ಕೇರಳ: ವಾಹನದಿಂದ ಪಟಾಕಿ ಇಳಿಸುವಾಗ ಸ್ಫೋಟ, ಓರ್ವ ಸಾವು, ಹಲವು ಜನರಿಗೆ ಗಾಯ

|

Updated on: Feb 12, 2024 | 1:02 PM

ಕೇರಳದಲ್ಲಿ ವಾಹನದಿಂದ ಪಟಾಕಿಯನ್ನು ಇಳಿಸುವ ಸಂದರ್ಭದಲ್ಲಿ ಸ್ಫೋಟ ಸಂಭವಿಸಿ ಓರ್ವ ಮೃತಪಟ್ಟು, 16ಮಂದಿ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಚೂರಕ್ಕಾಡ್​ನಲ್ಲಿರುವ ಮನೆಯೊಂದರ ಬಳಿ ಸ್ಫೋಟ ಸಂಭವಿಸಿದೆ, ಮನೆಯೊಂದರಲ್ಲೇ ಕಾರ್ಯನಿರ್ವಹಿಸುತ್ತಿದ್ದ ಪಟಾಕಿ ಸಂಗ್ರಹಗಾರದ ಬಳಿ ಈ ಸ್ಫೋಟ ನಡೆದಿದೆ.

ಕೇರಳ: ವಾಹನದಿಂದ ಪಟಾಕಿ ಇಳಿಸುವಾಗ ಸ್ಫೋಟ, ಓರ್ವ ಸಾವು, ಹಲವು ಜನರಿಗೆ ಗಾಯ
ಸ್ಫೋಟ
Image Credit source: Indian Express
Follow us on

ವಾಹನದಿಂದ ಪಟಾಕಿಗಳನ್ನು(Firecrackers) ಇಳಿಸುವಾಗ ಸ್ಫೋಟ ಸಂಭವಿಸಿ ಓರ್ವ ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಘಟನೆ ಕೇರಳದಲ್ಲಿ ನಡೆದಿದೆ. ಚೂರಕ್ಕಾಡ್​ನಲ್ಲಿರುವ ಮನೆಯೊಂದರ ಬಳಿ ಸ್ಫೋಟ ಸಂಭವಿಸಿದೆ, ಮನೆಯೊಂದರಲ್ಲೇ ಕಾರ್ಯನಿರ್ವಹಿಸುತ್ತಿದ್ದ ಪಟಾಕಿ ಸಂಗ್ರಹಗಾರದ ಬಳಿ ಈ ಸ್ಫೋಟ ನಡೆದಿದೆ. ಸುಮಾರು 16 ಮಂದಿ ಗಾಯಗೊಂಡಿದ್ದಾರೆ. ಸ್ಫೋಟದಿಂದ ಸಮೀಪದ ಮನೆಗಳು ಹಾಗೂ ಇತರೆ ಕಟ್ಟಡಗಳಿಗೆ ಹಾನಿಯುಂಟಾಗಿದೆ.

ಮೃತರನ್ನು ಉಳೂರು ಮೂಲದ ಅಶೋಕನ್ ಅವರ ಪುತ್ರ ವಿಷ್ಣು ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ ಕೂಡಲೇ ಅವರನ್ನು ಸಮೀಪದ ತ್ರಿಪುಣಿತುರಾ ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಯಾವುದೇ ಪ್ರಯೋಜನವಾಗಿಲ್ಲ ಆಗಲೇ ಪ್ರಾಣಪಕ್ಷಿ ಹಾರಿಹೋಗಿತ್ತು.

ಸ್ಫೋಟದಲ್ಲಿ ಗಾಯಗೊಂಡ 12 ಮಂದಿ ವೈದ್ಯಕೀಯ ಆರೈಕೆಯಲ್ಲಿದ್ದಾರೆ. ಇವರಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದ ಓರ್ವನನ್ನು ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರನ್ನು ಕಲಮೆಸ್ಸೆರಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮತ್ತಷ್ಟು ಓದಿ: West Bengal: ಪಶ್ಚಿಮ ಬಂಗಾಳದ ಪಟಾಕಿ ಕಾರ್ಖಾನೆ ಸ್ಫೋಟ, ಸಾವಿನ ಸಂಖ್ಯೆ 9ಕ್ಕೆ ಏರಿಕೆ

ಈ ನಡುವೆ ಪೊಲೀಸರ ಅನುಮತಿ ಪಡೆಯದೇ ಪಟಾಕಿಗಳನ್ನು ಜನವಸತಿ ಪ್ರದೇಶಕ್ಕೆ ಕೊಂಡೊಯ್ಯಲಾಗಿದೆ ಎಂದು ಹೇಳಲಾಗಿದೆ. ವಾಹನದಿಂದ ಇಳಿಸುವಾಗ ಪಟಾಕಿ ಸಿಡಿದಿದೆ ಎಂದು ಹೇಳಲಾಗಿದೆ. ಪಟಾಕಿ ಕೊಂಡೊಯ್ಯುವ ವಾಹನವೂ ಬೆಂಕಿಗಾಹುತಿಯಾಗಿದೆ. ಅಕ್ಕಪಕ್ಕದಲ್ಲಿದ್ದ ವೃದ್ಧರು, ಮಕ್ಕಳು ಗಾಯಗೊಂಡಿದ್ದಾರೆ. ಸ್ಫೋಟಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಸ್ಫೋಟದಲ್ಲಿ 30 ಮನೆಗಳಿಗೆ ಹಾನಿಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ