AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾರರ್ ಪ್ರಿಯರಿಗೆ ಸವಾಲು; ನೈಜ ಘಟನೆ ಆಧರಿಸಿದ ಈ ಸರಣಿ ನೋಡಲು ಎರಡು ಗುಂಡಿಗೆ ಬೇಕು

ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿರುವ 'ಭಯ್: ದಿ ಗೌರವ್ ತಿವಾರಿ ಮಿಸ್ಟರಿ' ವೆಬ್ ಸರಣಿ ಹಾರರ್ ಪ್ರಿಯರನ್ನು ರೋಮಾಂಚನಗೊಳಿಸಿದೆ. ಭಾರತದ ಖ್ಯಾತ ಪ್ಯಾರಾನಾರ್ಮಲ್ ಇನ್ವೆಸ್ಟಿಗೇಟರ್ ಗೌರವ್ ತಿವಾರಿ ಅವರ ನೈಜ ಕಥೆಯನ್ನು ಆಧರಿಸಿದ ಈ 8 ಎಪಿಸೋಡ್‌ಗಳ ಸರಣಿ, ಅವರ ನಿಗೂಢ ಜೀವನ ಮತ್ತು ಸಾಹಸಗಳನ್ನು ತೆರೆದಿಡುತ್ತದೆ. ಮಿಸ್ಟರಿ ಹಾಗೂ ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದಿರುವ ಈ ಸರಣಿ, ಗಟ್ಟಿ ಗುಂಡಿಗೆ ಇರುವವರಿಗೆ ಹೆಚ್ಚು ಥ್ರಿಲ್ ನೀಡುತ್ತದೆ.

ಹಾರರ್ ಪ್ರಿಯರಿಗೆ ಸವಾಲು; ನೈಜ ಘಟನೆ ಆಧರಿಸಿದ ಈ ಸರಣಿ ನೋಡಲು ಎರಡು ಗುಂಡಿಗೆ ಬೇಕು
ಭಯ್ ಸರಣಿ
ರಾಜೇಶ್ ದುಗ್ಗುಮನೆ
|

Updated on: Feb 03, 2026 | 12:04 PM

Share

ದೆವ್ವ ಅಥವಾ ಇಲ್ಲ ಎಂಬ ಚರ್ಚೆ ತುಂಬಾನೇ ಹಳೆಯದು. ಇದೇ ಕಲ್ಪನೆ ಇಟ್ಟುಕೊಂಡು ಸಾಕಷ್ಟು ಸಿನಿಮಾ ಹಾಗೂ ವೆಬ್ ಸರಣಿಗಳು ಬಂದು ಹೋಗಿವೆ. ಕೆಲವು ಹಿಟ್ ಆದರೆ, ಇನ್ನೂ ಕೆಲವು ಫ್ಲಾಪ್ ಆಗಿವೆ. ಈಗ ಹಾರರ್ ಸಿನಿಮಾ ಪ್ರಿಯರ ಎದೆಯೂ ನಡುಗುವ ರೀತಿಯ ಹಾರರ್ ಚಿತ್ರವೊಂದು ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗಿದೆ. ಅಷ್ಟಕ್ಕೂ ಯಾವುದು ಈ ಸರಣಿ? ‘ಭಯ್: ದಿ ಗೌರವ್ ತಿವಾರಿ ಮಿಸ್ಟರಿ’. ಈ ಸರಣಿ ಹಿಂದಿಯಲ್ಲಿ ಮಾತ್ರ ವೀಕ್ಷಣೆಗೆ ಲಭ್ಯವಿದೆ.

ಮಿಸ್ಟರಿ ಹಾಗೂ ಥ್ರಿಲ್ಲರ್ ಶೈಲಿಯಲ್ಲಿ ‘ಭಯ್’ ಸರಣಿ ಮೂಡಿ ಬಂದಿದೆ. ರಾಬಿ ಗ್ರೇವಲ್ ಅವರು ಇದನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ‘ಘೋಸ್ಟ್ ಹಂಟರ್ ಗೌರವ್ ತಿವಾರಿ: ದಿ ಲೈಫ್ ಆ್ಯಂಡ್ ಲೆಗಸಿ ಆಫ್ ಇಂಡಿಯಾಸ್ ಫೋರ್​​ಮೋಸ್ಟ್ ಪ್ಯಾನಾರ್ಮಲ್ ಇನ್ವೆಸ್ಟಿಗೇಟರ್’ ಹೆಸರಿನ ಪುಸ್ತಕ ಆಧರಿಸಿ ಸಿದ್ಧವಾಗಿದೆ. ಕರಣ್ ಟಾಕರ್ ಅವರು ಗೌರವ್ ತಿವಾರಿ ಪಾತ್ರ ಮಾಡಿದ್ದಾರೆ.

ಗೌರವ್ ತಿವಾರಿ ಅವರು 1984ರಲ್ಲಿ ಜನಿಸಿದರು. ಇವರು ಹುಟ್ಟಿದ್ದು ಬಿಹಾರದಲ್ಲಿ. ಇವರು ಪೈಲಟ್ ಆಗಬೇಕು ಎಂದು ಕನಸು ಕಂಡವರು. ಆ ಕನಸು ನನಸಾಗುತ್ತದೆ ಕೂಡ. ಆತ್ಮಗಳು ಇರೋ ವಿಷಯ ಅವರ ಅನುಭವಕ್ಕೆ ಬರುತ್ತದೆ. ಒಂದು ಆತ್ಮ ಅವರನ್ನು ವಿಮಾನ ಅಪಘಾತದಿಂದ ಕಾಪಾಡುತ್ತದೆ. ಅವರು ಪೈಲಟ್​ ಕೆಲಸ ತೊರೆದು ಘೋಸ್ಟ್ ಹಂಟರ್ ಆಗುತ್ತಾರೆ. ಅಲ್ಲಿಂದ ಅವರ ಪ್ರಯಾಣ ಶುರು. ಕೇವಲ 31ನೇ ವಯಸ್ಸಿಗೆ ಮಿಸ್ಟರಿ ರೀತಿಯಲ್ಲಿ ಗೌರವ್ ನಿಧನ ಹೊಂದುತ್ತಾರೆ.

ಇದನ್ನೂ ಓದಿ: ಈ ವಾರ ಒಟಿಟಿಗೆ ಬಂದಿವೆ ಭರ್ಜರಿ ಸಿನಿಮಾಗಳು: ನೀವೂ ನೋಡಿ

ಗೌರವ್ ಜೀವನ ಆಧರಿಸಿ ಸಿದ್ಧವಾದ ಪುಸ್ತಕ ಇಟ್ಟುಕೊಂಡು ‘ಭಯ್’ ವೆಬ್ ಸೀರಿಸ್ ಮಾಡಲಾಗಿದೆ. 8 ಎಪಿಸೋಡ್​​ಗಳನ್ನು ಈ ಸರಣಿ ಹೊಂದಿದೆ. ನೈಜ ಘಟನೆ ಆಗಿರುವುದರಿಂದ ಹೆಚ್ಚು ಥ್ರಿಲ್ ಕೊಡುತ್ತವೆ. ಕೆಲವು ಒರಿಜಿನಲ್ ಕ್ಲಿಪ್​​​ಗಳನ್ನು ಕೂಡ ಹಾಕಲಾಗಿದೆ. ಗೌರವ್ ಎದುರಿಸಿದ ಸವಲಾಗಳನ್ನು ಕಣ್ಣಿಗೆ ಕಟ್ಟುವಂತೆ ತೋರಿಸಲಾಗಿದೆ. ಗಟ್ಟಿ ಗುಂಡಿಗೆ ಇರುವವರು ಈ ಸರಣಿ ನೋಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ