AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನಕ್ಕೆ ಟರ್ಕಿ ಬೆಂಬಲ: ಬಿಸಿ ಮುಟ್ಟಿಸಲು ನಿರ್ಧರಿಸಿದ ಭಾರತೀಯ ಚಿತ್ರರಂಗ

ಪಾಕಿಸ್ತಾನಕ್ಕೆ ಟರ್ಕಿ ಬೆಂಬಲ ನೀಡಿರುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಟರ್ಕಿಗೆ ಬುದ್ಧಿ ಕಲಿಸಲು ಭಾರತ ಮುಂದಾಗಿದೆ. ಟರ್ಕಿಯಲ್ಲಿ ಭಾರತದ ಯಾವುದೇ ಸಿನಿಮಾದ ಶೂಟಿಂಗ್ ಮಾಡದಿರಲು ನಿರ್ಧರಿಸಲಾಗಿದೆ. ಈ ಬಗ್ಗೆ ನಿರ್ಮಾಪಕರಿಗೆ ‘ಫೆಡರೇಷನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯಿಸ್’ ಪತ್ರ ಬರೆದಿದೆ.

ಪಾಕಿಸ್ತಾನಕ್ಕೆ ಟರ್ಕಿ ಬೆಂಬಲ: ಬಿಸಿ ಮುಟ್ಟಿಸಲು ನಿರ್ಧರಿಸಿದ ಭಾರತೀಯ ಚಿತ್ರರಂಗ
India, Turkey
ಮದನ್​ ಕುಮಾರ್​
|

Updated on: May 14, 2025 | 7:01 PM

Share

ಭಾರತ ಮತ್ತು ಪಾಕಿಸ್ತಾನದ (Pakistan) ನಡುವೆ ಸಂಘರ್ಷ ಏರ್ಪಟ್ಟಿದೆ. ಸದ್ಯಕ್ಕೆ ಕದನ ವಿರಾಮ ಘೋಷಿಸಲಾಗಿದ್ದರೂ ಕೂಡ ಪರಿಸ್ಥಿತಿ ಶಮನ ಆಗಿಲ್ಲ. ಭಯೋತ್ಪಾದನೆಗೆ ಪಾಕ್ ಬೆಂಬಲ ನೀಡುತ್ತಿದೆ ಎಂಬುದು ಈಗ ಗೌಪ್ಯವಾಗಿ ಉಳಿದಿಲ್ಲ. ಪಾಪಿ ಪಾಕಿಸ್ತಾನಕ್ಕೆ ಕೆಲವು ದೇಶಗಳು ಬೆಂಬಲ ಸೂಚಿಸುತ್ತಿವೆ. ಟರ್ಕಿ (Turkey) ಮತ್ತು ಅಜರ್​ವೈಜಾನ್ ದೇಶಗಳು ಕೂಡ ಪಾಕಿಸ್ತಾನದ ಜೊತೆ ನಿಂತಿವೆ. ಈ ದೇಶಗಳಿಗೆ ಪಾಠ ಕಲಿಸಲು ಭಾರತ ನಿರ್ಧರಿಸಿದೆ. ಟರ್ಕಿ ಮತ್ತು ಅಜರ್​ಬೈಜಾನ್​ಗೆ ಬ್ಯಾನ್ ಬಿಸಿ ಮುಟ್ಟಿಸಲು ಭಾರತೀಯ ಚಿತ್ರರಂಗ ಕೂಡ ತೀರ್ಮಾನಿಸಿದೆ.

ಟರ್ಕಿ ಮತ್ತು ಅಜರ್​ಬೈಜಾನ್​ಗೆ ದೇಶಗಳಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳಿವೆ. ಆದರೆ ಪಾಕಿಸ್ತಾನಕ್ಕೆ ಈ ದೇಶಗಳು ಬೆಂಬಲ ನೀಡಿದ್ದರಿಂದ ಅಲ್ಲಿಗೆ ಪ್ರವಾಸ ಮಾಡುವುದನ್ನು ಭಾರತೀಯರು ನಿಲ್ಲಿಸಿದ್ದಾರೆ. ಈಗಾಗಲೇ ಈ ದೇಶಗಳಿಗೆ ಪ್ರವಾಸಕ್ಕೆ ತೆರಳಬೇಕು ಎಂದು ನಿರ್ಧರಿಸಿದ್ದ ಲಕ್ಷಾಂತರ ಜನರು ಟ್ರಿಪ್ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಭಾರತೀಯ ಚಿತ್ರರಂಗದವರು ಕೂಡ ಕ್ರಮಕ್ಕೆ ಮುಂದಾಗಿದ್ದಾರೆ.

‘ಫೆಡರೇಷನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯಿಸ್’ (FWICE) ಕಡೆಯಿಂದ ಭಾರತೀಯ ಚಿತ್ರರಂಗದ ನಿರ್ಮಾಪಕರಿಗೆ ಪತ್ರ ಬರೆಯಲಾಗಿದೆ. ಪಾಕಿಸ್ತಾನಕ್ಕೆ ಬೆಂಬಲ ನೀಡಿರುವ ಟರ್ಕಿ ಜೊತೆ ಚಿತ್ರರಂಗದವರು ಯಾವುದೇ ನಂಟು ಇಟ್ಟುಕೊಳ್ಳುವುದು ಬೇಡ. ಟರ್ಕಿಯಲ್ಲಿ ಸಿನಿಮಾದ ಶೂಟಿಂಗ್ ಮಾಡುವುದು ಬೇಡ ಎಂದು ನಿರ್ಮಾಪಕರನ್ನು ಒತ್ತಾಯಿಸಲಾಗಿದೆ.

ಇದನ್ನೂ ಓದಿ
Image
ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದ ಮೂವರು ಉಗ್ರರ ರೇಖಾಚಿತ್ರ ಬಿಡುಗಡೆ
Image
ಪಾಕ್ ಸೇನೆಗೆ ನಡುಕ ಶುರು: ಉಪಗ್ರಹ ಚಿತ್ರಗಳಿಂದ ಬಹಿರಂಗವಾಯ್ತು ರಹಸ್ಯ
Image
ಮೆಹಂದಿ ಮಾಸುವ ಮುನ್ನವೇ ನವವಿವಾಹಿತೆಯ ಕುಂಕುಮ ಅಳಿಸಿದ ಉಗ್ರರು
Image
ಪಹಲ್ಗಾಮ್ ದಾಳಿ: ಅಜಿತ್ ದೋವಲ್, ಜೈಶಂಕರ್ ಭೇಟಿಯಾದ ಪ್ರಧಾನಿ ಮೋದಿ

‘ಸಿನಿಮಾಗಿಂತಲೂ ದೇಶವೇ ಮುಖ್ಯ. ಟರ್ಕಿಯ ಜೊತೆ ಚಿತ್ರರಂಗ ನಂಟು ಇಟ್ಟುಕೊಂಡರೆ ಇದರಿಂದ ಭಾರತದ ಭದ್ರತೆ ತೊಂದರೆ ಆಗುತ್ತದೆ. ಈ ಸಂದರ್ಭದಲ್ಲಿ ಟರ್ಕಿಯನ್ನು ಬಹಿಷ್ಕರಿಸಬೇಕು ಎಂದು ಎಲ್ಲ ನಿರ್ಮಾಪಕರಿಗೆ, ನಿರ್ದೇಶಕರಿಗೆ ಹಾಗೂ ಕಲಾವಿದರಿಗೆ ಒತ್ತಾಯಿಸುತ್ತೇವೆ’ ಎಂದು FWICE ಪತ್ರ ಬರೆದಿದೆ. ಈಗಾಗಲೇ ಪಾಕ್ ಕಲಾವಿದರನ್ನು ಹಾಗೂ ತಂತ್ರಜ್ಞರನ್ನು ಭಾರತೀಯ ಚಿತ್ರರಂಗದಿಂದ ಹೊರಗೆ ಇಡಲಾಗಿದೆ.

ಇದನ್ನೂ ಓದಿ: ‘ಆಪರೇಷನ್ ಸಿಂದೂರ್’ ಖಂಡಿಸಿದ ಪಾಕ್ ನಟ ಫವಾದ್ ಖಾನ್; ಭಾರತದಲ್ಲಿ ಛೀಮಾರಿ

ಪಾಕಿಸ್ತಾನದಿಂದ ನಿರ್ಮಾಣವಾದ ಯಾವುದೇ ಮನರಂಜನಾ ಕಂಟೆಂಟ್​ಗಳನ್ನು ಭಾರತದಲ್ಲಿ ಪ್ರಸಾರ ಮಾಡಬಾರದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈ ಮೊದಲೇ ಆದೇಶ ಹೊರಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.