ಅಹಮದಾಬಾದ್: ಇಶಾ ಫೌಂಡೇಶನ್‌ನ ಸಂಸ್ಥಾಪಕ, ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ ಅವರ ಜನ್ಮದಿನದಂದು ಗುಜರಾತ್‌ನ ಬನಸ್ಕಾಂತದಲ್ಲಿ ಒಂದು ವಿಶಿಷ್ಟ ಉಪಕ್ರಮವನ್ನು ತೆಗೆದುಕೊಳ್ಳಲಾಗಿದೆ. ಸದ್ಗುರು ಆರಂಭಿಸಿದ ಮಣ್ಣು ಉಳಿಸುವ ಜಾಗತಿಕ ಆಂದೋಲನದಿಂದ ಪ್ರೇರಿತರಾದ ರೈತರು ಇಲ್ಲಿ ಒಂದೆಡೆ ಸೇರಿದ್ದರು. ಅವರು ಇಂದು ಬನಾಸ್ ಸೇವ್ ಸೋಲ್ ಫಾರ್ಮರ್ ಪ್ರೊಡ್ಯೂಸರ್ ಕಂಪನಿ (BSSFPC) ಸ್ಥಾಪಿಸಿದ್ದಾರೆ. ಇದು ಮಿಟ್ಟಿ ಬಚಾವೋ ಆಂದೋಲನದ ಸಹಭಾಗಿತ್ವದಲ್ಲಿ ಭಾರತದ ಮೊದಲ ಮಣ್ಣು ಕೇಂದ್ರಿತ ರೈತ ಉತ್ಪಾದಕ ಕಂಪನಿಯಾಗಿದೆ.
ಈ ಸಂದರ್ಭದಲ್ಲಿ ಗುಜರಾತ್ ವಿಧಾನಸಭೆಯ ಸ್ಪೀಕರ್ ಮತ್ತು ಬನಾಸ್ ಡೈರಿಯ ಅಧ್ಯಕ್ಷ ಶಂಕರಭಾಯಿ ಚೌಧರಿ ಅವರು ಥರಾಡ್‌ನಲ್ಲಿ ಬನಾಸ್ ಮಣ್ಣು ಪರೀಕ್ಷಾ ಪ್ರಯೋಗಾಲಯ (ಬಿಎಸ್‌ಟಿಎಲ್), ಖಿಮಾನದಲ್ಲಿ ಬನಾಸ್ ಜೈವಿಕ ರಸಗೊಬ್ಬರ ಸಂಶೋಧನೆ, ಅಭಿವೃದ್ಧಿ ಪ್ರಯೋಗಾಲಯ (ಬಿಬಿಆರ್‌ಡಿಎಲ್) ಮತ್ತು ರೈತರ ತರಬೇತಿಯೊಂದಿಗೆ ಎಫ್‌ಪಿಸಿಯನ್ನು ಉದ್ಘಾಟಿಸಿದರು.
ಇದನ್ನೂ ಓದಿ: Eternal Echoes: ಹೊಸ ಪ್ರಯೋಗಕ್ಕಿಳಿದ ಸದ್ಗುರು; ಎಟರ್ನಲ್ ಎಕೋಸ್ ಆಲ್ಬಂ ಬಿಡುಗಡೆ
ಈ ಕುರಿತಾದ ವಿಡಿಯೋ ಸಂದೇಶದಲ್ಲಿ ಅವರು ಈ ಉಪಕ್ರಮಕ್ಕಾಗಿ ಬನಸ್ಕಾಂತದ ರೈತರಿಗೆ ಅಭಿನಂದನೆಗಳು ಎಂದು ಹೇಳಿದ್ದು, ರೈತರ ಕಂಪನಿಯ ಯಶಸ್ಸಿಗೆ ಹಾರೈಸಿದರು. ಇದರಿಂದ ಜನರಿಗೆ ಪೌಷ್ಟಿಕಾಂಶ ದೊರೆಯುವುದಲ್ಲದೆ ಇಲ್ಲಿನ ಮಣ್ಣು ಕೂಡ ಸಮೃದ್ಧವಾಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸದ್ಗುರು ಜಗ್ಗಿ ವಾಸುದೇವ್ 2 ವರ್ಷಗಳ ಹಿಂದೆ ಜಾಗತಿಕ ಮಣ್ಣು ಉಳಿಸುವ ಆಂದೋಲನವನ್ನು ಪ್ರಾರಂಭಿಸಿದರು.
Congratulations and Blessings to every one of you at Banas Dairy for pioneering the Save Soil Banas Farmers Producers Organization, a significant contribution to the development of Gujarat & Bharat. The FPO will not only bring nourishment to the people but also nourish and enrich… https://t.co/N2TVyLZcUS pic.twitter.com/zndZRDcR4w
— Sadhguru (@SadhguruJV) September 3, 2024
ಈ ಕಾರ್ಯಕ್ರಮದ ಮುಖ್ಯ ಅತಿಥಿ ಮತ್ತು ಗುಜರಾತ್ ಅಸೆಂಬ್ಲಿಯ ಸ್ಪೀಕರ್ ಮತ್ತು ಬನಾಸ್ ಡೈರಿಯ ಅಧ್ಯಕ್ಷ ಶಂಕರಭಾಯಿ ಚೌಧರಿ ಮಾತನಾಡಿ, ಬನಾಸ್ ಡೈರಿಗೆ ಇಂದು ನಿರ್ಣಾಯಕ ಕ್ಷಣವಾಗಿದೆ. ಬನಾಸ್ ಸೇವ್ ಸೋಲ್ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಮತ್ತು ಥರಾಡ್ ಮತ್ತು ಖಿಮಾನದಲ್ಲಿರುವ ನಮ್ಮ ಹೊಸ ಸೌಲಭ್ಯಗಳು ಸುಸ್ಥಿರ ಭವಿಷ್ಯಕ್ಕೆ ಅಡಿಪಾಯ ಹಾಕುತ್ತವೆ ಎಂದಿದ್ದಾರೆ.
ಇದನ್ನೂ ಓದಿ: ಬ್ರೂನೆಯ ಪ್ರಸಿದ್ಧ ಸುಲ್ತಾನ್ ಒಮರ್ ಅಲಿ ಸೈಫುದ್ದೀನ್ ಮಸೀದಿಗೆ ಪ್ರಧಾನಿ ಮೋದಿ ಭೇಟಿ
ಪ್ರಯೋಗಾಲಯದ ಮುಖ್ಯ ತಾಂತ್ರಿಕ ಅಧಿಕಾರಿ ಪ್ರವೀಣ್ ಶ್ರೀಧರ್ ಮಾತನಾಡಿ, ಸದ್ಗುರು ಅವರ ‘ಮಣ್ಣು ಉಳಿಸಿ ಆಂದೋಲನ’ ಅತ್ಯಂತ ಮಹತ್ವದ್ದಾಗಿದೆ. ಬನಸ್ಕಾಂತದ ಭೂಮಿ ಅರೆ ಒಣಭೂಮಿಯಾಗಿದ್ದು, ಇದರಿಂದ ಮಣ್ಣಿನ ಫಲವತ್ತತೆ ಹಾಗೂ ರೈತರ ಜೀವನೋಪಾಯಕ್ಕೆ ಧಕ್ಕೆಯಾಗಿದೆ ಎಂದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ