Independence Day 2022: ಆಗಸ್ಟ್ 15ರಂದೇ ಭಾರತ ಸ್ವತಂತ್ರ್ಯದಿನವನ್ನು ಆಚರಿಸುವುದೇಕೆ? ಈ ದಿನದ ಇತಿಹಾಸ, ಮಹತ್ವವೇನು?

Independence Day History: ಭಾರತವನ್ನು ಬ್ರಿಟಿಷ್ ಆಳ್ವಿಕೆಯಿಂದ ಮುಕ್ತಗೊಳಿಸಲು ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ಎಲ್ಲಾ ತ್ಯಾಗಗಳನ್ನು ಈ ದಿನ ನಮಗೆ ನೆನಪಿಸುತ್ತದೆ. ಆಗಸ್ಟ್ 15 ರಾಷ್ಟ್ರೀಯ ರಜಾದಿನವಾಗಿದೆ ಮತ್ತು ಈ ದಿನವನ್ನು ಧ್ವಜಾರೋಹಣ, ಮೆರವಣಿಗೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತದೆ.

Independence Day 2022: ಆಗಸ್ಟ್ 15ರಂದೇ ಭಾರತ ಸ್ವತಂತ್ರ್ಯದಿನವನ್ನು ಆಚರಿಸುವುದೇಕೆ? ಈ ದಿನದ ಇತಿಹಾಸ, ಮಹತ್ವವೇನು?
ಭಾರತದ ತ್ರಿವರ್ಣ ಧ್ವಜ
Follow us
TV9 Web
| Updated By: ಆಯೇಷಾ ಬಾನು

Updated on: Aug 15, 2022 | 6:00 AM

ಆಗಸ್ಟ್ 15 ರಂದು(August 15th) ಭಾರತದಾದ್ಯಂತ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ(Azadi Ka Amrit Mahotsav) ಸಂಭ್ರಮ ಕಳೆಗಟ್ಟಿದೆ. ಈ ದಿನಕ್ಕಾಗಿ ಅದೆಷ್ಟೋ ಲಕ್ಷಾಂತರ ಹೋರಾಟಗಾರರು ಕೆಚ್ಚೆದೆಯಿಂದ ಬ್ರಿಟಿಷರ ವಿರುದ್ಧ ಹೋರಾಡಿ ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ. ಹೀಗಾಗಿ ಮಹಾತ್ಮ ಗಾಂಧಿ, ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್, ಚಂದ್ರಶೇಖರ್ ಆಜಾದ್, ಸರ್ದಾರ್ ವಲ್ಲಭಭಾಯಿ ಪಟೇಲ್, ಲಾಲಾ ಲಜಪತ್ ರಾಯ್, ರಾಮಪ್ರಸಾದ್ ಬಿಸ್ಮಿಲ್ ಸೇರಿದಂತೆ ನೂರಾರು ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸುತ್ತ ಈ ದಿನವನ್ನು ದೇಶಾದ್ಯಂತ ಹಬ್ಬದಂತೆ ಆಚರಿಸಲಾಗುತ್ತಿದೆ. ಆಗಸ್ಟ್15ನೇ ದಿನವನ್ನೇ ಯಾಕೆ ಸ್ವಾತಂತ್ರ್ಯ ದಿನ ಎಂದು ಆಚರಿಸಲಾಗುತ್ತದೆ? ಈ ದಿನದ ಹಿಂದಿನ ಇತಿಹಾಸವೇನು? ಮಹತ್ವವೇನು ಎಂಬ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ನಮ್ಮಲ್ಲಿರುವ ಸಾಂಬಾರು ಪದಾರ್ಥಗಳಿಗಾಗಿ ಅತಿಥಿಗಳಂತೆ ಬಂದ ಬ್ರಿಟಿಷರು ಸುಮಾರು 1765 ರಿಂದ 200 ವರ್ಷಗಳ ಕಾಲ ಭಾರತವನ್ನು ಆಳ್ವಿಕೆ ಮಾಡಿದ್ದಾರೆ. 1857ರಲ್ಲಿ ನಡೆದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರದಲ್ಲಿ ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ಶೈಲಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿ ಕೊನೆಗೆ 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯವನ್ನು ನೀಡುವುದಕ್ಕೆ ಬ್ರಿಟಿಷರು ಸಮ್ಮತಿಸಿದರು. ಆದ್ರೆ ಇದೇ ವೇಳೆಯಲ್ಲೇ ದೇಶವು ಇಬ್ಭಾಗವಾಯಿತು. ಪಾಕಿಸ್ತಾನವು ಆಗಸ್ಟ್ 14ರಂದು ಸ್ವಾತಂತ್ರ್ಯ ದಿನ ಆಚರಿಸಿದರೆ, ಭಾರತವು ಆಗಸ್ಟ್ 15ರಂದು ಸ್ವಾತಂತ್ರ್ಯ ದಿನವನ್ನು ಆಚರಿಸುತ್ತದೆ.

ಸ್ವಾತಂತ್ರ್ಯ ದಿನಾಚರಣೆಯ ಇತಿಹಾಸವೇನು?

ಹಲವು ವರ್ಷಗಳ ಕಾಲ ಭಾರತವು ಬ್ರಿಟಿಷರ ಆಳ್ವಿಕೆಯಲ್ಲಿತ್ತು. ಈಸ್ಟ್ ಇಂಡಿಯಾ ಕಂಪನಿ ಸುಮಾರು 100 ವರ್ಷಗಳ ಕಾಲ ಭಾರತವನ್ನು ಆಳಿತು. ಅದು 1757 ರಲ್ಲಿ ಈಸ್ಟ್ ಇಂಡಿಯಾ ಕಂಪನಿಯು ಪ್ಲಾಸಿ ಯುದ್ಧವನ್ನು ಗೆದ್ದಾಗ ವಿಜಯದ ನಂತರ ಕಂಪನಿಯು ಭಾರತದ ಮೇಲೆ ಅಧಿಕಾರವನ್ನು ಚಲಾಯಿಸಲು ಪ್ರಾರಂಭಿಸಿತು. ನಮ್ಮ ರಾಷ್ಟ್ರವು 1857 ರಲ್ಲಿ ಮೊದಲ ಬಾರಿಗೆ ವಿದೇಶಿ ಆಡಳಿತದ ವಿರುದ್ಧ ಬಂಡಾಯವನ್ನು ಎದ್ದಿತ್ತು. ಇಡೀ ದೇಶವು ಬ್ರಿಟಿಷ್ ಅಧಿಕಾರದ ವಿರುದ್ಧ ಒಗ್ಗೂಡಿತು. ಆದ್ರೆ ನಮ್ಮವರದ್ದೇ ಒಳ ಸಂಚಿನಿಂದ ಭಾರತ ಸ್ವತಂತ್ರ್ಯವಾಗಲು ಆಗಲಿಲ್ಲ. ಬಳಿಕ ನಮ್ಮ ದೇಶವು ಸ್ವಾತಂತ್ರ್ಯವನ್ನು ಪಡೆಯಲು ಸುದೀರ್ಘ ಹೋರಾಟವನ್ನು ಮಾಡಿದೆ. ಎರಡು ವಿಶ್ವ ಯುದ್ಧಗಳ ನಂತರ ಬ್ರಿಟನ್ ದುರ್ಬಲಗೊಳ್ಳಲು ಪ್ರಾರಂಭಿಸಿತು. ಮತ್ತೊಂದು ಕಡೆ ಮಹಾತ್ಮ ಗಾಂಧಿಯಂತವರ ಹೋರಾಟದಿಂದ ಭಾರತವು ಅಂತಿಮವಾಗಿ ಸ್ವತಂತ್ರವಾಯಿತು.

ಸ್ವಾತಂತ್ರ್ಯ ದಿನಾಚರಣೆಯ ಮಹತ್ವವೇನು?

ಭಾರತವನ್ನು ಬ್ರಿಟಿಷ್ ಆಳ್ವಿಕೆಯಿಂದ ಮುಕ್ತಗೊಳಿಸಲು ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ಎಲ್ಲಾ ತ್ಯಾಗಗಳನ್ನು ಈ ದಿನ ನಮಗೆ ನೆನಪಿಸುತ್ತದೆ. ಆಗಸ್ಟ್ 15 ರಾಷ್ಟ್ರೀಯ ರಜಾದಿನವಾಗಿದೆ ಮತ್ತು ಈ ದಿನವನ್ನು ಧ್ವಜಾರೋಹಣ, ಮೆರವಣಿಗೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತದೆ.

ಸ್ವಾತಂತ್ರ್ಯ ದಿನವನ್ನು ಹೇಗೆ ಆಚರಿಸಲಾಗುತ್ತದೆ?

ಈ ದಿನದಂದು ರಾಷ್ಟ್ರಗೀತೆಯನ್ನು ಹಾಡಲಾಗುತ್ತದೆ, ಧ್ವಜಾರೋಹಣ ಮಾಡಿ ಸಮಾರಂಭಗಳು ಮತ್ತು ಡ್ರಿಲ್‌ಗಳನ್ನು ಮಾಡಲಾಗುತ್ತೆ. ಹಳೆ ದೆಹಲಿಯ ಕೆಂಪು ಕೋಟೆಯಲ್ಲಿ ನಮ್ಮ ದೇಶದ ಪ್ರಧಾನಿ ಧ್ವಜಾರೋಹಣ ಮಾಡುತ್ತಾರೆ. ಸೇನೆ ಮತ್ತು ಪೊಲೀಸರೊಂದಿಗೆ ಪರೇಡ್ ಕೂಡ ನಡೆಯುತ್ತದೆ. ಪ್ರಧಾನಿಯವರು ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ. ಅಲ್ಲಿ ಅವರು ಈ ಎಲ್ಲಾ ವರ್ಷಗಳಲ್ಲಿ ದೇಶದ ಸಾಧನೆಗಳ ಕುರಿತು ಮಾತನಾಡುತ್ತಾರೆ.

ಭಾರತೀಯ ನಾಯಕರಿಗೆ ಅಧಿಕಾರ ಹಸ್ತಾಂತರಿಸಿದ ಮೌಂಟ್ ಬ್ಯಾಟನ್

1947ರ ಜುಲೈ 04ರಂದು ಭಾರತೀಯ ಸ್ವಾತಂತ್ರ್ಯ ಕಾಯ್ದೆಯನ್ನು ಬ್ರಿಟಿಷ್ ಸಂಸತ್ ನಲ್ಲಿ ಅಂಗೀಕರಿಸಲಾಯಿತು. ನಂತರದಲ್ಲಿ 1948ರ ಜೂನ್30ರೊಳಗೆ ಆಡಳಿತದ ಅಧಿಕಾರವನ್ನು ಭಾರತೀಯ ನಾಯಕರಿಗೆ ವರ್ಗಾಯಿಸುವಂತೆ ಬ್ರಿಟಿಷ್ ಸಂಸತ್ತು ಅಂದಿನ ಭಾರತದ ವೈಸ್ ರಾಯ್ ಆಗಿದ್ದ ಲಾರ್ಡ್ ಮೌಂಟ್ ಬ್ಯಾಟನ್ ರಿ‌ಗೆ ಆದೇಶಿಸಿತ್ತು. ಭಾರತೀಯ ರಾಜಕಾರಣಿ ಮತ್ತು ಸ್ವಾತಂತ್ರ್ಯ ಕಾರ್ಯಕರ್ತ ಸಿ.ರಾಜಗೋಪಾಲಾಚಾರಿ ಅವರ ಪ್ರಕಾರ, ಲಾರ್ಡ್ ಮೌಂಟ್ ಬ್ಯಾಟನ್ ಜೂನ್ 1948 ರವರೆಗೆ ಕಾದಿದ್ದರೆ, ವರ್ಗಾಯಿಸುವ ಅಧಿಕಾರ ಕಳೆದುಕೊಳ್ಳುತ್ತಿದ್ದರು. ಈ ಹಿನ್ನೆಲೆ ಅಧಿಕಾರ ವರ್ಗಾವಣೆಗೆ 1947ರ ದಿನಾಂಕವನ್ನು ಮೌಂಟ್ ಬ್ಯಾಟನ್ ಆಯ್ಕೆ ಮಾಡಿಕೊಂಡಿದ್ದರು. ಆ ಮೂಲಕ ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯು ಅಂತ್ಯಗೊಂಡಿದ್ದು, ಆಗಸ್ಟ್ 15ರಂದು ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಲು ತೀರ್ಮಾನಿಸಲಾಯಿತು. ಇದರ ನಡುವೆ ದೇಶವು ಭಾರತ ಮತ್ತು ಪಾಕಿಸ್ತಾನ ಎಂದು ಇಬ್ಭಾಗವಾಯಿತು.

ಭಾರತದ ಸ್ವಾತಂತ್ರ್ಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ?

ಭಾರತವು 1947 ರ ಆಗಸ್ಟ್ 15 ರಂದು ಮಧ್ಯರಾತ್ರಿಯಲ್ಲಿ ಸ್ವಾತಂತ್ರ್ಯವನ್ನು ಗಳಿಸಿತು. ನಮ್ಮ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು “ಮಧ್ಯರಾತ್ರಿಯ ಹೊಡೆತದಲ್ಲಿ, ಜಗತ್ತು ನಿದ್ರಿಸುವಾಗ, ಭಾರತವು ಜೀವನ ಮತ್ತು ಸ್ವಾತಂತ್ರ್ಯಕ್ಕೆ ಎಚ್ಚರಗೊಳ್ಳುತ್ತದೆ” ಎಂಬ ಮಾತುಗಳಿಂದ ಭಾಷಣವನ್ನು ಮಾಡಿದ್ದರು. ಭಾರತದ ಮೊದಲ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರೂ ಅವರು, ದೆಹಲಿ ಕೆಂಪು ಕೋಟೆಯ ಲಾಹೋರಿ ಗೇಟ್ ಮೇಲೆ ರಾಷ್ಟ್ರೀಯ ಧ್ವಜ ಹಾರಿಸಿದರು. ಇದೇ ತರುವಾಯ ರೂಢಿಯಾಗಿದ್ದು, ಈಗ ಪ್ರತಿ ವರ್ಷ ಸ್ವಾತಂತ್ರ್ಯ ದಿನದಂದು ಭಾರತೀಯ ಪ್ರಧಾನಿ ರಾಷ್ಟ್ರಧ್ವಜವನ್ನು ಹಾರಿಸುತ್ತಾರೆ ಮತ್ತು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಾರೆ.