ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣ ವಿಚಾರಣೆ: ‘ಬೇಟೆ ಕೋ ಪಢಾವೋ, ಬೇಟಿ ಕೋ ಬಚಾವೋ’ ಎಂದ ಬಾಂಬೆ ಹೈಕೋರ್ಟ್

“ತುರಾತುರಿಯಲ್ಲಿ ಆರೋಪಪಟ್ಟಿ ಸಲ್ಲಿಸಬೇಡಿ. ಇನ್ನೂ ಸಮಯವಿದೆ. ಸಾರ್ವಜನಿಕರ ಒತ್ತಡಕ್ಕೆ ಮಣಿಯಬೇಡಿ. ಆರೋಪಪಟ್ಟಿ ಸಲ್ಲಿಸುವ ಮುನ್ನ ಸರಿಯಾಗಿ ತನಿಖೆ ನಡೆಯಬೇಕು. ಆರೋಪಪಟ್ಟಿ ಸಲ್ಲಿಸುವ ಮೊದಲು, ಎಲ್ಲವೂ ಕ್ರಮದಲ್ಲಿದೆ ಎಂದು ಖಚಿತಪಡಿಸಿಕೊಳ್ಳಿ. ಕಟ್ಟುನಿಟ್ಟಿನ ಪ್ರಕರಣ ದಾಖಲಿಸಿ’ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣ ವಿಚಾರಣೆ: ‘ಬೇಟೆ ಕೋ ಪಢಾವೋ, ಬೇಟಿ ಕೋ ಬಚಾವೋ’ ಎಂದ ಬಾಂಬೆ ಹೈಕೋರ್ಟ್
ಬಾಂಬೆ ಹೈಕೋರ್ಟ್
Follow us
ರಶ್ಮಿ ಕಲ್ಲಕಟ್ಟ
|

Updated on: Sep 03, 2024 | 8:24 PM

ಮುಂಬೈ ಸಪ್ಟೆಂಬರ್ 03: ಮಹಾರಾಷ್ಟ್ರದ ಬದ್ಲಾಪುರದ (Badlapur) ಶಾಲೆಯೊಂದರಲ್ಲಿ ಇಬ್ಬರು ಬಾಲಕಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ತಂಡಕ್ಕೆ ಬಾಂಬೆ ಹೈಕೋರ್ಟ್ (Bombay High Court) ಮಂಗಳವಾರ ಪ್ರಕರಣವನ್ನು ಗಂಭೀರವಾಗಿರುವಂತೆ ನೋಡಿಕೊಳ್ಳುವುದಕ್ಕಾಗಿ ಸಾರ್ವಜನಿಕ ಒತ್ತಡದ ಮೇರೆಗೆ ತರಾತುರಿಯಲ್ಲಿ ಚಾರ್ಜ್ ಶೀಟ್ ಸಲ್ಲಿಸುವುದನ್ನು ತಪ್ಪಿಸಲು ಹೇಳಿದೆ.  ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ದೇರೆ ಮತ್ತು ಪೃಥ್ವಿರಾಜ್ ಚವಾಣ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಹುಡುಗರಲ್ಲಿ ಜಾಗೃತಿ ಮೂಡಿಸುವ ಮಹತ್ವವನ್ನು ಒತ್ತಿಹೇಳಿತು. ನ್ಯಾಯಮೂರ್ತಿ ದೇರೆ ಹುಡುಗರಿಗೆ ಶಿಕ್ಷಣ ನೀಡುವುದು ಬಹಳ ಮುಖ್ಯ ಎಂದು ಹೇಳಿದ್ದಾರೆ. ಬೇಟಿ ಪಢಾವೋ, ಬೇಟಿ ಬಚಾವೋ ಎಂಬ ಸರ್ಕಾರದ ಘೋಷಣೆಯನ್ನು ಬದಲಿಸಿ ಬೇಟೆ ಕೋ ಪಢಾವೋ, ಬೇಟಿ ಕೋ ಬಚಾವೋ’ (ಹುಡುಗನಿಗೆ ಕಲಿಸಿ, ಹುಡುಗಿಯನ್ನು ರಕ್ಷಿಸಿ)” ಎಂದು ಹೇಳಿದ್ದಾರೆ.

ಕಳೆದ ತಿಂಗಳು ಇಬ್ಬರು ನಾಲ್ಕು ವರ್ಷದ ಬಾಲಕಿಯರ ಮೇಲೆ ಪುರುಷ ಅಟೆಂಡೆಂಟ್‌ನಿಂದ ಶಾಲೆಯ ವಾಶ್‌ರೂಮ್‌ನೊಳಗೆ ಲೈಂಗಿಕ ದೌರ್ಜನ್ಯ ನಡೆದ ನಂತರ ಪೀಠವು ಸ್ವಯಂ ಪ್ರೇರಿತವಾಗಿ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಸರ್ಕಾರವನ್ನು ಪ್ರತಿನಿಧಿಸುವ ಅಡ್ವೊಕೇಟ್ ಜನರಲ್ ಬೀರೇಂದ್ರ ಸರಾಫ್ ಅವರು ಮಂಗಳವಾರದ ವಿಚಾರಣೆಯ ವೇಳೆ ನ್ಯಾಯಾಲಯಕ್ಕೆ ಶೀಘ್ರವೇ ಆರೋಪಪಟ್ಟಿ ಸಲ್ಲಿಸುವುದಾಗಿ ತಿಳಿಸಿದರು.

ಸ್ಥಳೀಯ ಪೊಲೀಸರು ಪ್ರಕರಣವನ್ನು ಸರಿಯಾಗಿ ತನಿಖೆ ಮಾಡದ ಕಾರಣ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ ಎಂದು ಪೀಠವು ಗಮನಿಸಿದೆ.

“ಇದು ದೊಡ್ಡ ಸಮಸ್ಯೆಯಾಗಿದೆ. ಈ ಪ್ರಕರಣವು ಭವಿಷ್ಯದಲ್ಲಿ ಅಂತಹ ಎಲ್ಲಾ ಪ್ರಕರಣಗಳಿಗೆ ಪೂರ್ವನಿದರ್ಶನವನ್ನು ಹೊಂದಿಸುತ್ತದೆ.  ಸಾರ್ವಜನಿಕರು ವೀಕ್ಷಿಸುತ್ತಿದ್ದಾರೆ ನಾವು ಯಾವ ಸಂದೇಶವನ್ನು ನೀಡುತ್ತಿದ್ದೇವೆ ಎಂಬುದು ಮುಖ್ಯ ಎಂದು ನ್ಯಾಯಾಲಯ ಹೇಳಿದೆ. “ತುರಾತುರಿಯಲ್ಲಿ ಆರೋಪಪಟ್ಟಿ ಸಲ್ಲಿಸಬೇಡಿ. ಇನ್ನೂ ಸಮಯವಿದೆ. ಸಾರ್ವಜನಿಕರ ಒತ್ತಡಕ್ಕೆ ಮಣಿಯಬೇಡಿ. ಆರೋಪಪಟ್ಟಿ ಸಲ್ಲಿಸುವ ಮುನ್ನ ಸರಿಯಾಗಿ ತನಿಖೆ ನಡೆಯಬೇಕು. ಆರೋಪಪಟ್ಟಿ ಸಲ್ಲಿಸುವ ಮೊದಲು, ಎಲ್ಲವೂ ಕ್ರಮದಲ್ಲಿದೆ ಎಂದು ಖಚಿತಪಡಿಸಿಕೊಳ್ಳಿ. ಕಟ್ಟುನಿಟ್ಟಿನ ಪ್ರಕರಣ ದಾಖಲಿಸಿ’ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

ಪ್ರಕರಣದ ಡೈರಿಯನ್ನು ನಿರ್ವಹಿಸಿದ “ಸ್ಟಿರಿಯೊಟೈಪಿಕಲ್” ವಿಧಾನಕ್ಕಾಗಿ ನ್ಯಾಯಾಲಯವು ಎಸ್‌ಐಟಿಯನ್ನು ತರಾಟೆಗೆ ತೆಗೆದುಕೊಂಡಿತು. “ಇದು ಡೈರಿಯನ್ನು ನಿರ್ವಹಿಸುವ ವಿಧಾನವೇ? ತನಿಖಾಧಿಕಾರಿಯಿಂದ ಸ್ಟೀರಿಯೊಟೈಪಿಕಲ್ ರೀತಿಯಲ್ಲಿ ಕೇಸ್ ಡೈರಿ ಬರೆಯುವುದು ಒಂದು ವಿಧಾನವೇ? ಎಂದು ಹೈಕೋರ್ಟ್ ಕೇಳಿದೆ.

ಇದನ್ನೂ ಓದಿ: ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಸಿಐಎಸ್‌ಎಫ್ ನಿಯೋಜನೆ ಕುರಿತು ಮಮತಾ ಸರ್ಕಾರದ ವಿರುದ್ಧ ಸುಪ್ರೀಂ ಮೊರೆ ಹೋದ ಕೇಂದ್ರ

ತನಿಖೆಯ ಪ್ರತಿಯೊಂದು ಹಂತವನ್ನು ಪ್ರಕರಣದ ಡೈರಿಯಲ್ಲಿ ನಮೂದಿಸಬೇಕು, ಡೈರಿಯಲ್ಲಿ ವಿವರಗಳನ್ನು ನಮೂದಿಸಿಲ್ಲ ಎಂದು ನ್ಯಾಯಾಧೀಶರು ಹೇಳಿದರು. ಈ ರೀತಿ ಬರೆಯುವಾಗ ಕೇಸ್ ಡೈರಿ ಬರೆಯುವ ಉದ್ದೇಶವು ವಿಫಲಗೊಳ್ಳುತ್ತದೆ ಮತ್ತು ಇದು ಈ ಪ್ರಕರಣದ ಕಳಪೆ ತನಿಖೆಯನ್ನು ಪ್ರತಿಬಿಂಬಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇಂದಿರಾ ಕ್ಯಾಂಟೀನದ್ದು ಎಂದು ಸಚಿವಗೆ ಹೋಟೆಲ್​ ಊಟ ತಿನ್ನಿಸಿದ ಅಧಿಕಾರಿಗಳು!
ಇಂದಿರಾ ಕ್ಯಾಂಟೀನದ್ದು ಎಂದು ಸಚಿವಗೆ ಹೋಟೆಲ್​ ಊಟ ತಿನ್ನಿಸಿದ ಅಧಿಕಾರಿಗಳು!
ನಿಜಾಮನ ರಜಾಕರು ಮುಸಲ್ಮಾನರಲ್ಲ ಅಂತ ಪ್ರಿಯಾಂಕ್ ಹೇಳುತ್ತಾರೆ: ಯತ್ನಾಳ್
ನಿಜಾಮನ ರಜಾಕರು ಮುಸಲ್ಮಾನರಲ್ಲ ಅಂತ ಪ್ರಿಯಾಂಕ್ ಹೇಳುತ್ತಾರೆ: ಯತ್ನಾಳ್
‘ಸುಮ್ಮನಿರುವ ಮಗ ನಾನಲ್ಲ’: ಸಿಡಿದೆದ್ದ ಧನರಾಜ್; ಸಮಾಧಾನ ಮಾಡಿದ ಹನುಮ
‘ಸುಮ್ಮನಿರುವ ಮಗ ನಾನಲ್ಲ’: ಸಿಡಿದೆದ್ದ ಧನರಾಜ್; ಸಮಾಧಾನ ಮಾಡಿದ ಹನುಮ
ಜೆಡಿಎಸ್ ಕೇವಲ ಒಂದು ಕುಟುಂಬದ ಪಕ್ಷವಾಗಿ ಉಳಿದುಬಿಟ್ಟಿದೆ: ಯೋಗೇಶ್ವರ್
ಜೆಡಿಎಸ್ ಕೇವಲ ಒಂದು ಕುಟುಂಬದ ಪಕ್ಷವಾಗಿ ಉಳಿದುಬಿಟ್ಟಿದೆ: ಯೋಗೇಶ್ವರ್
ಪ್ರತಿ ಹುಟ್ಟುಹಬ್ಬಕ್ಕೆ ಇಬ್ರಾಹಿಂ ನನಗೆ ವಿಶ್ ಮಾಡುತ್ತಾರೆ: ಜಿಟಿ ದೇವೇಗೌಡ
ಪ್ರತಿ ಹುಟ್ಟುಹಬ್ಬಕ್ಕೆ ಇಬ್ರಾಹಿಂ ನನಗೆ ವಿಶ್ ಮಾಡುತ್ತಾರೆ: ಜಿಟಿ ದೇವೇಗೌಡ
ದೊಡ್ಮನೆಗೆ ಬರೋಕಿಂತ ಮುನ್ನ ಧರ್ಮ, ಅನುಷಾ ರೈ ನಡುವೆ ಬ್ರೇಕಪ್ ಆಗಿತ್ತಾ?
ದೊಡ್ಮನೆಗೆ ಬರೋಕಿಂತ ಮುನ್ನ ಧರ್ಮ, ಅನುಷಾ ರೈ ನಡುವೆ ಬ್ರೇಕಪ್ ಆಗಿತ್ತಾ?
ಯೋಗೇಶ್ವರ್ ಕೇವಲ ಅಭಿವೃದ್ಧಿ ಕೆಲಸಗಳನ್ನು ಉಲ್ಲೇಖಿಸಿ ಮತ ಕೇಳಿದರು: ಶಾಸಕ
ಯೋಗೇಶ್ವರ್ ಕೇವಲ ಅಭಿವೃದ್ಧಿ ಕೆಲಸಗಳನ್ನು ಉಲ್ಲೇಖಿಸಿ ಮತ ಕೇಳಿದರು: ಶಾಸಕ
ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು
ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು
‘ಯಾರೂ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಂಗಿಲ್ಲ’: ಉಗ್ರಂ ಮಂಜು ಆಜ್ಞೆ
‘ಯಾರೂ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಂಗಿಲ್ಲ’: ಉಗ್ರಂ ಮಂಜು ಆಜ್ಞೆ
ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ
ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ