ಖಮ್ಮಂ ಪ್ರವಾಹದ ವೇಳೆ ಸಿಲುಕಿದ 9 ಜನರನ್ನು ರಕ್ಷಿಸಿದ ಹರ್ಯಾಣದ ವ್ಯಕ್ತಿ; ಈತ ನಿಜವಾದ ಹೀರೋ

ರಕ್ಷಣಾ ಕಾರ್ಯ ವೇಳೆ ನಿಮ್ಮ ಪ್ರಾಣಕ್ಕೂ ಅಪಾಯವಾಗುತ್ತಿತ್ತು ಎಂದು ಖಾನ್ ಅವರಲ್ಲಿ ಹೇಳಿದಾಗ "ನಾನು ಸತ್ತರೆ, ನಾನು ಒಬ್ಬನೇ ಸಾಯುತ್ತೇನೆ, ಇಲ್ಲದಿದ್ದರೆ ಒಂಬತ್ತು ಜನರೊಂದಿಗೆ ಹಿಂತಿರುಗುತ್ತೇನೆ" ಎಂದು ಅವರು ಉತ್ತರಿಸಿದ್ದಾರೆ. ಸೆಪ್ಟೆಂಬರ್ 1 ರಂದು ಈ ಘಟನೆ ನಡೆದಿದ್ದು, ಖಾನ್ ಅವರ ಬುಲ್ಡೋಜರ್‌ನಲ್ಲಿ ಅವರೊಂದಿಗೆ ಹಿಂತಿರುಗಿದಾಗ, ಸ್ಥಳೀಯರು ಮತ್ತು ಅವರ ಕುಟುಂಬದಿಂದ ಅವರನ್ನು ಹರ್ಷೋದ್ಗಾರಗಳೊಂದಿಗೆ ಸ್ವಾಗತಿಸಲಾಯಿತು.

ಖಮ್ಮಂ ಪ್ರವಾಹದ ವೇಳೆ ಸಿಲುಕಿದ 9 ಜನರನ್ನು ರಕ್ಷಿಸಿದ ಹರ್ಯಾಣದ ವ್ಯಕ್ತಿ; ಈತ ನಿಜವಾದ ಹೀರೋ
ಸೇತುವೆಯಲ್ಲಿ ಸಿಲುಕಿದವರು
Follow us
ರಶ್ಮಿ ಕಲ್ಲಕಟ್ಟ
|

Updated on: Sep 03, 2024 | 8:53 PM

ಹೈದರಾಬಾದ್ ಸೆಪ್ಟೆಂಬರ್ 03: ತೆಲಂಗಾಣದ (Telangana Floods) ಖಮ್ಮಂ (Khammam )ಜಿಲ್ಲೆಯ ಮುನ್ನೇರು ನದಿಯ ಪ್ರಕಾಶ್ ನಗರ ಸೇತುವೆಯ ಮೇಲೆ ಸಿಲುಕಿದ್ದ ಒಂಬತ್ತು ಜನರನ್ನು ಹರ್ಯಾಣದ ವ್ಯಕ್ತಿ ಸುಭಾನ್ ಖಾನ್ ರಕ್ಷಿಸಿದ್ದು, ಈ ಮೂಲಕ ನಿಜ ಜೀವನದಲ್ಲಿ ಹೀರೋ ಆಗಿದ್ದಾರೆ. ಸೇತುವೆಯ ಮೇಲೆ ಸಿಲುಕಿರುವ ಜನರು ತಮ್ಮನ್ನು ರಕ್ಷಿಸಲು ರಾಜ್ಯ ಸರ್ಕಾರದಿಂದ ಸಹಾಯವನ್ನು ಕೇಳುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಪ್ರತಿಕೂಲ ಹವಾಮಾನದ ಕಾರಣ, ಸರ್ಕಾರ ನಿಯೋಜಿಸಿದ ಹೆಲಿಕಾಪ್ಟರ್ ಅವರನ್ನು ತಲುಪಲು ಸಾಧ್ಯವಾಗಲಿಲ್ಲ ಎಂದು ವರದಿಗಳು ತಿಳಿಸಿವೆ.

ಈ ವೇಳೆ ಖಮ್ಮಂನಲ್ಲಿ ಕೆಲಸ ಮಾಡುವ ಹರ್ಯಾಣ ಮೂಲದ ಸುಭಾನ್ ಖಾನ್ ಒಂಬತ್ತು ಜನರನ್ನು ರಕ್ಷಿಸಲು ತಮ್ಮ ಜೆಸಿಬಿ ಬುಲ್ಡೋಜರ್ ಬಳಸಿದ್ದರು. ಪ್ರಾಣಕ್ಕೆ ಅಪಾಯವಿದ್ದರೂ ಅದನ್ನು ಲೆಕ್ಕಿಸದೆ ಅಲ್ಲಿ ಸಿಲುಕಿರುವ ಒಂಬತ್ತು ಮಂದಿಯನ್ನೂ ಖಾನ್ ರಕ್ಷಿಸಿದ್ದಾರೆ.

9 ಜನರನ್ನು ಏಕಾಂಗಿಯಾಗಿ ಕಾಪಾಡಿದ ಖಾನ್

ರಕ್ಷಣಾ ಕಾರ್ಯ ವೇಳೆ ನಿಮ್ಮ ಪ್ರಾಣಕ್ಕೂ ಅಪಾಯವಾಗುತ್ತಿತ್ತು ಎಂದು ಖಾನ್ ಅವರಲ್ಲಿ ಹೇಳಿದಾಗ “ನಾನು ಸತ್ತರೆ, ನಾನು ಒಬ್ಬನೇ ಸಾಯುತ್ತೇನೆ, ಇಲ್ಲದಿದ್ದರೆ ಒಂಬತ್ತು ಜನರೊಂದಿಗೆ ಹಿಂತಿರುಗುತ್ತೇನೆ” ಎಂದು ಅವರು ಉತ್ತರಿಸಿದ್ದಾರೆ. ಸೆಪ್ಟೆಂಬರ್ 1 ರಂದು ಈ ಘಟನೆ ನಡೆದಿದ್ದು, ಖಾನ್ ಅವರ ಬುಲ್ಡೋಜರ್‌ನಲ್ಲಿ ಅವರೊಂದಿಗೆ ಹಿಂತಿರುಗಿದಾಗ, ಸ್ಥಳೀಯರು ಮತ್ತು ಅವರ ಕುಟುಂಬದಿಂದ ಅವರನ್ನು ಹರ್ಷೋದ್ಗಾರಗಳೊಂದಿಗೆ ಸ್ವಾಗತಿಸಲಾಯಿತು.

ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ, ಅವರ ಮಗಳು ತನ್ನ ತಂದೆಯ ಬಗ್ಗೆ ಹೆಮ್ಮೆಯಿಂದ ಹೇಳುವುದನ್ನು ಕೇಳಬಹುದು. ನಾನು ನಡುಗುತ್ತಿದ್ದೆ. ಆದರೆ ಅಪ್ಪ ಏನು ಮಾಡಬೇಕು ಎಂದು ಬಯಸಿದರೋ ಅದನ್ನು ಅವರು ಮಾಡಿದ್ದಾರೆ ಎಂದು ಮಗಳು ಹೇಳಿದ್ದಾಳೆ. ಖಾನ್ ಅವರ ಧೀರೋದಾತ್ತ ಕ್ರಮಕ್ಕಾಗಿ ಅವರ ಫೋನ್‌ಗೆ ಪ್ರಶಂಸೆಯ ಸಂದೇಶಗಳು ಹರಿದಾಡುತ್ತಿವೆ. ಬಿಆರ್‌ಎಸ್‌ ಮುಖಂಡ ಹಾಗೂ ಮಾಜಿ ಸಚಿವ ಕೆ.ಟಿ.ರಾಮರಾವ್‌ ಕೂಡ ಕರೆ ಮಾಡಿ ಅವರ ಶೌರ್ಯಕ್ಕೆ ಅಭಿನಂದನೆ ಸಲ್ಲಿಸಿದರು.

ಇದನ್ನೂ ಓದಿ: ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣ ವಿಚಾರಣೆ: ‘ಬೇಟೆ ಕೋ ಪಢಾವೋ, ಬೇಟಿ ಕೋ ಬಚಾವೋ’ ಎಂದ ಬಾಂಬೆ ಹೈಕೋರ್ಟ್

ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿರುವ ಕೆಟಿಆರ್, “ಸುಭಾನ್ ಖಾನ್-ಬುಲ್ಡೋಜರ್ ಮ್ಯಾನ್, ಎಲ್ಲಾ ಹೀರೋಗಳು ಕ್ಯಾಪ್ ಧರಿಸುವುದಿಲ್ಲ ಎಂದು ಬರೆದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ
ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ
ಪ್ರಭಾಕರ್ ಜೊತೆ ಸರಿಗಮ ವಿಜಿಗೆ ಇತ್ತು ಒಳ್ಳೆಯ ಒಡನಾಟ
ಪ್ರಭಾಕರ್ ಜೊತೆ ಸರಿಗಮ ವಿಜಿಗೆ ಇತ್ತು ಒಳ್ಳೆಯ ಒಡನಾಟ
ಕಾಂಗ್ರೆಸ್​ನ ನೂತನ ಪ್ರಧಾನ​ ಕಚೇರಿ‘ಇಂದಿರಾ ಭವನ’ ಉದ್ಘಾಟಿಸಿದ ಸೋನಿಯಾ
ಕಾಂಗ್ರೆಸ್​ನ ನೂತನ ಪ್ರಧಾನ​ ಕಚೇರಿ‘ಇಂದಿರಾ ಭವನ’ ಉದ್ಘಾಟಿಸಿದ ಸೋನಿಯಾ
ನೂತನ ಎಐಸಿಸಿ ಕಟ್ಟಡಕ್ಕೆ ಇಂದಿರಾ ಗಾಂಧಿ ಭವನ್ ಎಂದು ಹೆಸರಿಡಲಾಗಿದೆ
ನೂತನ ಎಐಸಿಸಿ ಕಟ್ಟಡಕ್ಕೆ ಇಂದಿರಾ ಗಾಂಧಿ ಭವನ್ ಎಂದು ಹೆಸರಿಡಲಾಗಿದೆ
ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ