Independence Day 2022: ಆಗಸ್ಟ್ 15ರ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಗಳ ವಿವರ

ಪ್ರಧಾನಿ ಮೋದಿ ಬೆಳಗ್ಗೆ 7 ಗಂಟೆ‌ 6 ನಿಮಿಷಕ್ಕೆ ರಾಜ್ ಘಾಟ್ ತಲುಪಲಿದ್ದಾರೆ. ಗಾಂಧಿ ಸಮಾಧಿಗೆ ನಮಿಸಿ ರೆಡ್ ಪೋರ್ಟ್ ಗೆ ತೆರಳುತ್ತಾರೆ. 7.14ಕ್ಕೆ ರಾಜ್ ಘಾಟ್ ನಿಂದ ಹೊರಟಿ 7.18ಕ್ಕೆ‌ ಕೆಂಪುಕೋಟೆ ತಲುಪುತ್ತಾರೆ.

Independence Day 2022: ಆಗಸ್ಟ್ 15ರ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಗಳ ವಿವರ
ಸೆಪ್ಟೆಂಬರ್ 2ರಂದು ಮಂಗಳೂರಿಗೆ ಪ್ರಧಾನಿ ಮೋದಿ ಭೇಟಿ
TV9kannada Web Team

| Edited By: Ayesha Banu

Aug 14, 2022 | 10:10 PM

ದೆಹಲಿ: 75ನೇ ವರ್ಷದ ಸ್ವಾತಂತ್ರ್ಯ ಅಮೃತಮಹೋತ್ಸವ(Azadi Ka Amrit Mahotsav) ಆಚರಿಸಲು ಇಡೀ ದೇಶ ಸಿದ್ಧವಾಗಿದೆ. ಕೇಂದ್ರ ಸರ್ಕಾರ ಸಕಲ ಸಿದ್ಧತೆ ಮಾಡ್ಕೊಂಡಿದೆ. ನಾಳೆ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಕೆಂಪು ಕೋಟೆಯ ಮೇಲೆ ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ. ಆಗಸ್ಟ್ 15ರ ಬೆಳಗ್ಗೆ 7.30ಕ್ಕೆ ಧ್ವಜಾರೋಹಣ ಮಾಡಲಿದ್ದು ಮೋದಿ ಅವರು ಪ್ರಧಾನಿಯಾಗಿ 9ನೇ ಬಾರಿಗೆ ಧ್ವಜಾರೋಹಣ ಮಾಡಲಿದ್ದಾರೆ. ಧ್ವಜಾರೋಹಣ ಬಳಿಕ ದೇಶ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಆಗಸ್ಟ್ 15ರ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಗಳ ವಿವರ

ಪ್ರಧಾನಿ ಮೋದಿ ಬೆಳಗ್ಗೆ 7 ಗಂಟೆ‌ 6 ನಿಮಿಷಕ್ಕೆ ರಾಜ್ ಘಾಟ್ ತಲುಪಲಿದ್ದಾರೆ. ಗಾಂಧಿ ಸಮಾಧಿಗೆ ನಮಿಸಿ ರೆಡ್ ಪೋರ್ಟ್ ಗೆ ತೆರಳುತ್ತಾರೆ. 7.14ಕ್ಕೆ ರಾಜ್ ಘಾಟ್ ನಿಂದ ಹೊರಟಿ 7.18ಕ್ಕೆ‌ ಕೆಂಪುಕೋಟೆ ತಲುಪುತ್ತಾರೆ. ಸೇನಾಪಡೆಗಳಿಂದ ಗಾರ್ಡ್ ಆಫ್ ಹಾನರ್ ಪಡೆದು 7.30ಕ್ಕೆ‌ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಲಿದ್ದಾರೆ. 7.33ರಿಂದ ಪ್ರಧಾನಿ ಮೋದಿ ಭಾಷಣ ಆರಂಭಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಏಳು ಸಾವಿರ ಜನರು ಭಾಗಿಯಾಗುವ ನಿರೀಕ್ಷೆ ಇದೆ. ಕೇಂದ್ರಿಯ ಮೀಸಲು ಪಡೆ ಒಳಗೊಂಡಂತೆ ಹತ್ತು ಸಾವಿರ ಪೊಲೀಸ್ ಸಿಬ್ಬಂದಿಯಿಂದ ಭದ್ರತೆ ಕೈಗೊಳ್ಳಲಾಗಿದೆ. FRS ( Facial recognition system ) ತಂತ್ರಜ್ಞಾನ ಹೊಂದಿರುವ ಸಿಸಿಟಿವಿ ಅಳವಡಿಸಲಾಗಿದೆ. ಮೇಲುಸ್ತುವಾರಿಗಾಗಿ ವಿಶೇಷ ಟೀಂ ರಚನೆ ಮಾಡಲಾಗಿದ್ದು ಅನುಮಾನಸ್ಪದ ವ್ಯಕ್ತಿಗಳ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಡ್ರೋನ್, ಗಾಳಿಪಟ ಹಾರಾಟ ನಿಷೇಧ, ಅನುಮಾನಾಸ್ಪದ ಡ್ರೋನ್ ತಡೆಯಲು ಡಿಆರ್‌ಡಿಓ ನಾ ಆಂಟಿ ಡ್ರೋನ್ ಸಿಸ್ಟಮ್ ಅಳವಡಿಸಲಾಗಿದೆ.

ಮೋದಿ ಭಾಷಣದ ನಿರೀಕ್ಷೆಗಳು

  • ವೈದ್ಯಕೀಯ ಕ್ಷೇತ್ರದ ಗುಣಮಟ್ಟ ಹೆಚ್ಚಿಸಲು ಕ್ರಮಗಳು ಘೋಷಣೆಯಾಗಬಹುದು ಈ ನಿಟ್ಟಿನಲ್ಲಿ ಹೀಲ್ ಇನ್ ಇಂಡಿಯ, ಹೀಲ್ ಬೈ ಇಂಡಿಯಾ ಯೋಜನೆ ಘೋಷಣೆಯಾಗಬಹುದು.
  • ಕ್ಯಾನ್ಸರ್, ಮಧುಮೇಹದ ವಿರುದ್ಧ ಹೋರಾಡಲು ಔಷಧಿಗಳ ಬೆಲೆಯಲ್ಲಿ ಇಳಿಕೆ ಘೋಷಣೆ ಸಾಧ್ಯತೆ
  • ಆಯುಷ್ಮಾನ್ ಭಾರತ್ ವ್ಯಾಪ್ತಿಯ ವಿಸ್ತರಣೆ ಸಾಧ್ಯತೆ
  • ದೇಶೀಯ ಎಣ್ಣೆಕಾಳುಗಳು ಮತ್ತು ಬೇಳೆಕಾಳುಗಳ ಉತ್ಪಾದನೆಯನ್ನು ಹೆಚ್ಚಿಸಲು ಪ್ರೊತ್ಸಾಹ ಅವರ ಭಾಷಣದ ಕಾರ್ಯಸೂಚಿಯಲ್ಲಿರಬಹುದು
  • ಹಣದುಬ್ಬರ ಬೆಲೆ ಏರಿಕೆ ನಿಯಂತ್ರಣಕ್ಕೆ ಡಿಜಿಟಲ್ ಬ್ಯಾಂಕಿಂಗ್ ಮತ್ತು ಹಣಕಾಸು ವಲಯಗಳ ಅಭಿವೃದ್ಧಿಗೆ ಯೋಜನೆ ಘೋಷಣೆಯಾಗಬಹುದು

ಪ್ರಧಾನಿಯವರ ಭಾಷಣವನ್ನು ನೋಡುವುದು ಹೇಗೆ?

ಪ್ರಧಾನಿ ಮೋದಿಯವರ ಭಾಷಣವನ್ನು ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೋ ನೇರಪ್ರಸಾರ ಮಾಡಲಿದೆ. ಪ್ರಧಾನ ಮಂತ್ರಿಯವರ ಭಾಷಣವನ್ನು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಯುಟ್ಯೂಬ್ ಚಾನೆಲ್ ಮತ್ತು ಟ್ವಿಟರ್ ಹ್ಯಾಂಡಲ್ ಮೂಲಕ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada