ವಿಡಿಯೋ: ಆ ಗ್ರಾಮದಲ್ಲಿ ಕತ್ತಲಾಗುತ್ತಿದ್ದಂತೆ ಚಲಿಸುತ್ತವೆ ಕಪ್ಪು ಆಕಾರಗಳು.. ಅರಚುವಿಕೆ, ವಿಚಿತ್ರ ಕೇಕೆಗಳ ಆರ್ಭಟ
ಅದೊಂದು ದಿನ ಅಮಾವಾಸ್ಯೆ ಸಮಯದಲ್ಲಿ ಮಧ್ಯರಾತ್ರಿ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ನಗ್ನವಾಗಿ, ಉದ್ದದ ಕೂದಲು ಇಳಿಯಬಿಟ್ಟು, ದೊಡ್ಡ ದೊಡ್ಡ ಪಾದಗಳೊಂದಿಗೆ ಕಪ್ಪನೆ ಮಿರಿಮಿರಿ ಮಿಂಚುತ್ತಾ ಮರದಿಂದ ಹಾರಿ ನಾಪತ್ತೆಯಾಯಿತು ಎಂದು ಅದನ್ನು ಕಂಡ ಕೆಲವು ಮಹಿಳೆಯರು ಹೇಳುತ್ತಾರೆ.
ಅದು ದೆವ್ವವೇ? ಅಥವಾ ಅಗೋಚರ ಶಕ್ತಿಯಾ..? ಕಾಕಿನಾಡ ಜಿಲ್ಲೆಯ ಪೆದ್ದಾಪುರಂ ಮಂಡಲದ ಕಾಂಡ್ರಕೋಟ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆ ಅದೃಶ್ಯ ಶಕ್ತಿಯ ಅಟ್ಟಹಾಸದಿಂದ ಸ್ಥಳೀಯರು ತೀವ್ರ ಭಯದಲ್ಲಿದ್ದಾರೆ. ಕತ್ತಲಾದರೆ ಜನ ಮನೆಯಿಂದ ಹೊರಗೆ ಬರಲು ಹೆದರುತ್ತಾರೆ. ಮತ್ತು ಹಳ್ಳಿಯಲ್ಲಿ ನಿಜವಾಗಿಯೂ ಅದೃಶ್ಯ ಶಕ್ತಿಯು ತಿರುಗುತ್ತಿದೆಯೇ? ಛೋಲ್ಲಂಗಿ ಅಮಾವಾಸ್ಯ ದಿನ ದೆವ್ವಗಳು ಇಳಿದುಬಂದಿವೆಯಾ? ಈಗ ವಾಸ್ತವವಾದ ಕಥೆಯತ್ತ ಹೊರಳೋಣ.
ಕೆಲವು ದಿನಗಳ ಹಿಂದೆ ಕಾಕಿನಾಡ ಜಿಲ್ಲೆಯ ಪೆದ್ದಾಪುರಂ ಮಂಡಲದ ಕಂಡ್ರಕೋಟ್ ಗ್ರಾಮದಲ್ಲಿ ಹಳದಿ, ಕುಂಬಳಕಾಯಿ, ನಿಂಬೆ, ಮೆಣಸಿನಕಾಯಿಗಳಿಂದ ಪೂಜಿಸುವ ಬಗ್ಗೆ ಪ್ರಚಾರವಾಗಿತ್ತು. ಅದರ ನಂತರ, ಗ್ರಾಮದ ಮನೆಯೊಂದರ ಬಳಿ ಅಲೆಮಾರಿ ಹೊರ ಊರಿನವರು ಮೇಕೆಯನ್ನು ಕೊಂದು ತಿಂದಿದ್ದರು. ಮತ್ತು ಅವರು ಊರಿನಲ್ಲಿಯೇ ಠಿಕಾಣಿ ಹೂಡಿದ್ದರು. ಈ ಮಧ್ಯೆ ಅಮಾವಾಸ್ಯೆಯ ದಿನ ನೂಕಾಲಮ್ಮ ತಾಯಿಯ ದೇವಸ್ಥಾನದಲ್ಲಿ ಅಷ್ಟಭೈರವಿ ಮಹಾಶಕ್ತಿ ಹೋಮವನ್ನು ಗ್ರಾಮಸ್ಥರು ಮಾಡತೊಡಗಿದರು.
ಆದರೆ ಅದೊಂದು ದಿನ ಅಮಾವಾಸ್ಯೆ ಸಮಯದಲ್ಲಿ ಮಧ್ಯರಾತ್ರಿ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ನಗ್ನವಾಗಿ, ಉದ್ದದ ಕೂದಲು ಇಳಿಯಬಿಟ್ಟು, ದೊಡ್ಡ ದೊಡ್ಡ ಪಾದಗಳೊಂದಿಗೆ ಕಪ್ಪನೆ ಮಿರಿಮಿರಿ ಮಿಂಚುತ್ತಾ ಮರದಿಂದ ಹಾರಿ ನಾಪತ್ತೆಯಾಯಿತು ಎಂದು ಅದನ್ನು ಕಂಡ ಕೆಲವು ಮಹಿಳೆಯರು ಹೇಳುತ್ತಾರೆ. ಅದಾದಮೇಲೆ ಗ್ರಾಮದಲ್ಲಿ ರಾತ್ರಿ ವೇಳೆ ಕತ್ತಲು ಆವರಿಸುತ್ತಿದ್ದಂತೆ ಹಳ್ಳಿಯ ಬೀದಿ ಬೀದಿಗಳಲ್ಲಿ ಯುವಕರು ಬಾರು ಕೋಲು ಹಿಡಿದುಕೊಂಡು ಓಡಾಡುವುದು ಕಾಣುತ್ತಿದೆ. ಅನೇಕ ಮುದುಕರು ಮತ್ತು ಮಹಿಳೆಯರು ಆ ಭಾಯನಕ ಆಕೃತಿಯನ್ನು ನೋಡಿ ಗಾಬರಿಗೊಂಡಿರುವುದಾಗಿ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಗ್ರಾಮದ ಹೊರವಲಯದಲ್ಲಿರುವ ತೋಟದಲ್ಲಿ ಇಬ್ಬರು ಬೆತ್ತಲೆಯಾಗಿ ಓಡುತ್ತಿರುವ ವಿಡಿಯೋವೊಂದು ಗ್ರಾಮದಲ್ಲಿ ವೈರಲ್ ಆಗಿದೆ. ಹಾಗಾದರೆ ಇದರ ಅಸಲಿ ಸತ್ಯ ತಿಳಿಯಬೇಕಾದರೆ ಇನ್ನಷ್ಟು ದಿನ ಕಾಯಬೇಕು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ