ಹೊಸ ಸಂಸತ್ತನ್ನು ‘ಮೋದಿ ಮಲ್ಪಿಪ್ಲೆಕ್ಸ್’​ ಎಂದು ಕರೆದ ಕಾಂಗ್ರೆಸ್​ನ ಹಿರಿಯ ನಾಯಕ ಜೈರಾಮ್ ರಮೇಶ್​

ನೂತನ ಸಂಸತ್ ಭವನವನ್ನು ಕಾಂಗ್ರೆಸ್​ನ ಹಿರಿಯ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾಯಕ ಜೈರಾಮ್ ರಮೇಶ್(Jairam Ramesh) ‘ಮೋದಿ ಮಲ್ಪಿಪ್ಲೆಕ್ಸ್’ ಎಂದು ಕರೆದಿದ್ದಾರೆ. ಹೊಸ ಸಂಸತ್ತಿನಲ್ಲಿ ವಿಶೇಷ ಕಲಾಪಗಳು ಪೂರ್ಣಗೊಂಡಿವೆ, ಹಳೆಯ ಸಂಸತ್ತಿಗೆ ಹೋಲಿಸಿದರೆ ಹೊಸ ಸಂಸತ್ತಿನ ವಿನ್ಯಾಸದಲ್ಲಿರುವ ಹಲವು ನ್ಯೂನತೆಗಳನ್ನು ಕಾಂಗ್ರೆಸ್ ನಾಯಕರು ಹೇಳಿಕೊಂಡಿದ್ದಾರೆ. ಹಳೆಯ ಸಂಸತ್ತಿನಂತೆ ಹೊಸ ಸಂಸತ್ತಿನಲ್ಲಿ ಸದಸ್ಯರ ನಡುವೆ ಸಂವಾದಕ್ಕೆ ಸ್ಥಳವಿಲ್ಲ, ನೌಕರರಿಗೆ ಕೆಲಸ ಮಾಡಲು ಸೌಲಭ್ಯಗಳು ಸಿಗುತ್ತಿಲ್ಲ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

ಹೊಸ ಸಂಸತ್ತನ್ನು ‘ಮೋದಿ ಮಲ್ಪಿಪ್ಲೆಕ್ಸ್’​ ಎಂದು ಕರೆದ ಕಾಂಗ್ರೆಸ್​ನ ಹಿರಿಯ ನಾಯಕ ಜೈರಾಮ್ ರಮೇಶ್​
ಜೈರಾಮ್ ರಮೇಶ್Image Credit source: Outlook
Follow us
|

Updated on: Sep 23, 2023 | 12:27 PM

ನೂತನ ಸಂಸತ್ ಭವನವನ್ನು ಕಾಂಗ್ರೆಸ್​ನ ಹಿರಿಯ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾಯಕ ಜೈರಾಮ್ ರಮೇಶ್(Jairam Ramesh) ‘ಮೋದಿ ಮಲ್ಪಿಪ್ಲೆಕ್ಸ್’ ಎಂದು ಕರೆದಿದ್ದಾರೆ. ಹೊಸ ಸಂಸತ್ತಿನಲ್ಲಿ ವಿಶೇಷ ಕಲಾಪಗಳು ಪೂರ್ಣಗೊಂಡಿವೆ, ಹಳೆಯ ಸಂಸತ್ತಿಗೆ ಹೋಲಿಸಿದರೆ ಹೊಸ ಸಂಸತ್ತಿನ ವಿನ್ಯಾಸದಲ್ಲಿರುವ ಹಲವು ನ್ಯೂನತೆಗಳನ್ನು ಕಾಂಗ್ರೆಸ್ ನಾಯಕರು ಹೇಳಿಕೊಂಡಿದ್ದಾರೆ. ಹಳೆಯ ಸಂಸತ್ತಿನಂತೆ ಹೊಸ ಸಂಸತ್ತಿನಲ್ಲಿ ಸದಸ್ಯರ ನಡುವೆ ಸಂವಾದಕ್ಕೆ ಸ್ಥಳವಿಲ್ಲ, ನೌಕರರಿಗೆ ಕೆಲಸ ಮಾಡಲು ಸೌಲಭ್ಯಗಳು ಸಿಗುತ್ತಿಲ್ಲ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

2024ರಲ್ಲಿ ಅಧಿಕಾರ ಬದಲಾವಣೆಯ ನಂತರ ಹೊಸ ಸಂಸತ್ತಿನ ಕಟ್ಟಡದ ಉತ್ತಮ ಬಳಕೆಗೆ ಮಾರ್ಗವನ್ನು ಕಂಡುಕೊಳ್ಳಲಾಗುವುದು ಎಂದರು. ಹೊಸ ಸಂಸತ್ ಕಟ್ಟಡವನ್ನು ಹೆಚ್ಚಿನ ಪ್ರಚಾರದೊಂದಿಗೆ ಉದ್ಘಾಟಿಸಿದ ರೀತಿ, ಇದು ಪ್ರಧಾನಿ ಮೋದಿಯವರ ಉದ್ದೇಶ ಸಾಕಾರಗೊಂಡಿದೆ. ಹೊಸ ಸಂಸತ್ತನ್ನು ವಾಸ್ತವವಾಗಿ ಮೋದಿ ಮಲ್ಟಿ ಕಾಂಪ್ಲೆಕ್ಸ್ ಎಂದು ಕರೆಯಬೇಕು, 4 ದಿನಗಳ ಕಲಾಪಗಳ ನಂತರ, ಸಂಸತ್ತಿನಲ್ಲಿ ಪರಸ್ಪರ ಸಂವಹನಕ್ಕೆ ಸ್ಥಳಾವಕಾಶವಿಲ್ಲ ಎಂಬುದನ್ನು ನಾನು ನೋಡಿದೆ ಎಂದು ಹೇಳಿದರು.

ಒಬ್ಬರನ್ನೊಬ್ಬರು ನೋಡಲು ದುರ್ಬೀನು ಬೇಕು ವಾಸ್ತುಶೈಲಿಯು ಪ್ರಜಾಪ್ರಭುತ್ವವನ್ನು ಕೊಲ್ಲುತ್ತದೆ ಎಂದಾದರೆ ಪ್ರಧಾನಿ ಮೋದಿ ಅಲಿಖಿತ ಸಂವಿಧಾನವನ್ನು ನಾಶಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ. ಹೊಸ ಸಂಸತ್ತಿನಲ್ಲಿ ಸದಸ್ಯರ ನಡುವಿನ ಅಂತರವನ್ನು ಪ್ರತಿಪಾದಿಸಿದ ರಮೇಶ್ ಸಭಾಂಗಣವು ಆರಾಮದಾಯಕವಾಗಿದೆ ಆದರೆ ಇಲ್ಲಿ ಕುಳಿತಿರುವ ಸದಸ್ಯರು ಪರಸ್ಪರ ನೋಡಲು ಬೈನಾಕ್ಯುಲರ್ ಅಗತ್ಯವಿದೆ ಎಂದು ಹೇಳಿದರು.

ಹಳೆಯ ಸಂಸತ್ ಭವನದ ವಿಶೇಷತೆಗಳನ್ನು ಉಲ್ಲೇಖಿಸಿದ ಜೈರಾಮ್ ರಮೇಶ್, ಹಳೆಯ ಸಂಸತ್ತು ತನ್ನದೇ ಆದ ವಿಶಿಷ್ಟ ಸೌಂದರ್ಯವನ್ನು ಹೊಂದಿದೆ ಎಂದು ಹೇಳಿದರು. ಸದಸ್ಯರ ನಡುವೆ ಸಂವಹನದ ಸೌಲಭ್ಯವೂ ಇತ್ತು. ಉಭಯ ಸದನಗಳು, ಸೆಂಟ್ರಲ್ ಹಾಲ್ ಅಥವಾ ಸಂಸತ್ತಿನ ಕಾರಿಡಾರ್‌ಗಳಲ್ಲಿ ತಿರುಗಾಡುವುದು ಸಹ ಸುಲಭವಾಗಿತ್ತು. ಹೊಸ ಸಂಸತ್ತು ಈ ಸಂಬಂಧವನ್ನು ಕೊನೆಗೊಳಿಸುತ್ತದೆ.

ಮತ್ತಷ್ಟು ಓದಿ: ನೂತನ ಸಂಸತ್ ಭವನದ ಮೊದಲ ಫೋಟೊದಲ್ಲಿದ್ದು ಚುನಾಯಿತ ಸದಸ್ಯರಲ್ಲ, ಕೇಸರಿ ಬಟ್ಟೆ ತೊಟ್ಟವರು: ಶರದ್ ಪವಾರ್

ಹಳೆಯ ಸಂಸತ್ತಿನಲ್ಲಿ ಯಾರಾದರೂ ಕಳೆದುಹೋದರೆ, ಅದರ ಆಕಾರವು ವೃತ್ತಾಕಾರವಾಗಿರುವುದರಿಂದ ಅವರು ಸುಲಭವಾಗಿ ದಾರಿ ಕಂಡುಕೊಳ್ಳಬಹುದು, ಆದರೆ ಹೊಸ ಸಂಸತ್ತು ಚಕ್ರವ್ಯೂಹವಾಗಿದೆ. ನೀವು ಇದರಲ್ಲಿ ಕಳೆದುಹೋದರೆ ನಿಮ್ಮ ದಾರಿ ನಿಮಗೆ ಸಿಗುವುದಿಲ್ಲ. ಹಳೆಯ ಸಂಸತ್ತು ಹೆಚ್ಚುವರಿ ಸ್ಥಳ ಮತ್ತು ಮುಕ್ತತೆಯನ್ನು ಹೊಂದಿದೆ, ಆದರೆ ಹೊಸ ಸಂಸತ್ತು ಸಾಂದ್ರವಾಗಿರುತ್ತದೆ ಎಂದು ಹೇಳಿದರು.

ಜೆಪಿ ನಡ್ಡಾ ತಿರುಗೇಟು ಕಾಂಗ್ರೆಸ್ ಇಷ್ಟು ಕೆಳಮಟ್ಟದಲ್ಲಿ ಯೋಚಿಸುತ್ತದೆ ಎಂದು ನಾನಂದುಕೊಂಡಿರಲಿಲ್ಲ, ಇದು 140 ಕೋಟಿ ಭಾರತೀಯರ ಆಕಾಂಕ್ಷೆಗಳಿಗೆ ಮಾಡಿದ ಅವಮಾನವಲ್ಲದೆ ಬೇರೇನೂ ಇಲ್ಲ. ಕಾಂಗ್ರೆಸ್ ಸಂಸತ್ತಿಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಇದೇ ಮೊದಲಲ್ಲ. ಅವರು 1975 ರಲ್ಲಿ ಪ್ರಯತ್ನಿಸಿದರು ಮತ್ತು ಅದು ಶೋಚನೀಯವಾಗಿ ವಿಫಲವಾಯಿತು ಎಂದು ಅವರು ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಮನೆಯೊಂದರ ಬೆಡ್​ರೂಂನಲ್ಲಿ 2 ಹಾವುಗಳ ಜಗಳ; ಬೆಚ್ಚಿ ಬೀಳಿಸುವ ವಿಡಿಯೋ ವೈರಲ್
ಮನೆಯೊಂದರ ಬೆಡ್​ರೂಂನಲ್ಲಿ 2 ಹಾವುಗಳ ಜಗಳ; ಬೆಚ್ಚಿ ಬೀಳಿಸುವ ವಿಡಿಯೋ ವೈರಲ್
ರಾತ್ರೋರಾತ್ರಿ ಬಳ್ಳಾರಿ ಜೈಲಿನಿಂದ ಆಂಬ್ಯುಲೆನ್ಸ್​ ಮೂಲಕ ದರ್ಶನ್ ಶಿಫ್ಟ್
ರಾತ್ರೋರಾತ್ರಿ ಬಳ್ಳಾರಿ ಜೈಲಿನಿಂದ ಆಂಬ್ಯುಲೆನ್ಸ್​ ಮೂಲಕ ದರ್ಶನ್ ಶಿಫ್ಟ್
20 ರೂಪಾಯಿಗಾಗಿ ಜಗಳ; ರಿಕ್ಷಾ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
20 ರೂಪಾಯಿಗಾಗಿ ಜಗಳ; ರಿಕ್ಷಾ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ಜೈಲಿನಲ್ಲಿ ದರ್ಶನ್ ಭೇಟಿ ಬಳಿಕ ಬೇಸರ ಮಾಡಿಕೊಂಡು ಹೊರಟ ವಿಜಯಲಕ್ಷ್ಮಿ
ಜೈಲಿನಲ್ಲಿ ದರ್ಶನ್ ಭೇಟಿ ಬಳಿಕ ಬೇಸರ ಮಾಡಿಕೊಂಡು ಹೊರಟ ವಿಜಯಲಕ್ಷ್ಮಿ
ಸಿಎಂ, ಡಿಸಿಎಂ ಸಿಟಿ ರೌಂಡ್ಸ್​ ಹಾಕಿದರೂ ದುರಸ್ತಿಯಾಗದ ಬೆಂಗಳೂರು ರಸ್ತೆಗಳು
ಸಿಎಂ, ಡಿಸಿಎಂ ಸಿಟಿ ರೌಂಡ್ಸ್​ ಹಾಕಿದರೂ ದುರಸ್ತಿಯಾಗದ ಬೆಂಗಳೂರು ರಸ್ತೆಗಳು
ಬುಂಡೆಸ್ಲಿಗಾ 7ನೇ ದಿನದ ಪಂದ್ಯ; ಟಾಪ್ 5 ಗೋಲ್​ಗಳನ್ನು ಮಿಸ್ ಮಾಡಬೇಡಿ
ಬುಂಡೆಸ್ಲಿಗಾ 7ನೇ ದಿನದ ಪಂದ್ಯ; ಟಾಪ್ 5 ಗೋಲ್​ಗಳನ್ನು ಮಿಸ್ ಮಾಡಬೇಡಿ
ವಿರೋಧಪಕ್ಷಗಳ ನಾಯಕರಿಗೆ ನನ್ನನ್ನು ಕಂಡು ಹೊಟ್ಟೆಯುರಿ: ಸಿದ್ದರಾಮಯ್ಯ
ವಿರೋಧಪಕ್ಷಗಳ ನಾಯಕರಿಗೆ ನನ್ನನ್ನು ಕಂಡು ಹೊಟ್ಟೆಯುರಿ: ಸಿದ್ದರಾಮಯ್ಯ
ಪ್ರಧಾನಿ ಮೋದಿಯವರಿಗೋಸ್ಕರ ಎಲ್ಲವನ್ನು ಸಹಿಸಿಕೊಂಡಿದ್ದೇವೆ: ಕುಮಾರಸ್ವಾಮಿ
ಪ್ರಧಾನಿ ಮೋದಿಯವರಿಗೋಸ್ಕರ ಎಲ್ಲವನ್ನು ಸಹಿಸಿಕೊಂಡಿದ್ದೇವೆ: ಕುಮಾರಸ್ವಾಮಿ
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್