AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅದಾನಿ-ಹಿಂಡೆನ್‌ಬರ್ಗ್ ವಿವಾದ: ಸೆಬಿ ಈಗಾಗಲೇ ತನಿಖೆಯನ್ನು ಕೈಗೆತ್ತಿಕೊಂಡಿದೆ ಎಂದ ಕೇಂದ್ರ ಸರ್ಕಾರ

Adani-Hindenburg row: ದೇ ವೇಳೆ ಅದಾನಿ ಗ್ರೂಪ್ ಆಫ್ ಕಂಪನಿಗಳ ವಿರುದ್ಧ ಮಾಡಿರುವ ಆರೋಪಗಳ ತನಿಖೆಗೆ ಸರ್ಕಾರ ಯಾವುದೇ ಸಮಿತಿಯನ್ನು ರಚಿಸಿಲ್ಲ ಎಂದು ಹಣಕಾಸು ಸಚಿವಾಲಯ ಸಂಸತ್​​ಗೆ ತಿಳಿಸಿದೆ.

ಅದಾನಿ-ಹಿಂಡೆನ್‌ಬರ್ಗ್ ವಿವಾದ: ಸೆಬಿ ಈಗಾಗಲೇ ತನಿಖೆಯನ್ನು ಕೈಗೆತ್ತಿಕೊಂಡಿದೆ ಎಂದ ಕೇಂದ್ರ ಸರ್ಕಾರ
ಸಂಸತ್
ರಶ್ಮಿ ಕಲ್ಲಕಟ್ಟ
|

Updated on:Mar 13, 2023 | 4:13 PM

Share

ಹಿಂಡೆನ್‌ಬರ್ಗ್ (Hindenburg) ಆರೋಪದ ವರದಿಯನ್ನು ಹೊರತಂದ ನಂತರ ಅದಾನಿ ಗ್ರೂಪ್ ಆಫ್ ಕಂಪನಿಗಳು (Adani Group)ಅನುಭವಿಸಿದ ಪರಿಣಾಮದ ಕುರಿತು ಕೇಂದ್ರ ಹಣಕಾಸು ಸಚಿವಾಲಯ (Union Finance Ministry) ಸೋಮವಾರ ಲೋಕಸಭೆಯಲ್ಲಿ ಪ್ರಶ್ನೆಗಳಿಗೆ ಉತ್ತರಿಸಿದೆ. ಎರಡು ತಿಂಗಳೊಳಗೆ ಅವರ ಮಾರುಕಟ್ಟೆ ಬಂಡವಾಳೀಕರಣವು 60% ಕ್ಕೆ ಇಳಿದಿದ್ದರೂ ವರದಿಯು ಯಾವುದೇ “ವ್ಯವಸ್ಥಿತ ಮಟ್ಟದಲ್ಲಿ ಮಹತ್ವದ ಪ್ರಭಾವವನ್ನು” ಹೊಂದಿಲ್ಲ ಎಂದು ಸರ್ಕಾರ ಹೇಳಿದೆ. ಅದೇ ವೇಳೆ ಅದಾನಿ ಗ್ರೂಪ್ ಆಫ್ ಕಂಪನಿಗಳ ವಿರುದ್ಧ ಮಾಡಿರುವ ಆರೋಪಗಳ ತನಿಖೆಗೆ ಸರ್ಕಾರ ಯಾವುದೇ ಸಮಿತಿಯನ್ನು ರಚಿಸಿಲ್ಲ ಎಂದು ಹಣಕಾಸು ಸಚಿವಾಲಯ ಸಂಸತ್​​ಗೆ ತಿಳಿಸಿದೆ.

ಅದಾನಿ ಗ್ರೂಪ್‌ ಆಫ್‌ ಕಂಪನಿಗಳಿಂದ ನಡೆದಿರುವ ಆಪಾದಿತ ಸ್ಟಾಕ್‌ ಮ್ಯಾನಿಪುಲೇಷನ್‌ನ ತನಿಖೆಯ ಕುರಿತು ವಿವರಣೆ ಕೋರಿದ್ದ ಕಾಂಗ್ರೆಸ್‌ ಸಂಸದರು, ಟಿಎನ್‌ ಪ್ರತಾಪನ್‌, ಮನೀಷ್‌ ತಿವಾರಿ ಮತ್ತು ಜೋತಿಮಣಿ ಸೆನ್ನಿಮಲೈ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್‌ ಚೌಧರಿ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಈಗಾಗಲೇ ತನಿಖೆಯನ್ನು ಕೈಗೆತ್ತಿಕೊಂಡಿದೆ. ಮಾರ್ಚ್ 2 ರ ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಎರಡು ತಿಂಗಳೊಳಗೆ ಅದನ್ನು ಮುಕ್ತಾಯಗೊಳಿಸುತ್ತದೆ ಎಂದು ಉತ್ತರಿಸಿದ್ದಾರೆ.

ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಈಗಾಗಲೇ ನ್ಯಾಯಾಂಗ ಅಧಿಕಾರಿಗಳ ಮುಂದೆ ತನ್ನ ವರದಿಯನ್ನು ಸಲ್ಲಿಸಿದೆ ಎಂದು ಚೌಧರಿ ಹೇಳಿದ್ದಾರೆ. ಅದಾನಿ ಗ್ರೂಪ್ ಕಂಪನಿಗಳ ವಿದ್ಯುತ್ ಉತ್ಪಾದನೆ, ವಿದ್ಯುತ್ ಪ್ರಸರಣ ಮತ್ತು ಮೂಲಸೌಕರ್ಯ (ಬಂದರು ಮತ್ತು SEZ) ಸಲಕರಣೆಗಳ ಆಮದುಗಳಿಗೆ ಸಂಬಂಧಿಸಿದ ತನಿಖೆಗಳನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಮುಕ್ತಾಯಗೊಳಿಸಿದೆ ಮತ್ತು ಸಂಬಂಧಿತ ನ್ಯಾಯಾಂಗ ಅಧಿಕಾರಿಗಳ ಮುಂದೆ ವರದಿಯನ್ನು ಸಲ್ಲಿಸಲಾಗಿದೆ.

ಅದಾನಿ ಗ್ರೂಪ್ ಆಫ್ ಕಂಪನೀಸ್ ಇಂಡೋನೇಷಿಯನ್ ಕಲ್ಲಿದ್ದಲು ಆಮದು ಮಾಡಿಕೊಳ್ಳುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಲೆಟರ್ಸ್ ರೋಗೇಟರಿ (ಎಲ್‌ಆರ್‌ಗಳು) ಕಾರ್ಯಗತಗೊಳಿಸುವ ಮೂಲಕ ರಫ್ತು ಮಾಡುವ ದೇಶಗಳಿಂದ ಕೋರಿದ ಮಾಹಿತಿಯು ದಾವೆಯ ಹಂತದಲ್ಲಿರುವುದರಿಂದ ಡಿಆರ್‌ಐ ತನಿಖೆ ಅಂತಿಮ ಹಂತವನ್ನು ತಲುಪಿಲ್ಲ.

ಅದಾನಿ ಸಮೂಹವು ಎದುರಿಸಿದ ಪರಿಣಾಮದ ಬಗ್ಗೆ ಬೆಳಕು ಚೆಲ್ಲುವ ಮೂಲಕ ಚೌಧರಿ ತಮ್ಮ ಲಿಖಿತ ಉತ್ತರದಲ್ಲಿ, ಹಿಂಡೆನ್‌ಬರ್ಗ್ ರಿಸರ್ಚ್ ಪ್ರಕಟಿಸಿದ ವರದಿಯ ನಂತರ ಅದಾನಿ ಗ್ರೂಪ್‌ನ ಭಾಗವಾಗಿರುವ ಒಂಬತ್ತು ಪಟ್ಟಿಮಾಡಿದ ಕಂಪನಿಗಳು ಜನವರಿ 24, 2023 ರಿಂದ ಮಾರ್ಚ್ 1 ರವರೆಗೆ ಮಾರುಕಟ್ಟೆ ಬಂಡವಾಳದ ಸುಮಾರು 60% ನಷ್ಟು ಕುಸಿತವನ್ನು ಕಂಡಿವೆ.

ಈ ಕಂಪನಿಗಳ ಷೇರುಗಳಲ್ಲಿನ ಚಂಚಲತೆಯು ವ್ಯವಸ್ಥಿತ ಮಟ್ಟದಲ್ಲಿ ಯಾವುದೇ ಮಹತ್ವದ ಪರಿಣಾಮವನ್ನು ಬೀರಿಲ್ಲ. ನಿಫ್ಟಿ 50 ಜನವರಿ 2023 ರಲ್ಲಿ ಸುಮಾರು 2.9% ರಷ್ಟು ಮತ್ತು ಜನವರಿ ಮತ್ತು ಫೆಬ್ರವರಿ 2023 ರ 2 ತಿಂಗಳ ಅವಧಿಯಲ್ಲಿ ಸುಮಾರು 4.9% ರಷ್ಟು ಕುಸಿದಿದೆ

ಸಾರ್ವಜನಿಕ ವಲಯದ ಸಂಸ್ಥೆಗಳು ಅದಾನಿ ಗ್ರೂಪ್‌ಗೆ ಮಾಡಿರುವ ಹೂಡಿಕೆಗೆ ಸಂಬಂಧಿಸಿದ ಅಂಕಿಅಂಶಗಳನ್ನು ತೋರಿಸಲು ಹಣಕಾಸು ಸಚಿವಾಲಯವನ್ನು ಕೇಳಿದ್ದ ಕಾಂಗ್ರೆಸ್ ಸಂಸದ ಆಂಟೊ ಆಂಟೋನಿ ಕೇಳಿದ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಚೌಧರಿ, ಜನವರಿ 30 ರಂದು ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಪತ್ರಿಕಾ ಪ್ರಕಟಣೆಯನ್ನು ಉಲ್ಲೇಖಿಸಿದ್ದಾರೆ. ಅದಾನಿ ಗ್ರೂಪ್‌ನಲ್ಲಿ ಈಕ್ವಿಟಿ ಮತ್ತು ಸಾಲದ ಅಡಿಯಲ್ಲಿ ಎಲ್‌ಐಸಿ ಒಟ್ಟು ₹35,000 ಕೋಟಿಗಳನ್ನು ಹೊಂದಿದೆ ಎಂದು ಇದು ಹೇಳಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:54 pm, Mon, 13 March 23