Narendra Modi: ಧ್ವಜಾರೋಹಣದ ವೇಳೆ ಬಿಳಿ ಕುರ್ತಾ, ನೀಲಿ ಜಾಕೆಟ್, ರಾಷ್ಟ್ರಧ್ವಜದ ಮಾದರಿಯ ಟರ್ಬಾನ್ ತೊಟ್ಟು ಗಮನ ಸೆಳೆದ ಮೋದಿ
Independence Day 2022: ಸ್ವಾತಂತ್ರ್ಯ ದಿನಾಚರಣೆಯ ದಿನವಾದ ಇಂದು ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸುವುದಾಗಲೂ ಪ್ರಧಾನಿ ನರೇಂದ್ರ ಮೋದಿ ತಮ್ಮ ಉಡುಗೆಯಿಂದ ಬಹಳ ಗಮನ ಸೆಳೆದಿದ್ದಾರೆ.
ನವದೆಹಲಿ: ಯೋಗ ದಿನಾಚರಣೆಯಿರಲಿ, ಗಣರಾಜ್ಯೋತ್ಸವ ಇರಲಿ, ಬೇರೆ ರಾಜ್ಯ-ದೇಶಕ್ಕೆ ಪ್ರವಾಸ ಹೋಗಲಿ ಪ್ರಧಾನಿ ನರೇಂದ್ರ ಮೋದಿ (PM Narednra Modi) ಪ್ರತಿ ಸಮಾರಂಭದಲ್ಲೂ ತಮ್ಮ ವಿಶೇಷವಾದ ಉಡುಗೆಯಿಂದ ಗಮನ ಸೆಳೆಯುತ್ತಾರೆ. ಮೋದಿ ತಮ್ಮ ಡ್ರೆಸ್ಗೆ ಸದಾ ಬಹಳ ಪ್ರಾಮುಖ್ಯತೆ ನೀಡುತ್ತಾರೆ. ಸ್ವಾತಂತ್ರ್ಯ ದಿನಾಚರಣೆಯ (75th Independence Day) ದಿನವಾದ ಇಂದು ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸುವುದಾಗಲೂ ಪ್ರಧಾನಿ ನರೇಂದ್ರ ಮೋದಿ ತಮ್ಮ ಉಡುಗೆಯಿಂದ ಬಹಳ ಗಮನ ಸೆಳೆದಿದ್ದಾರೆ. ರಾಷ್ಟ್ರೀಯ ಧ್ವಜದ ಚಿತ್ರವಿರುವ ಟರ್ಬಾನ್ ತೊಟ್ಟು, ಬಿಳಿ ಜುಬ್ಬಾ- ಪೈಜಾಮದ ಮೇಲೆ ನೀತಿ ಬಣ್ಣದ ನೆಹರೂ ಜಾಕೆಟ್ ತೊಟ್ಟು ಮೋದಿ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯ ದಿನವಾದ ಇಂದು ವರ್ಣರಂಜಿತ ಪೇಟವನ್ನು ಧರಿಸುವ ಸಂಪ್ರದಾಯವನ್ನು ಮುಂದುವರಿಸಿರುವ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರ ಧ್ವಜದ ಚಿತ್ರವಿರುವ ಬಿಳಿ ಟರ್ಬಾನ್ (ಪೇಟ) ಧರಿಸಿದ್ದರು. 75ನೇ ಸ್ವಾತಂತ್ರ್ಯ ದಿನಾಚರಣೆಯ ಆಚರಣೆಗಾಗಿ ರಾಷ್ಟ್ರೀಯ ಧ್ವಜಾರೋಹಣ ಮಾಡಲು ಕೆಂಪು ಕೋಟೆಗೆ ಆಗಮಿಸಿದ ಪ್ರಧಾನಿ ಮೋದಿಯವರ ಬಿಳಿ ಕುರ್ತಾ ಮತ್ತು ನೀಲಿ ಜಾಕೆಟ್ ಹಾಗೂ ಅದಕ್ಕೊಪ್ಪುವ ವಿಶೇಷ ವಿನ್ಯಾಸದ ಪೇಟ ಗಮನ ಸೆಳೆಯಿತು.
Hon’ble PM Shri @narendramodi Ji inspecting the Guard of Honour at #RedFort on the occasion of 76th #IndependenceDay in Delhi. pic.twitter.com/DPpkmyHaxj
— Sambit Patra (@sambitswaraj) August 15, 2022
ಸ್ವಾತಂತ್ರ್ಯ ದಿನಾಚರಣೆಯ ಭಾಷಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿಶಿಷ್ಟ ಉಡುಪುಗಳು ಯಾವಾಗಲೂ ರಾಷ್ಟ್ರದ ಗಮನವನ್ನು ಸೆಳೆಯುತ್ತವೆ. ಈ ವರ್ಷ ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಮೋದಿ ಸಾಂಪ್ರದಾಯಿಕ ಕುರ್ತಾ ಮತ್ತು ನೀಲಿ ಜಾಕೆಟ್ ಮತ್ತು ಪೇಟವನ್ನು ಧರಿಸಿದ್ದರು. ಐತಿಹಾಸಿಕ ಕೆಂಪು ಕೋಟೆಯ ಮೇಲೆ ಮೋದಿ ‘ತಿರಂಗ’ವನ್ನು ಹಾರಿಸಿದರು. ಇದು ಕೆಂಪು ಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿರುವ 9ನೇ ಸ್ವಾತಂತ್ರ್ಯ ದಿನದ ಭಾಷಣವಾಗಿದೆ.
Addressing the nation on Independence Day. https://t.co/HzQ54irhUa
— Narendra Modi (@narendramodi) August 15, 2022
ಇದನ್ನೂ ಓದಿ: Independence Day Celebration 2022 Live: ಅಮೃತ ಕಾಲದ ಪಂಚಪ್ರಾಣ ವಿವರಿಸಿದ ಮೋದಿ
ಕೆಂಪುಕೋಟೆಗೆ ಆಗಮಿಸಿದ ಪ್ರಧಾನಿ ಅವರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಮತ್ತು ರಕ್ಷಣಾ ಕಾರ್ಯದರ್ಶಿ ಡಾ. ರಕ್ಷಣಾ ಕಾರ್ಯದರ್ಶಿಯು ಪ್ರಧಾನ ಮಂತ್ರಿಯವರಿಗೆ ಜನರಲ್ ಆಫೀಸರ್ ಕಮಾಂಡಿಂಗ್ (GoC), ಲೆಫ್ಟಿನೆಂಟ್ ಜನರಲ್ ವಿಜಯ್ ಕುಮಾರ್ ಮಿಶ್ರಾ, AVSM ಅನ್ನು ಪರಿಚಯಿಸಿದರು. ಪ್ರಧಾನ ಮಂತ್ರಿಯ ಗೌರವ ಗಾರ್ಡ್ ತುಕಡಿಯಲ್ಲಿ ಒಬ್ಬ ಅಧಿಕಾರಿ ಮತ್ತು ಸೇನೆ, ನೌಕಾಪಡೆ, ವಾಯುಪಡೆ ಮತ್ತು ದೆಹಲಿ ಪೊಲೀಸರ ತಲಾ 20 ಸಿಬ್ಬಂದಿ ಇರುತ್ತಾರೆ. ವಿಂಗ್ ಕಮಾಂಡರ್ ಕುನಾಲ್ ಖನ್ನಾ ಅವರ ನೇತೃತ್ವದಲ್ಲಿ ಗಾರ್ಡ್ ಆಫ್ ಆನರ್ ನಡೆದಿದೆ. ಪ್ರಧಾನ ಮಂತ್ರಿ ಗಾರ್ಡ್‌ನಲ್ಲಿರುವ ವಾಯುಪಡೆಯ ತುಕಡಿಗೆ ಸ್ಕ್ವಾಡ್ರನ್ ಲೀಡರ್ ಲೋಕೇಂದ್ರ ಸಿಂಗ್, ಸೇನಾ ತುಕಡಿಗೆ ಮೇಜರ್ ವಿಕಾಸ್ ಸಂಗ್ವಾನ್ ಮತ್ತು ನೌಕಾ ತುಕಡಿಗೆ ಲೆಫ್ಟಿನೆಂಟ್ ಕಮಾಂಡರ್ ಅವಿನಾಶ್ ಕುಮಾರ್ ಅವರು ಕಮಾಂಡರ್ ಆಗಿರುತ್ತಾರೆ. ದೆಹಲಿ ಪೊಲೀಸ್ ತುಕಡಿಗೆ ಹೆಚ್ಚುವರಿ ಡಿಸಿಪಿ (ಪೂರ್ವ ದೆಹಲಿ) ಅಚಿನ್ ಗಾರ್ಗ್ ಅವರು ಕಮಾಂಡ್ ಆಗಿರುತ್ತಾರೆ.
#WATCH | Independence Day celebrations begin at the Red Fort in Delhi. pic.twitter.com/MXmdS3xiRe
— ANI (@ANI) August 15, 2022
ಗಾರ್ಡ್ ಆಫ್ ಆನರ್ ಅನ್ನು ಪರಿಶೀಲಿಸಿದ ನಂತರ, ಪ್ರಧಾನಿಯವರು ಕೆಂಪು ಕೋಟೆಯ ಕೋಟೆಗೆ ತೆರಳಿದರು. ಅಲ್ಲಿ ಅವರನ್ನು ರಾಜನಾಥ್ ಸಿಂಗ್, ಅಜಯ್ ಭಟ್, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಮತ್ತು ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಸ್ವಾಗತಿಸಿದರು. ರಾಷ್ಟ್ರೀಯ ಧ್ವಜಾರೋಹಣ ಮಾಡಲು ಗೋಸಿ ದೆಹಲಿ ಪ್ರದೇಶವು ಪ್ರಧಾನ ಮಂತ್ರಿಯನ್ನು ರಾಂಪಾರ್ಟ್‌ಗಳ ಮೇಲೆ ವೇದಿಕೆಗೆ ಕರೆದೊಯ್ಯಲಾಯಿತು. ಧ್ವಜಾರೋಹಣದ ಬಳಿಕ ತ್ರಿವರ್ಣ ಧ್ವಜಕ್ಕೆ ರಾಷ್ಟ್ರೀಯ ಸಲ್ಯೂಟ್ ನೀಡಿ, ರಾಷ್ಟ್ರಗೀತೆ ಹಾಡಲಾಯಿತು. ಇದಾದ ಬಳಿಕ ಪ್ರಧಾನಿ ಮೋದಿ ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಭಾಷಣ ಮಾಡಿದ್ದಾರೆ.
#WATCH PM Narendra Modi hoists the National Flag at Red Fort on the 76th Independence Day pic.twitter.com/VmOUDyf7Ho
— ANI (@ANI) August 15, 2022
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:18 am, Mon, 15 August 22