AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಹಿತಾ ವಿನ್ಯಾ ನಟನೆಯ ‘ಮಿಕ್ಸಿಂಗ್ ಪ್ರೀತಿ’ ಸಿನಿಮಾ ಫೆ.20ಕ್ಕೆ ರಿಲೀಸ್

18ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಸಂಹಿತಾ ವಿನ್ಯಾ ಇದೇ ಮೊದಲ ಬಾರಿಗೆ ಹಾರರ್ ಸಿನಿಮಾ ಮಾಡಿದ್ದಾರೆ. ಕನ್ನಡದಲ್ಲಿ ‘ಮಿಕ್ಸಿಂಗ್ ಪ್ರೀತಿ’ ಹಾಗೂ ತಮಿಳಿನಲ್ಲಿ ‘ಮಿಕ್ಸಿಂಗ್ ಕಾದಲ್’ ಶೀರ್ಷಿಕೆಯಲ್ಲಿ ಈ ಚಿತ್ರ ತೆರೆಕಾಣಲಿದೆ. ಪೊಲ್ಲಾಚಿ ಮಹಾಲಿಂಗಂ ಅವರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಸಿನಿಮಾಗೆ ಸಿಂಟೊ ಜೇಕಬ್ ಹೀರೋ.

ಸಂಹಿತಾ ವಿನ್ಯಾ ನಟನೆಯ ‘ಮಿಕ್ಸಿಂಗ್ ಪ್ರೀತಿ’ ಸಿನಿಮಾ ಫೆ.20ಕ್ಕೆ ರಿಲೀಸ್
Samhita Vinya, Sinto Jacob
ಮದನ್​ ಕುಮಾರ್​
|

Updated on: Feb 15, 2026 | 10:34 AM

Share

ನಟಿ, ಮಾಡೆಲ್ ಸಂಹಿತಾ ವಿನ್ಯಾ (Samhita Vinya) ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಅಭಿನಯಿಸಿರುವ ‘ಮಿಕ್ಸಿಂಗ್ ಪ್ರೀತಿ’ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾಗೆ ಪೊಲ್ಲಾಚಿ ಮಹಾಲಿಂಗಂ ಅವರು ನಿರ್ದೇಶನ ಮಾಡಿದ್ದಾರೆ. ರೊಮ್ಯಾಂಟಿಕ್ ಕಾಮಿಡಿ, ಹಾರರ್ (Horror), ಥ್ರಿಲ್ಲರ್ ಅಂಶಗಳನ್ನು ಹೊಂದಿರುವ ಈ ಸಿನಿಮಾ ಫೆಬ್ರವರಿ 20ರಂದು ಬಿಡುಗಡೆ ಆಗಲಿದೆ. ‘ಮಿಕ್ಸಿಂಗ್ ಪ್ರೀತಿ’ (Mixing Preethi) ಬಿಡುಗಡೆ ಹೊಸ್ತಿಲಿನಲ್ಲಿ ಒಂದಷ್ಟು ಮಾಹಿತಿ ಹಂಚಿಕೊಳ್ಳಲಾಗಿದೆ. ತಮಿಳಿನಲ್ಲೂ ಈ ಸಿನಿಮಾ ಸಿದ್ಧವಾಗಿದೆ.

ಒಂದು ರೆಸಾರ್ಟ್​​ನಲ್ಲಿ ನಡೆಯುವ ಹಾರರ್ ಕಥೆ ‘ಮಿಕ್ಸಿಂಗ್ ಪ್ರೀತಿ’ ಸಿನಿಮಾದಲ್ಲಿ ಇದೆ. ಮೂವರು ಸ್ನೇಹಿತರು ರೆಸಾರ್ಟ್​​ಗೆ ಹೋದಾಗ ಅವರಿಗೆ ದೆವ್ವದ ಕಾಟ ಶುರು ಆಗುತ್ತದೆ. ಅಲ್ಲಿಂದ ಅವರೆಲ್ಲ ಹೇಗೆ ಹೊರಬಂದರು ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗುತ್ತದೆ. ಹಾರರ್ ಜೊತೆಗೆ ಒಂದು ಲವ್ ಸ್ಟೋರಿ ಕೂಡ ಸಾಗುತ್ತದೆ. ಕೇರಳ, ಚೆನ್ನೈ ಮತ್ತು ಬೆಂಗಳೂರಲ್ಲಿ ಚಿತ್ರೀಕರಣ‌ ನಡೆಸಲಾಗಿದೆ. ರಾತ್ರಿ ವೇಳೆ ಚಿತ್ರೀಕರಣ ಮಾಡುವಾಗ ರೆಸಾರ್ಟ್​​ನಲ್ಲಿ ನಿಜವಾದ ಹಾರರ್ ಫೀಲ್ ಆಯ್ತು ಎಂದು ನಾಯಕಿ ಸಂಹಿತಾ ಹೇಳಿದ್ದಾರೆ.

ಸಂಹಿತಾ ವಿನ್ಯಾ ಅವರು 75ಕ್ಕೂ ಅಧಿಕ ಫ್ಯಾಷನ್ ಶೋಗಳಲ್ಲಿ ಶೋಸ್ಟಾಪರ್ ಆಗಿ ಭಾಗವಹಿಸಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ಚಿತ್ರರಂಗದಲ್ಲೂ ತೊಡಗಿಕೊಂಡಿದ್ದಾರೆ. ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗುರುತಿಸಿಕೊಳ್ಳುತ್ತಿದಾರೆ. ಇದೇ ಮೊದಲ ಬಾರಿಗೆ ಸಂಹಿತಾ ವಿನ್ಯಾ ಅವರು ಹಾರರ್, ಥ್ರಿಲ್ಲರ್ ಸಿನಿಮಾಗೆ ನಾಯಕಿ ಆಗಿದ್ದಾರೆ.

‘ಮೆಜೆಸ್ಟಿಕ್ 2′, ‘ಆಯುಧ’, ‘ಸ್ವಾಭಿಮಾನಿ’, ‘ಯಾಕೋ ಬೇಜಾರು’, ‘ವಿದೂಷಕ’, ‘ಅಮೃತಘಳಿಗೆ’, ‘ಜಿಎಸ್​ಟಿ’, ‘ಲಂಗೋಟಿ ಮ್ಯಾನ್’, ‘ಯೂ ಆರ್ ಮೈ ಹೀರೋ’ ಮುಂತಾದ ಸಿನಿಮಾಗಳಲ್ಲಿ ಕೂಡ ಸಂಹಿತಾ ವಿನ್ಯಾ ಅವರು ಅಭಿನಯಿಸಿದ್ದಾರೆ. ಈವರೆಗೂ 18ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

ಇದನ್ನೂ ಓದಿ: ಹಾರರ್ ಪ್ರಿಯರಿಗೆ ಸವಾಲು; ನೈಜ ಘಟನೆ ಆಧರಿಸಿದ ಈ ಸರಣಿ ನೋಡಲು ಎರಡು ಗುಂಡಿಗೆ ಬೇಕು

ಈಗ ಬಿಡುಗಡೆಗೆ ಸಿದ್ಧವಾಗಿರುವ ‘ಮಿಕ್ಸಿಂಗ್ ಪ್ರೀತಿ’ ಸಿನಿಮಾದಲ್ಲಿ ಸಿಂಟೊ ಜೇಕಬ್ ಅವರು ಹೀರೋ ಆಗಿ ನಟಿಸಿದ್ದಾರೆ. ಪ್ರಿಯಾ ಪವನ್, ದಿವ್ಯ ಜಸ್ಮಿತಾ ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ರಾಜೇಶ್ ಮೋಹನ್ ಮತ್ತು ಗಣೇಶ್ವರನ್ ಅವರು ಸಂಗೀತ ನೀಡಿದ್ದಾರೆ. ಸಾಧಿಕ್ ಕಬೀರ್ ಅವರು ಛಾಯಾಗ್ರಹಣ ಮಾಡಿದ್ದಾರೆ. ತಮಿಳಿನಲ್ಲಿ ‘ಮಿಕ್ಸಿಂಗ್ ಕಾದಲ್’ ಎಂಬ ಶೀರ್ಷಿಕೆಯಲ್ಲಿ ಈ ಸಿನಿಮಾ ತಯಾರಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮುಸ್ಲಿಮ್ ವಿದ್ಯಾರ್ಥಿಗೆ 'ಟೆರರಿಸ್ಟ್' ಎಂದು ಕ್ಲಾಸ್​ನಲ್ಲೇ ಅವಮಾನ!
ಮುಸ್ಲಿಮ್ ವಿದ್ಯಾರ್ಥಿಗೆ 'ಟೆರರಿಸ್ಟ್' ಎಂದು ಕ್ಲಾಸ್​ನಲ್ಲೇ ಅವಮಾನ!
ರಸ್ತೆ ಇಲ್ಲ, ವಿದ್ಯುತ್ ಇಲ್ಲ! ಮೂಲಭೂತ ಸೌಕರ್ಯವಿಲ್ಲದೆ ಜನರು ಕಂಗಾಲು!
ರಸ್ತೆ ಇಲ್ಲ, ವಿದ್ಯುತ್ ಇಲ್ಲ! ಮೂಲಭೂತ ಸೌಕರ್ಯವಿಲ್ಲದೆ ಜನರು ಕಂಗಾಲು!
ಮಾದಪ್ಪನ ಸನ್ನಿಧಿಯಲ್ಲಿ 23 ದಿನಗಳಲ್ಲಿ 2.33 ಕೋಟಿ ರೂ. ಹುಂಡಿ ಹಣ ಸಂಗ್ರಹ!
ಮಾದಪ್ಪನ ಸನ್ನಿಧಿಯಲ್ಲಿ 23 ದಿನಗಳಲ್ಲಿ 2.33 ಕೋಟಿ ರೂ. ಹುಂಡಿ ಹಣ ಸಂಗ್ರಹ!
ಮಹಿಳೆಯ ಮಾಂಗಲ್ಯ ಸರ ಕಿತ್ತು ಪರಾರಿಯಾದ ಖದೀಮರು: ಸಿಸಿಟಿವಿ ವಿಡಿಯೋ ನೋಡಿ
ಮಹಿಳೆಯ ಮಾಂಗಲ್ಯ ಸರ ಕಿತ್ತು ಪರಾರಿಯಾದ ಖದೀಮರು: ಸಿಸಿಟಿವಿ ವಿಡಿಯೋ ನೋಡಿ
ದೋಷ ನಿವಾರಣೆಗೆ ಹೋಮಗಳನ್ನ ಎಲ್ಲಿ ಮಾಡಬೇಕು?
ದೋಷ ನಿವಾರಣೆಗೆ ಹೋಮಗಳನ್ನ ಎಲ್ಲಿ ಮಾಡಬೇಕು?
ಇಂದು ಈ ರಾಶಿಯವರು ಹಣಕಾಸು ವಿಚಾರದಲ್ಲಿ ಎಚ್ಚರ!
ಇಂದು ಈ ರಾಶಿಯವರು ಹಣಕಾಸು ವಿಚಾರದಲ್ಲಿ ಎಚ್ಚರ!
ಯುಎಇಯ ಶಾರ್ಜಾದಲ್ಲಿ ಭಾರೀ ಪ್ರವಾಹ; ನೀರಿನಲ್ಲಿ ಮುಳುಗಿದ ವಾಹನಗಳು
ಯುಎಇಯ ಶಾರ್ಜಾದಲ್ಲಿ ಭಾರೀ ಪ್ರವಾಹ; ನೀರಿನಲ್ಲಿ ಮುಳುಗಿದ ವಾಹನಗಳು
ಕೊವಿಡ್ ರೀತಿ ಹೋರಾಟ: ಮೋದಿ ಸಭೆ ಬಳಕ ಸಚಿವ ಮುನಿಯಪ್ಪ ಶಾಕಿಂಗ್​ ಹೇಳಿಕೆ
ಕೊವಿಡ್ ರೀತಿ ಹೋರಾಟ: ಮೋದಿ ಸಭೆ ಬಳಕ ಸಚಿವ ಮುನಿಯಪ್ಪ ಶಾಕಿಂಗ್​ ಹೇಳಿಕೆ
50ನೇ ವಯಸ್ಸಿನಲ್ಲೂ ಶಿಲ್ಪಾ ಶೆಟ್ಟಿ ಫಿಟ್ನೆಸ್; ಇದರ ಹಿಂದಿದೆ ಶಿಸ್ತು
50ನೇ ವಯಸ್ಸಿನಲ್ಲೂ ಶಿಲ್ಪಾ ಶೆಟ್ಟಿ ಫಿಟ್ನೆಸ್; ಇದರ ಹಿಂದಿದೆ ಶಿಸ್ತು
ಯೂಟ್ಯೂಬ್‌ನಲ್ಲಿ 10 ಲಕ್ಷ ಚಂದಾದಾರರು: ನಟಿ ಸೋನಾಕ್ಷಿ ಸಿನ್ಹಾ ಖುಷಿ ಹೇಗಿದೆ
ಯೂಟ್ಯೂಬ್‌ನಲ್ಲಿ 10 ಲಕ್ಷ ಚಂದಾದಾರರು: ನಟಿ ಸೋನಾಕ್ಷಿ ಸಿನ್ಹಾ ಖುಷಿ ಹೇಗಿದೆ