ಈ ವಾರ ಒಟಿಟಿಗೆ ಬಂದಿವೆ ಭರ್ಜರಿ ಸಿನಿಮಾಗಳು: ನೀವೂ ನೋಡಿ
OTT Release this week: ಕಳೆದ ವಾರ ಕನ್ನಡದ ಎರಡು ದೊಡ್ಡ ಸಿನಿಮಾಗಳಾದ ‘45’ ಮತ್ತು ‘ಮಾರ್ಕ್’ ಸಿನಿಮಾಗಳು ಒಟಿಟಿಗೆ ಬಂದಿದ್ದವು. ಈ ವಾರ, ಚಿತ್ರಮಂದಿರಗಳಲ್ಲಿ ಭರ್ಜರಿ ಯಶಸ್ಸು ಗಳಿಸಿದ ಕೆಲವು ಸಿನಿಮಾಗಳು ಈ ವಾರ ಒಟಿಟಿಗೆ ಲಗ್ಗೆ ಇಟ್ಟಿವೆ. ಈ ವಾರ ಕನ್ನಡದ ಸಿನಿಮಾ ಸೇರಿದಂತೆ ಪರ ಭಾಷೆಯ ಹಲವು ಸಿನಿಮಾಗಳು ಒಟಿಟಿಗೆ ಬಂದಿದ್ದು, ಇಲ್ಲಿದೆ ನೋಡಿ ಪಟ್ಟಿ...
Updated on: Jan 31, 2026 | 7:23 PM

1948ರ ಕತೆ ಹೊಂದಿರುವ ತೆಲುಗಿನ ‘ಚಾಂಪಿಯನ್’ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ರಾಹುಲ್ ಮೇಕ ನಿರ್ದೇಶನ ಮಾಡಿರುವ ಈ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಿದೆ. ಸಿನಿಮಾಕ್ಕೆ ಒಳ್ಳೆಯ ವಿಮರ್ಶೆಗಳು ವ್ಯಕ್ತವಾಗಿದೆ.

ವಿಶ್ ಧಮೀಜಾ ಅವರ ‘ಬಿಂಡಿ ಬಜಾರ್’ ಕತೆ ಆಧರಿಸಿದ ಹಿಂದಿ ವೆಬ್ ಸರಣಿ ‘ದಲ್ದಲ್’ ಇದೇ ವಾರ ಒಟಿಟಿಗೆ ಬಂದಿದೆ. ಥ್ರಿಲ್ಲರ್ ಕತೆಯನ್ನು ಹೊಂದಿರುವ ಈ ವೆಬ್ ಸರಣಿಯಲ್ಲಿ ಭೂಮಿ ಪೆಡ್ನೇಕರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವೆಬ್ ಸರಣಿ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದೆ.

ಬಾಕ್ಸ್ ಆಫೀಸ್ನಲ್ಲಿ ಹಲವು ಹೊಸ ದಾಖಲೆಗಳನ್ನೇ ಬರೆದಿರುವ 2025ರ ಬ್ಲಾಕ್ ಬಸ್ಟರ್ ಸಿನಿಮಾ ‘ಧುರಂಧರ್’ ಈ ವಾರ ಒಟಿಟಿಗೆ ಬಂದಿದೆ. ನೆಟ್ಫ್ಲಿಕ್ಸ್ನಲ್ಲಿ ಸಿನಿಮಾ ಈಗಾಗಲೇ ಬಿಡುಗಡೆ ಆಗಿದ್ದು, ಚಿತ್ರಮಂದಿರಗಳ ರೀತಿಯೇ ಭರ್ಜರಿಯಾಗಿಯೇ ಸದ್ದು ಮಾಡುತ್ತಿದೆ.

ಸಿಂಪಲ್ ಸುನಿ ನಿರ್ದೇಶಿಸಿ, ಅದ್ಧೂರಿಯಾಗಿ ನಿರ್ಮಾಣಗೊಂಡಿರುವ ಭಿನ್ನ ಕತೆಗಳನ್ನು ಹೊಂದಿರುವ ಸಿನಿಮಾ ‘ಗತವೈಭವ’ ಈ ವಾರ ಒಟಿಟಿಗೆ ಬಂದಿದೆ. ಅಮೆಜಾನ್ ಪ್ರೈಂ ವಿಡಿಯೋನಲ್ಲಿ ಈ ಸಿನಿಮಾ ವೀಕ್ಷಿಸಬಹುದು.

ಮಲಯಾಳಂನ ಸ್ಟಾರ್ ನಟರುಗಳಲ್ಲಿ ಒಬ್ಬರಾದ ನಿವಿನ್ ಪೋಲಿ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಸರ್ವಂ ಮಾಯ’ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ಇದೊಂದು ಬಹಳ ವಿಭಿನ್ನವಾದ ಹಾರರ್ ಸಿನಿಮಾ ಆಗಿದೆ. ಸಿನಿಮಾವನ್ನು ಜಿಯೋ ಹಾಟ್ಸ್ಟಾರ್ನಲ್ಲಿ ನೋಡಬಹುದಾಗಿದೆ.

ಕಾರ್ತಿ ಹಾಗೂ ಕರ್ನಾಟಕ ಮೂಲದ ನಟಿ ಕೃತಿ ಶೆಟ್ಟಿ ಒಟ್ಟಿಗೆ ನಟಿಸಿರುವ ‘ವಾ ವಾತಿಯಾರ್’ ತಮಿಳು ಸಿನಿಮಾ ‘ವಾ ವಾತಿಯಾರ್’ ಇತ್ತೀಚೆಗಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು, ಆದರೆ ಪ್ರೇಕ್ಷಕರ ಬೆಂಬಲ ಸಿನಿಮಾಕ್ಕೆ ದೊರಕಲಿಲ್ಲ. ಇದೀಗ ಈ ಸಿನಿಮಾ ಒಟಿಟಿಗೆ ಬಂದಿದೆ. ಅಮೆಜಾನ್ ಪ್ರೈಂನಲ್ಲಿ ಸಿನಿಮಾ ನೋಡಬಹುದಾಗಿದೆ.




