AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ತಮಿಳುನಾಡಿನಲ್ಲಿ ರಾವಣನ ಬದಲು ರಾಮನ ಪ್ರತಿಕೃತಿ ದಹಿಸಿದ ಗುಂಪು, ಒರ್ವನ ಬಂಧನ

ತಮಿಳುನಾಡಿನ ತಿರುಚ್ಚಿಯಲ್ಲಿ ಪುರುಷರ ಗುಂಪೊಂದು ರಾವಣನ ಬದಲು ಶ್ರೀರಾಮನ ಪ್ರತಿಕೃತಿ ದಹಿಸಿ ಜನರ ಕೆಂಗಣ್ಣಿಗೆ ಗುರಿಯಾಗಿದೆ. ರಾಮನ ಪ್ರತಿಕೃತಿ ದಹಿಸಿದ್ದಷ್ಟೇ ಅಲ್ಲದೆ ರಾವಣನ ಸ್ತುತಿಯನ್ನು ಪಠಿಸಿದ್ದಾರೆ. 'ಫಿಫ್ತ್​ ತಮಿಳು ಸಂಗಮ್' ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾದ ಈ ದೃಶ್ಯಗಳು ತ್ವರಿತವಾಗಿ ವೈರಲ್ ಆಗಿದ್ದು, ಪೊಲೀಸ್ ಕ್ರಮಕ್ಕೆ ಕಾರಣವಾಯಿತು. ವೀಡಿಯೊದಲ್ಲಿ, ಪುರುಷರು ರಾಮನ ಪ್ರತಿಕೃತಿಗೆ ಬೆಂಕಿ ಹಚ್ಚುತ್ತಾ ರಾವಣನನ್ನು ಸ್ತುತಿಸಿ ಎಂದು ಘೋಷಣೆ ಕೂಗುತ್ತಿರುವುದನ್ನು ಕಾಣಬಹುದು.

Video: ತಮಿಳುನಾಡಿನಲ್ಲಿ ರಾವಣನ ಬದಲು ರಾಮನ ಪ್ರತಿಕೃತಿ ದಹಿಸಿದ ಗುಂಪು, ಒರ್ವನ ಬಂಧನ
ವೈರಲ್ ಪೋಸ್ಟ್​
ನಯನಾ ರಾಜೀವ್
|

Updated on: Oct 03, 2025 | 12:02 PM

Share

ತಿರುಚ್ಚಿ, ಅಕ್ಟೋಬರ್ 03: ತಮಿಳುನಾಡಿನ ತಿರುಚ್ಚಿಯಲ್ಲಿ ಪುರುಷರ ಗುಂಪೊಂದು ರಾವಣನ ಬದಲು ಶ್ರೀರಾಮನ ಪ್ರತಿಕೃತಿ ದಹಿಸಿ ಜನರ ಕೆಂಗಣ್ಣಿಗೆ ಗುರಿಯಾಗಿದೆ. ರಾಮನ ಪ್ರತಿಕೃತಿ ದಹಿಸಿದ್ದಷ್ಟೇ ಅಲ್ಲದೆ ರಾವಣನ ಸ್ತುತಿಯನ್ನು ಪಠಿಸಿದ್ದಾರೆ. ‘ಫಿಫ್ತ್​ ತಮಿಳು ಸಂಗಮ್’ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾದ ಈ ದೃಶ್ಯಗಳು ತ್ವರಿತವಾಗಿ ವೈರಲ್ ಆಗಿದ್ದು, ಪೊಲೀಸ್ ಕ್ರಮಕ್ಕೆ ಕಾರಣವಾಯಿತು. ವೀಡಿಯೊದಲ್ಲಿ, ಪುರುಷರು ರಾಮನ ಪ್ರತಿಕೃತಿಗೆ ಬೆಂಕಿ ಹಚ್ಚುತ್ತಾ ರಾವಣನನ್ನು ಸ್ತುತಿಸಿ ಎಂದು ಘೋಷಣೆ ಕೂಗುತ್ತಿರುವುದನ್ನು ಕಾಣಬಹುದು.

ಸೈಬರ್ ಕ್ರೈಂ ಪೊಲೀಸರು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 192, 196 (1) (ಎ), 197, 299, 302 ಮತ್ತು 353 (2) ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವಿಚಾರಣೆಯ ನಂತರ, ಅಧಿಕಾರಿಗಳು ಗುರುವಾರ 36 ವರ್ಷದ ಅಡೈಕಳರಾಜ್ ಅವರನ್ನು ಬಂಧಿಸಿದ್ದಾರೆ ಮತ್ತು ಭಾಗಿಯಾಗಿರುವ ಇತರರಿಗಾಗಿ ಹುಡುಕಾಟವನ್ನು ಮುಂದುವರೆಸಿದ್ದೇವೆ ಎಂದು ಹೇಳಿದರು.

ಅಂತಹ ಪೋಸ್ಟ್‌ಗಳನ್ನು ರಚಿಸುವುದು ಅಥವಾ ಪ್ರಸಾರ ಮಾಡುವುದರ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಎಚ್ಚರಿಕೆಯನ್ನು ನೀಡಿದ್ದಾರೆ, ಇದಕ್ಕೆ ಕಾರಣರೆಂದು ಕಂಡುಬಂದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಮತ್ತಷ್ಟು ಓದಿ: ಜೆಎನ್​ಯು: ರಾವಣನ ಹತ್ತು ತಲೆಗಳಲ್ಲಿ ಖಾಲಿದ್, ಶಾರ್ಜೀಲ್ ಫೋಟೊ, ಭುಗಿಲೆದ್ದ ಘರ್ಷಣೆ

ಮತ್ತೊಂದು ಘಟನೆ 

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ(JNU)ದಲ್ಲಿ ಗುರುವಾರ ರಾವಣ ದಹನ ಕಾರ್ಯಕ್ರಮದ ವೇಳೆ ಘರ್ಷಣೆ ಸಂಭವಿಸಿದೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಮತ್ತು ಎಡಪಂಥೀಯ ವಿದ್ಯಾರ್ಥಿ ಗುಂಪುಗಳ ನಡುವೆ ಗಲಾಟೆ ನಡೆದಿದೆ. ಎರಡೂ ವಿದ್ಯಾರ್ಥಿ ಗುಂಪುಗಳು ಪರಸ್ಪರ ಚಪ್ಪಲಿಗಳನ್ನು ಎಸೆಯಲು ಪ್ರಾರಂಭಿಸಿದವು. ದುರ್ಗಾ ಮೂರ್ತಿ ವಿಸರ್ಜನಾ ಮೆರವಣಿಗೆಯ ಮೇಲೆ ಎಡಪಂಥೀಯ ವಿದ್ಯಾರ್ಥಿ ಗುಂಪುಗಳು ದಾಳಿ ಮಾಡಿವೆ ಎಂದು ಎಬಿವಿಪಿ ಆರೋಪಿಸಿದೆ.

ರಾಮನ ಪ್ರತಿಕೃತಿ ದಹಿಸಿದ ವಿಡಿಯೋ

ಅಲ್ಲಿನ ಮಾಜಿ ಜೆಎನ್‌ಯು ವಿದ್ಯಾರ್ಥಿಗಳಾದ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರ ಫೋಟೊಗಳನ್ನು ಬಳಸಲಾಗಿದೆ ಎಂದು ವರದಿಯಾಗಿದೆ. ಖಾಲಿದ್ ಮತ್ತು ಇಮಾಮ್ ಇಬ್ಬರೂ ಪ್ರಸ್ತುತ ಸಿಎಎ ವಿರೋಧಿ ಪ್ರತಿಭಟನೆಗಳು ಮತ್ತು ದೆಹಲಿ ಗಲಭೆ ಪಿತೂರಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.

ರಾವಣ ದಹನ ಕಾರ್ಯಕ್ರಮದ ಮೂಲಕ ಎಬಿವಿಪಿ ರಾಜಕೀಯ ಪ್ರಚಾರಕ್ಕಾಗಿ ಧರ್ಮವನ್ನು ಬಳಸುತ್ತಿದೆ ಎಂದು ಎಡಪಂಥೀಯ ಸಂಘಟನೆಗಳು ಆರೋಪಿಸಿದವು. ಆದಾಗ್ಯೂ, ಈ ವಿಷಯದ ಬಗ್ಗೆ ಜೆಎನ್‌ಯು ಆಡಳಿತದಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಮಕ್ಕಳು ಬೀಚ್​​ನಲ್ಲಿ ಆಟವಾಡುತ್ತಿದ್ದಾಗ ಬಂದೇ ಬಿಡ್ತು ಭಯಾನಕ ಅಲೆ
ಮಕ್ಕಳು ಬೀಚ್​​ನಲ್ಲಿ ಆಟವಾಡುತ್ತಿದ್ದಾಗ ಬಂದೇ ಬಿಡ್ತು ಭಯಾನಕ ಅಲೆ
ನಾಪತ್ತೆಯಾದ ಮಹಿಳೆ ಪರಪುರುಷನ ಜೊತೆ ಪತ್ತೆ: ಘಟನೆ ಬಿಚ್ಚಿಟ್ಟ ಮನೆ ಮಾಲೀಕ
ನಾಪತ್ತೆಯಾದ ಮಹಿಳೆ ಪರಪುರುಷನ ಜೊತೆ ಪತ್ತೆ: ಘಟನೆ ಬಿಚ್ಚಿಟ್ಟ ಮನೆ ಮಾಲೀಕ
ಬಸ್​​ಗೆ ಕಾರು ಗುದ್ದಿ ಐವರ ಸಾವು: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಬಸ್​​ಗೆ ಕಾರು ಗುದ್ದಿ ಐವರ ಸಾವು: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಮಹಾಶಿವರಾತ್ರಿ ಆಚರಣೆ ಯಾಕೆ ಮಾಡಬೇಕು? ಇಲ್ಲಿದೆ ಮಾಹಿತಿ
ಮಹಾಶಿವರಾತ್ರಿ ಆಚರಣೆ ಯಾಕೆ ಮಾಡಬೇಕು? ಇಲ್ಲಿದೆ ಮಾಹಿತಿ
ಈ ರಾಶಿಯವರಿಗೆ ಇಂದು ಸಿಗಲಿದೆ ಐದು ಗ್ರಹಗಳ ಶುಭ ಫಲ
ಈ ರಾಶಿಯವರಿಗೆ ಇಂದು ಸಿಗಲಿದೆ ಐದು ಗ್ರಹಗಳ ಶುಭ ಫಲ
ಟಿವಿ9ನಿಂದ ಮಾಜಿ ಸಿಎಂ ಯಡಿಯೂರಪ್ಪನವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ
ಟಿವಿ9ನಿಂದ ಮಾಜಿ ಸಿಎಂ ಯಡಿಯೂರಪ್ಪನವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ
ಎತ್ತಿನ ಬಂಡಿಯಲ್ಲಿ ದುನಿಯಾ ವಿಜಯ್ ಪುತ್ರಿಯ ಮೆರವಣಿಗೆ: ವಿಡಿಯೋ
ಎತ್ತಿನ ಬಂಡಿಯಲ್ಲಿ ದುನಿಯಾ ವಿಜಯ್ ಪುತ್ರಿಯ ಮೆರವಣಿಗೆ: ವಿಡಿಯೋ
ಟಿವಿ9 ನವನಕ್ಷತ್ರ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ ಭಾವುಕ ಮಾತು
ಟಿವಿ9 ನವನಕ್ಷತ್ರ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ ಭಾವುಕ ಮಾತು
ರಿಯಲ್ ಎಸ್ಟೇಟ್ ಉದ್ಯಮಿ ರೋಹನ್ ಮೊಂಟೆರೋಗೆ ಟಿವಿ9 ನವ ನಕ್ಷತ್ರ ಪ್ರಶಸ್ತಿ
ರಿಯಲ್ ಎಸ್ಟೇಟ್ ಉದ್ಯಮಿ ರೋಹನ್ ಮೊಂಟೆರೋಗೆ ಟಿವಿ9 ನವ ನಕ್ಷತ್ರ ಪ್ರಶಸ್ತಿ
ಬೂಕರ್ ಪ್ರಶಸ್ತಿ ಲೇಖಕಿ ಬಾನು ಮುಷ್ತಾಕ್​ಗೆ ಟಿವಿ9 ನವ ನಕ್ಷತ್ರ ಅವಾರ್ಡ್​​
ಬೂಕರ್ ಪ್ರಶಸ್ತಿ ಲೇಖಕಿ ಬಾನು ಮುಷ್ತಾಕ್​ಗೆ ಟಿವಿ9 ನವ ನಕ್ಷತ್ರ ಅವಾರ್ಡ್​​