ಹಳೆ ಗಾಯ ಮಾಸುವ ಮುನ್ನವೇ ಆಂಧ್ರದಲ್ಲಿ ಮತ್ತೊಂದು ಗ್ಯಾಸ್‌ ಲೀಕ್‌, ಎಷ್ಟು ಸಾವು?

| Updated By:

Updated on: Jun 27, 2020 | 2:56 PM

ಕರ್ನೂಲ್‌: ಆಂಧ್ರ ಪ್ರದೇಶದಲ್ಲಿ ಕೆಲ ದಿನಗಳ ಹಿಂದೆ ನಡೆದ ಗ್ಯಾಸ್‌ ಲೀಕ್‌ ಟ್ರಾಜಿಡಿ ಮಾಸುವ ಮುನ್ನವೇ ಮತ್ತೊಂದು ಅಂತಹುದ್ದೆ ಘಟನೆ ಸಂಭವಿಸಿದೆ. ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯ ನಂದ್ಯಾಲ್‌ ನಗರದ ಹೊರವಲಯದಲ್ಲಿರುವ ಫ್ಯಾಕ್ಟರಿಯೊಂದರಲ್ಲಿ ಅಮೋನಿಯಾ ಅನಿಲ ಸೋರಿಕೆಯಾಗಿದೆ. ಈ ಅಮೋನಿಯಾ ಅನಿಲ ಸೋರಿಕೆಯ ಪರಿಣಾಮ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಕರ್ನೂಲ್‌ನ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಫ್ಯಾಕ್ಟರಿಯಲ್ಲಿ ಅನಿಲ ಸೋರಿಕೆಯ ವಿಷಯ ತಿಳಿಯುತ್ತಿದ್ದಂತೆ ಗಾಬರಿಯಾಗಿರುವ ಅಧಿಕಾರಿಗಳು, ತಕ್ಷಣವೇ ಸ್ಥಳಕ್ಕೆ ಅಗ್ನಿಶಾಮಕ ದಳವನ್ನ ರವಾನಿಸಿದ್ದಾರೆ. ನಂತರ ಸಂಬಂಧಿಸಿದ ಅಧಿಕಾರಿಗಳು ಕೈಗೊಳ್ಳಬೇಕಾದ ಅಗತ್ಯ […]

ಹಳೆ ಗಾಯ ಮಾಸುವ ಮುನ್ನವೇ ಆಂಧ್ರದಲ್ಲಿ ಮತ್ತೊಂದು ಗ್ಯಾಸ್‌ ಲೀಕ್‌, ಎಷ್ಟು ಸಾವು?
Follow us on

ಕರ್ನೂಲ್‌: ಆಂಧ್ರ ಪ್ರದೇಶದಲ್ಲಿ ಕೆಲ ದಿನಗಳ ಹಿಂದೆ ನಡೆದ ಗ್ಯಾಸ್‌ ಲೀಕ್‌ ಟ್ರಾಜಿಡಿ ಮಾಸುವ ಮುನ್ನವೇ ಮತ್ತೊಂದು ಅಂತಹುದ್ದೆ ಘಟನೆ ಸಂಭವಿಸಿದೆ.

ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯ ನಂದ್ಯಾಲ್‌ ನಗರದ ಹೊರವಲಯದಲ್ಲಿರುವ ಫ್ಯಾಕ್ಟರಿಯೊಂದರಲ್ಲಿ ಅಮೋನಿಯಾ ಅನಿಲ ಸೋರಿಕೆಯಾಗಿದೆ. ಈ ಅಮೋನಿಯಾ ಅನಿಲ ಸೋರಿಕೆಯ ಪರಿಣಾಮ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಕರ್ನೂಲ್‌ನ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಫ್ಯಾಕ್ಟರಿಯಲ್ಲಿ ಅನಿಲ ಸೋರಿಕೆಯ ವಿಷಯ ತಿಳಿಯುತ್ತಿದ್ದಂತೆ ಗಾಬರಿಯಾಗಿರುವ ಅಧಿಕಾರಿಗಳು, ತಕ್ಷಣವೇ ಸ್ಥಳಕ್ಕೆ ಅಗ್ನಿಶಾಮಕ ದಳವನ್ನ ರವಾನಿಸಿದ್ದಾರೆ. ನಂತರ ಸಂಬಂಧಿಸಿದ ಅಧಿಕಾರಿಗಳು ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಚರ್ಚಿಸಿ ಅನಿಲ ಸೋರಿಕೆಯನ್ನ ತಡೆಗಟ್ಟಲು ಶ್ರಮಿಸುತ್ತಿದ್ದಾರೆ.

Published On - 2:55 pm, Sat, 27 June 20