- Kannada News Photo gallery Azadi ka Amrit Mahotsav On the eve of Independence Day Har Ghar Tiranga celebrations
Independence Day ಸ್ವತಂತ್ರ ಭಾರತದ ಅಮೃತ ಮಹೋತ್ಸವಕ್ಕೆ ದೇಶ ಸಜ್ಜು; ಮನೆ ಮನಗಳಲ್ಲಿ ಹಾರಾಡಿದ ತಿರಂಗ
ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಲು ದೇಶ ಸಿದ್ದವಾಗಿದೆ. ಸ್ವಾತಂತ್ರ್ಯ ದಿನದ ಮುನ್ನಾದಿನ ದೇಶದ ವಿವಿಧ ಭಾಗಗಳಲ್ಲಿ ಕಂಡು ಬಂದ ಸಿದ್ಧತೆ, ಹರ್ ಘರ್ ತಿರಂಗ ಅಭಿಯಾನದ ಝಲಕ್ ಇಲ್ಲಿದೆ
Updated on:Aug 14, 2022 | 4:55 PM

'ಆಜಾದಿ ಕಾ ಅಮೃತ್ ಮಹೋತ್ಸವ'ದ ಸಂದರ್ಭದಲ್ಲಿ ಮಂಗಳೂರಿನ ಗೋಕರ್ಣನಾಥೇಶ್ವರ ದೇವಸ್ಥಾನದ ಆವರಣದಲ್ಲಿ ಆಹಾರ ಧಾನ್ಯಗಳಿಂದ ತಯಾರಿಸಿದ ತ್ರಿವರ್ಣ ಧ್ವಜ

ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ಅಹಮದಾಬಾದ್‌ನಲ್ಲಿರುವ ಸ್ವಾಮಿನಾರಾಯಣ ದೇವಸ್ಥಾನವನ್ನು ರಾಷ್ಟ್ರಧ್ವಜದಿಂದ ಅಲಂಕರಿಸಲಾಗಿದೆ

ಭಾನುವಾರದಂದು ಅಹಮದಾಬಾದ್‌ನಲ್ಲಿ ನಗರದ ಹೆರಿಟೇಜ್ ಗೇಟ್ ತ್ರಿವರ್ಣದಲ್ಲಿ ಕಂಗೊಳಿಸಿದ್ದು ಹೀಗೆ

ಭಾನುವಾರ ಅಮೃತಸರ ಬಳಿಯ ಭಾರತ-ಪಾಕಿಸ್ತಾನ ಅಟ್ಟಾರಿ-ವಾಘಾ ಗಡಿ ಪೋಸ್ಟ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ಮಗುವಿನ ಮುಖದ ಮೇಲೆ ಕಂಡ ತ್ರಿವರ್ಣ ಧ್ವಜದ ಚಿತ್ರ

ಬಿಕಾನೇರ್‌ನಲ್ಲಿ 'ಹರ್ ಘರ್ ತಿರಂಗ' ಅಭಿಯಾನದ ಭಾಗವಾಗಿ ಬ್ರಹ್ಮಕುಮಾರಿಯರು ರಾಷ್ಟ್ರಧ್ವಜಗಳನ್ನು ವಿತರಿಸಿರುವುದು

ರಕ್ಷಣಾ ಸಚಿವಾಲಯದ ಅಡಿಯಲ್ಲಿ DHQ ಭದ್ರತಾ ಪಡೆಗಳು 75 ವರ್ಷಗಳ ಸ್ವಾತಂತ್ರ್ಯದ ಸ್ಮರಣಾರ್ಥವಾಗಿ 7.5 ಕಿಮೀ ಓಟದಲ್ಲಿ ಭಾಗವಹಿಸಿದರು

ಜಲಂಧರ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು 'ಹರ್ ಘರ್ ತಿರಂಗ' ಅಭಿಯಾನದಲ್ಲಿ ರಾಷ್ಟ್ರಧ್ವಜಗಳನ್ನು ಹಿಡಿದ ಜನರು ನರ್ಮದಾ ನದಿಯಲ್ಲಿ ಈಜುತ್ತಿರುವುದು

ಜಮ್ಮುವಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು 'ಹರ್ ಘರ್ ತಿರಂಗ' ಅಭಿಯಾನದಲ್ಲಿ ಭಾಗವಹಿಸಿದ ಜನ

ಜೋಧ್‌ಪುರದಲ್ಲಿ ನಡೆದ ಸ್ಕೇಟಿಂಗ್-ರ್ಯಾಲಿಯಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದಿರುವ ಮಕ್ಕಳು

ನೋಯ್ಡಾ ಸೆಕ್ಟರ್ 39ರಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಲಾ ಶಿಕ್ಷಕರು

ಜಾರ್ಖಂಡ್ ಪೊಲೀಸ್ ಸಿಬ್ಬಂದಿ ರಾಂಚಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ಆಯೋಜಿಸಲಾದ 'ತಿರಂಗ ಯಾತ್ರೆ'

ನವಿ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ನವಿ ಮುಂಬೈ ಪೊಲೀಸರು ಜಂಟಿಯಾಗಿ 'ಆಜಾದಿ ಕಾ ಅಮೃತ್ ಮಹೋತ್ಸವ'ದ ಅಂಗವಾಗಿ ನವಿ ಮುಂಬೈನ ಬೇಲಾಪುರದಲ್ಲಿ ಆಯೋಜಿಸಿದ ಓಟ

ತಿರುವನಂತಪುರಂನ ಪಂಗೋಡ್ ಮಿಲಿಟರಿ ನೆಲೆಯಲ್ಲಿ 'ಹರ್ ಘರ್ ತಿರಂಗ' ಅಭಿಯಾನದಲ್ಲಿ ಸೇನಾ ಸಿಬ್ಬಂದಿ
Published On - 4:54 pm, Sun, 14 August 22




