ಒಂದು ರಾಷ್ಟ್ರ ಒಂದು ಚುನಾವಣೆ: ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದಲ್ಲಿ ಇಂದು ಸಭೆ

One Nation One Election: ಒಂದು ರಾಷ್ಟ್ರ ಒಂದು ಚುನಾವಣೆ ಸಮಿತಿಯನ್ನು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದಲ್ಲಿ ಈಗಾಗಲೇ ​​ಕೇಂದ್ರ ಸರ್ಕಾರ ರಚಿಸಿದೆ. ಇದೀಗ ಈ ಸಮಿತಿ ಮೊದಲು ಸಭೆಯನ್ನು ರಾಮನಾಥ್ ಕೋವಿಂದ್ ಅವರ ಅಧ್ಯಕ್ಷತೆಯಲ್ಲಿ ಇಂದು (ಸೆ.23) ದೆಹಲಿಯಲ್ಲಿ ನಡೆಸಲಿದೆ.

ಒಂದು ರಾಷ್ಟ್ರ ಒಂದು ಚುನಾವಣೆ: ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದಲ್ಲಿ ಇಂದು ಸಭೆ
ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್
Follow us
|

Updated on:Sep 23, 2023 | 11:24 AM

ದೆಹಲಿ, ಸೆ.23: ಒಂದು ರಾಷ್ಟ್ರ ಒಂದು ಚುನಾವಣೆ (One Nation One Election) ಸಮಿತಿಯನ್ನು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ (Ram Nath Kovind) ನೇತೃತ್ವದಲ್ಲಿ ಈಗಾಗಲೇ ​​ಕೇಂದ್ರ ಸರ್ಕಾರ ರಚಿಸಿದೆ. ಇದೀಗ ಈ ಸಮಿತಿ ಮೊದಲು ಸಭೆಯನ್ನು ರಾಮನಾಥ್ ಕೋವಿಂದ್ ಅವರ ಅಧ್ಯಕ್ಷತೆಯಲ್ಲಿ ಇಂದು (ಸೆ.23) ದೆಹಲಿಯಲ್ಲಿ ನಡೆಸಲಿದೆ. ಈ ಸಭೆಯಲ್ಲಿ ಲೋಕಸಭೆ, ರಾಜ್ಯ ವಿಧಾನಸಭೆಗಳು, ಪುರಸಭೆಗಳು ಮತ್ತು ಪಂಚಾಯತ್‌ಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ಮಾಡುವ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಮತ್ತು ರಾಜಕೀಯ ನಾಯಕರ ಅಭಿಪ್ರಾಯ ಏನು? ಇದರ ಸಾಧಕ-ಭಾದಕಗಳೇನು? ಎಂಬುದರ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಇದರ ಜತೆಗೆ ಈ ಸಭೆಯಲ್ಲಿ ಸಮಿತಿಯು ಏಕಕಾಲದಲ್ಲಿ ಎಲ್ಲ ಚುನಾವಣೆಗಳನ್ನು ಹೇಗೆ ನಡೆಸುವುದು? ಇದರ ಮುಂದೆ ಇರುವ ಸವಾಲುಗಳೇನು? ಇದರಿಂದ ಎದುರಿಸಬೇಕಾದ ಸನ್ನಿವೇಶಗಳೇನು? ಎಂಬುದರ ಬಗ್ಗೆ ಚರ್ಚಿಸಲಿದೆ. ಹಂಗ್​​ ಅಸೆಂಬ್ಲಿ (ಯಾವುದೇ ರಾಜಕೀಯ ಪಕ್ಷ ಅಥವಾ ಮೈತ್ರಿ ಪಕ್ಷ ಸ್ಪಷ್ಟ ಬಹುಮತ ಪಡೆಯಲು ವಿಫಲವಾಗುವುದು) ಅಥವಾ ಅವಿಶ್ವಾಸ ನಿರ್ಣಯದ ಅಂಗೀಕಾರ ಸಂದರ್ಭಗಳನ್ನು ಹೇಗೆ ನಿಭಾಯಿಸುವುದು ಎಂಬುದರ ಬಗ್ಗೆಯು ಚರ್ಚೆ ನಡೆಸಲಾಗುವುದು.

ಇನ್ನು ಈ ಸಮಿತಿಯು ಒಂದು ರಾಷ್ಟ್ರ ಒಂದು ಚುನಾವಣೆಯನ್ನು ನಡೆಸಬೇಕಾದರೆ ಅದರ ಚೌಕಟ್ಟು ಮತ್ತು ಅದರ ಕಾಲಮಿತಿ ಏನು ಎಂಬುದರ ಬಗ್ಗೆಯು ಈ ಸಭೆಯಲ್ಲಿ ಸೂಚಿಸಲಿದೆ. ಏಕಕಾಲದಲ್ಲಿ ನಡೆಸುವ ಚುನಾವಣೆಯ ಬಗ್ಗೆ ಕೆಲವೊಂದು ಅಧ್ಯಯನವನ್ನು ನಡೆಸಬೇಕಿದೆ. ನಂತರ ಈ ಬಗ್ಗೆ ಒಂದು ವರದಿಯನ್ನು ಸಿದ್ಧಪಡಿಸಲಿದೆ ಎಂದು ಖಾಸಗಿ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆ ಸಮಿತಿಯ ಅಧ್ಯಕ್ಷ ರಾಮನಾಥ್ ಕೋವಿಂದ್ ಮಾಧ್ಯಮಗಳಿಗೆ ತಿಳಿಸಿದರು.

ಪ್ರಸ್ತುತ ದೇಶದಲ್ಲಿ ಚುನಾವಣೆ ಆಯೋಗ ರಾಜ್ಯ ವಿಧಾನಸಭೆಗಳಿಗೆ ಮತ್ತು ಲೋಕಸಭೆಗೆ ಪ್ರತ್ಯೇಕ ಚುನಾವಣೆಯನ್ನು ನಡೆಸುತ್ತಿತ್ತು. ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆಗಳನ್ನು ಐದು ವರ್ಷಕ್ಕೊಮ್ಮೆ ನಡೆಸಲಾಗುತ್ತಿದೆ. ಇನ್ನು ರಾಜ್ಯಗಳು ತಮ್ಮ ಸ್ಥಳೀಯ ಆಡಳಿತ ( ನಗರಸಭೆ, ಗ್ರಾಮಪಂಚಾಯತ್​) ಚುನಾವಣೆಗಳನ್ನು ಕಾಲನುಸರವಾಗಿ ನಡೆಸುತ್ತದೆ. ಆದರೆ ಒಂದು ರಾಷ್ಟ್ರ ಒಂದು ಚುನಾವಣೆ ಜಾರಿಗೆ ಬಂದರೆ ಲೋಕಸಭೆ, ವಿಧಾನಸಭೆ, ಸ್ಥಳೀಯ ಚುನಾವಣೆಗಳು ಏಕಕಾಲದಲ್ಲಿ ನಡೆಯಲಿದೆ.

ಇದನ್ನೂ ಓದಿ:ಒಂದು ರಾಷ್ಟ್ರ ಒಂದು ಚುನಾವಣೆ ಕುರಿತು ಮೌನಮುರಿದ ರಾಹುಲ್ ಗಾಂಧಿ

ಒಂದು ರಾಷ್ಟ್ರ ಒಂದು ಚುನಾವಣೆ ಸಮಿತಿ ಸದಸ್ಯರು ಯಾರ‍್ಯಾರು?

ಒಂದು ರಾಷ್ಟ್ರ ಒಂದು ಚುನಾವಣೆ ಸಮಿತಿಯಲ್ಲಿ ಕೇಂದ್ರ ಗೃಹಸಚಿವ ಅಮಿತ್​​ ಶಾ, ಕಾಂಗ್ರೆಸ್ ಲೋಕಸಭೆ ನಾಯಕ ಅಧೀರ್ ರಂಜನ್ ಚೌಧರಿ, ರಾಜ್ಯಸಭೆಯ ಮಾಜಿ ನಾಯಕ ಗುಲಾಂ ನಬಿ ಆಜಾದ್, 15ನೇ ಹಣಕಾಸು ಆಯೋಗದ ಮಾಜಿ ಅಧ್ಯಕ್ಷ ಎನ್‌ಕೆ ಸಿಂಗ್, ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಸುಭಾಷ್ ಕಶ್ಯಪ್, ಹಿರಿಯ ವಕೀಲ ಹರೀಶ್ ಸಾಳ್ವೆ, ಮಾಜಿ ಮುಖ್ಯ ವಿಜಿಲೆನ್ಸ್ ಕಮಿಷನರ್ ಸಂಜಯ್ ಕೊಠಾರಿ ಮತ್ತು ರಾಜ್ಯ ಸಚಿವ (ಕಾನೂನು) ಅರ್ಜುನ್ ರಾಮ್ ಮೇಘವಾಲ್ ಅವರನ್ನು ಒಳಗೊಂಡಿರುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:19 am, Sat, 23 September 23

ಬಿಗ್​ಬಾಸ್ ಮನೆಯ ಫೇಕ್ ಸ್ಪರ್ಧಿ ಯಾರು? ಊಸರವಳ್ಳಿ ಯಾರು?
ಬಿಗ್​ಬಾಸ್ ಮನೆಯ ಫೇಕ್ ಸ್ಪರ್ಧಿ ಯಾರು? ಊಸರವಳ್ಳಿ ಯಾರು?
Daily Devotional: ಪೂಜೆಯ ಫಲ ಪಡೆಯುವುದು ಹೇಗೆ? ವಿಡಿಯೋ ನೋಡಿ
Daily Devotional: ಪೂಜೆಯ ಫಲ ಪಡೆಯುವುದು ಹೇಗೆ? ವಿಡಿಯೋ ನೋಡಿ
ವಾರ ಭವಿಷ್ಯ: ನವೆಂಬರ್​ 11 ರಿಂದ ​17ರವರೆಗೆ ವಾರ ಭವಿಷ್ಯ ಹೀಗಿದೆ
ವಾರ ಭವಿಷ್ಯ: ನವೆಂಬರ್​ 11 ರಿಂದ ​17ರವರೆಗೆ ವಾರ ಭವಿಷ್ಯ ಹೀಗಿದೆ
Nithya Bhavishya: ಈ ರಾಶಿಯವರಿಗೆ 5 ಗ್ರಹಗಳ ಶುಭ ಫಲವಿದೆ
Nithya Bhavishya: ಈ ರಾಶಿಯವರಿಗೆ 5 ಗ್ರಹಗಳ ಶುಭ ಫಲವಿದೆ
ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ;18 ಮಂದಿಗೆ ಗಾಯ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ;18 ಮಂದಿಗೆ ಗಾಯ
ವಾರದ ಪಂಚಾಯಿತಿ ನಡೆಸಲು ಬಂದ ಸುದೀಪ್, ಮಂಜುಗೆ ಕಾದಿದೆ ಮಾತಿನ ಚಾಟಿ?
ವಾರದ ಪಂಚಾಯಿತಿ ನಡೆಸಲು ಬಂದ ಸುದೀಪ್, ಮಂಜುಗೆ ಕಾದಿದೆ ಮಾತಿನ ಚಾಟಿ?