ಗ್ರೇಟರ್ ನೊಯ್ಡಾ: ಒಂದು ವರ್ಷದ ಮಗುವಿನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಮನೆ ಒಂದೇ ಕ್ಷಣದಲ್ಲಿ ಸೂತಕದ ಮನೆಯಾಗಿ, ಶೋಕದ ಮನೆಯಾಗಿ ಮಾರ್ಪಾಡದ ದುರ್ಘಟನೆ ಗ್ರೇಟರ್ ನೊಯ್ಡಾದ ಬಿಸ್ರಕ್ ಪೊಲೀಸ್ ಸ್ಟೇಶನ್ ವ್ಯಾಪ್ತಿಯ ಕಾಸಾ ಗ್ರೀನ್ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ. ಅಂದು ಒಂದನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿದ್ದ ಮಗು ರಿವಾನ್, 12ನೇ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದು ಆತನ ಪಾಲಕರಿಗೆ ಬಹುದೊಡ್ಡ ಶಾಕ್. ಅದಷ್ಟೇ ಅಲ್ಲ, ಸಂಭ್ರಮದಲ್ಲಿ ಪಾಲ್ಗೊಳ್ಳಲು ಬಂದವರೆಲ್ಲೂ ದುಃಖ ಮಡುಗಟ್ಟಿತ್ತು.
ಸತ್ಯೇಂದ್ರ ಕಸನಾ ತನ್ನ ಒಂದು ವರ್ಷದ ಮಗನ ಹುಟ್ಟುಹಬ್ಬ ಆಚರಿಸಲು ಭರ್ಜರಿ ಸಿದ್ಧತೆ ನಡೆಸಿದ್ದರು. ಹೀಗಾಗಿ ಕೆಲವು ಅತಿಥಿಗಳು ಪಾಲ್ಗೊಂಡಿದ್ದರು. ಮನೆಯನ್ನೆಲ್ಲ ಶೃಂಗರಿಸಲಾಗಿತ್ತು. ಆದರೆ ಈ ಸಡಗರದ ಮಧ್ಯೆ ಮಗು ಫ್ಲ್ಯಾಟ್ನ ಬಾಗಿಲ ಬಳಿ ಆಡುತ್ತಿರುವುದನ್ನು ಯಾರೂ ಗಮನಿಸಲೇ ಇಲ್ಲ. ರಿವಾನ್ ಆಡುತ್ತ, ಆಡುತ್ತ ಬಾಗಿಲಿಂದ ಮೆಟ್ಟಿಲುಗಳ ಕೆಳಗೆ ಬಿದ್ದ. ಅದೂ 12ನೇ ಮಹಡಿಯಿಂದ ಕೆಳಗೆ ಬಿದ್ದ ಕಾರಣ, ಅವನ ಜೀವ ಉಳಿಯಲೇ ಇಲ್ಲ. ಕಸನ್ ಮನೆಯ ಎದುರಿನ ಮೆಟ್ಟಿಲುಗಳ ವಿಡಿಯೋ ಕೂಡ ವೈರಲ್ ಆಗಿದೆ. ಅದಕ್ಕೆ ಕಬ್ಬಿಣದ ಹಿಡಿಕೆಗಳಿವೆ.
ಇದನ್ನೂ ಓದಿ: ರಾಗಿಣಿ ಹಾಗೂ ಸಂಜನಾ ಡ್ರಗ್ ಸೇವನೆ ದೃಢ; ಮತ್ತೆ ಜೈಲು ಸೇರಲಿದ್ದಾರಾ ನಟಿಯರು? ಮುಂದಿನ ಆಯ್ಕೆ ಏನು?