Crime News: ಮದುವೆಯ ಶಾಪಿಂಗ್​ಗೆ ಹೋಗುತ್ತಿದ್ದವರ ಹತ್ಯೆ; ಪಂಜಾಬ್‌ನ ಫಿರೋಜ್‌ಪುರದಲ್ಲಿ ತ್ರಿವಳಿ ಕೊಲೆ

ಪಂಜಾಬ್‌ನ ಫಿರೋಜ್‌ಪುರದಲ್ಲಿ ಹಗಲು ಹೊತ್ತಿನಲ್ಲಿಯೇ ಮೂವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮೃತರಲ್ಲಿ ಇಬ್ಬರು ಸಹೋದರರು ಮತ್ತು ಸಹೋದರಿ ಸೇರಿದ್ದಾರೆ. ಅವರೆಲ್ಲರೂ ಮದುವೆಯ ಶಾಪಿಂಗ್‌ಗಾಗಿ ಕಾರಿನಲ್ಲಿ ಹೋಗುತ್ತಿದ್ದರು. ಆಗ ಗುರುದ್ವಾರದ ಅಕಲಗಢ ಸಾಹಿಬ್ ಬಳಿ ಅವರ ಕಾರಿನ ಮೇಲೆ ಮನಬಂದಂತೆ ಗುಂಡಿನ ದಾಳಿ ಪ್ರಾರಂಭವಾಯಿತು. ಸದ್ಯ ಪೊಲೀಸರು ದಾಳಿಕೋರರಿಗಾಗಿ ಶೋಧ ನಡೆಸುತ್ತಿದ್ದಾರೆ.

Crime News: ಮದುವೆಯ ಶಾಪಿಂಗ್​ಗೆ ಹೋಗುತ್ತಿದ್ದವರ ಹತ್ಯೆ; ಪಂಜಾಬ್‌ನ ಫಿರೋಜ್‌ಪುರದಲ್ಲಿ ತ್ರಿವಳಿ ಕೊಲೆ
ಸಾಂದರ್ಭಿಕ ಚಿತ್ರ
Follow us
|

Updated on: Sep 03, 2024 | 9:53 PM

ಫಿರೋಜ್​ಪುರ: ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯಲ್ಲಿ ದುಷ್ಕರ್ಮಿಗಳು ದೊಡ್ಡ ಗುಂಡಿನ ದಾಳಿ ನಡೆಸಿದ್ದಾರೆ. ಹಾಡಹಗಲೇ ದುಷ್ಕರ್ಮಿಗಳು ಮೂವರನ್ನು ಗುಂಡಿಕ್ಕಿ ಕೊಂದಿದ್ದಾರೆ. ಈ ಕೊಲೆಯ ಘಟನೆ ಗುರುದ್ವಾರ ಅಕಲಗಢ ಸಾಹಿಬ್ ಬಳಿ ನಡೆದಿದೆ. ಗುರುದ್ವಾರದ ಬಳಿ ದುಷ್ಕರ್ಮಿಗಳು ಮನಬಂದಂತೆ ಗುಂಡು ಹಾರಿಸಿ ಮೂವರನ್ನು ಕೊಂದಿದ್ದಾರೆ. ಮೃತರಲ್ಲಿ ಓರ್ವ ಬಾಲಕಿಯೂ ಸೇರಿದ್ದಾಳೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹಗಳನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತರಾದ ಮೂವರೂ ಒಂದೇ ಕುಟುಂಬದವರು.

ಇಂದು ಮಧ್ಯಾಹ್ನ ಈ ಘಟನೆ ನಡೆದಿದೆ. ಐದು ಜನ ಬಿಳಿ ಕಾರಿನಲ್ಲಿ ಶಾಪಿಂಗ್​ಗೆ ಹೋಗುತ್ತಿದ್ದರು. ಅವರು ಗುರುದ್ವಾರ ಅಕಲಗಢ್ ಸಾಹಿಬ್ ಮುಂದೆ ತಲುಪಿದಾಗ, ದಾಳಿಕೋರರು ಬೈಕ್‌ನಲ್ಲಿ ಬಂದು ಕಾರಿನ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದರು. ದಾಳಿಕೋರರು ಕಾರಿನ ಮೇಲೆ ಸುಮಾರು 20 ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಗುಂಡಿನ ಚಕಮಕಿಯು ಆ ಪ್ರದೇಶದಲ್ಲಿ ಭೀತಿಯನ್ನು ಸೃಷ್ಟಿಸಿದೆ. ಜನರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ತಕ್ಷಣ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿದೆ.

ಇದನ್ನೂ ಓದಿ: Shocking Video: ಮಹಿಳೆಯರ ಒಳಉಡುಪು ಕದಿಯುವುದೇ ಈ ಕಳ್ಳನ ಚಾಳಿ; ಯುವಕನ ವಿಡಿಯೋ ವೈರಲ್

ಪೊಲೀಸರು ಕಾರಿನ ಬಾಗಿಲು ತೆರೆದಾಗ ಒಳಗೆ ಮೂವರು ಶವವಾಗಿ ಬಿದ್ದಿರುವುದು ಕಂಡು ಬಂದಿದೆ. ಮೃತರಲ್ಲಿ ಒಬ್ಬ ಬಾಲಕಿ ಕೂಡ ಇದ್ದಳು. ಈ ವೇಳೆ ಇಬ್ಬರು ಮಹಿಳೆಯರಿಗೆ ಕೂಡ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳದಲ್ಲಿದ್ದ ಮಹಿಳೆಯರಿಗೆ ಪ್ರಥಮ ಚಿಕಿತ್ಸೆ ನೀಡಿದ ಪೊಲೀಸರು ಘಟನೆಯ ಬಗ್ಗೆ ಮಾಹಿತಿ ಪಡೆದರು. ಮೃತ ಯುವತಿಗೆ ಒಂದು ತಿಂಗಳ ನಂತರ ಮದುವೆ ಇದ್ದುದರಿಂದ ಅವಳು ತನ್ನ ಇಬ್ಬರು ಸಹೋದರರೊಂದಿಗೆ ಶಾಪಿಂಗ್‌ಗೆ ಹೋಗುತ್ತಿದ್ದಳು. ಆಗ ಇದ್ದಕ್ಕಿದ್ದಂತೆ ಅವರ ಕಾರಿನ ಮೇಲೆ ಗುಂಡಿನ ದಾಳಿ ಪ್ರಾರಂಭವಾಯಿತು.

ಇದನ್ನೂ ಓದಿ: Shocking News: ರಾತ್ರಿ ಮಲಗಿದ್ದ ಮಗಳ ಮೇಲೆ ಮೃಗದಂತೆ ದಾಳಿ ಮಾಡಿದ ಅಪ್ಪ

ಮೃತರಲ್ಲಿ ಒಬ್ಬನನ್ನು ದಿಲ್‌ಪ್ರೀತ್ ಸಿಂಗ್ (29) ಎಂದು ಗುರುತಿಸಲಾಗಿದೆ. ದಿಲ್‌ಪ್ರೀತ್ ವಿರುದ್ಧ ಎರಡು ಕೊಲೆ ಪ್ರಕರಣಗಳು ದಾಖಲಾಗಿದ್ದವು. ಮೃತರಲ್ಲಿ ದಲ್ಜಿತ್ ಅವರ ಸಹೋದರ ಮತ್ತು ಸಹೋದರಿ ಸೇರಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಇಬ್ಬರು ಮುಸುಕುಧಾರಿಗಳು ಬೈಕ್‌ನಲ್ಲಿ ಬಂದು ಅವರ ಕಾರನ್ನು ನಿಲ್ಲಿಸಿದರು. ಕಾರು ನಿಲ್ಲಿಸಿದ ತಕ್ಷಣ ಗುಂಡು ಹಾರಿಸಲು ಆರಂಭಿಸಿದರು. ಘಟನೆಯ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ