Independence Day Celebration 2022 Live: ಎಲ್ಲ ಭಾರತೀಯರೂ ಟೀಂ ಇಂಡಿಯಾ ಭಾವನೆಯೊಂದಿಗೆ ಮುನ್ನಡೆಯೋಣ; ನರೇಂದ್ರ ಮೋದಿ

TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 15, 2022 | 10:12 AM

Independence Day Parade 2022 Live Updates ಈ ಬಾರಿ ಭಾರತ 75ನೇ ವರ್ಷದ ಸ್ವಾತಂತ್ರ್ಯವನ್ನು ಆಚರಿಸುತ್ತಿದ್ದು ಇದು ಹೆಚ್ಚಿನ ಮಹತ್ವ ಹೊಂದಿದೆ. ದೇಶದಾದ್ಯಂತ ಹಬ್ಬದ ವಾತಾವರಣ ಮನೆ ಮಾಡಿದ್ದು ಎಲ್ಲೆಡೆ ತ್ರಿವರ್ಣ ಧ್ವಜಗಳು ರಾರಾಜಿಸುತ್ತಿವೆ.

Independence Day Celebration 2022 Live: ಎಲ್ಲ ಭಾರತೀಯರೂ ಟೀಂ ಇಂಡಿಯಾ ಭಾವನೆಯೊಂದಿಗೆ ಮುನ್ನಡೆಯೋಣ; ನರೇಂದ್ರ ಮೋದಿ
ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಿದರು.

ಆಜಾದಿ ಕಾ ಅಮೃತ್ ಮಹೋತ್ಸವ (Azadi Ka Amrit Mahotsav) ಪ್ರಯುಕ್ತ ಇಂದು (ಆಗಸ್ಟ್ 15) ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಕೆಂಪು ಕೋಟೆಯ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಮೋದಿ ಅವರು ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡುತ್ತಿರುವುದು ಇದು 9ನೇ ಬಾರಿ. ಈ ಬಾರಿ ಭಾರತ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ (Independence Day) ಆಚರಿಸುತ್ತಿದ್ದು ಇದು ಹೆಚ್ಚಿನ ಮಹತ್ವ ಹೊಂದಿದೆ. ದೇಶದಾದ್ಯಂತ ಹಬ್ಬದ ವಾತಾವರಣ ಮನೆ ಮಾಡಿದ್ದು ಎಲ್ಲೆಡೆ ತ್ರಿವರ್ಣ ಧ್ವಜಗಳು ರಾರಾಜಿಸುತ್ತಿವೆ. ಶಾಲಾ ಕಾಲೇಜು ಸೇರಿದಂತೆ ಇತರ ಸಂಸ್ಥೆ, ಕಚೇರಿಗಳಲ್ಲಿ ಧ್ವಜಾರೋಹಣ ನಡೆಯಲಿದ್ದು, ಸ್ವಾತಂತ್ರ್ಯದ ಮಹತ್ವ, ಹೋರಾಟವನ್ನು ನೆನಪಿಸುವ ಹಲವಾರು ಕಾರ್ಯಕ್ರಮಗಳು ನಡೆಯಲಿವೆ. ಹೆಚ್ಚಿನ ದೇಶಗಳಂತೆ ಭಾರತವು ಕೊವಿಡ್ ಸಾಂಕ್ರಾಮಿಕದ ಛಾಯೆಯಿಂದ ಹೊರಬರುತ್ತಿರುವ ಸಮಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯುತ್ತಿದೆ. ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸರ್ಕಾರವು ‘ಹರ್ ಘರ್ ತಿರಂಗ’ ಸೇರಿದಂತೆ ಹಲವಾರು ಅಭಿಯಾನಗಳನ್ನು ನಡೆಸಿತ್ತು.

LIVE NEWS & UPDATES

The liveblog has ended.
  • 15 Aug 2022 08:59 AM (IST)

    PM Modi Independence Day Speech Live: ಟೀಂ ಇಂಡಿಯಾ ಭಾವನೆಯೊಂದಿಗೆ 130 ಕೋಟಿ ಜನ ಮುನ್ನಡೆಯೋಣ

    ವಂದೇ ಮಾತರಂ ಘೋಷಣೆಯೊಂದಿಗೆ ಭಾಷಣ ಪೂರ್ಣಗೊಳಿಸಿದ ಪ್ರಧಾನಿ ನರೇಂದ್ರ ಮೋದಿ

    ಈ ಅಮೃತ ಕಾಲದಲ್ಲಿ ಎಲ್ಲರ ಪ್ರಯತ್ನ ಅತ್ಯಗತ್ಯ. ಟೀಂ ಇಂಡಿಯಾ ಭಾವನೆಯಿಂದ ನಾವು 130 ಕೋಟಿ ಜನರು ಮುಂದೆ ಹೆಜ್ಜೆ ಇಡಬೇಕು. ನನ್ನೊಂದಿಗೆ ಎಲ್ಲರೂ ಹೇಳಿ… ಜೈ ಹಿಂದ್, ಭಾರತ್ ಮಾತಾ ಕಿ ಜೈ, ವಂದೇ ಮಾತರಂ ಘೋಷಣೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಭಾಷಣ ಪೂರ್ಣಗೊಳಿಸಿದರು. ನಂತರ ರಾಷ್ಟ್ರಗೀತೆ ಮೊಳಗಿತು.

  • 15 Aug 2022 08:55 AM (IST)

    PM Modi Independence Day Speech Live: ಕ್ರೀಡಾ ಸಾಧಕರಿಗೆ ಅಭಿನಂದನೆ

    ಕ್ರೀಡಾಕ್ಷೇತ್ರದಲ್ಲಿ ಸುಧಾರಣೆ ತಂದಿದ್ದೇವೆ. ಪ್ರತಿಭೆಗೆ ಮನ್ನಣೆ ಕೊಡುವ ಪದ್ಧತಿ ಆರಂಭಿಸಿದ್ದೇವೆ. ಹೀಗಾಗಿಯೇ ಇಂದು ಭಾರತದ ಕ್ರೀಡಾಪಟುಗಳು ಹಲವು ಪದಕಗಳನ್ನು ಗೆದ್ದಿದ್ದಾರೆ. ವಿಶ್ವದ ಹಲವೆಡೆ ಭಾರತದ ಧ್ವಜ ಹಾರಿಸಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿಯೂ ಇದೇ ರೀತಿ ಆಗಬೇಕಿದೆ. -ನರೇಂದ್ರ ಮೋದಿ

  • 15 Aug 2022 08:53 AM (IST)

    PM Modi Independence Day Speech Live: ಪರಿವಾರವಾದವೂ ಭ್ರಷ್ಟಾಚಾರಕ್ಕೆ ಮುಖ್ಯ ಕಾರಣ

    ಭಾರತದಲ್ಲಿ ಕುಟುಂಬ ರಾಜಕಾರಣದಿಂದ ನಮ್ಮ ದೇಶದ ಪ್ರತಿಭೆ, ಸಾಮರ್ಥ್ಯ ಹಾಳಾಗುತ್ತಿದೆ. ಭ್ರಷ್ಟಾಚಾರಕ್ಕೆ ಇದೂ ಒಂದು ಕಾರಣವಾಗುತ್ತಿದೆ. ಪರಿವಾರವಾದದಿಂದಲೂ ನಾವು ಬಿಡಿಸಿಕೊಳ್ಳಬೇಕು. ನಾವು ನಮ್ಮ ಸಂಸ್ಥೆಗಳನ್ನು ಉಳಿಸಿಕೊಳ್ಳಬೇಕು. ರಾಜಕಾರಣದಲ್ಲಿಯೂ ಪರಿವಾರವಾದವು ಪರಿವಾರ ಭದ್ರಪಡಿಸಿಕೊಳ್ಳಲು ಯತ್ನಿಸುತ್ತದೆಯೇ ಹೊರತು ದೇಶದ ಅಭಿವೃದ್ಧಿಗೆ ಗಮನ ಕೊಡುವುದಿಲ್ಲ. ಬನ್ನಿ, ಭಾರತದ ರಾಜಕಾರಣವನ್ನು ಶುದ್ಧೀಕರಣಗೊಳಿಸಲು ನಾವು ದೇಶದ ಪರಿವಾರವಾದವನ್ನು ಕೊನೆಗಾಣಿಸೋಣ. ಇದು ಇಂದಿನ ಅನಿವಾರ್ಯತೆ – ನರೇಂದ್ರ ಮೋದಿ

  • 15 Aug 2022 08:49 AM (IST)

    PM Modi Independence Day Speech Live: ಭ್ರಷ್ಟಾಚಾರಕ್ಕೆ ಜಾಗೃತಿಯ ಮದ್ದು

    ಸಮಾಜದಲ್ಲಿ ಎಲ್ಲಿಯವರೆಗೆ ಭ್ರಷ್ಟಾಚಾರದ ಬಗ್ಗೆ ಅಸಹ್ಯದ ಭಾವನೆ ಬರಬೇಕು. ಸಮಾಜದಲ್ಲಿ ಭ್ರಷ್ಟಾಚಾರಿಗಳಿಗೆ ಗೌರವ ಇಲ್ಲದ ವಾತಾವರಣ ಮೂಡಬೇಕು. ಭ್ರಷ್ಟಾಚಾರದ ಬಗ್ಗೆ ಜಾಗ್ರತೆ ಬರಬೇಕು – ನರೇಂದ್ರ ಮೋದಿ

  • 15 Aug 2022 08:45 AM (IST)

    PM Modi Independence Day Speech Live: ನಮ್ಮ ರಾಜ್ಯಗಳ ನಡುವೆ ಆರೋಗ್ಯಕರ ಸ್ಪರ್ಧೆಯೂ ಇರಬೇಕು

    ಸಂವಿಧಾನ ನಿರ್ಮಾರ್ತೃಗಳನ್ನು ನಾನು ಗೌರವಿಸುತ್ತೇನೆ. ಕಾಲಘಟ್ಟ ಬೇರೆ ಇದ್ದರೂ ನಮ್ಮ ಆಶಯಗಳು ಪ್ರತ್ಯೇಕ ಅಲ್ಲ. ಭಾರತದ ಅಭಿವೃದ್ಧಿ ಎನ್ನುವುದು ನಾವು ಎಲ್ಲಿಯೇ ಇದ್ದರೂ ಗಮನದಲ್ಲಿ ಇಟ್ಟುಕೊಳ್ಳಬೇಕು. ನಮ್ಮ ದೇಶದ ಹಲವು ರಾಜ್ಯಗಳು ಒಕ್ಕೂಟ ವ್ಯವಸ್ಥೆಯ ಬಲ ಹೆಚ್ಚಿಸಿವೆ. ನಾವು ಸಹಕಾರದ ಒಕ್ಕೂಟ ವ್ಯವಸ್ಥೆಯ ಜೊತೆಗೆ ನಮ್ಮ ರಾಜ್ಯಗಳಲ್ಲಿ ಆರೋಗ್ಯಕರ ಸ್ಪರ್ಧೆಯೂ ಇರಬೇಕು. ನಮ್ಮ ರಾಜ್ಯಗಳ ನಡುವೆ, ಸರ್ಕಾರಿ ಸೇವೆಗಳ ವಿಚಾರದಲ್ಲಿ ಸ್ಪರ್ಧೆಯ ವಾತಾವರಣ ಇರಬೇಕು. – ನರೇಂದ್ರ ಮೋದಿ

  • 15 Aug 2022 08:43 AM (IST)

    PM Modi Independence Day Speech Live: ಮಹಿಳೆಯರ ಕೊಡುಗೆ ದೊಡ್ಡದು

    ಭಾರತವು 75 ವರ್ಷಗಳಲ್ಲಿ ಭಾರತದ ಸಾಧನೆಯಲ್ಲಿ ಮಹಿಳೆಯರ ಕೊಡುಗೆ ದೊಡ್ಡದು. ಈ ಅಮೃತ ಕಾಲದಲ್ಲಿ ನಮ್ಮ ಮಹಿಳಾ ಶಕ್ತಿಯನ್ನು ದೊಡ್ಡಮಟ್ಟದಲ್ಲಿ ಜೋಡಿಸಿಕೊಂಡರೆ ನಮ್ಮ ಕನಸು ಇನ್ನಷ್ಟು ದೊಡ್ಡದಾಗುತ್ತದೆ. ಬಹಳ ಬೇಗ ನಾವು ಗುರಿ ಮುಟ್ಟುತ್ತೇವೆ. – ನರೇಂದ್ರ ಮೋದಿ

  • 15 Aug 2022 08:40 AM (IST)

    PM Modi Independence Day Speech Live: ಮಾನವ ಸಂಪನ್ಮೂಲದ ಸಮರ್ಥ ಬಳಕೆ ಆಗಲಿ

    ಭಾರತದ ಆರ್ಥಿಕ ಪ್ರಗತಿಯು ಎಲ್ಲರ ಕೊಡುಗೆ ಬಯಸುತ್ತದೆ. ಸಣ್ಣ ರೈತರು, ಸಣ್ಣ ಉದ್ಯಮಿಗಳು, ಆಟೊರಿಕ್ಷಾ ಓಡಿಸುವವರು, ಬಸ್ ಚಾಲಕರು ಸೇರಿದಂತೆ ಎಲ್ಲರೂ ಆರ್ಥಿಕವಾಗಿ ಸಬಲರಾಗಬೇಕು. ಕಳೆದ 75 ವರ್ಷಗಳಲ್ಲಿ ಹಲವು ಸಿದ್ಧಿ ಪಡೆದಿದ್ದೇವೆ. ಹೊಸ ಕನಸು ಕಂಡಿದ್ದೇವೆ, ಹೊಸ ಸಿದ್ಧಿ ಸಾಧಿಸಿದ್ದೇವೆ. ಮಾನವ ಸಂಪನ್ಮೂಲ ಮತ್ತು ಪ್ರಕೃತಿ ಸಂಪನ್ಮೂಲವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. – ನರೇಂದ್ರ ಮೋದಿ

  • 15 Aug 2022 08:36 AM (IST)

    PM Modi Independence Day Speech Live: ಜೈ ಅನುಸಂಧಾನ್ ನಮ್ಮ ಹೊಸ ಮಂತ್ರವಾಗಲಿ

    ಆವಿಷ್ಕಾರದ ಮಹತ್ವ ನಾವೆಲ್ಲರೂ ಮನಗಾಣಬೇಕು. ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್ ಜೊತೆಗೆ ಜೈ ಅನುಸಂಧಾನ್ ಮಂತ್ರವನ್ನೂ ನಾವು ಮನಗಾಣಬೇಕು. ಹೊಸ ತಂತ್ರಜ್ಞಾನದ ಸಾಧ್ಯತೆಗಳನ್ನು ಅಳವಡಿಸಿಕೊಳ್ಳಬೇಕು. -ನರೇಂದ್ರ ಮೋದಿ

  • 15 Aug 2022 08:32 AM (IST)

    PM Modi Independence Day Speech Live: ಸ್ವಾವಲಂಬನೆಯೇ ಪ್ರಗತಿಯ ಮಂತ್ರ

    ಪುಟ್ಟ ಮಕ್ಕಳಿಗೂ ನಾನು ನಮನ ಸಲ್ಲಿಸುತ್ತೇನೆ. ಮನೆಗಳಲ್ಲಿ ಐದು ವರ್ಷದ ಮಗು ವಿದೇಶಿ ಆಟಿಕೆಗಳಲ್ಲಿ ಆಡುವುದಿಲ್ಲ ಎಂದು ಸಂಕಲ್ಪ ಮಾಡಿದಾಗ ಆತ್ಮ ನಿರ್ಭರ್ ಭಾರತದ ಆಶಯ ಈಡೇರುತ್ತದೆ. ಉದ್ಯೋಗದ ಹೊಸ ಸಾಧ್ಯತೆಗಳು ಕಂಡುಬರುತ್ತಿವೆ. ಭಾರತವು ತಯಾರಿಕಾ ಕೇಂದ್ರ (ಮ್ಯಾನ್ಯುಫ್ಯಾಕ್ಚರಿಂಗ್ ಹಬ್) ಆಗುತ್ತಿದೆ. ಮೊಬೈಲ್ ಸೇರಿದಂತೆ ಹಲವು ಉಪಕರಣಗಳು ಇಲ್ಲಿಯೇ ತಯಾರಾಗುತ್ತಿವೆ. ನಾವು ವಿದ್ಯುತ್ ಕ್ಷೇತ್ರದಲ್ಲಿಯೂ ಸ್ವಾವಲಂಬಿ ಆಗಬೇಕಿದೆ. – ನರೇಂದ್ರ ಮೋದಿ

  • 15 Aug 2022 08:30 AM (IST)

    PM Modi Independence Day Speech Live: ಸೈನಿಕರಿಗೆ ದೊಡ್ಡ ಸೆಲ್ಯೂಟ್

    ಆತ್ಮನಿರ್ಭರ್ ಭಾರತದ ಆಶಯವನ್ನು ನಮ್ಮ ಸೈನಿಕರು ಈಡೇರಿಸುತ್ತಿದ್ದಾರೆ. ಅವರಿಗೆ ದೊಡ್ಡ ಸವಾಲು. ಗಡಿಯಲ್ಲಿ ನಗುನಗುತ್ತಾ ಕಷ್ಟನಷ್ಟ ಅನುಭವಿಸುತ್ತಾ ದೇಶ ರಕ್ಷಿಸುವ ಸೈನಿಕರು ಸ್ವಾವಲಂಬನೆಯತ್ತ ದಿಟ್ಟತನದಿಂದ ಹೆಜ್ಜೆ ಹಾಕುತ್ತಿದ್ದಾರೆ. ಅವರಿಗೆಲ್ಲರಿಗೂ ನಾನು ಸೆಲ್ಯೂಟ್ ಮಾಡುತ್ತೇನೆ. – ನರೇಂದ್ರ ಮೋದಿ

  • 15 Aug 2022 08:28 AM (IST)

    PM Modi Independence Day Speech Live: ಸ್ವಾವಲಂಬನೆಯ ಮಂತ್ರ ಜನಾಂದೋಲನ ಆಗಬೇಕು

    ಇಂದು ಮಹರ್ಷಿ ಅರವಿಂದರ ಜನ್ಮದಿನವೂ ಹೌದು. ‘ಸ್ವದೇಶಿಯಿಂದ ಸ್ವರಾಜ್ಯ, ಸ್ವರಾಜ್ಯದಿಂದ ಸುರಾಜ್ಯ’ ಎನ್ನುವುದು ಅವರು ಕೊಟ್ಟ ಮಂತ್ರ. ನಾವು ಸ್ವಾವಲಂಬಿಗಳಾಗಬೇಕು. ದೇಶಕ್ಕೆ ಅನ್ನದ ಅಗತ್ಯವಿದ್ದಾಗ ನಾವು ಬೇರೆ ಕಡೆಯಿಂದ ತರಿಸಿಕೊಳ್ಳಲು ಆಗುವುದಿಲ್ಲ. ಹೀಗಾಗಿ ಆತ್ಮನಿರ್ಭರ್ ಭಾರತ್ ಎನ್ನುವುದು ಎಲ್ಲ ನಾಗರಿಕರು, ಎಲ್ಲ ಸರ್ಕಾರಗಳ ಜವಾಬ್ದಾರಿ ಆಗಬೇಕು. ಆತ್ಮನಿರ್ಭರ್ ಭಾರತ್ ಸರ್ಕಾರಿ ಕಾರ್ಯಕ್ರಮ ಅಲ್ಲ. ಇದು ಸಮಾಜದ ಜನಾಂದೋಲನ. 75 ವರ್ಷಗಳ ನಂತರ ಕೆಂಪುಕೋಟೆಯಲ್ಲಿ ಭಾರತದಲ್ಲಿ ತಯಾರಾದ ತೋಪುಗಳಿಂದ ಗೌರವ ಸಲ್ಲಿಕೆಯಾಗುತ್ತಿದೆ. – ನರೇಂದ್ರ ಮೋದಿ

  • 15 Aug 2022 08:23 AM (IST)

    PM Modi Independence Day Speech Live: ಭಾರತವೇ ಮೊದಲು, ಇದು ನಮ್ಮ ಮಂತ್ರವಾಗಲಿ

    ನಮ್ಮ ಎಲ್ಲ ಚಿಂತನೆ, ನಡವಳಿಕೆಯಲ್ಲಿ ಭಾರತವೇ ಮೊದಲು ಎನ್ನುವ ಆಲೋಚನೆ ಬರಬೇಕು. ಎಷ್ಟೆಲ್ಲಾ ವೈವಿಧ್ಯತೆಯಿದ್ದರೂ ದೇಶದ ಪ್ರಗತಿಗ ಒಗ್ಗಟ್ಟು ಅತ್ಯಂತ ಅಗತ್ಯ. ಯಾವುದೇ ಕಾರಣದಿಂದ ನಮ್ಮಲ್ಲಿ ವಿಕೃತಿ ಬಂದಿದ್ದರೂ ಅದನ್ನು ಬಿಡಬೇಕು. ಹೆಣ್ಣುಮಕ್ಕಳನ್ನು ಗೌರವಿಸಬೇಕು. ನಾವು ಸ್ವಭಾವದಿಂದ, ಸಂಸ್ಕಾರದಿಂದ ಹೆಣ್ಣುಮಕ್ಕಳನ್ನು ಗೌರವದಿಂದ ಕಾಣಬೇಕು. – ನರೇಂದ್ರ ಮೋದಿ

  • 15 Aug 2022 08:21 AM (IST)

    PM Modi Independence Day Speech Live: ಜನ ಕಲ್ಯಾಣದಿಂದ ಜಗ ಕಲ್ಯಾಣ

    ಜನ ಕಲ್ಯಾಣದಿಂದ ಜಗ ಕಲ್ಯಾಣ ಎನ್ನುವುದು ನಮ್ಮ ಪರಂಪರೆ. ಇದು ನಮ್ಮ ಪ್ರಾಣಶಕ್ತಿ. ನಮ್ಮ ಮುಂದಿನ 25 ವರ್ಷಗಳಲ್ಲಿ ಕನಸುಗಳು ಈಡೇರಲು ಈ ಸಂಕಲ್ಪ ಅನಿವಾರ್ಯ. ಪ್ರಕೃತಿಯನ್ನು ಪೂಜಿಸುವ ನಮ್ಮ ದೇಶದ ಪರಂಪರೆಯು ಇಂದಿನ ಹವಾಮಾನ ವೈಪರಿತ್ಯಕ್ಕೆ ಉತ್ತರವಾಗಿದೆ. ಪ್ರಕೃತಿಯೊಂದಿಗೆ ಹೊಂದಿಕೊಂಡು ಬದುಕುವವರು ನಾವು. -ನರೇಂದ್ರ ಮೋದಿ

  • 15 Aug 2022 08:19 AM (IST)

    PM Modi Independence Day Speech Live: ದೇವನೊಬ್ಬ ನಾಮ ಹಲವು ಎಂದವರು ನಾವು

    ಭಾರತದ ಕಿರುಧಾನ್ಯಗಳ (ಸಿರಿಧಾನ್ಯಗಳು) ಮಹತ್ವ ಇಂದು ಜಗತ್ತಿಗೆ ಅರಿವಾಗಿದೆ. ನಮ್ಮ ಕುಟುಂಬದ ಮೌಲ್ಯಗಳ ಬಗ್ಗೆ ಜಗತ್ತಿಗೆ ಅಚ್ಚರಿ, ಗೌರವ ಇದೆ. ನಮ್ಮ ತಾಯಂದಿರ ತ್ಯಾಗದಿಂದ ರೂಪುಗೊಂಡಿರುವ ವ್ಯವಸ್ಥೆ ಇದು. ಅದು ನಮ್ಮ ಪರಂಪರೆ. ಜನರಲ್ಲಿ ದೇವರನ್ನು ನೋಡುವವರು ನಾವು. ನದಿಯನ್ನು ತಾಯಿ ಎಂದು ಗೌರವಿಸುವವರು, ಸಂಕಟದಲ್ಲಿ ಇರುವವರಲ್ಲಿ ಶಂಕರನನ್ನು ನೋಡುತ್ತೇವೆ. ಇದು ನಮ್ಮ ಪರಂಪರೆ. ದೇವನೊಬ್ಬ ನಾಮ ಹಲವು ಎಂದವರು ನಾವು. -ನರೇಂದ್ರ ಮೋದಿ

  • 15 Aug 2022 08:17 AM (IST)

    PM Modi Independence Day Speech Live: ಪರಂಪರೆ ಬಗ್ಗೆ ಹೆಮ್ಮೆ ಪಡೋಣ

    ಗುಲಾಮಿ ಮಾನಸಿಕತೆಯಿಂದ ಬಿಡಿಸಿಕೊಳ್ಳಲು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ನಮ್ಮ ಪರಂಪರೆ ಬಗ್ಗೆ ನಾವು ಹೆಮ್ಮೆ ಪಡಬೇಕು. ಆಗಲೇ ವಿಶ್ವದಲ್ಲಿ ನಮಗೆ ಗೌರವ ಬರುವುದು. ಸಮಗ್ರ ಆರೋಗ್ಯ ಎಂದು ಮಾತನಾಡುವ ವಿಶ್ವದ ಹಲವು ದೇಶಗಳು ಭಾರತದ ಆಯುರ್ವೇದ, ಯೋಗ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಯತ್ನಿಸುತ್ತಿವೆ. ನಾವು ಪ್ರಕೃತಿಯೊಂದಿಗೆ ಬದುಕುವವರು. -ನರೇಂದ್ರ ಮೋದಿ

  • 15 Aug 2022 08:15 AM (IST)

    PM Modi Independence Day Speech Live: ಪ್ರತಿಭೆಗೆ ಭಾಷೆಯ ಬಂಧನ ಇರಬಾರದು

    ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೋಟ್ಯಂತರ ಜನರೊಂದಿಗೆ ಸಮಾಲೋಚನೆ ನಂತರ ಜಾರಿ ಮಾಡಿದೆವು. ಗುಲಾಮಿ ಚಿಂತನೆಯಿಂದ ನಾವು ಮುಕ್ತರಾಗಬೇಕು. ನಮ್ಮ ಪ್ರತಿಭೆ ಭಾಷೆಯ ಬಂಧನದಲ್ಲಿ ನಲುಗುತ್ತದೆ. ಇದು ಗುಲಾಮಿ ಮನಃಸ್ಥಿತಿಯ ಪ್ರತೀಕ. ನಮ್ಮ ದೇಶದ ಎಲ್ಲ ಭಾಷೆಗಳ ಬಗ್ಗೆ ನಮಗೆ ಹೆಮ್ಮೆ ಇರಬೇಕು. -ನರೇಂದ್ರ ಮೋದಿ

  • 15 Aug 2022 08:13 AM (IST)

    PM Modi Independence Day Speech Live: ಸಂಕಲ್ಪ ಮಾಡಿ ಮುನ್ನಡೆದರೆ ಎಲ್ಲವೂ ಸಾಧ್ಯವಿದೆ

    ನಮ್ಮ ದೇಶವು ಇಂಥ ಎಷ್ಟೋ ಸಂಕಲ್ಪಗಳನ್ನು ಈಡೇರಿಸಿದೆ. ಸ್ವಚ್ಛ ಭಾರತ್ ಸಂಕಲ್ಪ, ಲಸಿಕೆ ಅಭಿಯಾನ ಇಂಥದ್ದೇ ಸಂಕಲ್ಪಗಳು ಈಡೇರಿದ ಉದಾಹರಣೆಗಳಾಗಿವೆ. ದೇಶದ ಮೂಲೆಮೂಲೆಗಳಿಗೆ ವಿದ್ಯುತ್ ಸಂಪರ್ಕ, ನಲ್ಲಿಗಳ ಮೂಲಕ ನೀರು ಸಂಪರ್ಕ ಕಡಿಮೆ ಸಾಧನೆಯಲ್ಲ. ಸಂಕಲ್ಪ ಮಾಡಿ ಮುನ್ನಡೆದರೆ ಎಲ್ಲವೂ ಸಾಧ್ಯವಿದೆ. ನವೀಕರಿಸಬಹುದಾದ ಇಂಧನಗಳು, ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆ ಸೇರಿದಂತೆ ಹಲವು ವಿಚಾರಗಳಲ್ಲಿ ಭಾರತದ ಮುನ್ನಡೆ ಗಮನೀಯವಾಗಿದೆ. -ಮೋದಿ

  • 15 Aug 2022 08:10 AM (IST)

    PM Modi Independence Day Speech Live: ತ್ರಿವರ್ಣ ಧ್ವಜದ ಎದುರು ಸಂಕಲ್ಪ ಮಾಡೋಣ

    ಅಮೃತಕಾಲದ ಮೊದಲ ಮುಂಜಾವಿನಲ್ಲಿ ನಾವು ಇಂದು ಇದ್ದೇವೆ. ದೇಶವು ಸ್ವಾತಂತ್ರ್ಯ ಪಡೆದು 100 ವರ್ಷಗಳಾಗುವ ಹೊತ್ತಿಗೆ ಭಾರತದ ಕನಸುಗಳನ್ನು ಈಡೇರಿಸುವ ಕಾಲ. ತ್ರಿವರ್ಣ ಧ್ವಜದ ಎದುರು ನಾವು ಪ್ರತಿಜ್ಞೆ ಮಾಡಿದರೆ ಅದು ನಮಗೆ ಶಕ್ತಿ ಕೊಡುತ್ತದೆ. ನಮ್ಮ ದೇಶವು ಅಭಿವೃದ್ಧಿ ಹೊಂದಿದ ದೇಶವಾಗಬೇಕು. ಮನುಷ್ಯನೇ ನಮ್ಮ ಚಿಂತನೆಯ ಕೇಂದ್ರವಾಗಬೇಕು. -ಮೋದಿ

  • 15 Aug 2022 08:08 AM (IST)

    PM Modi Independence Day Speech Live: ಪಂಚಪ್ರಾಣಗಳ ಹೆಸರಿನಲ್ಲಿ ಐದು ಸಂಕಲ್ಪ ವಿವರಿಸಿದ ಮೋದಿ

    ಪಂಚಪ್ರಾಣಗಳ ಹೆಸರಿನಲ್ಲಿ ಐದು ಸಂಕಲ್ಪಗಳನ್ನು ದೇಶದ ಎದುರು ತೆರೆದಿಟ್ಟ ನರೇಂದ್ರ ಮೋದಿ. ದೇಶವು ಸ್ವಾತಂತ್ರ್ಯ ದಿನಾಚರಣೆಯ ಶತಮಾನೋತ್ಸವದ ಒಳಗೆ ಈ ಆಶಯಗಳು ಈಡೇರಬೇಕು ಎಂದು ಮೋದಿ ಕರೆ ನೀಡಿದರು.

    1) ವಿಕಸಿತ ಭಾರತ

    2) ಸ್ವಾಭಿಮಾನಿ ಭಾರತ (ಎಲ್ಲಿಯೂ ಜೀತ ಪದ್ಧತಿ ಇರಬಾರದು)

    3) ಪರಂಪತೆಯ ಬಗ್ಗೆ ಹೆಮ್ಮೆ (ವಿರಾಸತ್)

    4) ಏಕತೆ

    5) ನಾಗರಿಕ ಕರ್ತವ್ಯ

  • 15 Aug 2022 08:05 AM (IST)

    PM Modi Independence Day Speech Live: ವಿಕಸಿತ ಭಾರತದ ಸಂಕಲ್ಪದಲ್ಲಿ ರಾಜಿ ಇಲ್ಲ

    ಕಳೆದ 75 ವರ್ಷಗಳಲ್ಲಿ ನಮ್ಮ ದೇಶವೂ ಎಷ್ಟೇ ಗಂಡಾಂತರಗಳನ್ನು ಎದುರಿಸಿದ್ದರೂ ನಾವು ಹಲವು ವಿಚಾರಗಳಲ್ಲಿ ಸಫಲರಾಗಿದ್ದೇವೆ. ಈಗ ದೇಶವು ಅಮೃತ ಕಾಲಕ್ಕೆ ಹೆಜ್ಜೆ ಇಡುತ್ತಿದೆ. ಮುಂದಿನ ದಿನಗಳಲ್ಲಿ ನಾವು ಮಾಡುವ ಸಂಕಲ್ಪಗಳನ್ನು ಈಡೇರಿಸಬೇಕು. ನಾವು ಪಂಚಪ್ರಾಣವನ್ನು ಒಂದಾಗಿಸಿ, 20147ರಲ್ಲಿ ನಡೆಯುವ ಸ್ವಾತಂತ್ರ್ಯದ ಶತಮಾನೋತ್ಸವದಲ್ಲಿ ನಾವು ಧೈರ್ಯದಿಂದ ಹೆಜ್ಜೆ ಹಾಕಬೇಕು. ನಾವು ದೊಡ್ಡ ಸಂಕಲ್ಪದೊಂದಿಗೆ ಹೆಜ್ಜೆ ಹಾಕಬೇಕು. ಅದೆಂದರೆ ವಿಕಸಿತ ಭಾರತ. ಅದರಲ್ಲಿ ಯಾವುದೇ ರಾಜಿ ಇಲ್ಲ.

  • 15 Aug 2022 08:02 AM (IST)

    PM Modi Independence Day Speech: ರಾಜಕಾರಣದಲ್ಲಿ ಸ್ಥಿರತೆಯ ಮಹತ್ವ ಜನರಿಗೆ ಅರಿವಾಗಿದೆ

    ರಾಜಕಾರಣದಲ್ಲಿ ಸ್ಥಿರತೆಯ ಮಹತ್ವ, ನೀತಿ ನಿರೂಪಣೆ ಮತ್ತು ಅದನ್ನು ಅನುಷ್ಠಾನಗೊಳಿಸುವಲ್ಲಿ ಬದ್ಧತೆ ಎಷ್ಟು ಮುಖ್ಯ ಎನ್ನುವುದು ದೇಶಕ್ಕೆ ಈಗ ಅರಿವಾಗಿದೆ. ಹೀಗಾಗಿಯೇ ಎಲ್ಲರ ಅಭಿವೃದ್ಧಿ, ಎಲ್ಲರೊಂದಿಗೆ ಅಭಿವೃದ್ಧಿ ಎನ್ನುವ ಮಂತ್ರಕ್ಕೆ ದೇಶವಾಸಿಗಳು ಸಹಕಾರ ಕೊಡುತ್ತಿದ್ದಾರೆ. ನಮ್ಮ ಸಾಮೂಹಿಕ ಶಕ್ತಿ, ಸಾಮರ್ಥ್ಯ ಏನು ಎಂಬುದು ನಮಗೆ ಈಗ ಅರಿವಾಗಿದೆ. ಇದಕ್ಕೆ ಸ್ವತಂತ್ರ ಭಾರತದ ಅಮೃತ ಮಹೋತ್ಸವ ಆಚರಣೆ ನಡೆದ ರೀತಿಯೇ ಸಾಕ್ಷಿ. ಹಳ್ಳಿಹಳ್ಳಿಗಳಲ್ಲಿ ಜಲಸಂರಕ್ಷಣೆ ಸೇರಿದಂತೆ ಹಲವು ರೀತಿಯ ಕಾರ್ಯಕ್ರಮಗಳು ನಡೆಯುತ್ತಿವೆ. -ನರೇಂದ್ರ ಮೋದಿ

  • 15 Aug 2022 07:59 AM (IST)

    PM Modi Independence Day Speech: ಭಾರತದಲ್ಲಿ ಈಗ ಪುನರ್​ ಜಾಗರಣ ಆಗುತ್ತಿದೆ

    ದೇಶವು ಒಂದಾಗಿ ಕೊರೊನಾ ವಾರಿಯರ್​ಗಳಿಗೆ ಅಭಿನಂದಿಸಿತು, ಸಹಯೋಗ ನೀಡಿತು, ಲಸಿಕೆ ಪಡೆದುಕೊಂಡ ಜನರು ಭಾರತದ ಸತ್ವ ಏನೆಂದು ವಿಶ್ವದ ಎದುರು ಮನಗಾಣಿಸಿದರು. ಭಾರತಕ್ಕೆ ಈಗ ಹೊಸ ಶಕ್ತಿ ಬಂದಿದೆ. ಭಾರತದಲ್ಲಿ ಈಗ ಪುನರ್​ ಜಾಗರಣ ಆಗುತ್ತಿದೆ. ಸ್ವಾತಂತ್ರ್ಯದ ಹೊಸ ಕಾಲದಲ್ಲಿ ಇಡೀ ಜಗತ್ತು ಇತ್ತ ಕಡೆ ನೋಡುತ್ತಿದೆ. ಅವರ ನೋಟದಲ್ಲಿ ಹೆಮ್ಮೆಯೊಂದಿಗೆ ನಿರೀಕ್ಷೆಗಳೂ ಇವೆ. ವಿಶ್ವದ ಈ ಬದಲಾವಣೆಯು, ವಿಶ್ವದ ಯೋಚನೆಯಲ್ಲಿ ಆಗಿರುವ ಬದಲಾವಣೆಗೆ 75 ವರ್ಷಗಳ ಸತತ ಪರಿಶ್ರಮ ಕಾರಣ. – ಮೊದಿ

  • 15 Aug 2022 07:55 AM (IST)

    PM Modi Independence Day Speech Live: ಜನರಿಗೆ ಕಾಯುವ ವ್ಯವಧಾನವಿಲ್ಲ, ನಾವು ಅವರೊಂದಿಗೆ ಹೆಜ್ಜೆ ಹಾಕಬೇಕು

    ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಸಬಲನನ್ನಾಗಿಸಲು ಮಹಾತ್ಮಾ ಗಾಂಧಿ ಪ್ರಯತ್ನಿಸಿದರು. ಭಾರತವು ಈಗ ಅಮೃತ ಕಾಲದತ್ತ ಮುನ್ನಡೆಯುತ್ತಿದೆ. ಇಂದು ಭಾರತದ ಮೂಲೆಮೂಲೆಗಳಲ್ಲಿ, ಎಲ್ಲ ಜನವರ್ಗದಲ್ಲಿ ಆಕಾಂಕ್ಷೆ ಬೆಳೆಯುತ್ತಿದೆ. ದೇಶದ ಎಲ್ಲ ನಾಗರಿಕರು ಬದಲಾವಣೆ ನೋಡಲು ಆಸೆ ಪಡುತ್ತಿದ್ದಾರೆ. ಆದರೆ ಕಾಯಲು ತಯಾರಿಲ್ಲ, ತಮ್ಮ ಕಣ್ಣಿನ ಎದುರೇ ದೇಶ ಅಭಿವೃದ್ಧಿಯತ್ತ ದಾಪುಗಾಲು ಇಡುವುದನ್ನು ನೋಡಲು ಬಯಸುತ್ತಿದ್ದಾರೆ. ಸರ್ಕಾರಗಳು ಸಮಯದೊಂದಿಗೆ ಹೆಜ್ಜೆ ಹಾಕಬೇಕಾಗುತ್ತದೆ. ಕೇಂದ್ರ ಸರ್ಕಾರವೇ ಆಗಲಿ, ರಾಜ್ಯ ಸರ್ಕಾರವೇ ಆಗಲಿ, ಸ್ಥಳೀಯ ಸಂಸ್ಥೆಗಳೇ ಆಗಲಿ… ಎಲ್ಲ ಬಗೆಯ ಸರ್ಕಾರಿ ಸಂಸ್ಥೆಗಳು ಸಮಾಜದ ಆಶೋತ್ತರಗಳಿಗೆ ಸ್ಪಂದಿಸಬೇಕು. – ನರೇಂದ್ರ ಮೋದಿ.

  • 15 Aug 2022 07:50 AM (IST)

    PM Modi Independence Day Speech Live: ವೈವಿಧ್ಯತೆಯೇ ಭಾರತದ ಶಕ್ತಿ, ಭಾರತವೇ ಪ್ರಜಾಪ್ರಭುತ್ವದ ಜನನಿ

    ಸ್ವಾತಂತ್ರ್ಯ ಹೋರಾಟ ವಿಫಲಗೊಳಿಸಲು ಹತ್ತಾರು ರೀತಿಯಲ್ಲಿ ಪ್ರಯತ್ನಗಳು ನಡೆದವು. ಆದರೆ ಇದು ಭಾರತದ ಹೋರಾಟ. ಇಲ್ಲಿನ ಮಣ್ಣಿನ ಶಕ್ತಿ ಮತ್ತು ಸತ್ವ ಅಂಥದ್ದು. ಯುದ್ಧಗಳನ್ನು ಎದುರಿಸಿದ್ದೇವೆ, ಭಯೋತ್ಪಾದನೆಯ ಸಮಸ್ಯೆ ವಿರುದ್ಧ ಹೋರಾಡುತ್ತಿದ್ದೇವೆ. ಆದರೂ ಅಭಿವೃದ್ಧಿಯ ಪ್ರಯತ್ನಗಳನ್ನು ನಿಲ್ಲಿಸಿಲ್ಲ. ಭಾರತವು ಸದಾ ಮುನ್ನಡೆ ಸಾಧಿಸುತ್ತಲೇ ಇದೆ. ವೈವಿಧ್ಯತೆಯೇ ಭಾರತದ ಶಕ್ತಿ. ಅದು ಶಕ್ತಿಯ ಅದಮ್ಯ ಪ್ರವಾಹವಾಗಿದೆ. ಭಾರತದ ಜೊತೆಗೆ ಪರಂಪರೆಯಿಂದ ಬಂದಿರುವ ಸಾಮರ್ಥ್ಯವಿದೆ ಎನ್ನುವುದು ಜಗತ್ತಿಗೆ ಗೊತ್ತಿಲ್ಲ. ಅದೆಂದರೆ ಭಾರತವೇ ವಿಶ್ವ ಪ್ರಜಾಪ್ರಭುತ್ವದ ಜನನಿ (Mother of Democracy).

  • 15 Aug 2022 07:45 AM (IST)

    PM Modi Independence Day Speech Live: ದೇಶದ ಸಂಕಲ್ಪ ಪೂರ್ಣಗೊಳಿಸುವವರನ್ನು ಗೌರವಿಸೋಣ

    ಸ್ವಾತಂತ್ರ್ಯ ದಿನದ ಹಿಂದಿನ ದಿನ ಭಾರತವು ವಿಭಜನೆಯ ದುರಂತವನ್ನು ಭಾರವಾದ ಹೃದಯದಿಂದ ನೆನಪಿಸಿಕೊಂಡಿದೆ. ಕೋಟ್ಯಂತರ ಜನರು ಹೊಸ ಜೀವನ ಆರಂಭಿಸುವ ನಿರೀಕ್ಷೆಯೊಂದಿಗೆ ಭಾರತಕ್ಕೆ ಬಂದಿದ್ದರು. ನಾವು ಇಂದು ಸ್ವತಂತ್ರ ಭಾರತದ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದೇವೆ. ದೇಶವನ್ನು ರಕ್ಷಿಸುವವರ, ದೇಶದ ಸಂಕಲ್ಪ ಪೂರ್ಣಗೊಳಿಸುವವರನ್ನು ಗೌರವಿಸೋಣ. ಅವರು ಸೇನೆ, ಪೊಲೀಸ್, ಶಾಸಕರು, ಜನಪ್ರತಿನಿಧಿಗಳು ಅಥವಾ ಬೇರೆ ಯಾರೇ ಇರಬಹುದು. ಅಂಥವರನ್ನು ಗೌರವಿಸೋಣ ಎಂದು ಮೋದಿ ಹೇಳಿದರು.

  • 15 Aug 2022 07:41 AM (IST)

    PM Modi Independence Day Speech Live: ನಾರಾಯಣಗುರು ಸ್ಮರಿಸಿದ ಮೋದಿ

    ನಾರಾಯಣ ಗುರು, ಸ್ವಾಮಿ ವಿವೇಕಾನಂದ, ಮಹರ್ಷಿ ಅರವಿಂದ, ಗುರುದೇವ್ ರವೀಂದ್ರ ನಾಥ್ ಠಾಗೋರ್ ಸೇರಿದಂತೆ ಹಲವು ಮಹಾಪುರುಷರು ದೇಶದ ಮೂಲೆಮೂಲೆಗಳಲ್ಲಿ ದೇಶಭಕ್ತಿ ಬಿತ್ತಿದರು. ಅಮೃತ ಮಹೋತ್ಸವದ ಮೂಲಕ ನಾವು ಇವರೆಲ್ಲರನ್ನೂ ಗೌರವಿಸಬೇಕು. ಅಮೃತ ಮಹೋತ್ಸವ ಪ್ರಯುಕ್ತ ವಿಶಾಲ ಭಾರತದ ಮೂಲೆಮೂಲೆಗಳಲ್ಲಿ ನಮ್ಮ ಮಹಾಪುರುಷರನ್ನು ಸ್ಮರಿಸಿ ಗೌರವಿಸಿದ್ದೇವೆ. ಇದು ಮಹತ್ವದ ವಿದ್ಯಮಾನ ಎಂದು ಮೋದಿ ಹೇಳಿದರು.

  • 15 Aug 2022 07:39 AM (IST)

    PM Modi Independence Day Speech Live: ಬಾಪು, ನೇತಾಜಿ, ಅಂಬೇಡ್ಕರ್, ಸಾವರ್ಕರ್​ಗೆ ನಾವು ಕೃತಜ್ಞರು

    ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವುದು. ದೇಶದ ಮುನ್ನಡೆಯ ಕನಸು ಬಿತ್ತಿದ ಮಹಾತ್ಮ ಗಾಂಧಿ, ನೇತಾಜಿ ಸುಭಾಷ್ ಚಂದ್ರ ಬೋಸ್, ಬಾಬಾಸಾಹೇಬ್ ಅಂಬೇಡ್ಕರ್, ವೀರ ಸಾವರ್ಕರ್​ಗೆ ಅವರಿಗೆ ನಾವು ಕೃತಜ್ಞರು. ಮಂಗಲ್ ಪಾಂಡೆ ಸೇರಿದಂತೆ ಹಲವು ಹೋರಾಟಗಾರರು ತಮ್ಮ ಸರ್ವಸ್ವವನ್ನೂ ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ರಾಣಿ ಲಕ್ಷ್ಮೀಬಾಯಿ, ದುರ್ಗಾಬಾಭಿ, ರಾಣಿ ಚೆನ್ನಮ್ಮ ಸೇರಿದಂತೆ ಹಲವು ಹೋರಾಟಗಾರ್ತಿಯರು ಭಾರತದ ಶಕ್ತಿ ಏನೆಂದು ತೋರಿಸಿದ್ದಾರೆ ಎಂದು ಮೋದಿ ನೆನಪಿಸಿಕೊಂಡರು.

  • 15 Aug 2022 07:37 AM (IST)

    PM Modi Independence Day Speech Live: ವಿಶ್ವದ ಮೂಲೆಮೂಲೆಗಳಲ್ಲಿ ತ್ರಿವರ್ಣ ಧ್ವಜ ಕಂಗೊಳಿಸುತ್ತಿದೆ

    ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿರುವ ಈ ಶುಭ ದಿನದಂದು ವಿಶ್ವದ ಹಲವು ದೇಶಗಳಲ್ಲಿ ನಮ್ಮ ತ್ರಿವರ್ಣ ಧ್ವಜ ಹಾರಾಡುತ್ತಿದೆ. ನಮ್ಮ ದೇಶದ ಅಗಣಿತ ಜನರು ಯಾತನೆ ಅನುಭವಿಸಿ ಆಹುತಿ ಮಾಡಿಕೊಂಡಿದ್ದರಿಂದ ನಮಗೆ ಸ್ವಾತಂತ್ರ್ಯ ಲಭಿಸಿತು. ಎಲ್ಲ ತ್ಯಾಗಿಗಳನ್ನು ನಾವು ಸ್ಮರಿಸಬೇಕು.

  • 15 Aug 2022 07:29 AM (IST)

    Independence Day Speech: ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ

    ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.

  • 15 Aug 2022 07:21 AM (IST)

    Independence Day Live: ಕೆಂಪು ಕೋಟೆಯಲ್ಲಿ ಮೋದಿಗೆ ಗೌರವ ವಂದನೆ

    ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಗೆ ತಲುಪಿದರು. ವಾಯುಪಡೆ, ನೌಕಾಪಡೆ ಮತ್ತು ಭೂಸೇನೆಯ ತುಕಡಿಗಳು ಪ್ರಧಾನಿಗೆ ಶಿಷ್ಟಾಚಾರದಂತೆ ಗೌರವ ವಂದನೆ ಸಲ್ಲಿಸಿದವು.

  • 15 Aug 2022 07:16 AM (IST)

    Independence Day Live: ರಾಜ್​ಘಾಟ್​ನಲ್ಲಿ ಮಹಾತ್ಮ ಗಾಂಧಿ ಸಮಾಧಿಗೆ ಮೋದಿ ನಮನ

    ದೆಹಲಿ: ಸ್ವತಂತ್ರ ಭಾರತದ ಅಮೃತ ಮಹೋತ್ಸವದ ಪ್ರಯುಕ್ತ ದೆಹಲಿಯ ಕೆಂಪುಕೋಟೆಯಲ್ಲಿ ನಡೆಯಲಿರುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನರೇಂದ್ರ ಮೋದಿ ಅವರು ರಾಜ್​ಘಾಟ್​ನಿಂದ ತೆರಳಿದರು. ರಾಜ್​ಘಾಟ್​ನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಸಮಾಧಿಗೆ ಮೋದಿ ಗೌರವ ನಮನ ಸಲ್ಲಿಸಿದರು.

  • 15 Aug 2022 06:47 AM (IST)

    Independece Day Speech: ಪ್ರಧಾನಿ ಮೋದಿ ಭಾಷಣವನ್ನು ನೋಡುವುದು ಹೇಗೆ?

    ಪ್ರಧಾನಿ ಮೋದಿಯವರ ಭಾಷಣವನ್ನು ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೋ ನೇರಪ್ರಸಾರ ಮಾಡಲಿದೆ. ಪ್ರಧಾನ ಮಂತ್ರಿಯವರ ಭಾಷಣವನ್ನು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಯುಟ್ಯೂಬ್ ಚಾನೆಲ್ ಮತ್ತು ಟ್ವಿಟರ್ ಹ್ಯಾಂಡಲ್ ಮೂಲಕ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ.

  • 15 Aug 2022 06:44 AM (IST)

    Independecne Day Celebration: ಕೆಂಪು ಕೋಟೆ ಕಾರ್ಯಕ್ರಮಕ್ಕೆ ಬಿಗಿ ಭದ್ರತೆ

    ಕೆಂಪುಕೋಟೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಏಳು ಸಾವಿರ ಜನರು ಭಾಗಿಯಾಗುವ ನಿರೀಕ್ಷೆ ಇದೆ. ಕೇಂದ್ರಿಯ ಮೀಸಲು ಪಡೆ ಒಳಗೊಂಡಂತೆ ಹತ್ತು ಸಾವಿರ ಪೊಲೀಸ್ ಸಿಬ್ಬಂದಿಯಿಂದ ಭದ್ರತೆ ಕೈಗೊಳ್ಳಲಾಗಿದೆ. FRS (Facial recognition system) ತಂತ್ರಜ್ಞಾನ ಹೊಂದಿರುವ ಸಿಸಿಟಿವಿ ಅಳವಡಿಸಲಾಗಿದೆ. ಮೇಲುಸ್ತುವಾರಿಗಾಗಿ ವಿಶೇಷ ಟೀಂ ರಚನೆ ಮಾಡಲಾಗಿದ್ದು ಅನುಮಾನಸ್ಪದ ವ್ಯಕ್ತಿಗಳ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಡ್ರೋನ್, ಗಾಳಿಪಟ ಹಾರಾಟ ನಿಷೇಧ, ಅನುಮಾನಾಸ್ಪದ ಡ್ರೋನ್ ತಡೆಯಲು ಡಿಆರ್‌ಡಿಓ ರೂಪಿಸಿರುವ ಆಂಟಿ ಡ್ರೋನ್ ಸಿಸ್ಟಮ್ ಅಳವಡಿಸಲಾಗಿದೆ.

  • 15 Aug 2022 06:39 AM (IST)

    ಸ್ವಾತಂತ್ರೋತ್ಸವ ಶುಭಾಶಯ ಕೋರಿದ ಪ್ರಧಾನಿ ಮೋದಿ

    ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಜನತೆಗೆ ಸ್ವಾತಂತ್ರ್ಯೋತ್ಸವ ಶುಭಾಶಯ ಕೋರಿದ್ದಾರೆ. ‘ಎಲ್ಲ ದೇಶವಾಸಿಗಳಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು’ ಎಂದು ಮೋರಿ ಅವರು ಟ್ವೀಟ್ ಮಾಡಿದ್ದಾರೆ.

  • Published On - Aug 15,2022 6:35 AM

    Follow us
    ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
    ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
    ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
    ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
    ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
    ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
    ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
    ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
    ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
    ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
    ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
    ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
    ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
    ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
    ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
    ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
    ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
    ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
    ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
    ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ