ರಾಮ್ ಚರಣ್ಗೆ ಬೌನ್ಸರ್; ಯಾರಿದು?
ಲಂಡನ್ನಲ್ಲಿ ರಾಮ್ ಚರಣ್ ಅವರು ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಅಲ್ಲಿನ ಕೆಲವು ಫೋಟೋಗಳು ವೈರಲ್ ಆಗಿವೆ. ಈ ಕಾರ್ಯಕ್ರಮಕ್ಕೆ ಮಾಜಿ ಬಾಕ್ಸಿಂಗ್ ಚಾಂಪಿಯನ್ ಜೂಲಿಯಸ್ ಫ್ರಾನ್ಸಿಸ್ ಅವರು ಬೌನ್ಸರ್ ಆಗಿ ಬಂದಿದ್ದಾರೆ. ರಾಮ್ ಚರಣ್ ಮತ್ತು ಜೂಲಿಯಸ್ ಫ್ರಾನ್ಸಿಸ್ ಅವರ ಭೇಟಿಯ ಬಗ್ಗೆ ಇಲ್ಲಿದೆ ವಿವರ..

ಟಾಲಿವುಡ್ ನಟ ರಾಮ್ ಚರಣ್ (Ram Charan) ಅವರಿಗೆ ಭಾರತದಲ್ಲಿ ಮಾತ್ರವಲ್ಲದೇ ಬೇರೆ ದೇಶಗಳಲ್ಲಿ ಕೂಡ ಅಭಿಮಾನಿಗಳು ಇದ್ದಾರೆ. ಅವರ ಸಿನಿಮಾಗಳು ವಿದೇಶದಲ್ಲೂ ಪ್ರದರ್ಶನ ಕಾಣುತ್ತವೆ. ‘ಆರ್ಆರ್ಆರ್’ ಸಿನಿಮಾ ಆಸ್ಕರ್ ವೇದಿಕೆಯಲ್ಲಿ ಮಿಂಚಿದ ಬಳಿಕ ರಾಮ್ ಚರಣ್ ಖ್ಯಾತಿ ಇನ್ನಷ್ಟು ಜಾಸ್ತಿ ಆಯಿತು. ಈಗ ಅವರ ಮುಡಿಗೆ ಇನ್ನೊಂದು ಗರಿ ಸೇರ್ಪಡೆ ಆಗಿದೆ. ಮೇಡಂ ಟುಸಾಡ್ಸ್ ಮ್ಯೂಸಿಯಂನಲ್ಲಿ ರಾಮ್ ಚರಣ್ ಅವರ ಮೇಣದ ಪ್ರತಿಮೆ (Ram Charan Wax Statue) ನಿರ್ಮಾಣ ಆಗಿದೆ. ಇದರ ಅನಾವರಣದ ಸಲುವಾಗಿ ಅವರು ಲಂಡನ್ಗೆ ತೆರಳಿದ್ದಾರೆ. ಅಲ್ಲಿ ಖ್ಯಾತ ಬಾಕ್ಸರ್ ಜೂಲಿಯಸ್ ಫ್ರಾನ್ಸಿಸ್ (Julius Francis) ಅವರು ರಾಮ್ ಚರಣ್ಗೆ ಬೌನ್ಸರ್ ಆಗಿ ಕೆಲಸ ಮಾಡಿದ್ದಾರೆ.
ಮೇಡಂ ಟುಸಾಡ್ಸ್ ಮ್ಯೂಸಿಯಂನಲ್ಲಿ ರಾಮ್ ಚರಣ್ ಅವರ ಪ್ರತಿಮೆ ಆನಾವರಣವಾದ ದಿನ ಅಭಿಮಾನಿಗಳನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಮ್ಯೂಸಿಯಂ ಎದುರು ನೆರೆದಿದ್ದ ಅಭಿಮಾನಿಗಳು ಜೋರಾಗಿ ಗದ್ದಲ ಮಾಡಿದ್ದರಿಂದ ಅಲ್ಲಿ ಯಾರನ್ನೂ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಹಾಗಂತ ಅಭಿಮಾನಿಗಳಿಗೆ ರಾಮ್ ಚರಣ್ ನಿರಾಸೆ ಮಾಡಿಲ್ಲ. ಪ್ರತ್ಯೇಕವಾಗಿ ಸಮಯ ತೆಗೆದುಕೊಂಡು ಈಗ ಅಭಿಮಾನಿಗಳನ್ನು ಅವರು ಭೇಟಿ ಮಾಡಿದ್ದಾರೆ.
ರಾಮ್ ಚರಣ್ ಅವರ ಫ್ಯಾನ್ಸ್ ಮೀಟ್ ಕಾರ್ಯಕ್ರಮದಲ್ಲಿ ಮಾಜಿ ಬಾಕ್ಸಿಂಗ್ ಚಾಂಪಿಯನ್ ಜೂಲಿಯಸ್ ಫ್ರಾನ್ಸಿಸ್ ಅವರು ಬೌನ್ಸರ್ ಆಗಿದ್ದಾರೆ. ಮೈಕ್ ಟೈಸನ್ ಅವರಂತಹ ಘಟಾನುಘಟಿ ಬಾಕ್ಸರ್ ಎದುರು ಫೈಟ್ ಮಾಡಿದ ಖ್ಯಾತಿ ಜೂಲಿಯಸ್ ಫ್ರಾನ್ಸಿಸ್ ಅವರಿಗೆ ಇದೆ. ಹಲವು ಬಾರಿ ಅವರು ಚಾಂಪಿಯನ್ ಆಗಿದ್ದರು. ಈಗ ಅವರು ರಾಮ್ ಚರಣ್ ಅವರನ್ನು ಭೇಟಿ ಮಾಡಿ ಖುಷಿಪಟ್ಟಿದ್ದಾರೆ.
At @AlwaysRamCharan’s London fan meet, ex-boxing champ Julius Francis, who was present as one of the bouncers, asked Charan to honour him by placing a boxing belt on his shoulder.
Julius is a 5-time British Heavyweight Champion and 4-time Commonwealth Champion.#RamCharan𓃵… pic.twitter.com/KN1qzCu782
— BA Raju’s Team (@baraju_SuperHit) May 13, 2025
ಜೂಲಿಯಸ್ ಫ್ರಾನ್ಸಿಸ್ ಅವರು ತಮಗೆ ಸಿಕ್ಕ ಬಾಕ್ಸಿಂಗ್ ಬೆಲ್ಟ್ ಅನ್ನು ರಾಮ್ ಚರಣ್ ಅವರಿಗೆ ತೋರಿಸಿ ಖುಷಿಪಟ್ಟಿದ್ದಾರೆ. 1993ರಿಂದ 2006ರ ತನಕ ಜೂಲಿಯಸ್ ಫ್ರಾನ್ಸಿಸ್ ಅವರು ಬಾಕ್ಸಿಂಗ್ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದರು. 4 ಬಾರಿ ಬ್ರಿಟಿಷ್ ಹೆವೆ ವೇಯ್ಟ್ ಚಾಂಪಿಯನ್ ಆಗಿದ್ದರು. ನಾಲ್ಕು ಬಾರಿ ಕಾಮನ್ವೆಲ್ತ್ ಟೈಟಲ್ ಪಡೆದಿದ್ದರು.
ಇದನ್ನೂ ಓದಿ: ಇದರಲ್ಲಿ ನಿಜವಾದ ರಾಮ್ ಚರಣ್ ಯಾರು ಅಂತ ಗುರುತಿಸಲು ಸಾಧ್ಯವೇ?
ರಾಮ್ ಚರಣ್ ಅವರನ್ನು ಲಂಡನ್ನಲ್ಲಿ ನೋಡಿದ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ‘ಪೆದ್ದಿ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿರುವ ಅವರು ಬಿಡುವು ಪಡೆದುಕೊಂಡು ಲಂಡನ್ಗೆ ತೆರಳಿದ್ದಾರೆ. ‘ಪೆದ್ದಿ’ ಚಿತ್ರಕ್ಕೆ ಶೇಕಡ 30ರಷ್ಟು ಚಿತ್ರೀಕರಣ ಮಾಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








