75ನೇ ವರ್ಷದ ಸ್ವಾತಂತ್ರ್ಯದ ಸಂದರ್ಭದಲ್ಲಿ ದೇಶವನ್ನು ನಂಬರ್ 1 ಮಾಡಲು ನಾವು ಪ್ರತಿಜ್ಞೆ ಮಾಡೋಣ: ಕೇಜ್ರಿವಾಲ್

ಬ್ರಿಟಿಷರನ್ನು ಭಾರತದಿಂದ ಹೊರಹಾಕಲು ಎಲ್ಲಾ ಭಾರತೀಯರು ಒಟ್ಟಾಗಿ ಹೋರಾಡಿದರು ಮತ್ತು ಸ್ವಾತಂತ್ರ್ಯವನ್ನು ಪಡೆದರು. ಹಾಗೆಯೇ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ನಾವು ಭಾರತವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಬಹುದು

75ನೇ ವರ್ಷದ ಸ್ವಾತಂತ್ರ್ಯದ ಸಂದರ್ಭದಲ್ಲಿ ದೇಶವನ್ನು ನಂಬರ್ 1 ಮಾಡಲು ನಾವು ಪ್ರತಿಜ್ಞೆ ಮಾಡೋಣ: ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್
Edited By:

Updated on: Aug 14, 2022 | 8:27 PM

ದೆಹಲಿ:ದೆಹಲಿಯಲ್ಲಿ ಹರ್ ಹಾಥ್  ತಿರಂಗಾ (Har Hath Tiranga) ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal), ಭಾರತ ಸ್ವಾತಂತ್ರ್ಯ ಪಡೆದು 75 ವರ್ಷಗಳನ್ನು ಪೂರೈಸಿದೆ. ಆದರೆ ನಮ್ಮ ದೇಶವು ಇನ್ನೂ ಭಾರತದ ನಂತರ ಸ್ವಾತಂತ್ರ್ಯ ಪಡೆದ ದೇಶಗಳು ಸೇರಿದಂತೆ ಹಲವಾರು ದೇಶಗಳ ಹಿಂದೆ ಇದೆ. ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ 15 ವರ್ಷಗಳ ನಂತರ ಸಿಂಗಾಪುರಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಎರಡನೇ ಮಹಾಯುದ್ಧದ ಸಮಯದಲ್ಲಿ ಸಂಪೂರ್ಣವಾಗಿ ನಾಶವಾದ ಜಪಾನ್, ಜರ್ಮನಿಗಳು ಹೆಚ್ಚಿನ ಅಭಿವೃದ್ಧಿ ಹೊಂದಿದ ದೇಶಗಳ ಪಟ್ಟಿಯಲ್ಲಿವೆ. ಭಾರತ ಏಕೆ ಇಲ್ಲ? 75 ವರ್ಷಗಳ ಸ್ವಾತಂತ್ರ್ಯದ ಸಂದರ್ಭದಲ್ಲಿ ಭಾರತವನ್ನು ನಂಬರ್ 1 ಮಾಡಲು ನಾವು ಪ್ರತಿಜ್ಞೆ ತೆಗೆದುಕೊಳ್ಳಬೇಕಿದೆ. ಬ್ರಿಟಿಷರನ್ನು ಭಾರತದಿಂದ ಹೊರಹಾಕಲು ಎಲ್ಲಾ ಭಾರತೀಯರು ಒಟ್ಟಾಗಿ ಹೋರಾಡಿದರು ಮತ್ತು ಸ್ವಾತಂತ್ರ್ಯವನ್ನು ಪಡೆದರು. ಹಾಗೆಯೇ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ನಾವು ಭಾರತವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಬಹುದು ಎಂದು ಹೇಳಿದ್ದಾರೆ. ಜಗತ್ತಿನಾದ್ಯಂತ ಜನರು ನನ್ನನ್ನು ಕೇಳುತ್ತಾರೆ, ಭಾರತವು ಜಗತ್ತನ್ನು ಸೋಲಿಸಬಹುದೇ? ಎಂದು.  ನಾನು ‘ಹೌದು, ನಮಗೇಕೆ ಸಾಧ್ಯವಿಲ್ಲ’ ಎಂದು ಹೇಳುತ್ತೇನೆ ಎಂದಿದ್ದಾರೆ  ಕೇಜ್ರಿವಾಲ್.

“ನಾವು ನೋಡಿದರೆ, ಇಡೀ ಜಗತ್ತಿನಲ್ಲಿ, ಭಾರತೀಯರು ಅತ್ಯಂತ ಬುದ್ಧಿವಂತರು, ಕಷ್ಟಪಟ್ಟು ದುಡಿಯುವ ಜನರು. ನಮ್ಮಲ್ಲಿ ಅತ್ಯುತ್ತಮ ಎಂಜಿನಿಯರ್‌ಗಳು, ವಿಜ್ಞಾನಿಗಳು, ಕ್ರೀಡಾಪಟುಗಳು ಮತ್ತು ಅತ್ಯುತ್ತಮ ಜನರು ಇದ್ದಾರೆ. ಹಮ್ ಫಿರ್ ಪಿಚೆ ಕ್ಯೂ ರೆಹ್ ಗಯೇ? ದೇವರು ನಮಗೆ ಎಲ್ಲವನ್ನೂ ಕೊಟ್ಟಿದ್ದಾನೆ. ದೇವರು ಭೂಮಿಯನ್ನು ಸೃಷ್ಟಿಸಿದಾಗ, ಅವರು ಭಾರತವನ್ನು ಅತ್ಯಂತ ಸುಂದರವಾಗಿಸಿದರು. ಪ್ರಪಂಚದಾದ್ಯಂತದ ಜನರು ನನ್ನನ್ನು ಕೇಳುತ್ತಾರೆ, ಭಾರತವು ಜಗತ್ತನ್ನು ಸೋಲಿಸಬಹುದೇ? ನಾನು ಹೌದು ಎಂದು ಹೇಳುತ್ತೇನೆ ಎಂದಿದ್ದಾರೆ  ದೆಹಲಿ ಸಿಎಂ.


ಯಮುನಾ ನದಿ ನೀರಿನ ಮಟ್ಟ ಏರಿಕೆ; ನದಿಯಿಂದ ದೂರವಿರಲು ಕೇಜ್ರಿವಾಲ್ ಮನವಿ

ಉತ್ತರ ದೆಹಲಿಯ ಯಮುನಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚುತ್ತಿದ್ದು  ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವವರಿಗೆ ನದಿಯ ದಡದಿಂದ ದೂರವಿರಲು ಅರವಿಂದ ಕೇಜ್ರಿವಾಲ್ ಭಾನುವಾ  ಮನವಿ ಮಾಡಿದ್ದಾರೆ. ಶನಿವಾರ, ನೀರಿನ ಮಟ್ಟವು ಇಡೀ ದಿನ 205.33 ಮೀಟರ್‌ಗಳ ‘ಅಪಾಯ’ ದ ಮಟ್ಟದ  ಮೇಲಿತ್ತು.

”ದೆಹಲಿಯಲ್ಲಿ ಯಮುನೆಯ ನೀರಿನ ಮಟ್ಟ ಹೆಚ್ಚಾಗಿದೆ. ಎಲ್ಲಾ ಜನರು ದೂರವಿರಿ ಮತ್ತು ನದಿಯ ದಡಕ್ಕೆ ಹೋಗುವುದನ್ನು ತಪ್ಪಿಸುವಂತೆ ನಾನು ಮನವಿ ಮಾಡುತ್ತೇನೆ. ಯಮುನಾ ನದಿಯ ಬಳಿ ವಾಸಿಸುವ ಜನರಿಗೆ ನಾವು ಸಾಕಷ್ಟು ವ್ಯವಸ್ಥೆ ಮಾಡಿದ್ದೇವೆ. ಸರ್ಕಾರ ಮತ್ತು ಆಡಳಿತದೊಂದಿಗೆ ಸಹಕರಿಸಿ. ನಾವು ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ ಮತ್ತು ಯಾವುದೇ ಸಂದರ್ಭವನ್ನು ಎದುರಿಸಲು ಸಿದ್ಧರಿದ್ದೇವೆ ಎಂದು ಮುಖ್ಯಮಂತ್ರಿ ಭಾನುವಾರ ಟ್ಲೀಟ್  ಮಾಡಿದ್ದಾರೆ.

ಕಂದಾಯ ಇಲಾಖೆಯು ಶನಿವಾರ ಈ ಪ್ರದೇಶದಲ್ಲಿ ತೆರವು ಪ್ರಕ್ರಿಯೆಗಳನ್ನು ಪ್ರಾರಂಭಿಸಿತು. ನದಿಯ ಬಳಿ ತಾತ್ಕಾಲಿಕ ಮನೆಗಳಲ್ಲಿ ವಾಸಿಸುತ್ತಿದ್ದ 7,600 ಜನರನ್ನು ಪೂರ್ವ ದೆಹಲಿಯ ಎತ್ತರದ ಪ್ರದೇಶಕ್ಕೆ ಸ್ಥಳಾಂತರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ