AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾಶಿವರಾತ್ರಿ ಆಚರಣೆ ಯಾಕೆ ಮಾಡಬೇಕು? ವಿಧಾನ ಹೇಗೆ? ಇಲ್ಲಿದೆ ಮಾಹಿತಿ

ಮಹಾಶಿವರಾತ್ರಿ ಆಚರಣೆ ಯಾಕೆ ಮಾಡಬೇಕು? ವಿಧಾನ ಹೇಗೆ? ಇಲ್ಲಿದೆ ಮಾಹಿತಿ

ಪ್ರಸನ್ನ ಹೆಗಡೆ
|

Updated on: Feb 15, 2026 | 7:46 AM

Share

ಮಹಾಶಿವರಾತ್ರಿಯು ಶಿವ ಮತ್ತು ಪಾರ್ವತಿಯರ ವಿವಾಹದ ಮತ್ತು ಶಿವ ಲಿಂಗರೂಪಿಯಾಗಿ ಅವತರಿಸಿದ ಪವಿತ್ರ ದಿನವಾಗಿದೆ. ಈ ದಿನ ಉಪವಾಸ, ಜಾಗರಣೆ ಮತ್ತು ಶಿವನಿಗೆ ಅಭಿಷೇಕ ಮಾಡುವುದರಿಂದ ದೇಹ ಹಾಗೂ ಮನಸ್ಸಿಗೆ ಸಮತೋಲನ ಸಿಗುತ್ತದೆ. ಓಂ ನಮಃ ಶಿವಾಯ ಮಂತ್ರ ಜಪಿಸುವುದರಿಂದ ರೋಗರುಜಿನಗಳು ಕಡಿಮೆಯಾಗಿ ಜ್ಞಾನ ಮತ್ತು ಬೆಳಕು ಲಭಿಸುತ್ತದೆ.

ಮಹಾಶಿವರಾತ್ರಿಯು ಹಿಂದೂ ಧರ್ಮದ ಒಂದು ಪವಿತ್ರ ಹಬ್ಬವಾಗಿದ್ದು, ಧಾರ್ಮಿಕ ಮತ್ತು ವೈಜ್ಞಾನಿಕ ಮಹತ್ವವನ್ನು ಹೊಂದಿದೆ. ಇದು ಶಿವ-ಶಕ್ತಿಯ ಸಮ್ಮಿಲನದ ಹಬ್ಬ. ಶಿವ-ಪಾರ್ವತಿಯರ ವಿವಾಹವಾದ ದಿನ ಮತ್ತು ಶಿವ ಲಿಂಗರೂಪಿಯಾಗಿ ಅವತರಿಸಿದ ದಿನವಿದು. ಬ್ರಹ್ಮ ಮತ್ತು ವಿಷ್ಣು ನಡುವೆ ಶ್ರೇಷ್ಠತೆಯ ಪ್ರಶ್ನೆ ಬಂದಾಗ, ಶಿವ ಲಿಂಗರೂಪಿಯಾಗಿ ಪ್ರಕಟಗೊಂಡ ಪರ್ವ ಸಮಯ ಇದಾಗಿದೆ. ಮಹಾಶಿವರಾತ್ರಿಯಂದು ಉಪವಾಸ, ಜಾಗರಣೆ ಮತ್ತು ಶಿವ ಪೂಜೆಗೆ ವಿಶೇಷ ಮಹತ್ವವಿದೆ. ಇಡೀ ದಿನ ನಿರ್ಜಲ ಉಪವಾಸ ಆಚರಿಸುವುದರಿಂದ ದೇಹ ಮತ್ತು ಮನಸ್ಸಿನ ಸಮತೋಲನ ಹೆಚ್ಚುತ್ತದೆ. ಸಮುದ್ರ ಮಂಥನದ ಸಮಯದಲ್ಲಿ ಶಿವನು ವಿಷವನ್ನು ಸೇವಿಸಿದಾಗ, ಆ ವಿಷದ ಪ್ರಭಾವ ದೇಹಕ್ಕೆ ಆಗದಿರಲೆಂದು ಪಾರ್ವತಿ ದೇವಿ ಅವನ ಕುತ್ತಿಗೆಯನ್ನು ಹಿಡಿದು ರಾತ್ರಿ ಇಡೀ ಎಲ್ಲರೂ ಜಾಗರಣೆ ಮಾಡಿದರು. ಇದರ ಪ್ರತೀಕವಾಗಿ ಇಂದು ಜಾಗರಣೆ ಆಚರಿಸಲಾಗುತ್ತದೆ. ಈ ದಿನ ಶಿವನಾಮ ಸ್ಮರಣೆ, ಭಜನೆ ಮತ್ತು ಧ್ಯಾನದಲ್ಲಿ ತೊಡಗಿಸಿಕೊಳ್ಳುವುದು ಮಂಗಳಕರ.

ಶಿವನಿಗೆ ಅಭಿಷೇಕ ಪ್ರಿಯ. ಹಾಲು, ಮೊಸರು, ವಿಭೂತಿ, ಗಂಧ, ಪಂಚಾಮೃತಗಳಿಂದ ನಾಲ್ಕು ಯಾಮಗಳಲ್ಲಿ ಅಭಿಷೇಕ ಮಾಡಲಾಗುತ್ತದೆ. ಬಿಲ್ವಪತ್ರೆ ಅರ್ಪಣೆ ಮತ್ತು ಓಂ ನಮಃ ಶಿವಾಯ ಮಂತ್ರ ಜಪಿಸುವುದರಿಂದ ರೋಗರುಜಿನಗಳು ಕಡಿಮೆಯಾಗಿ ಅನುಗ್ರಹ ಲಭಿಸುತ್ತದೆ ಎಂದು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.