ಇದರಲ್ಲಿ ನಿಜವಾದ ರಾಮ್ ಚರಣ್ ಯಾರು ಅಂತ ಗುರುತಿಸಲು ಸಾಧ್ಯವೇ?
ಲಂಡನ್ನ ಮೇಡಂ ಟುಸಾಡ್ಸ್ ಮ್ಯೂಸಿಯಂನಲ್ಲಿ ನಟ ರಾಮ್ ಚರಣ್ ಅವರ ಮೇಣದ ಪ್ರತಿಮೆ ಅನಾವರಣ ಆಗಿದೆ. ಕುಟುಂಬ ಸಮೇತರಾಗಿ ಲಂಡನ್ಗೆ ತೆರಳಿ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ರಾಮ್ ಚರಣ್ ಭಾಗಿ ಆಗಿದ್ದಾರೆ. ಕೆಲವು ದಿನಗಳ ಬಳಿಕ ಈ ಪ್ರತಿಮೆಯನ್ನು ಸಿಂಗಾಪುರದ ಮ್ಯೂಸಿಯಂಗೆ ಸ್ಥಳಾಂತರಿಸಲಾಗುತ್ತಿದೆ.

ನಟ ರಾಮ್ ಚರಣ್ (Ram Charan) ಅವರು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರಿಗೆ ಭಾರತದಲ್ಲಿ ಮಾತ್ರವಲ್ಲದೇ ಬೇರೆ ದೇಶಗಳಲ್ಲಿ ಕೂಡ ಅಭಿಮಾನಿಗಳು ಇದ್ದಾರೆ. ‘ಆರ್ಆರ್ಆರ್’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ರಾಮ್ ಚರಣ್ ಖ್ಯಾತಿ ಇನ್ನಷ್ಟು ಹೆಚ್ಚಾಯಿತು. ಈಗ ಅವರಿಗೆ ಇನ್ನೊಂದು ಗೌರವ ಸಿಕ್ಕಿದೆ. ಪ್ರತಿಷ್ಠಿತ ಮೇಡಂ ಟುಸಾಡ್ಸ್ (Madame Tussauds) ಮೂಸಿಯಂನಲ್ಲಿ ರಾಮ್ ಚರಣ್ ಅವರ ಮೇಣದ ಪ್ರತಿಮೆಯನ್ನು (Ram Charan Wax Statue) ಅನಾವರಣ ಮಾಡಲಾಗಿದೆ. ರಾಮ್ ಚರಣ್ ಅವರು ಕುಟುಂಬದವರ ಜೊತೆ ಲಂಡನ್ಗೆ ತೆರಳಿ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ವಿಶೇಷ ಏನೆಂದರೆ, ರಾಮ್ ಚರಣ್ ಅವರ ಪ್ರತಿಮೆಯ ಜೊತೆ ಅವರ ಮುದ್ದಿನ ಶ್ವಾನ ರೈಮ್ ಪ್ರತಿಮೆ ಕೂಡ ನಿರ್ಮಿಸಲಾಗಿದೆ. ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಈ ಶ್ವಾನವನ್ನು ಕೂಡ ಕರೆದುಕೊಂಡು ಹೋಗಲಾಗಿದೆ. ತಂದೆ ಮೆಗಾಸ್ಟಾರ್ ಚಿರಂಜೀವಿ, ತಾಯಿ ಸುರೇಖ, ಪತ್ನಿ ಉಪಾಸನಾ ಹಾಗೂ ರೈಮ್ ಜೊತೆ ಕುಳಿತು ರಾಮ್ ಚರಣ್ ಅವರು ಪೋಸ್ ನೀಡಿದ್ದಾರೆ.
ಈ ಸಂದರ್ಭದ ಫೋಟೋ ವೈರಲ್ ಆಗಿದೆ. ಈ ಮೇಣದ ಪ್ರತಿಮೆ ಎಷ್ಟು ನಿಖರವಾಗಿದೆ ಎಂದರೆ ಫೋಟೋದಲ್ಲಿ ಅಸಲಿ ರಾಮ್ ಚರಣ್ ಯಾರು ಹಾಗೂ ಮೇಣದ ಪ್ರತಿಮೆ ಯಾವುದು ಎಂಬುದನ್ನು ಗುರುತಿಸುವುದು ಕಷ್ಟವಾಗುವಂತಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಫೋಟೋ ಕಂಡು ಅಭಿಮಾನಿಗಳು ಕಮೆಂಟ್ ಮಾಡಿ ಅಭಿನಂದನೆ ತಿಳಿಸುತ್ತಿದ್ದಾರೆ.
View this post on Instagram
ರಾಣಿ ಎಲಿಜಬೆತ್ ಬಳಿಕ ಸಾಕುಪ್ರಾಣಿಯ ಜೊತೆಗೆ ತಮ್ಮ ಮೇಣದ ಪ್ರತಿಮೆ ಹೊಂದಿರುವ 2ನೇ ವ್ಯಕ್ತಿ ಮತ್ತು ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ರಾಮ್ ಚರಣ್ ಅವರು ಪಾತ್ರರಾಗಿದ್ದಾರೆ. ಸದ್ಯ ಈ ಮೇಣದ ಪ್ರತಿಮೆಯನ್ನು ಲಂಡನ್‌ನಲ್ಲಿ ಅನಾವರಣ ಮಾಡಲಾಗಿದೆ. ಮೇ 19ರ ತನಕ ಲಂಡನ್‌ನಲ್ಲಿ ಇದನ್ನು ಸಾರ್ವಜನಿಕರ ವೀಕ್ಷಣೆಗೆ ಇಡಲಾಗುತ್ತದೆ. ಬಳಿಕ ಸಿಂಗಾಪುರದ ಮೇಡಂ ಟುಸಾಡ್ಸ್ ಮ್ಯೂಸಿಯಂಗೆ ಸ್ಥಳಾಂತರಿಸಲಾಗುತ್ತದೆ.
ಇದನ್ನೂ ಓದಿ: ರಾಮ್ ಚರಣ್ ಫ್ಯಾನ್ಸ್ ವರ್ತನೆಗೆ ನೆಟ್ಟಿಗರ ಖಂಡನೆ; ವಿದೇಶದಲ್ಲಿ ಹೋಯ್ತು ಮಾನ
ರಾಮ್ ಚರಣ್ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇಡಿಕೆ ಇದೆ. ಈಗ ಅವರು ‘ಪೆದ್ದಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನು, ಲಂಡನ್‌ನಲ್ಲಿ ‘ಆರ್ಆರ್ಆರ್’ ಸಿನಿಮಾದ ವಿಶೇಷ ಪ್ರದರ್ಶನ ಮಾಡಲಾಗಿದೆ. ಇದರಲ್ಲಿ ಜೂನಿಯರ್ ಎನ್ಟಿಆರ್, ರಾಜಮೌಳಿ ಕೂಡ ಭಾಗಿಯಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








