ಗಾಜಿಯಾಬಾದ್ನಲ್ಲಿ ಶಿಥಿಲಗೊಂಡಿರುವ ಮನೆ ಕುಸಿತ: 3 ಮಂದಿ ಸಿಲುಕಿರುವ ಶಂಕೆ, 7 ಜನರ ರಕ್ಷಣೆ
ಗಾಜಿಯಾಬಾದ್ನಲ್ಲಿ ಶಿಥಿಲಗೊಂಡಿರುವ ಮನೆ ಕುಸಿದುಬಿದ್ದಿದ್ದು, ಮೂವರು ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಲಭ್ಯವಾಗಿದ್ದು, 7 ಜನರನ್ನು ರಕ್ಷಿಸಲಾಗಿದೆ. ರೂಪ್ ನಗರ ಕೈಗಾರಿಕಾ ಪ್ರದೇಶದ ಬಳಿ ಈ ಘಟನೆ ನಡೆದಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಅವಶೇಷಗಳ ಅಡಿಯಿಂದ ಜನರನ್ನು ಹೊರತೆಗೆದಿದ್ದಾರೆ. ಈವರೆಗೆ ಏಳು ಮಂದಿಯನ್ನು ರಕ್ಷಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅವಶೇಷಗಳಡಿ ಇನ್ನೂ ಮೂವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಐವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಸದ್ಯ ಪೊಲೀಸರು ಸ್ಥಳದಲ್ಲಿದ್ದು ರಕ್ಷಣಾ ಕಾರ್ಯ ನಡೆಯುತ್ತಿದೆ.
ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಶಿಥಿಲಗೊಂಡಿರುವ ಮನೆ ಕುಸಿದುಬಿದ್ದಿದ್ದು, ಮೂವರು ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಲಭ್ಯವಾಗಿದ್ದು, 7 ಜನರನ್ನು ರಕ್ಷಿಸಲಾಗಿದೆ. ರೂಪ್ ನಗರ ಕೈಗಾರಿಕಾ ಪ್ರದೇಶದ ಬಳಿ ಈ ಘಟನೆ ನಡೆದಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಅವಶೇಷಗಳ ಅಡಿಯಿಂದ ಜನರನ್ನು ಹೊರತೆಗೆದಿದ್ದಾರೆ. ಈವರೆಗೆ ಏಳು ಮಂದಿಯನ್ನು ರಕ್ಷಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅವಶೇಷಗಳಡಿ ಇನ್ನೂ ಮೂವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಐವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಸದ್ಯ ಪೊಲೀಸರು ಸ್ಥಳದಲ್ಲಿದ್ದು ರಕ್ಷಣಾ ಕಾರ್ಯ ನಡೆಯುತ್ತಿದೆ.
ಮಾಹಿತಿ ಶೀಘ್ರ ಅಪ್ಡೇಟ್ ಆಗಲಿದೆ
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ