ದೆಹಲಿ, ಜ.6: ಒಂದು ರಾಷ್ಟ್ರ, ಒಂದು ಚುನಾವಣೆಗೆ (One nation, one election) ಸಂಬಂಧಿಸಿದಂತೆ ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ (Ram Nath Kovind) ನೇತೃತ್ವದ ಸಮಿತಿಯು ದೇಶದಲ್ಲಿ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವ ಮೂಲಕ ಪ್ರಸ್ತುತ ಆಡಳಿತ ಚೌಕಟ್ಟಿನಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಲು ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿದೆ. ಇನ್ನು ಈ ಬಗ್ಗೆ ಒಂದು ಸಾರ್ವಜನಿಕ ಪ್ರಕಟಣೆಯನ್ನು ಹೊರಡಿಸಲಾಗಿದೆ. ಉನ್ನತ ಮಟ್ಟದ ಸಮಿತಿಯು ಜನವರಿ 15ರೊಳಗೆ ಸಾರ್ವಜನಿಕರು ಒಂದು ರಾಷ್ಟ್ರ, ಒಂದು ಚುನಾವಣೆ ಬಗ್ಗೆ ತಮ್ಮ ಸಲಹೆಯನ್ನು ಕಳುಹಿಸಿಬೇಕು. 15ರೊಳಗೆ ಸ್ವೀಕರಿಸಿದ ಸಲಹೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಸಮಿತಿ ಹೇಳಿದೆ. ಸಲಹೆಗಳನ್ನು ಸಮಿತಿಯ ವೆಬ್‌ಸೈಟ್ onoe.gov.in ನಲ್ಲಿ ಪೋಸ್ಟ್ ಮಾಡಬಹುದು ಅಥವಾ ಇ-ಮೇಲ್ ಮೂಲಕ sc-hlc@gov.in ಗೆ ಕಳುಹಿಸಬಹುದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಈ ಸಮಿತಿಯು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ರಚನೆಯಾಗಿತ್ತು. ಇದರ ನೇತೃತ್ವವನ್ನು ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ಗೆ ನೀಡಲಾಗಿದೆ. ನಂತರ ಸಮಿತಿಯು ಎರಡು ಸಭೆಗಳನ್ನು ನಡೆಸಿದೆ. ಏಕಕಾಲದಲ್ಲಿ ಚುನಾವಣೆ ನಡೆಸುವ ಬಗ್ಗೆ ಈ ಹಿಂದೆ ರಾಜಕೀಯ ಪಕ್ಷಗಳ ಅಭಿಪ್ರಾಯವನ್ನು ಸಂಗ್ರಹ ಮಾಡಿತ್ತು. ಅದಕ್ಕಾಗಿ ದೇಶದ ಹಲವು ಪಕ್ಷಗಳಿಗೆ ಈ ಬಗ್ಗೆ ಒಂದು ಪತ್ರವನ್ನು ಕೂಡ ಕಳುಹಿಸಲಾಗಿತ್ತು. ಇದೀಗ ಏಕಕಾಲದಲ್ಲಿ ಚುನಾವಣೆ ನಡೆಸುವ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಮಾಡಲು ಮುಂದಾಗಿದೆ.
‘One Nation, One Election’ high-level committee, headed by former President Ram Nath Kovind, invites public suggestions “for making appropriate changes in the existing legal administrative framework to enable simultaneous elections in the country.” The suggestions can be posted…
— ANI (@ANI) January 6, 2024
ಒಂದು ದೇಶ, ಒಂದು ಚುನಾವಣೆ ಬಗ್ಗೆ ಪಕ್ಷಗಳ ಸಲಹೆ ಪಡೆಯಲು ಸಮಿತಿಯು ಆರು ರಾಷ್ಟ್ರೀಯ ಪಕ್ಷಗಳು, 33 ರಾಜ್ಯ ಪಕ್ಷಗಳು ಮತ್ತು ಏಳು ನೋಂದಾಯಿತ ಮಾನ್ಯತೆ ಪಡೆಯದ ಪಕ್ಷಗಳಿಗೆ ಪತ್ರಗಳನ್ನು ಕಳುಹಿಸಲಾಗಿದೆ. ಈಗಾಗಗಲೇ ಸಮಿತಿಯೂ ಏಕಕಾಲಕ್ಕೆ ಚುನಾವಣೆ ನಡೆಸುವ ಕುರಿತು ಕಾನೂನು ಆಯೋಗದ ಅಭಿಪ್ರಾಯವನ್ನೂ ಕೇಳಿದೆ.
ಇದನ್ನೂ ಓದಿ: ಒಂದು ರಾಷ್ಟ್ರ, ಒಂದು ಚುನಾವಣೆ, ಇಂದು ಕೋವಿಂದ್ ನೇತೃತ್ವದ ಸಮಿತಿಯ ಎರಡನೇ ಸಭೆ
ಈ ವಿಚಾರವಾಗಿ ಮತ್ತೊಮ್ಮೆ ಕಾನೂನು ಸಮಿತಿಯ ಸಭೆ ಕರೆಯಬಹುದು. ಅವುಗಳ ನಿಯಮಗಳ ಪ್ರಕಾರ, ಸಮಿತಿಯು ಸಂವಿಧಾನದ ಅಡಿಯಲ್ಲಿ ಅಸ್ತಿತ್ವದಲ್ಲಿರುವ ಚೌಕಟ್ಟನ್ನು ಗಮನದಲ್ಲಿಟ್ಟುಕೊಂಡು ಈ ಕಾರ್ಯವನ್ನು ಮುಂದುವರಿಸಬೇಕಿದೆ. ಲೋಕಸಭೆ, ರಾಜ್ಯ ವಿಧಾನಸಭೆಗಳು, ಪುರಸಭೆಗಳು ಮತ್ತು ಪಂಚಾಯತ್‌ಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ನಡೆಸುವ ಬಗ್ಗೆ ಪರಿಶೀಲನೆ ಹಾಗೂ ಶಿಫಾರಸುಗಳನ್ನು ಮಾಡಲು ಕಾನೂನು ಸಮಿತಿಯ ಸಭೆ ಕರೆಯುವ ಮೂಲ ಉದ್ದೇಶವಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ