ಇಂಫಾಲ್: ಮಣಿಪುರದಲ್ಲಿ (Manipur) ಬಂಡುಕೋರರ ಗುಂಡಿನ ದಾಳಿಗೆ ಒಬ್ಬ ಬಿಎಸ್‌ಎಫ್ ಸಿಬ್ಬಂದಿ ಹುತಾತ್ಮವಾಗಿದ್ದು, 2 ಅಸ್ಸಾಂ ರೈಫಲ್ಸ್ ಯೋಧರು ಗಾಯಗೊಂಡಿದ್ದಾರೆ. ಜೂನ್ 5-6ರ ಮಧ್ಯರಾತ್ರಿಯಲ್ಲಿ ಭದ್ರತಾ ಪಡೆಗಳು ಮತ್ತು ದಂಗೆಕೋರರ ಗುಂಪಿನ ನಡುವಿನ ಗುಂಡಿನ ದಾಳಿಯಲ್ಲಿ ಮಣಿಪುರದ ಸೆರೌನಲ್ಲಿ ಇಬ್ಬರು ಅಸ್ಸಾಂ ರೈಫಲ್ಸ್ ಸಿಬ್ಬಂದಿ ಗುಂಡೇಟಿನಿಂದ ಗಾಯಗೊಂಡು ಗಡಿ ಭದ್ರತಾ ಪಡೆ (ಬಿಎಸ್ಎಫ್) ನ ಒಬ್ಬ ಯೋಧ ಸಾವನ್ನಪ್ಪಿದ್ದಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡಿರುವ ಅಸ್ಸಾಂ ರೈಫಲ್ಸ್ ಸಿಬ್ಬಂದಿಯನ್ನು ಮಂತ್ರಿಪುಖ್ರಿಗೆ ವಿಮಾನದ ಮೂಲಕ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಣಿಪುರದ ಸುಗ್ನು/ಸೆರೌ ಪ್ರದೇಶಗಳಲ್ಲಿ ಅಸ್ಸಾಂ ರೈಫಲ್ಸ್, ಬಿಎಸ್‌ಎಫ್ ಮತ್ತು ಪೋಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ಸಮಯದಲ್ಲಿ ಭದ್ರತಾ ಪಡೆಗಳು ಮತ್ತು ಬಂಡುಕೋರರ ಗುಂಪಿನ ನಡುವೆ ಗುಂಡಿನ ಚಕಮಕಿ ನಡೆದಿದೆ. ಭದ್ರತಾ ಪಡೆಗಳು ಕೂಡ ಪ್ರತಿದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಣಿಪುರದಲ್ಲಿ ಇತ್ತೀಚಿನ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಭಾರತೀಯ ಸೇನೆಯು ಅಸ್ಸಾಂ ರೈಫಲ್ಸ್, CAPF (ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು) ಮತ್ತು ಪೊಲೀಸರೊಂದಿಗೆ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಸೇನೆ, ಅಸ್ಸಾಂ ರೈಫಲ್ಸ್, ಪೊಲೀಸ್ ಮತ್ತು ಸಿಎಪಿಎಫ್‌ಗಳು ಶನಿವಾರ ಮಣಿಪುರದಾದ್ಯಂತ ಬೆಟ್ಟಗಳು ಮತ್ತು ಕಣಿವೆ ಪ್ರದೇಶದಲ್ಲಿ ಕಾರ್ಯಾಚರಣೆಯನ್ನು ಆರಂಭಿಸಿವೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Manipur Violence: ಮಣಿಪುರದಲ್ಲಿ ಮತ್ತೆ ಹಿಂಸಾಚಾರ, ಮೂವರ ಸಾವು, ನಾಲ್ವರಿಗೆ ಗಾಯ
ಮಣಿಪುರದಲ್ಲಿ ಮೇ 3 ರಂದು ಎಲ್ಲಾ ಬುಡಕಟ್ಟು ವಿದ್ಯಾರ್ಥಿಗಳ ಒಕ್ಕೂಟ (ATSU) ಮೇಟಿ/ಮೀಟೆಯನ್ನು ಪರಿಶಿಷ್ಟ ಪಂಗಡ (ST) ವರ್ಗಕ್ಕೆ ಸೇರಿಸುವಂತೆ ನಡೆದ ಪ್ರತಿಭಟನೆ, ಹಿಂಸಾಚಾರಕ್ಕೆ ತಿರುಗಿತ್ತು. ಏಪ್ರಿಲ್ 19ರ ಮಣಿಪುರ ಹೈಕೋರ್ಟ್ ನಿರ್ದೇಶನದ ನಂತರ ರಾಜ್ಯದ ಮೇಟಿ ಸಮುದಾಯವನ್ನು ಎಸ್‌ಟಿ ವರ್ಗಕ್ಕೆ ಸೇರಿಸುವ ಬೇಡಿಕೆಯನ್ನು ವಿರೋಧಿಸಿ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ನಂತರ ದೊಡ್ಡ ದಂಗೆ ಕಾರಣವಾಗಿ ಅನೇಕರು ಸಾವನ್ನಪ್ಪಿದರು, ನಂತರ ಕೇಂದ್ರ ಗೃಹಸಚಿವ ಸ್ಥಳಕ್ಕೆ ಭೇಟಿ ಸ್ಥಿತಿ ಬಗ್ಗೆ ಮಾಹಿತಿ ಪಡೆದು, ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವಂತೆ ತಿಳಿಸಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:45 am, Tue, 6 June 23